ಈಗಾಗಲೇ ಎಲ್ಲರಿಗೂ ತಿಳಿದಿದ್ದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು. ಪ್ರತಿಯೊಬ್ಬ ಮಹಿಳೆಯು ಕೂಡ ಅಂದರೆ ಮನೆಯ ಒಡತಿ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು. ಇದೆ ಆಗಸ್ಟ್ ತಿಂಗಳಿನಿಂದ ನಿಮ್ಮ ಅಕೌಂಟ್ ಗೆ 2,000 ಹಣ ಬರುತ್ತದೆ ಎಂದು ಸರ್ಕಾರ ನಿಗದಿಪಡಿಸಿದೆ. ಹೌದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆ ನಾವೇನಾದರೂ ಅಧಿಕಾರಕ್ಕೆ ಬಂದರೆ ಜನರಿಗೆ ಉಚಿತ ವಾಗಿ 5 ಗ್ಯಾರಂಟಿಯನ್ನು ಕೊಡುತ್ತೇವೆ ಎನ್ನುವಂತಹ ಆದೇಶವನ್ನು ಹೊರಡಿಸಿದ್ದರು.
ಅದೇ ರೀತಿಯಾಗಿ ಕೆಲವೊಂದು ಆದೇಶವನ್ನು ಈಗಾಗಲೇ ಜಾರಿಗೊಳಿಸಿದ್ದು ಅದರಲ್ಲಿ ಬಹಳ ಪ್ರಮುಖವಾಗಿ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಹಾಗೂ ಒಬ್ಬರಿಗೆ 5 ಕೆಜಿಯಂತೆ ಮನೆಯಲ್ಲಿ ಎಷ್ಟು ಜನ ಇರುತ್ತಾರೋ ಅವರಿಗೆ ಇಂತಿಷ್ಟು ಎಂಬಂತೆ ಹಣವನ್ನು ಕೊಡುವಂತಹ ಯೋಜನೆಯು ಕೂಡ ಈಗ ಜಾರಿಗೆ ಬಂದಿದ್ದು. ಈಗ ಮೂರನೆಯದಾಗಿ ಈ ಒಂದು ಗೃಹಲಕ್ಷ್ಮಿ ಯೋಜನೆಯಗೆ ಅರ್ಜಿಯನ್ನು ಹಾಕುವುದರ ಮೂಲಕವೂ ಸಹ ಮನೆಯ ಒಡತಿ ಹಣವನ್ನು ಪಡೆಯಬಹುದಾಗಿದೆ.
ಹಾಗಾದರೆ ಈ ದಿನ ಈ ಒಂದು ಅರ್ಜಿಯನ್ನು ಹಾಕುವಂತಹ ಸುಲಭವಾದಂತಹ ವಿಧಾ ನ ಯಾವುದು ಹಾಗೂ ಅರ್ಜಿಯನ್ನು ನೀವು ಎಲ್ಲಿ ಹೋಗಿ ಸಲ್ಲಿಸಬೇಕಾ ಗುತ್ತದೆ ಇದರ ಪ್ರಕ್ರಿಯೆ ಯಾವ ರೀತಿ ಇರುತ್ತದೆ ಎನ್ನುವುದರ ಸಂಪೂ ರ್ಣ ವಾದಂತಹ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಈ ಒಂದು ಅರ್ಜಿಯನ್ನು ನೀವು ಯಾವುದೇ ಕಾರಣಕ್ಕೂ ಮೊಬೈಲ್ ಗಳಲ್ಲಿ ಹಾಗೂ ಕಂಪ್ಯೂಟರ್ ಕೇಂದ್ರಗಳಲ್ಲಿ ಹಾಕುವಂತಹ ಅಗತ್ಯ ಇಲ್ಲ ಅಂದರೆ ಅವರಿಗೆ ಅವಕಾಶ ಇರುವುದಿಲ್ಲ.
ಬದಲಿಗೆ ಗ್ರಾಮ 1, ಬೆಂಗಳೂರು 1, ಸೇವಾ ಸಿಂಧು, ಹೀಗೆ ಕೆಲವೊಂದು ಕಡೆ ಮಾತ್ರ ಹೋಗಿ ನೀವು ಈ ಒಂದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು. ಇದರ ಮೂಲಕ ನೀವು ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಹಾಗಾದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಹಾಕುವಂತಹ ದಿನಾಂಕ ಯಾವುದು ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಸರ್ಕಾರ ಈ ಒಂದು ನಂಬರ್ ಕೊಟ್ಟಿದೆ.
ಈ ಒಂದು ನಂಬರ್ ಗೆ ಮಿಸ್ ಕಾಲ್ ಕೊಟ್ಟರೆ ಸಾಕು ನೀವು ಎಲ್ಲಿ ಹೋಗಿ ಅರ್ಜಿಯನ್ನು ಹಾಕಬೇಕು ಹಾಗೂ ನೀವು ಅರ್ಜಿಯನ್ನು ಯಾವ ದಿನ ಹೋಗಿ ಸಲ್ಲಿಸಬಹುದು ಎನ್ನುವ ಮಾಹಿತಿ ಎಲ್ಲವೂ ಸಹ ಬರುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ. ಹಾಗಾದರೆ ಈ ಒಂದು ಅರ್ಜಿ ಸಲ್ಲಿಕೆಯ ವಿಧಾನ ಯಾವ ರೀತಿ ಇದೆ ಎಂದು ನಿಮ್ಮ ಮೊಬೈಲ್ ನಲ್ಲಿ ಹೇಗೆ ನೋಡಿಕೊಳ್ಳುವುದು ಎನ್ನುವುದನ್ನು ಈ ಕೆಳಗೆ ತಿಳಿಯೋಣ.
ಅರ್ಜಿ ಸಲ್ಲಿಸುವ ವಿಧಾನ
• ಮೊದಲು ಸೇವಾ ಸಿಂಧು ಪೋರ್ಟಲ್ ಗೆ ಹೋಗಬೇಕು.
• ನಂತರ ನಿಮ್ಮ ಪಡಿತರ ಚೀಟಿಯ ಸಂಖ್ಯೆಯನ್ನು ನಮೂದಿಸಬೇಕು. ನಂತರ ನಿಮ್ಮ ಅರ್ಜಿಯ ಸ್ಥಿತಿಯನ್ನು ಗಮನಿಸಿ ಎನ್ನುವ ಆಯ್ಕೆ ಬರುತ್ತದೆ ಅದನ್ನು ಕ್ಲಿಕ್ ಮಾಡಬೇಕು.
• ನಂತರ ಪುಟದಲ್ಲಿ, ಗೃಹಲಕ್ಷ್ಮಿ ಯೋಜನೆಗೆ ನೊಂದಣಿಯನ್ನು ಮಾಡಿ ಕೊಳ್ಳಲು ಸ್ಥಳ, ದಿನಾಂಕ ಹಾಗೂ ಸಮಯವನ್ನು ನೀಡಲಾಗಿರುತ್ತದೆ.
• ಈ ಸ್ಥಳ, ದಿನಾಂಕ ಹಾಗೂ ಸಮಯವನ್ನು ನೋಡಿಕೊಂಡು ನೀವು ಬೇಕಾದ ದಾಖಲೆಗಳೊಂದಿಗೆ ನಿಗದಿತ ಸಮಯಕ್ಕೆ ತಿಳಿಸಲಾದ ಸರ್ಕಾರಿ ಕೇಂದ್ರಕ್ಕೆ ತೆರಲಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿಯನ್ನು ಮಾಡಿ ಕೊಳ್ಳಬಹುದಾಗಿದೆ.
ಅಷ್ಟೇ ಅಲ್ಲದೆ ಆಗಸ್ಟ್ ತಿಂಗಳಿನಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಕೂಡ ಹಣವು ಜಮಾ ಆಗಲಿದೆ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ವಿಧಾನಗಳನ್ನು ತಿಳಿದುಕೊಂಡು ಬೇರೆಯವರಿಗೂ ಕೂಡ ತಿಳಿಸುವುದು ಒಳ್ಳೆಯದು. ಬದಲಿಗೆ ಕೆಲವೊಂದಷ್ಟು ಜನರಿಂದ ಹಣವನ್ನು ಪಡೆಯುವ ಉದ್ದೇಶದಿಂದ ನಾವು ಈ ಅರ್ಜಿಯನ್ನು ಹಾಕಿಕೊಡುತ್ತೇವೆ ಎಂದು ಹಣವನ್ನು ಪಡೆಯುತ್ತಿದ್ದಾರೆ ಆದ್ದರಿಂದ ಅದನ್ನು ತಪ್ಪಿಸಲು ಆದಷ್ಟು ಎಲ್ಲರೂ ಇದನ್ನು ತಿಳಿದುಕೊಂಡಿ ರುವುದು ಒಳ್ಳೆಯದು.