ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ವೈಫಲ್ಯದಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೃಷಿ ಮಾಡಲು ಪರಿಸ್ಥಿತಿ ಯೋಗ್ಯವಾಗಿಲ್ಲ, ಇನ್ನೂ ಹಲವರು ರೈತರು ಬಿತ್ತನೆ ಮಾಡಿ ಕೈ ಸುಟ್ಟುಕೊಂಡಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರದ ಕೈಪಿಡಿ ಅನ್ವಯ ಸರ್ವೆ ಮಾಡಿ 190 ತಾಲ್ಲೂಕುಗಳು ಬರಪೀಡಿತವಾಗಿವೆ ಎಂದು ಘೋಷಣೆ ಮಾಡಲಾಗಿದೆ ಮತ್ತು ಸರ್ಕಾರದ ಪರಿಹಾರ ಹಣಕ್ಕಾಗಿ ಕಾಯಲಾಗುತ್ತಿದೆ.
ಮಳೆ ಕೊರತೆಯ ಸಮಸ್ಯೆ ಒಂದೆಡೆಯಾದರೆ ಮತ್ತೊಂದೆಡೆ ಲೋಡ್ ಶೆಡ್ಡಿಂಗ್ ನ ಸಮಸ್ಯೆ ಕೂಡ ರೈತರಿಗೆ ಎದುರಾಗಿದೆ. ಪರಿಸ್ಥಿತಿ ಹೀಗಿದ್ದರೂ ರಾಷ್ಟ್ರೀಕೃತ ಬ್ಯಾಂಕ್ ಗಳು ಸಾಲ ವಸೂಲಾತಿಗೆ ಮುಂದಾಗಿದ್ದವು, ಆದರೆ ರೈತನಿಗೆ ಆದಾಯವಿಲ್ಲದೆ ಇರುವುದರಿಂದ ಆತನಿಗೆ ಈ ವರ್ಷ ಸಾಲ ಮರುಪಾವತಿ ಮಾಡಲು ಸಾಧ್ಯವಾಗುವುದಿಲ್ಲ. ಪರಿಸ್ಥಿತಿ ಅರಿತು ಸರ್ಕಾರ ಇದಕ್ಕೆ ಬ್ರೇಕ್ ಹಾಕಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಆಗ್ರಹಿಸಿದ್ದರು.
ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಮೇಲೆ ವಿದ್ಯಾನಿಧಿ ಯೋಜನೆಯನ್ನು ಕೈ ಬಿಟ್ಟಿದೆ ಈ ವಿದ್ಯಾನಿಧಿ ಯೋಜನೆಯಿಂದ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಗುತ್ತಿತ್ತು. ಕೇಂದ್ರ ಸರ್ಕಾರದಿಂದ ಪಿಎಂ ಕಿಸಾನ್ ಸಮ್ಮನ್ ಯೋಜನೆಯಡಿ ವರ್ಷಕ್ಕೆ 6000 ಸಹಾಯಧನವು ಸಿಗುತ್ತಿತ್ತು ಅದರಂತೆ BJP ಪಕ್ಷವು ಕಳೆದ ಬಾರಿ ರಾಜ್ಯದಲ್ಲಿ ಆಡಳಿತದಲ್ಲಿ ಇದ್ದಾಗ ರಾಜ್ಯದ ರೈತರಿಗೆ ಸಿಎಂ ಕಿಸಾನ್ ನಿಧಿ ಯೋಜನೆಯಡಿ ವರ್ಷಕ್ಕೆ 4000 ರೈತರಿಗೆ ಸಹಾಯಧನ ನೀಡುತ್ತಿತ್ತು.
ಆದರೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ನೂತನ ಕಾಂಗ್ರೆಸ್ ಸರ್ಕಾರವು ಆರ್ಥಿಕ ಹೊರೆ ಕಾರಣದಿಂದ ತನ್ನ ಬಜೆಟ್ ಪಟ್ಟಿಯಿಂದ ಈ ಯೋಜನೆಗಳನ್ನು ಕೈ ಬಿಟ್ಟಿದೆ. ಹಾಗಾಗಿ ಇದು ರೈತ ವಿರೋಧಿ ಸರ್ಕಾರ ಎಂದು ವಿರೋಧ ಪಕ್ಷಗಳು ಹಾಗೂ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು ಅದರ ನಡುವೆ ಬರ ಪರಿಸ್ಥಿತಿ ಎದುರಾಗಿದ್ದರು ಸಾಲಮರುಪಾವತಿ ನಿಂತಿರುವ ಬ್ಯಾಂಕ್ಗಳಿಗೆ ಬ್ರೇಕ್ ಆಗದೆ ಇರುವುದಕ್ಕೆ ರಾಜ್ಯ ಸರ್ಕಾರವನ್ನು ಆಕ್ಷೇಪಿಸಲಾಗುತ್ತಿತ್ತು ಆದರೆ ಈಗ ರಾಜ್ಯ ಸರ್ಕಾರ ವತಿಯಿಂದ ರೈತರಿಗೆ ಸಮಾಧಾನಕರ ಸುದ್ದಿ ಸಿಕ್ಕಿದೆ.
ರೈತರ ಆರ್ಥಿಕ ಕಷ್ಟಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರವು ಬರಗಾಲ ಪೀಡಿತ ಪ್ರದೇಶಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಅರ್ಹ ರೈತರ ಸಾಲಗಳನ್ನು ಪುನರ್ ರಚಿಸುವಂತೆ ಬ್ಯಾಂಕರ್‌ಗಳ ಸಮಿತಿಯೊಂದಿಗೆ ಚರ್ಚಿಸಿದೆ. ಈಗ ಎಲ್ಲಾ ಬ್ಯಾಂಕುಗಳಿಗೆ ರೈತರ ಸಾಲ ಮರುಪಾವತಿಗೆ ಒತ್ತಡ ಹೇರದಂತೆ ನಿರ್ದೇಶನ ಹೋಗಿದೆ.
ಸರ್ಕಾರದ ಈ ಕ್ರಮದಿಂದಾಗಿ ಕೃಷಿಗಾಗಿ ಈ ಹಿಂದೆ ಸಾಲ ಮಾಡಿದ್ದ ರೈತರಿಗೆ ಬರಗಾಲದ ಈ ಸಂಕಷ್ಟದ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಸಾಲದ ಚಿಂತೆ ತಪ್ಪಲಿದೆ. ಮುಂದಿನ ಬಾರಿ ಮಳೆಯಾಗಿ ಉತ್ತಮ ಇಳುವರಿ ಪಡೆವವರೆಗೂ ರೈತ ನಿಶ್ಚಿಂತೆಯಿಂದ ಇರಬಹುದು.
ಸರ್ಕಾರದ ಆದೇಶದ ಮೇರೆಗೆ ಬರ ಪೀಡಿತ ತಾಲ್ಲೂಕುಗಳ ಅರ್ಹ ರೈತರ ಕೃಷಿ ಮತ್ತು ತೋಟಗಾರಿಕೆ ಬೆಳೆ ಸಾಲ ಪುನರ್ ರಚಿಸುವಂತೆ ಬ್ಯಾಂಕ್ ಗಳ ಸಮಿತಿ ಎಲ್ಲ ಬ್ಯಾಂಕ್ಗಳಿಗೆ ಸೂಚನೆ ನೀಡಿರುವುದರಿಂದ ಮುಂದಿನ ವರ್ಷಕ್ಕೂ ಕೂಡ ಅರ್ಹ ರೈತರು ಸಾಲ ಪಡೆಯಲಿದ್ದಾರೆ ಮತ್ತು ಅಲ್ಪಾವಧಿ ಬೆಳೆ ಸಾಲಗಳು ದೀರ್ಘಾವಧಿ ಸಾಲವಾಗಿ ಬದಲಾಗುವ ಸಾಧ್ಯತೆಗಳು ಇವೆ. ಆದರೆ ಮುಂದಿನ ವರ್ಷವಾದರೂ ವರುಣನ ಕೃಪೆಯಿಂದ ರೈತರ ಬದುಕು ಹಸನಾಗುವಂತೆ ಆಗಲಿ ಎಂದು ಈಗಿನಿಂದ ರಾಜ್ಯದ ರೈತರಿಗಾಗಿ ಪ್ರಾರ್ಥಿಸೋಣ.