Saturday, September 30, 2023
Home cinema news ಪಠಾಣ್ ಚಿತ್ರ ಹೊಗಳಿ ಪೇಚಿಗೆ ಸಿಲುಕಿದ ರಮ್ಯ, ಸ್ಯಾಂಡಲ್ವುಡ್ ಪದ್ಮಾವತಿಗೆ ದರ್ಶನ್ ಅಭಿಮಾನಿಗಳಿಂದ ವಾರ್ನಿಂಗ್.

ಪಠಾಣ್ ಚಿತ್ರ ಹೊಗಳಿ ಪೇಚಿಗೆ ಸಿಲುಕಿದ ರಮ್ಯ, ಸ್ಯಾಂಡಲ್ವುಡ್ ಪದ್ಮಾವತಿಗೆ ದರ್ಶನ್ ಅಭಿಮಾನಿಗಳಿಂದ ವಾರ್ನಿಂಗ್.

 

ಮೋಹಕ ತಾರೆ ರಮ್ಯಾ (Ramya) ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ರಾಜಕೀಯ ವಿಷಯದ ಕುರಿತು ಅಥವಾ ಸಿನಿಮಾ ವಿಚಾರವಾಗಿ ಒಂದಿಲ್ಲೊಂದು ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ನೇರ ನೇರವಾಗಿ ಹೇಳಿಬಿಡುತ್ತಾರೆ. ಎಷ್ಟೋ ಬಾರಿ ಈಕೆ ರಾಜಕೀಯ ಪ್ರಮುಖರ ವಿರುದ್ಧ ತಮ್ಮ ಅಭಿಪ್ರಾಯ ಹಾಗೂ ಮಾತುಗಳನ್ನು ಟ್ವೀಟ್ (Tweet) ಮಾಡುವ ಮೂಲಕ ತಿಳಿಸಿದ್ದಾರೆ, ಕೆಲವೊಮ್ಮೆ ಸಿನಿಮಾ ರಂಗದ ಕಲಾವಿದರ ಪರವಾಗಿ ನಿಂತಿದ್ದಾರೆ.

ಇತ್ತೀಚೆಗಷ್ಟೇ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಿಕಿನಿ ವಿಚಾರವಾಗಿ ಅವರನ್ನು ಟ್ರೋಲ್ ಮಾಡುತ್ತಿದ್ದಾಗ ಯಾವ್ಯಾವ ವಿಚಾರಕ್ಕೆ ನಟಿ ಮಣಿಯರನ್ನು ಟ್ರೋಲ್ ಮಾಡುತ್ತಿದ್ದೀರಾ ಎನ್ನುವುದನ್ನು ವಿಷಯ ಸಮೇತ ಬರೆದು ವಿಶೇಷವಾದ ಪೋಸ್ಟ್ ಒಂದನ್ನು ಹಾಕಿದ್ದರು. ಈಗ ಮತ್ತೊಮ್ಮೆ ಪಠಾಣ್ (Pathaan) ಸಿನಿಮಾ ಪರವಾಗಿ ಮಾತನಾಡಲು ಹೋಗಿ ದರ್ಶನ್ (Darshan) ಅಭಿಮಾನಿಗಳನ್ನು ಎದುರು ಹಾಕಿಕೊಂಡಿದ್ದಾರೆ.

ಅಂತಹದ್ದು ಏನಾಯಿತು ಎಂದು ನೋಡುವುದಾದರೆ ಕ್ರಾಂತಿ (Kranthi) ಸಿನಿಮಾ ಜನವರಿ 26ರಂದು ಬಿಡುಗಡೆ ಆಗಿತ್ತು. ಅದಕ್ಕೂ ಒಂದು ದಿನ ಮುಂಚೆ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅವರ ಅಭಿನಯದ ಪಠಾಣ್ ಸಿನಿಮಾ ಬಿಡುಗಡೆ ಆಗಿತ್ತು. ಈಗ ರಮ್ಯಾ ಅವರು ಪಠಾಣ್ ಸಿನಿಮಾ ನೋಡಿ ಅದರ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅಲ್ಲಿ ಅಭಿನಯಿಸಿರುವ ಕಲಾವಿದರ ಹೆಸರನ್ನೆಲ್ಲಾ ಉಲ್ಲೇಖಿಸಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಇಬ್ರಾಹಿಂ, ಡಿಂಪಲ್ ಕಪಾಡಿಯ, ಸಲ್ಮಾನ್ ಖಾನ್ ಅವರ ನಟನೆಯನ್ನು ಹಾಡಿಹೋಗಲಿ ಚಿತ್ರ ಹಾಲಿವುಡ್ ರೇಂಜ್ ಅಲ್ಲಿ ಇದೆ.

ಮನರಂಜನೆಯ ಮಹಾಪೂರದ ದೊರೆಯಿತು ಎಂಬಿತ್ಯಾದಿಯಾಗಿ ಪೈಠಾಣ್ ಚಿತ್ರದ ಬಗ್ಗೆ ಗುಣಗಾನ ಮಾಡಿದ್ದಾರೆ. ಆದರೆ ಕನ್ನಡದ ಕ್ರಾಂತಿ ಸಿನಿಮಾ ಬಗ್ಗೆ ಎಲ್ಲೂ ಸಹ ಬಾಯಿ ಬಿಟ್ಟಿಲ್ಲ. ಇದು ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ ಈಗ ದರ್ಶನ್ ಅವರ ಕ್ರಾಂತಿ ಸಿನಿಮಾಗೆ ಬಾಲಿವುಡ್ ನ ಪಠಾಣ್ ಸಿನಿಮಾ ಕೂಡ ಕಾಂಪಿಟೇಶನ್ ಕೊಡುತ್ತಿರುವುದು ಸುಳ್ಳಲ್ಲ. ಇದರ ನಡುವೆ ಕನ್ನಡದ ಒಬ್ಬರು ಸ್ಟಾರ್ ನಟಿ ಕನ್ನಡ ಸಿನಿಮಾ ಬಿಟ್ಟು ಹಿಂದಿ ಸಿನಿಮಾದ ಪ್ರಚಾರಕ್ಕೆ ಇಳಿದಿರುವುದು ಅಭಿಮಾನಿಗಳ ತಲೆ ತಿರುಗುವಂತೆ ಮಾಡಿದೆ.

ಇದರಿಂದ ಕೋಪಗೊಂಡ ಅವರು ಈ ಟ್ವೀಟ್ ಮಾಡಿದ ಕ್ಷಣದಿಂದಲೇ ಕಮೆಂಟ್ಗಳ ಸುರಿಮಳೆ ಸರಿಸುವ ಮೂಲಕ ರಮ್ಯಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮಗೆ ಭಾಷಾಭಿಮಾನವೇ ಇಲ್ಲ ನಮ್ಮ ಸಿನಿಮಾ ಬಿಟ್ಟು ಅವರ ಸಿನಿಮಾ ಹೊಗಳುತ್ತಿದ್ದೀರಲ್ಲ ಎಂದು ಕೆಲವರು ಕೇಳಿದ್ದರೆ, ಕ್ರಾಂತಿ ಸಿನಿಮಾ ಬಗ್ಗೆ ಒಂದು ಪೋಸ್ಟ್ ಕೂಡ ಹಾಕದೆ ಹಿಂದಿ ಸಿನಿಮಾ ಬಗ್ಗೆ ಹೊಗಳುವಷ್ಟು ಧಿಮಾಕು ಬಂದಿದೆಯಾ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

ಇನ್ನು ಮುಂದುವರೆದು ಮತ್ತೊಬ್ಬರು ಈಗ ನೀವು ನಮ್ಮ ಕನ್ನಡ ಸಿನಿಮಾ ಬಿಟ್ಟು ಹಿಂದಿ ಸಿನಿಮಾ ವನ್ನು ಬೆಂಬಲಿಸುತ್ತಾ ಇರಬಹುದು. ಆದರೆ ನಿಮ್ಮ ನಿರ್ಮಾಣ ಸಂಸ್ಥೆಯಿಂದಲೇ ಮತ್ತೊಂದು ಕನ್ನಡ ಸಿನಿಮಾ ರಿಲೀಸ್ ಗೆ ತಯಾರಾಗುತ್ತಿದೆ. ಆ ಬಗ್ಗೆ ಕೂಡ ಎಚ್ಚರ ಇರಲಿ ಎಂದು ಪರೋಕ್ಷವಾಗಿ ರಮ್ಯಾ ಅವರನ್ನು ಎಚ್ಚರಿಸಿದ್ದಾರೆ. ರಮ್ಯಾ ಅವರ ಆಪಲ್ ಬಾಕ್ಸ್ (Apple box) ನಿರ್ಮಾಣ ಸಂಸ್ಥೆಯಿಂದ ಸ್ವಾತಿ ಮುತ್ತಿನ ಮಳೆ (Swathi muththina male haniye) ಹನಿ ಎನ್ನುವ ಸಿನಿಮಾ ತಯಾರಾಗುತ್ತಿದ್ದು.

ಚಿತ್ರೀಕರಣ ಮುಕ್ತಾಯಗೊಂಡು ಪ್ರೀಪ್ರೊಡಕ್ಷನ್ ಕೆಲಸ ನಡೆಯುತ್ತಿದು ಈ ವರ್ಷವೇ ಸಿನಿಮಾ ರಿಲೀಸ್ ಆಗುವ ಎಲ್ಲಾ ಸಾಧ್ಯತೆಗಳು ಇದೆ. ಈಗ ರಮ್ಯಾ ವಿರುದ್ಧ ಸಿಡಿದೆದ್ದಿರುವ ದರ್ಶನ್ ಅಭಿಮಾನಿಗಳು ಅದನ್ನು ನೋಡದೆ ಇರುವ ನಿರ್ಧಾರ ಮಾಡುತ್ತಿದ್ದಾರೆ. ಮುಂದೆ ಇದು ಯಾವ ತಿರುವು ಪಡೆದುಕೊಳ್ಳುತ್ತದೆ, ಕ್ಷಮೆ ಕೇಳಿ ನಟಿಮಣಿ ಕ್ರಾಂತಿ ಸಿನಿಮಾ ಬಗ್ಗೆ ಮಾತನಾಡುತ್ತಾರಾ ಕಾದು ನೋಡಬೇಕಿದೆ.

- Advertisment -