Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಸರ್ಕಾರದಿಂದ ರೈತರಿಗೆ ಬಂಪರ್‌ ಸುದ್ದಿ.! ಕುರಿ ಸಾಕಾಣಿಕೆಗೆ ನಿಮಗೆ ಸಿಗಲಿದೆ 4 ಲಕ್ಷ ಸಹಾಯ ಧನ.!‌ ಈ ಅವಕಾಶ ಮಿಸ್‌ ಮಾಡ್ಕೊಬೇಡಿ

Posted on July 21, 2023 By Admin No Comments on ಸರ್ಕಾರದಿಂದ ರೈತರಿಗೆ ಬಂಪರ್‌ ಸುದ್ದಿ.! ಕುರಿ ಸಾಕಾಣಿಕೆಗೆ ನಿಮಗೆ ಸಿಗಲಿದೆ 4 ಲಕ್ಷ ಸಹಾಯ ಧನ.!‌ ಈ ಅವಕಾಶ ಮಿಸ್‌ ಮಾಡ್ಕೊಬೇಡಿ

 

ಕುರಿ ಸಾಕಾಣಿಕೆ ಮಾಡುವವರಿಗೆ ಕರ್ನಾಟಕ ಸರ್ಕಾರದಿಂದ ಇಲ್ಲಿದೆ ಗುಡ್‌ ನ್ಯೂಸ್.‌ ಹೌದು, ಇಂದಿನ ಲೇಖನದಲ್ಲಿ ಕುರಿ ಸಾಕಾಣಿಕೆಗೆ ನೀಡಲಾಗುವ ಸಹಾಯಧನದ ಬಗ್ಗೆ ವಿವರವನ್ನು ಸಂಪೂರ್ಣವಾಗಿ ನೀಡಲಾಗಿದೆ. ನೀವು ಈ ಯೋಜನೆಯ ಅಡಿಯಲ್ಲಿ ಎಷ್ಟು ಹಣವನ್ನು ಪಡೆದುಕೊಳ್ಳಬಹುದು? ಈ ಯೋಜನೆಗೆ ಅರ್ಜಿಸಲ್ಲಿಸುವುದು ಹೇಗೆ? ಇದಕ್ಕಾಗಿ ಒದಗಿಸಬೇಕಾದ ದಾಖಲೆಗಳು ಯಾವುವು? ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ. ಹಾಗಾಗಿ, ಈ ಲೇಖನವನ್ನು ಪೂರ್ತಿಯಾಗಿ ಓದಿ.

ಕುರಿ ಸಾಕಾಣಿಕೆ ಇಂದು ಕೇವಲ ಹೈನುಗಾರಿಕೆಯ ಭಾಗವಾಗಿ ಉಳಿದಿಲ್ಲ. ಕುರಿ ಸಾಕಾಣಿಕೆಯೂ ಉದ್ಯಮವಾಗಿ ಬದಲಾಗುತ್ತಿದೆ. ಅದರಲ್ಲಿ ಲಕ್ಷಾಂತರ ಆದಾಯ ಗಳಿಕೆ ಇರುವ ಕಾರಣಕ್ಕೆ ಜನರು ಕೃಷಿಯ ಜೊತೆಗೆ ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ. ಕೆಲವರು ಇದನ್ನು ಮಾಂಸಕ್ಕಾಗಿ ಸಾಕುತ್ತಾರೆ. ಕುರಿ ಸಾಕಾಣಿಕೆಯಿಂದಾಗಿ ಕುರಿಗಳನ್ನು ಒಂದೇ ವರ್ಷಕ್ಕೆ ಮಾರಾಟ ಮಾಡಿದರೂ ಲಾಭ ಗಳಿಸಬಹುದು. ಇದರೊಂದಿಗೆ ಕುರಿ ಗೊಬ್ಬರಕ್ಕೂ ಉತ್ತಮ ಬೇಡಿಕೆಯಿದೆ.

ಕುರಿ ಸಾಕಾಣಿಕೆ ಲಾಭದಾಯಕ ವ್ಯಾಪಾರವಾಗಿ ಮಾರ್ಪಟ್ಟಿದೆ. ಇದಕ್ಕೆ ಸರ್ಕಾರದಿಂದಲೂ ನೆರವು ನೀಡಲಾಗುತ್ತದೆ. ಕುರಿ ಸಾಕಾಣಿಕೆ ಉದ್ಯಮ ಆರಂಭಿಸಲು ಸರಕಾರದಿಂದ ಸಾಲ, ವಿಮೆ ಸೌಲಭ್ಯ ನೀಡಲಾಗುತ್ತದೆ ಎಂದು ತಿಳಿದವರು ಬಹಳ ಕಡಿಮೆ. ಕಡಿಮೆ ವೆಚ್ಚದಲ್ಲಿ ಕುರಿ ಸಾಕಾಣಿಕೆ ವ್ಯಾಪಾರ ಆರಂಭಿಸುವುದು ವಿಶೇಷ. ಈ ವ್ಯವಹಾರದಲ್ಲಿ ಕುರಿಗಳ ಆಹಾರದ ಅವಶ್ಯಕತೆಗಳು ಇತರ ಪ್ರಾಣಿಗಳ ಸಾಕಣೆಗಿಂತ ಅಗ್ಗವಾಗಿದೆ. ಇದಲ್ಲದೆ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕಡಿಮೆ ಸ್ಥಳದಿಂದಲೂ ಇದನ್ನು ಪ್ರಾರಂಭಿಸಬಹುದು.

ಇದೀಗ ರಾಜ್ಯಾದ್ಯಂತ ಇರುವ ಎಲ್ಲ ರೈತರಿಗೆ ರಾಜ್ಯದ ಕುರಿ ಅಭಿವೃದ್ದಿ ನಿಗಮದಿಂದ ಸಹಾಯ ಧನಕ್ಕೆ ಹೊಸ ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತ ಕುರಿ ಸಾಕಣೆ ಮಾಡಲು ಬಯಸುವ ನಿರುದ್ಯೋಗಿ, ಯುವಕ, ಯುವತಿಯರು ಹಾಗೂ ರೈತರೂ ಕುರಿ ಸಾಕಣೆ ಮಾಡಲು ಬಯಸುವ ಪ್ರತಿಯೊಬ್ಬರು ಕೂಡ ಕರ್ನಾಟಕ ರಾಜ್ಯ ಕುರಿ ವಿಮೆ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಕುರಿ ಅಥವಾ ಮೇಕೆ ಘಟಕ ಸ್ಥಾಪನೆಗೆ ಸಹಾಯ ಧನಕ್ಕೆ ನಿಗಮಗಳಿಂದ ಹೊಸ ಅರ್ಜಿಗಳನ್ನು ಕರೆಯಲಾಗಿದೆ.

 

ರೈತರು ಈ ಅರ್ಜಿಗಳನ್ನು ಸಲ್ಲಿಸುವ ಮೂಲಕ ನಾಲ್ಕು ಲಕ್ಷ ರೂಪಾಯಿಗಳವರೆಗೆ ಸಹಾಯ ಧನವನ್ನು ಪಡೆದುಕೊಳ್ಳಬಹುದಾಗಿದೆ. ನೀವು ಕೂಡ ರೈತರಾಗಿದ್ದರೆ ಅಥವಾ ರೈತ ಕುಟುಂಬದವರಾಗಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ. ಮತ್ತು ಇದನ್ನು ನಿಮ್ಮ ಸ್ನೇಹಿತರಿಗೂ ಶೇರ್‌ ಮಾಡಿ ಇದರಿಂದ ಅವರು ಇದರ ಸಂಪೂರ್ಣ ಲಾಭ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ.

ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ 2023-24ನೇ ಸಾಲಿಗೆ 6+1 ಕುರಿ/ಮೇಕೆ ಸಾಕಣೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಫಲಾನುಭವಿಗಳು ತಮ್ಮ ಜಿಲ್ಲಾ ಕುರಿ ಅಭಿವೃದ್ಧಿ ನಿಗಮದ ಉಪ ನಿರ್ದೇಶಕರ ಕಚೇರಿ ಸಂಪರ್ಕಿಸಿ ನಿಗದಿತ ಸಮಯಕ್ಕೆ ಅರ್ಜಿ ಸಲ್ಲಿಸುವ ಮೂಲಕ ಈ ಅವಕಾಶ ಬಳಸಿಕೊಳ್ಳಬಹುದು.

ಅರ್ಜಿದಾರರ ವಯೋಮಿತಿ 18 ವರ್ಷದಿಂದ 60 ವರ್ಷದ ವರೆಗಿರಬೇಕು. ತಮ್ಮ ಜಿಲ್ಲೆಯ ಕುರಿ ಮತ್ತು ಉಣ್ಣೆ ಸಾಕಾಣಿಕೆ ನಿಮಗಕ್ಕೆ ಬೇಡಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಜುಲೈ 30 ರ ಒಳಗಾಗಿ ಈ ಅರ್ಜಿಯನ್ನು ನಿಗಮಕ್ಕೆ ನೀಡಬೇಕು. ಇಲ್ಲವಾದಲ್ಲಿ ನಿಮ್ಮ ಅರ್ಜಿಯನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಈ ಅರ್ಜಿಯನ್ನು ಸಲ್ಲಿಸುವ ಮೂಲಕ ನೀವು 4 ಲಕ್ಷ ಸಹಾಯ ಧನವನನ್ನು ಪಡೆದುಕೊಳ್ಳಬಹುದಾಗಿದೆ. ನೀವು ಅರ್ಹರಾಗಿದ್ದರೆ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 18-60 ವಯೋಮಿತಿ ಒಳಗಿನ ಸದಸ್ಯರಿಗೆ ಅನ್ವಯವಾಗುವ ಯೋಜನೆಯಾಗಿದ್ದು; ವಿವಿಧ ಜಿಲ್ಲೆಯ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು. ಈ ಯೋಜನೆಯಡಿ ನಿಗಮದಲ್ಲಿ ನೋಂದಣಿಯಾಗಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ ಕುರಿ/ ಮೇಕೆ ಸಾಕಾಣಿಕೆಗಾಗಿ ಸಹಾಯ ಧನ ಒದಗಿಸಲಾಗುತ್ತದೆ. ಆಯ್ಕೆಯಾದ ಪ್ರತಿ ಫಲಾನುಭವಿಗೆ ಕನಿಷ್ಟ 6+1ರ ಕುರಿ/ಮೇಕೆ ಘಟಕವನ್ನು ನೀಡಲು ಯೋಚಿಸಲಾಗಿದೆ. ಶೇಕಡಾ 90ರ ಸಹಾಯಧನವನ್ನು ನಿಗಮದ ವತಿಯಿಂದಲೂ, ಸಾಲದ ಭಾಗವನ್ನು ಬ್ಯಾಂಕುಗಳ ವತಿಯಿಂದಲೂ ಒದಗಿಸಲಾಗುತ್ತದೆ.

Useful Information Tags:Goat farming

Post navigation

Previous Post: ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆಯ ವೇಳಾಪಟ್ಟಿ ಮೊಬೈಲ್ ನಲ್ಲಿ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ – ಈಗಲೇ ನಿಮ್ಮ ಅರ್ಜಿ ಸ್ಥಿತಿ ಚೆಕ್ ಮಾಡಿಕೊಳ್ಳಿ.!
Next Post: ಗೃಹಲಕ್ಷ್ಮಿ ಯೋಜನೆಗೆ ಮೇಸೆಜ್ ಮಾಡಿದ್ರು ಕೂಡ ಇನ್ನೂ ರಿಪ್ಲೈ ಬಂದಿಲ್ವ.? ಚಿಂತೆ ಬಿಡಿ ಈ 2 ಹೊಸ ವಿಧಾನಗಳಲ್ಲಿ ಟ್ರೈ ಮಾಡಿ ಖಂಡಿತ ಅರ್ಜಿ ಸಲ್ಲಿಸಬಹುದು ವೇಳಪಟ್ಟಿ ಬರುತ್ತೆ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme