Saturday, September 30, 2023
Home Useful Information ವೋಟರ್ ಐಡಿ ಇಲ್ಲದೆ ಹೋದರು ಮತದಾನ ಮಾಡಬಹುದು ಹೇಗೆ ಗೊತ್ತ..?

ವೋಟರ್ ಐಡಿ ಇಲ್ಲದೆ ಹೋದರು ಮತದಾನ ಮಾಡಬಹುದು ಹೇಗೆ ಗೊತ್ತ..?

 

ಮತ ಎಂಬುದು ನಮ್ಮ ಭಾರತ ನಾಗರಿಕತೆಯ ಒಂದು ಹಕ್ಕಾಗಿದೆ ಸಾಮಾನ್ಯವಾಗಿ ಮತ ಚಲಾಯಿಸಲು ನಮ್ಮ ಬಳಿ ವೋಟರ್ ಐಡಿ ಇರಬೇಕಾಗುತ್ತದೆ ಇನ್ನು ಈ ಹಕ್ಕನ್ನು ಪಡೆಯಲು ಒಬ್ಬ ವ್ಯಕ್ತಿಗೆ 17 ವರುಷ 10 ತಿಂಗಳು ಮುಗಿದಿರಬೇಕು ಆಗ ಆ ವ್ಯಕ್ತಿಯು ನಮ್ಮ ಭಾರತ ದೇಶದ ಭಾರತ ಚುನಾವಣೆಯಲ್ಲಿ ತಮ್ಮ ಮತವನ್ನು ಚಲಾಯಿಸಬಹುದಾಗಿದೆ. ಸದ್ಯ ನಮ್ಮ ದೇಶದಲ್ಲಿ ಚುನಾವಣೆ ಎಂದರೆ ನಾನಾ ಪಕ್ಷಗಳು ತಾ ಮುಂದು ನಾ ಮುಂದು ಎಂದು ಮುನ್ನಡೆಯುತ್ತದೆ.

ಅದರಲ್ಲೂ ನಮ್ಮ ದೇಶದಲ್ಲಿ ಬಿಜೆಪಿಯ ಕೈ ಮೇಲುಗಯ್ಯ ಆಗಿದೆ ಎಂದರೆ ತಪ್ಪಾಗದು ಹೌದು ಸ್ನೇಹಿತರೆ ಪ್ರತಿಯೊಂದು ರಾಜ್ಯದಲ್ಲೂ ಬೇರೆ ಬೇರೆ ಪಕ್ಷ ಇರುತ್ತದೆ ಇನ್ನು ಕೆಲವೊಂದು ಕೇಂದ್ರಾಡಳಿತ ಪಕ್ಷವಲ್ಲದೆ ಇದ್ದರೂ ಸ್ವತಂತ್ರವಾದ ಪಕ್ಷಿಗಳು ಕೂಡ ಇದ್ದಾವೆ. ನಮ್ಮ ದೇಶದ ಜನತೆಯು ವ್ಯಕ್ತಿತ್ವಕ್ಕೆ ಹಾಗೂ ಪಕ್ಷವನ್ನು ನೋಡಿ ತಮ್ಮ ಮತವನ್ನು ಚಲಾಯಿಸುತ್ತಾರೆ ಈ ಮೂಲಕ ತಮ್ಮ ನಾಯಕರನ್ನು ಕೂಡ ಆರಿಸಿಕೊಳ್ಳುತ್ತಾರೆ.

ಏಕೆಂದರೆ ತಮ್ಮ ಕಷ್ಟಗಳನ್ನು ಆ ನಾಯಕರಿಗೆ ಹೇಳಿದರೆ ಆ ನೋವಿಗೆ ಆ ನಾಯಕರು ಕಿವಿ ಕೊಡುತ್ತಾರೆ ಈ ಮೂಲಕ ತಮ್ಮ ಸಮಸ್ಯೆಯು ದೂರವಾಗುತ್ತದೆ ಎಂಬುದೇ ನಮ್ಮ ಜನತೆಯ ಉದ್ದೇಶವಾಗಿದೆ ಅಲ್ಲದೆ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಹಣದ ವ್ಯಾಮೋಹವನ್ನು ಅಥವಾ ಸೀರೆಯ ಒಡವೆಯೋ ಯಾಮೋಹವನ್ನು ತೋರಿಸಿ ಜನರತ್ತಿಯ ಮತವನ್ನು ಈ ಪಕ್ಷಗಳು ಕಿತ್ತಿಕೊಳ್ಳುತ್ತವೆ. ಹಾಗಾಗಿ ನಮ್ಮ ಜನತೆಯು ಯಾವುದೇ ತರಹದ ವ್ಯಾಮೋಹಕ್ಕೆ ಒಳಗಾಗದೆ ತಮ್ಮ ಮತವನ್ನು ಸತ್ಯವಾದ ಹಾಗೂ ನಿಜವಾದ ವ್ಯಕ್ತಿತ್ವಕ್ಕೆ ಮತವನ್ನು ಚಲಾಯಿಸಿ ಸರಿಯಾದ ಪಕ್ಷಕ್ಕೆ ಆಡಳಿತವನ್ನು ನೀಡಬೇಕು.

ಇನ್ನು ಮತ ಚಲಾಯಿಸುವ ವೋಟರ್ ಐಡಿ ಕಾರ್ಡ್, ಇದು ಕೂಡ ಒಂದು ಒಬ್ಬ ವ್ಯಕ್ತಿಯ ಮೂಲ ದಾಖಲೆಯಾಗಿದೆ ಎಂದರೆ ತಪ್ಪಾಗದು. ಸದ್ಯ ನಮ್ಮ ಕರ್ನಾಟಕ ರಾಜ್ಯದಲ್ಲಿ ಇನ್ನೇನು ಮೇ ಹತ್ತರಂದು ನಮ್ಮ ವಿಧಾನಸಭಾ ಚುನಾವಣೆಯ ಮತ ಚಲಾಯಿಸುವ ದಿನವು ನಿಗದಿಯಾಗಿದೆ ಹಾಗಾಗಿ ನಮ್ಮ ರಾಜ್ಯದ ಜನತೆಗೆ ವೋಟರ್ ಐಡಿ ಕಾರ್ಡ್ ಮರೆತು ಹೋದರೆ ನಮ್ಮ ಬಳಿ ಇರುವ ಬೇರೆ ಬೇರೆ ದಾಖಲೆಗಳನ್ನು ಬಳಸಿ ನಮ್ಮ ಮತವನ್ನು ಚಲಾಯಿಸುವುದು ಹೇಗೆ ಎಂಬುದು ತಿಳಿಸುವುದೇ ನಮ್ಮ ಈ ಉದ್ದೇಶವಾಗಿದೆ.

ಮತ ಹಾಕುವಾಗ ವೋಟರ್ ಐಡಿ ಇಲ್ಲದೆ ಇದ್ದರೆ ತೋರಿಸಬೇಕಾದಂತಹ ಪರ್ಯಾಯ ದಾಖಲೆಗಳು, ಆಧಾರ್ ಕಾರ್ಡ್, ಎಂ ಎನ್ ಆರ್ ಈ ಜಿ ಎ ಜಾಬ್ ಕಾರ್ಡ್, ಪೋಸ್ಟ್ ಆಫೀಸ್ ನೀಡಿರುವಂತಹ ಭಾವಚಿತ್ರ ಇರುವಂತಹ ಪಾಸ್ ಬುಕ್, ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಇಂಡಿಯನ್ ಪಾಸ್‌ಪೋರ್ಟ್ ಇವುಗಳ ಜೊತೆಗೆ ರಾಜ್ಯ ಅಥವಾ ಕೇಂದ್ರ ಸರ್ಕಾರದ ನೌಕರರಿಗೆ ನೀಡುವಂತಹ ಸೇವಾ ಗುರುತಿನ ಚೀಟಿಯನ್ನು ಕೂಡ ಬಳಸಬಹುದು ಮತ್ತು ರಾಜ್ಯ ಅಥವಾ ವಿಧಾನಸಭಾ ಪರಿಷತ್ ಸದಸ್ಯರ ಅಧಿಕೃತ ಐಡಿಗಳು.

ಇನ್ನು ಅಂಗವಿಕಲರು ತಮ್ಮ ಅಂಗವಿಕಲ ಗುರುತಿನ ಚೀಟಿಯ ಮೂಲಕವೂ ಕೂಡ ಪರ್ಯಾಯವಾಗಿ ಮತದಾನ ಮಾಡುವಂತಹ ಹಕ್ಕನ್ನು ತೋರಿಸುತ್ತಾರೆ. ಹಾಗಾದರೆ ಸ್ನೇಹಿತರೆ ನಿಮಗೆ ಭಯ ಬೇಡ ನಿಮ್ಮ ವೋಟರ್ ಐಡಿ ಕಾರ್ಡ್ ಇಲ್ಲದೆ ಇದ್ದರೂ ಈ ಮೇಲಿನ ಎಲ್ಲಾ ದಾಖಲಗಳಲ್ಲಿ ಯಾವುದಾದರೂ ಒಂದು ದಾಖಲೆಗಳು ನಿಮ್ಮ ಬಳಿ ಇದ್ದರೆ ಸುಲಭವಾಗಿ ನಿಮ್ಮ ಮತವನ್ನು ಚಲಾಯಿಸಬಹುದಾಗಿದೆ.

- Advertisment -