ಪ್ರತಿಯೊಬ್ಬರಿಗೂ ಸಹ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಆಸೆ ಇದ್ದೇ ಇರುತ್ತದೆ ಗಂಡು ಮಕ್ಕಳು ಅಥವಾ ಹೆಣ್ಣು ಮಕ್ಕಳು ಯಾರಾದರೂ ಸಹ ಯಾವಾಗಲೂ ಸುಂದರವಾಗಿ ಹಾಗೆ ಚಿಕ್ಕ ವಯಸ್ಕರಂತೆ ಕಾಣಬೇಕು ಎಂಬ ಆಸೆ ಇದ್ದೇ ಇರುತ್ತದೆ. ಈ ರೀತಿಯ ಆಸೆ ನಿಮಗೂ ಇದ್ದರೂ ಸಹ ನಾವಿಲ್ಲಿ ತಿಳಿಸುವಂತಹ ಕೆಲವೊಂದು ಟಿಪ್ಸ್ ಗಳನ್ನು ಫಾಲೋ ಮಾಡಿದರೆ ಸಾಕು ನೀವು ಯುವಕರಂತೆ ಸುಂದರವಾಗಿ ಕಾಣಿಸುತ್ತೀರಾ.
ಪ್ರತಿದಿನ ಬೆಳಗ್ಗೆ ಎದ್ದ ನಂತರ ತಿಂಡಿ ತಿನ್ನುವುದಕ್ಕೆ ಮುಂಚೆ ಒಂದು ಗಂಟೆಯ ಮೊದಲು ಅರ್ಧ ನಿಂಬೆಹಣ್ಣಿನ ರಸವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಸೇರಿಸಿ ಕುಡಿಯುವುದರಿಂದ ನಿಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು ಇದರಿಂದ ನಿಮ್ಮ ಚರ್ಮದ ಕಾಂತಿಯು ಸಹ ಹೆಚ್ಚುತ್ತದೆ ವಯಸ್ಸಾದಂತಹ ಲಕ್ಷಣಗಳು ಕಡಿಮೆಯಾಗುತ್ತದೆ.
ಜೊತೆಯಲ್ಲಿ ನೀವು ಪ್ರತಿ ದಿನ ಹಸಿ ತರಕಾರಿಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹೊರಗೆ ಸಿಗುವಂತಹ ಜಂಕ್ ಫುಡ್ ಗಳನ್ನು ಸೇವನೆ ಮಾಡುವ ಬದಲು ಹಸಿ ತರಕಾರಿಗಳು ಸೊಪ್ಪುಗಳನ್ನು ಸೇವನೆ ಮಾಡುವುದರಿಂದ ನಮ್ಮ ಚರ್ಮದ ಆರೋಗ್ಯವನ್ನು ವೃದ್ಧಿಸುತ್ತದೆ ಹಾಗೆಯೇ ನಾವು ಆರೋಗ್ಯವಂತರಾಗಿ ಇರಲು ಸಹಾಯ ಮಾಡುತ್ತದೆ.
ಪ್ರತಿದಿನ ನೀವು ಒಂದು ಹಣ್ಣು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ ಇಲ್ಲವಾದರೆ ಡ್ರೈ ಫ್ರೂಟ್ಸ್ ಅನ್ನು ತಿನ್ನುವ ರೂಢಿ ಮಾಡಿಕೊಳ್ಳಿ. ದಿನಕ್ಕೆ ಕನಿಷ್ಠ ಎಂಟರಿಂದ ಹತ್ತು ಲೋಟ ನೀರು ಕುಡಿಯಿರಿ ಇದರಿಂದ ನಮ್ಮ ಶರೀರವು ಡಿಟಾಕ್ಸ್ ಆಗಲು ಸಹಾಯವಾಗುತ್ತದೆ ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡಲು ನಮ್ಮ ದೇಹದಲ್ಲಿ ನೀರಿನ ಅವಶ್ಯಕತೆ ತುಂಬಾ ಇದೆ ಆದ್ದರಿಂದ ನಮ್ಮ ಚರ್ಮದ ರಕ್ಷಣೆಗೆ ನಾವು ಪ್ರತಿದಿ 4 ರಿಂದ 5 ಲೀಟರ್ ನೀರನ್ನು ಕುಡಿಯುವುದು ಅವಶ್ಯಕ.
ಸಾಧ್ಯವಾದಷ್ಟು ಎಲ್ಲಾ ಪೋಷಕಾಂಶಗಳು ಇರುವ ಆಹಾರವನ್ನು ತಿನ್ನಲು ಪ್ರಯತ್ನ ಮಾಡಬೇಕು ಉದಾಹರಣೆಗೆ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಇ, ವಿಟಮಿನ್ ಬಿ ಈ ರೀತಿಯಾದಂತಹ ಪೋಷಕಾಂಶಗಳ ಆಹಾರವನ್ನು ಸೇವನೆ ಮಾಡುವುದರಿಂದ ಚರ್ಮಕ್ಕೆ ಬೇಕಾದಂತಹ ಎಲ್ಲಾ ಪೋಷಕಾಂಶಗಳು ದೊರೆತು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.
ಪ್ರತಿದಿನ 8 ಗಂಟೆಗಳ ಕಾಲ ನಿದ್ದೆ ಮಾಡಬೇಕು, ಬೇಗ ಮಲಗಿ ಬೇಗ ಏಳುವುದು ಒಳ್ಳೆಯದು ಇದರಿಂದ ನಿಮ್ಮ ದೇಹದಲ್ಲಿ ಹಾರ್ಮೋನ್ಸ್ ಗಳು ಸರಿಯಾಗಿ ಕೆಲಸ ಮಾಡಲು ಸದಾ ಕಾಲ ಚೈತನ್ಯದಿಂದ ಇರಲು ಸಹಾಯವಾಗುತ್ತದೆ. ಆದಷ್ಟು ಚಹಾ ಕಾಫಿ ಸೇವನೆಯನ್ನು ಕಡಿಮೆ ಮಾಡಿ ಇದರ ಬದಲಾಗಿ ನೀವು ಗ್ರೀನ್ ಟೀ ಉಪಯೋಗಿಸುವುದು ತುಂಬಾ ಒಳ್ಳೆಯದು.
ರಾತ್ರಿ ಮಲಗುವುದಕ್ಕೂ ಮೊದಲು ಒಂದು ಲೋಟ ಹಾಲಿಗೆ ಒಂದು ಚಿಟಕೆಯಷ್ಟು ಅರಿಶಿಣ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ನಮ್ಮ ದೇಹದಲ್ಲಿನ ಕಫ ಕರಗುತ್ತದೆ ಮತ್ತು ಆರಾಮದಾಯಕವಾಗಿ ನಿದ್ದೆ ಬರುತ್ತದೆ. ಸುಡುವ ಬಿಸಿಲಿನಲ್ಲಿ ಹೋಗುವುದಕ್ಕೆ ಮುಂಚೆ ನೀವು ಸನ್ ಸ್ಕ್ರೀನ್ ಲೋಷನ್ ಗಳನ್ನು ಹಚ್ಚಿಕೊಳ್ಳಿ ಇಲ್ಲವಾದರೆ ನಿಮ್ಮ ಮುಖವನ್ನು ಒಂದು ಕಾಟನ್ ಬಟ್ಟೆಯಿಂದ ಕವರ್ ಮಾಡಿಕೊಳ್ಳುವುದು ಉತ್ತಮ.
ಹಾಗೆಯೇ ಆಗಾಗ ಶುದ್ಧವಾದ ಬಾದಾಮಿ ಎಣ್ಣೆಯಿಂದ ನಿಮ್ಮ ಮುಖವನ್ನು ಮಸಾಜ್ ಮಾಡಿಕೊಳ್ಳಿ ಇದರಿಂದ ನಿಮ್ಮ ಮುಖದಲ್ಲಿ ಇರುವಂತಹ ಸುಕ್ಕುಗಳು ಕಪ್ಪು ಕಲೆಗಳು ದೂರವಾಗುತ್ತದೆ ಹಾಗೆಯೇ ಚರ್ಮವು ಕಾಂತಿಯುತವಾಗಿ ಕಾಣಲು ಇದು ಸಹಾಯ ಮಾಡುತ್ತದೆ ಈ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.