BPL ಕಾರ್ಡ್ ಇರುವ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಮಾಹಿತಿ, e-KYC ಮಾಡಿಸುವುದು ಕಡ್ಡಾಯ ಇಲ್ಲವಾದರೆ ಆಗಸ್ಟ್ ನಿಂದ ರೇಷನ್ ಬಂದ್ ಆಗುತ್ತದೆ.

BPL ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬರೂ ಸಹ ತಿಳಿದುಕೊಳ್ಳಬೇಕಾದಂತಹ ವಿಷಯ ಸರ್ಕಾರವು ನೀಡಿರುವಂತಹ ಹೊಸ ಮಾರ್ಗಸೂಚಿಯ ಅನುಸಾರವಾಗಿ ಯಾರೆಲ್ಲಾ e-KYC ಯನ್ನು ಮಾಡಿಸದೆ ಇದ್ದರೆ ಅಂತಹವರಿಗೆ ಆಗಸ್ಟ್ ತಿಂಗಳನಿಂದ ಪಡಿತರ ಚೀಟಿಯಲ್ಲಿ ಬರುವಂತಹ ಆಹಾರ ಧಾನ್ಯಗಳನ್ನು ಸ್ಥಗಿತಗೊಳಿಸುವುದಾಗಿ ಸರ್ಕಾರ ವರದಿಯನ್ನು ನೀಡಿದೆ. e-KYC ಮಾಡಿಸದಿರುವ ಪಡಿತರ ಚೀಟಿ ದಾರರಿಗೆ ಆಗಸ್ಟ್ ತಿಂಗಳಿನಿಂದ ಆಹಾರ ಧಾನ್ಯ ಮತ್ತು ಅನ್ನಭಾಗ್ಯ ಯೋಜನೆಯ ಹಣವನ್ನು ಸ್ಥಗಿತಗೊಳಿಸಲಾಗುವುದು ಎಂದು ಮಾಹಿತಿಯನ್ನು ನೀಡಲಾಗುತ್ತಿದೆ

e-KYC ಮಾಡದೆ ಇದ್ದರೆ ಹಣ ಮತ್ತು ಆಹಾರ ಧಾನ್ಯಗಳು ಏಕೆ ದೊರೆಯುವುದಿಲ್ಲ ಎಂಬುವಂತಹ ಸಂಪೂರ್ಣ ಮಾಹಿತಿಯನ್ನು ನಾವು ಇಂದು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಬಿಪಿಎಲ್ ಕಾರ್ಡ್ ದಾರರಿಗೆ ಪ್ರತಿಯೊಬ್ಬರಿಗೂ ಮಾಸಿಕವಾಗಿ ತಲಾ 10 ಕೆಜಿ ಅಕ್ಕಿಯನ್ನು ನೀಡಲು ಸರ್ಕಾರ ನಿರ್ಧರಿಸಿತ್ತು. ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನ್ವಯ 5 ಕೆಜಿ ಅಕ್ಕಿ ನೀಡಲಾಗುತ್ತಿದೆ ಆದರೆ ರಾಜ್ಯದಲ್ಲಿ ಅಕ್ಕಿಯ ಕೊರತೆ ಇರುವುದರಿಂದ ಹೆಚ್ಚುವರಿ 5 ಕೆಜಿ ಅಕ್ಕಿ ನೀಡಲು ಸಾಧ್ಯವಾಗದೇ ಇರುವ ಕಾರಣದಿಂದಾಗಿ ಅಕ್ಕಿಯ ಬದಲಾಗಿ ಹಣವನ್ನು ನೀಡಲು ಮುಂದಾಗಿದೆ

ಪ್ರತಿ ಕೆಜಿಗೆ 34 ರೂಪಾಯಿಯಂತೆ ತಲಾ ಒಬ್ಬರಿಗೆ 170ಗಳನ್ನು ನೀಡಲು ಸರ್ಕಾರ ಮುಂದಾಗಿದೆ ಮನೆಯ ಸದಸ್ಯರು ಎಷ್ಟು ಇದ್ದಾರೆ ಎಂಬುದರ ಆಧಾರದ ಮೇಲೆ ಪ್ರತಿಯೊಬ್ಬರ ಕುಟುಂಬಕ್ಕೂ ಸಹ ಹಣವು ವ್ಯತ್ಯಾಸವಾಗುತ್ತದೆ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಸರ್ಕಾರವು ಕೆಲವೊಂದಷ್ಟು ಮಾರ್ಗಸೂಚಿಗಳನ್ನು ಹೊರಡಿಸಿದ್ದು ಸರ್ಕಾರವು ನೀಡಿರುವಂತಹ ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ ಸಹ ಒಂದು ಪ್ರಮುಖವಾಗಿದೆ.

ಈ ಮಾರ್ಗ ಸೂಚಿಗಳು ಕಡ್ಡಾಯವಾಗಿದ್ದು ಎಲ್ಲಾ ಪಡಿತರ ಚೀಟಿಯನ್ನು ಹೊಂದಿರುವವರು ಸಹ ಅನುಸರಿಸಬೇಕಾಗುತ್ತದೆ ಯಾರೆಲ್ಲಾ ತಮ್ಮ ಪಡಿತರ ಚೀಟಿಯ ಮೂಲಕ ಆಹಾರ ಧಾನ್ಯಗಳನ್ನು ಪಡೆದುಕೊಳ್ಳುತ್ತಾರೋ ಅಂತಹವರು ಈ ಮಾರ್ಗಸೂಚಿಯನ್ನು ತಪ್ಪದೆ ತಿಳಿದುಕೊಳ್ಳಿ ಆಹಾರ ಧಾನ್ಯಗಳನ್ನು ಪಡೆಯುವ ಕುಟುಂಬದ ಗಳಲ್ಲಿ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರು ಇದ್ದರೆ ಆ ಕುಟುಂಬಗಳಿಗೆ ಹಣವನ್ನು ನೀಡದಿರಲು ಸರ್ಕಾರ ನಿರ್ಧರಿಸಿದೆ.

ಕುಟುಂಬದ ಮುಖ್ಯಸ್ಥರು ಯಾರು ಎಂಬ ಸಮಸ್ಯೆ ಬಗೆ ಹರಿಯದಿದ್ದರೆ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಫಲಾನುಭವಿಗಳು ಅಕ್ಕಿ ಬದಲಿಗೆ ಹಣ ಕೊಡದಿರಲು ಸರ್ಕಾರ ತೀರ್ಮಾನಿಸಿದೆ. ಕುಟುಂಬದ ಮುಖ್ಯಸ್ಥರು ಇಲ್ಲದೆ ಇದ್ದರೆ ಅಥವಾ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರು ಇದ್ದರೆ ಅಂತಹವರು ಆದಷ್ಟು ಬೇಗ ಪಡಿತರ ಚೀಟಿಯಲ್ಲಿ ಒಬ್ಬ ಮುಖ್ಯಸ್ಥರನ್ನು ಹೊಂದಿರಬೇಕು ಮತ್ತು ಮಹಿಳಾ ಸದಸ್ಯರು ಇರುವ ಪಡಿತರ ಚೀಟಿಯಲ್ಲಿ ಮುಖ್ಯಸ್ಥರು ಮಹಿಳೆಯಾಗಿರಬೇಕು

ಪ್ರಮುಖವಾಗಿ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆ ಮಾಡಬೇಕು ಹೀಗಿದ್ದರೆ ಇಂತಹವರಿಗೆ ಅನ್ನ ಭಾಗ್ಯ ಯೋಜನೆ ದೊರೆಯುತ್ತದೆ. ಬ್ಯಾಂಕ್ ಖಾತೆಯ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿಯಲ್ಲಿ ನೀಡಬೇಕು ಎಂದು ಸರ್ಕಾರ ತಿಳಿಸಿದೆ ಆಧಾರ್ ಲಿಂಕ್ ಆಗದೆ ಇರುವ ಸಕ್ರಿಯ ಬ್ಯಾಂಕ್ ಖಾತೆ ಇಲ್ಲದೆ ಇರುವ ಮತ್ತು ಬ್ಯಾಂಕ್ e-KYC ಆಗದೇ ಇರುವ ಅಂತ್ಯೋದಯ ಅನ್ನ ಭಾಗ್ಯ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿ ಫಲಾನುಭವಿಗಳು ಅವುಗಳನ್ನು ಸರಿಪಡಿಸಿಕೊಳ್ಳಲು ಆಹಾರ ಇಲಾಖೆಯ ಉಪ ನಿರ್ದೇಶಕರು ಸೂಚಿಸಿದ್ದಾರೆ e-KYC ಯನ್ನು ಮಾಡಿಸದೆ ಇರುವ ಪಡಿತರ ಚೀಟಿ ದಾರರಿಗೆ ಆಗಸ್ಟ್ ತಿಂಗಳಿನಿಂದ ಆಹಾರ ಧಾನ್ಯ ಹಾಗೂ ನಗದು ಹಣ ವರ್ಗಾವಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಸೂಚನೆಯನ್ನು ಹೊರಡಿಸಿದೆ.

ಅಂತ್ಯೋದಯ ಕಾರ್ಡಿನಲ್ಲಿ ಮೂರು ಅಥವಾ ಮೂರಕ್ಕಿಂತ ಕಡಿಮೆ ಜನ ಹೊಂದಿರುವ ಕುಟುಂಬಗಳು 30 ಕೆಜಿ ಅಕ್ಕಿ ಪಡೆಯುತ್ತಾ ಇರುವುದರಿಂದ ಅಂತಹವರಿಗೆ ಹಣ ನೀಡುವುದಿಲ್ಲ ಎಂದು ಸರ್ಕಾರ ನಿರ್ಧರಿಸಿದೆ ಮೂರಕ್ಕಿಂತ ಹೆಚ್ಚು ಜನ ಇರುವವರಿಗೆ 170 ಯಂತೆ ಹಣವನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಕಳೆದ ಮೂರು ತಿಂಗಳಲ್ಲಿ ಪಡಿತರ ಸೌಲಭ್ಯ ಪಡೆದಿದ್ದರೆ ಮಾತ್ರ ಅನ್ನ ಭಾಗ್ಯ ನಗದು ವರ್ಗಾವಣೆಗೆ ಕುಟುಂಬ ಅರ್ಹವಾಗಲಿದೆ.

Leave a Comment