ಸ್ನೇಹಿತರೆ ಇಂದಿನ ವಿಶೇಷವಾದ ಮಾಹಿತಿಯೊಂದಿಗೆ ಈ ಲೇಖನವನ್ನು ನಿಮ್ಮ ಬಳಿ ತಂದಿದ್ದೇವೆ. ಹೌದು ಸ್ನೇಹಿತರೆ ಜನಜಂಗುಳಿ ಇಂದ ತುಂಬಿರುವ ನಮ್ಮ ಭಾರತದಲ್ಲಿ ಕಳ್ಳ ತನವು ಕೂಡ ಸಾಮಾನ್ಯವಾಗಿದೆ. ಸ್ನೇಹಿತರೆ ಹೆಚ್ಚಿನ ಜನಸಂಖ್ಯೆಯಿಂದ ಕೂಡಿರುವ ನಮ್ಮ ದೇಶದಲ್ಲಿ ಅದೇ ತರಹ ಜನರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಓಡಲು ವಾಹನಗಳು ಕೂಡ ಅಷ್ಟೇ ಅವಶ್ಯಕವಾಗಿ ಬೇಕಾಗಿದೆ.
ಹಾಗಾಗಿ ನಮ್ಮ ದೇಶದ ಜನರು ಹೆಚ್ಚಾಗಿ ವಾಹನಗಳನ್ನು ಬಳಸುತ್ತಾರೆ ಅದು ಸೈಕಲ್ ಬೈಕುಗಳು ಆಟೋ ಬಸ್ ಗಳು ಹಾಗೂ ಕಾರುಗಳು ವಾಹನಗಳು ನಮ್ಮ ದೇಶದಲ್ಲಿ ಕಂಡುಬರುತ್ತದೆ. ಸ್ನೇಹಿತರೆ ಇದರೊಂದಿಗೆ ನಗರ ಪ್ರದೇಶಗಳಲ್ಲಿ ಕಡ್ಡಾಯವಾಗಿ ವಾಹನಗಳಲ್ಲಿ ಓಡಾಡುವುದು ಕಂಡುಬರುತ್ತದೆ ಹಾಗಾಗಿ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ವಾಹನಗಳ ಕಳ್ಳತನವು ಕೂಡ ಕಂಡು ಬರುತ್ತದೆ ಹಾಗಾಗಿ ಜನರು ಪೊಲೀಸ್ ಠಾಣೆಯ ಮೆಟ್ಟಿಲನ್ನು ಏರುತ್ತಾರೆ.
ಸಿಬ್ಬಂದಿಗಳ ನಿರ್ಲಕ್ಷವು ಅಥವಾ ಒಂದು ಸ್ಟೇಷನ್ ನಿಂದ ಇನ್ನೊಂದು ಸ್ಟೇಷನ್ ಗೆ ಹೋಗುವ ಅವಶ್ಯಕತೆಯೂ ಜನರಿಗೆ ಸಮಸ್ಯೆ ಆಗುತ್ತಿತ್ತು. ಇಂತಹ ಸಮಸ್ಯೆಗಳಿಗೆ ನಮ್ಮ ಪೊಲೀಸ್ ಇಲಾಖೆಯಿಂದ ಒಂದು ವಿಶೇಷವಾದ ಸೇವೆಯ ಮೂಲಕ ಜನರಿಗೆ ದೂರು ದಾಖಲಿಸಲು ಸುಲಭವಾಗಿಸಿದೆ. ಹೌದು ಸ್ನೇಹಿತರೆ, ನೀವು ದೂರು ದಾಖಲಿಸಲು ಠಾಣಿಗೆ ಹೋಗುವ ಅವಶ್ಯಕತೆಯೇ ಇಲ್ಲ.
ಹಾಗಾಗಿ ಪೊಲೀಸ್ ಇಲಾಖೆಯು ದೂರ ದಾಕಲಿಸಲು ಆನ್ಲೈನ್ ಮೂಲಕ ಅವಕಾಶವನ್ನು ಜನರಿಗಾಗಿ ಒದಗಿಸಿದೆ ನಿಮ್ಮ ಯಾವುದೇ ತರಹದ ವಾಹನಗಳು ಕಳ್ಳತನವಾದರೆ ಆನ್ಲೈನ್ ಮೂಲಕ ದೂರು ದಾಖಲಿಸಿ ಇ-ಎಫ್-ಐ-ಆರ್ ಕಾಪಿ ಪಡೆದುಕೊಳ್ಳಬಹುದು. ಅದೇ ರೀತಿ ಆ ಪ್ರದೇಶಕ್ಕೆ ಸಂಬಂಧಪಟ್ಟಂತಹ ಸಿದ್ಧಂಧಿಗಳು ಕೂಡ ಮಾಲೀಕರನ್ನು ಕಂಡು ವಾಹನವನ್ನು ಕಂಡುಹಿಡಿಯುವಲ್ಲಿ ಮುಂದಾಗುತ್ತಾರೆ ಒಟ್ಟಿನಲ್ಲಿ ಜನರು ಠಾಣೆಗೆ ಅಲೆದಾಡುವ ಸಮಸ್ಯೆಯನ್ನು ದೂರ ಮಾಡಲು ನಮ್ಮ ರಾಜ್ಯ ಪೊಲೀಸ್ ಇಲಾಖೆಯು ಈ ವ್ಯವಸ್ಥೆಯನ್ನು ತಂದಿದೆ ತಿಳಿಯೋಣ.
ಪ್ರಥಮವಾಗಿ ನಾವು ಪೊಲೀಸ್ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.ನಂತರ ನಾಗರಿಕ ಕೇಂದ್ರಿತ ತಾಣ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಬಳಿಕ ಕ್ರಮ ನಾಗರಿಕ ಕೇಂದ್ರಿತ ಪೋರ್ಟಲ್ ಪುಟದಲ್ಲಿ ಲಾಗಿನ್ ಬಟನ್ ಒತ್ತಬೇಕು. ಅಲ್ಲಿ ನ್ಯೂ ಟು ಎನ್‌ಎಸ್‌ಒ ಎಂಬ ಆಯ್ಕೆಯನ್ನು ಮಾಡಿ, ಆಧಾರ್ ಸಂಖ್ಯೆ ನಮೂದಿಸಬೇಕು.ಹೊಸ ಯೂಸರ್ ಐಡಿ ಹಾಗೂ ಪಾಸ್ ವರ್ಡ್ ಬಳಸಿಕೊಂಡು ಲಾಗಿನ್ ಆಗಿ. ನಂತರ ಮುಂದಿನ ಪುಟದಲ್ಲಿ ವಾಹನದ ನೋಂದಣಿ ಸಂಖ್ಯೆ, ಎಂಜಿನ್ ಸಂಖ್ಯೆ ಸೇರಿದಂತೆ ವಾಹನದ ಸಂಪೂರ್ಣ ವಿವರವನ್ನು ಭರ್ತಿ ಮಾಡಬೇಕು.
ನಂತರ ಅರ್ಜಿ ಸಲ್ಲಿಸಿ ದೂರು ದಾಖಲಾಗುತ್ತದೆ. ಇದಾದ ನಂತರ ಸಂಬಂಧಪಟ್ಟ ಪೊಲೀಸ್ ಠಾಣೆಗೆ ವಿವರವು ತಲುಪಿ ತನಿಖಾಧಕಾರಿಗಳ ಸಹಿಯೊಂದಿಗೆ ಆನ್ಲೈನ್ ಮೂಲಕ ಇ-ಎಫ್-ಐ-ಆರ್ ಕಾಪಿ ತಲುಪುತ್ತದೆ. ಈ ಇ-ಎಫ್-ಐ-ಆರ್ ಕಾಪಿಯು ಎಲ್ಲಾ ಅಧಿಕೃತ ಎಫ್-ಐ-ಆರ್ ಅಷ್ಟೇ ಕಾನೂನಿನಲ್ಲಿ ಮಾನ್ಯತೆ ಹಾಗೂ ಮೌಲ್ಯಗಳನ್ನು ಪಡೆದಿದೆ. ಹಾಗಾಗಿ ನಮ್ಮ ಕರ್ನಾಟಕ ಜನತೆಯು ನಮ್ಮ ರಾಜ್ಯದ ಪೊಲೀಸ್ ಇಲಾಖೆ ವತಿಯಿಂದ ಜನಸ್ನೇಹಿಯನ್ನು ಉಪಯೋಗಿಸಿಕೊಂಡು ತಮ್ಮ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು.
ಇದನ್ನು ನಮ್ಮ ಕರ್ನಾಟಕ ಪೋಲಿಸ್ ಇಲಾಖೆಯ ಅಧಿಕಾರಿಗಳಾದ ಪ್ರವೀಣ್ ಮಸೂದವರು ಈ ಮುಂಚೆಯೆ ಹೇಳಿದ್ದರು. ಸದ್ಯ ನಮ್ಮ ಈ ಲೇಖನದ ಮೂಲಕ ರಾಜ್ಯ ಜನರಿಗೆ ಉಪಯುಕ್ತವಾಗಲಿ ಎಂಬುವುದೇ ನಮ್ಮ ಈ ಲೇಖನದ ಮೂಲ ಉದ್ದೇಶವಾಗಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು ಸ್ನೇಹಿತರೆ ಹೆಚ್ಚಿನ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪೇಜ್ ಅನ್ನು ಫಾಲೋ ಮಾಡಿ.