ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದೇವರಿಗೆ ವಿಶೇಷವಾದಂತಹ ಮಹತ್ವವನ್ನು ನೀಡುತ್ತೇವೆ. ಅದರಲ್ಲಿಯೂ ನಮ್ಮ ಕರ್ನಾಟಕದಲ್ಲಿ ಪೂಜೆಗೆ ಹೆಚ್ಚಿನ ಮಹತ್ವವು ಇದೆ ಮನೆಯಲ್ಲಿ ದೇವರ ಕೋಣೆ ಇದ್ದೇ ಇರುತ್ತದೆ ದೇವರ ಸಾಮಾಗ್ರಿಗಳು ಸಹ ಇರುತ್ತದೆ ಪೂಜೆಗೆ ಎಂದು ನಾವು ಹಲವಾರು ಸಾಮಗ್ರಿಗಳನ್ನು ಉಪಯೋಗಿಸುತ್ತೇವೆ. ನಾವು ಉಪಯೋಗಿಸುವಂತಹ ಸಾಮಗ್ರಿಗಳು ಕಂಚು, ಇತ್ತಾಳೆ ಹಾಗೂ ಬೆಳ್ಳಿಯ ಸಾಮಗ್ರಿಗಳು ಆಗಿರುತ್ತದೆ ಆದ್ದರಿಂದ ಅಂತಹ ಪಾತ್ರೆಗಳನ್ನು ಸ್ವಚ್ಛಗೊಳಿಸುವಂತಹ ಸುಲಭ ವಿಧಾನವನ್ನು ನಾವು ಕಂಡುಹಿಡಿದುಕೊಳ್ಳಬೇಕು
ನಾವು ಎಷ್ಟೇ ಪಾತ್ರಗಳನ್ನು ತೊಳೆದರೂ ಸಹ ಅದು ಹೊಸತರಂತೆ ಕಾಣುವುದಿಲ್ಲ ಆದ್ದರಿಂದ ನಾವು ತಿಳಿಸುವಂತಹ ವಿಧಾನವನ್ನು ಅನುಸರಿಸಿದರೆ ಖಂಡಿತವಾಗಿಯೂ ನಿಮ್ಮ ದೇವರ ಮನೆಯ ಎಲ್ಲಾ ಪಾತ್ರೆಗಳು ಸಹ ಹೊಸದರಂತೆ ಕಾಣುತ್ತದೆ. ಹಬ್ಬಗಳ ಸಮಯದಲ್ಲಿ ಅಥವಾ ಯಾವುದೇ ಫಂಕ್ಷನ್ ಗಳು ಇದ್ದಾಗ ಪೂಜಾ ಸಾಮಗ್ರಿಗಳನ್ನು ತೊಳೆಯಬೇಕು ಎಂದರೆ ಜಾಸ್ತಿ ಸಮಯ ಹಿಡಿಸುತ್ತದೆ ಕೆಲವೊಬ್ಬರಿಗೆ ಪೂಜಾ ಸಾಮಗ್ರಿಗಳನ್ನು ಅಥವಾ ಪಾತ್ರೆಗಳನ್ನು ಸ್ವಚ್ಛ ಮಾಡುವುದೇ ಒಂದು ದೊಡ್ಡ ಕೆಲಸ ಎಂದು ಭಾವಿಸಿರುತ್ತಾರೆ.
ತಮ್ಮ ಶಕ್ತಿಪೂರ ಆ ಪಾತ್ರೆಗಳ ಮೇಲೆ ಬಿಟ್ಟು ಸ್ವಚ್ಛಗೊಳಿಸುವುದನ್ನು ನಾವು ನೋಡಿದ್ದೇವೆ ಆದರೆ ನಮ್ಮ ಮನೆಯಲ್ಲಿ ಇರುವಂತಹ ಕೆಲವೊಂದು ಸಾಮಾಗ್ರಿಗಳನ್ನು ಉಪಯೋಗ ಮಾಡಿಕೊಂಡು ನಾವು ಅತಿ ಸುಲಭವಾಗಿ ಪಾತ್ರೆಗಳನ್ನು ಸ್ವಚ್ಛಗೊಳಿಸಬಹುದು. ಪೂಜಾ ಸಾಮಗ್ರಿಗಳನ್ನು ಸ್ವಚ್ಛಗೊಳಿಸಲು ಯಾವುದೇ ರೀತಿಯ ಕೆಮಿಕಲ್ ಉಪಯೋಗಿಸಿರುವ ಲಿಕ್ವಿಡ್ ಗಳನ್ನು ಉಪಯೋಗಿಸುವ ಅಗತ್ಯವಿಲ್ಲ ನ್ಯಾಚುರಲ್ ಆಗಿ ಇರುವಂತಹ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಅತಿ ಕಡಿಮೆ ಸಮಯದಲ್ಲಿ ನಾವು ಪಾತ್ರೆಗಳನ್ನು ಸ್ವಚ್ಛಗೊಳಿಸಬಹುದು.
ಮೊದಲಿಗೆ ನೀವು ಸ್ವಚ್ಛಗೊಳಿಸುವ ಪಾತ್ರೆಗಳನ್ನು ಒಂದೆಡೆ ತೆಗೆದು ಇಟ್ಟುಕೊಳ್ಳಿ ನೀವು ಬೆಳ್ಳಿ ಪಾತ್ರೆಗಳನ್ನು ಹಾಗೂ ಇತ್ತಾಳೆ ಕಂಚು ಪಾತ್ರೆಗಳನ್ನು ಸೆಪೆರೇಟ್ ಆಗಿ ಇಟ್ಟುಕೊಳ್ಳಿ, ಇತ್ತಾಳೆ ಮತ್ತು ತಾಮ್ರ ಪಾತ್ರೆಗಳು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ ಡಲ್ಲಾಗಿ ಇರುತ್ತದೆ ಕರ್ಪೂರ ಹಚ್ಚುವುದು ಹಾಗೆ ಗಂಧದ ಕಡ್ಡಿ ಹಚ್ಚುವುದು ಇದೆಲ್ಲವೂ ಕೂಡ ಕಪ್ಪಗೆ ತಿರುಗಿರುತ್ತದೆ. ಇದಕ್ಕಾಗಿ ನೀವು ಸ್ವಚ್ಛಗೊಳಿಸಲು ಒಂದು ಪಾತ್ರೆಗೆ ಸ್ವಲ್ಪ ಹುಣಸೆ ಹಣ್ಣನ್ನು ಸೇರಿಸಿ ಅದು ಮುಳುಗುವಷ್ಟು ನೀರನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ,
ಇದು ಉಗುರು ಬೆಚ್ಚಗೆ ಆಗುವ ತನಕ ಕಾದು ಇದಕ್ಕೆ ಒಂದು ಟೇಬಲ್ ಸ್ಪೂನ್ ಉಪ್ಪು ಒಂದು ಟೇಬಲ್ ಸ್ಪೂನ್ ಅಡುಗೆ ಸೋಡಾ ಸೇರಿಸಿ, ಮಿಕ್ಸ್ ಮಾಡುವ ಸಂದರ್ಭದಲ್ಲಿ ನೊರೆ ಉಂಟಾಗುತ್ತದೆ ನಂತರ ಈ ಒಂದು ಲಿಕ್ವಿಡ್ ಅನ್ನು ನೀವು ಒಂದು ಬ್ರಷ್ ನಿಂದ ಪಾತ್ರೆಗಳಿಗೆ ಅಪ್ಲೈ ಮಾಡಬಹುದು ಅಥವಾ ನೀವು ಆ ಲಿಕ್ವಿಡ್ ನಲ್ಲಿ ಪಾತ್ರೆಗಳನ್ನು ಡಿಪ್ ಮಾಡಿ ತೆಗೆಯಬಹುದು.
ಈ ವಿಧಾನದಲ್ಲಿ ನೀವು ತಾಮ್ರ ಮತ್ತು ಇತ್ತಾಳೆ ಪಾತ್ರಗಳನ್ನು ಸುಲಭವಾಗಿ ಪಳಪಳ ಹೊಳೆಯುವ ಹಾಗೆ ಮಾಡಬಹುದು. ಬೆಳ್ಳಿ ಪಾತ್ರೆಗಳನ್ನು ನೀವು ಸ್ವಚ್ಛಗೊಳಿಸಲು ಎರಡು ಟೇಬಲ್ ಸ್ಪೂನ್ ಸಬೀನಾ ಪೌಡರ್ ಹಾಕಿ ನಂತರ ಎರಡು ಟೇಬಲ್ ಸ್ಪೂನ್ ವಿಭೂತಿ ಪೌಡರ್ ವಿಭೂತಿ ಪೌಡರ್ ಸೇರಿಸಿ ವಿಭೂತಿ ಪೌಡರ್ ಬದಲಿಗೆ ನೀವು ಕೋಲ್ಗೇಟ್ ಪೌಡರ್ ಸಹ ಬಳಸಬಹುದು.
ರೆಡಿ ಮಾಡಿಕೊಂಡಿರುವಂತಹ ವಿಭೂತಿ ಮತ್ತು ಸಬೀನಾ ಪೌಡರ್ ಅನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಂದು ಬ್ರಷ್ ನಿಂದ ವಾಶ್ ಮಾಡಿದರೆ ಸಾಕು ಜಾಸ್ತಿ ಪ್ರೆಷರ್ ಹಾಕಿ ಉಜ್ಜುವ ಅವಶ್ಯಕತೆ ಇಲ್ಲ ಕೈಯಿಂದ ಬೇಕಾದರೂ ನೀವು ಇದನ್ನು ಉಜ್ಜಬಹುದು ಅತಿ ಸುಲಭವಾಗಿ ಬೆಳ್ಳಿ ಪಾತ್ರೆಗಳು ಸ್ವಚ್ಛವಾಗುತ್ತದೆ ಈ ರೀತಿಯಾಗಿ ನೀವು ಮನೆಯಲ್ಲಿ ಇರುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ಬೆಳ್ಳಿ ತಾಮ್ರ ಇತ್ತಾಳೆ ಪಾತ್ರೆಗಳನ್ನು ಅತಿ ಸುಲಭವಾಗಿ ಸ್ವಚ್ಛಗೊಳಿಸಬಹುದು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.