ಮನೆಯೇ ಮಂತ್ರಾಲಯ ಎಂದು ಹೇಳುವ ಹಾಗೆ ನಾವು ನಮ್ಮ ಮನೆಯನ್ನು ಯಾವಾಗಲೂ ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ನಮ್ಮ ಮನೆ ಎಷ್ಟು ಸ್ವಚ್ಛವಾಗಿರು ಇರುತ್ತದೆಯೋ ನಮ್ಮ ಮನಸ್ಸು ಕೂಡ ಅಷ್ಟೇ ಸ್ವಚ್ಛವಾಗಿ ಇರುತ್ತದೆ ನಮ್ಮ ಮನಸ್ಸಿನಲ್ಲಿ ಪಾಸಿಟಿವ್ ಫೀಲಿಂಗ್ ಬರಬೇಕು ಎಂದರೆ ನಮ್ಮ ಮನೆ ಸ್ವಚ್ಛವಾಗಿ ಇಡಬೇಕು.
ಅದರಲ್ಲಿಯೂ ನಾವು ಬಾತ್ರೂಮ್ ಅಥವಾ ಸ್ನಾನದ ಮನೆಯನ್ನು ತುಂಬಾ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ನಮ್ಮ ಆರೋಗ್ಯದ ದೃಷ್ಟಿಯಿಂದ ನಮ್ಮ ಮನೆಯನ್ನು ನಾವು ಸ್ವಚ್ಛತೆಯಿಂದ ಇಟ್ಟುಕೊಳ್ಳುವುದು ಬಹಳ ಉಪಯುಕ್ತ ಅದಕ್ಕಾಗಿ ನಾವು ಹೊರಗಿಂದ ದುಬಾರಿಯಾದಂತಹ ಸಾಮಗ್ರಿಗಳನ್ನು ತಂದು ಉಪಯೋಗಿಸುವಂತಹ ಅಗತ್ಯವಿಲ್ಲ.
ಬದಲಿಗೆ ನಮ್ಮ ಮನೆಯಲ್ಲಿ ಇರುವಂತಹ ಕೆಲವು ಸಾಮಾಗ್ರಿಗಳನ್ನು ಬಳಸಿಕೊಂಡು ನಮ್ಮ ಮನೆಯನ್ನು ಅದರಲ್ಲಿಯೂ ಬಾತ್ರೂಮನ್ನು ತುಂಬಾ ಸ್ವಚ್ಚವಾಗಿ ಇಟ್ಟುಕೊಳ್ಳಬಹುದು. ಸಾಮಾನ್ಯವಾಗಿ ನಾವು ಬಾತ್ರೂಮ್ ನಲ್ಲಿ ಇರುವಂತಹ ಟೈಮ್ಸ್ ಗಳು ತುಂಬಾ ಕಲೆಗಳು ಹಾಗೂ ಉಪ್ಪು ಕಲೆಗಳಿಂದ ಕೂಡಿರುತ್ತದೆ ಇದನ್ನು ಹೋಗಲಾಡಿಸಲು ನಾವು ಮಾರುಕಟ್ಟೆಯಿಂದ ನಾನಾ ರೀತಿಯಾದಂತಹ ಲಿಕ್ವಿಡ್ ಗಳನ್ನು ತಂದು ಬಳಸುತ್ತೇವೆ.
ಆದರೆ ನಾವಿಲ್ಲಿ ತಿಳಿಸುವಂತಹ ವಸ್ತುಗಳನ್ನು ಬಳಸಿಕೊಂಡರೆ ಮನೆಯಲ್ಲಿಯೇ ಒಂದು ಲಿಕ್ವಿಡ್ ಅನ್ನು ತಯಾರಿಸಿಕೊಂಡು ಕಪ್ಪು ಕಲೆಯನ್ನು ಹೋಗಲಾಡಿಸಬಹುದು. ಉಜ್ಜಿ ತಿಕ್ಕುವಂತಹ ಅವಶ್ಯಕತೆ ಇಲ್ಲ ತುಂಬಾ ಸುಲಭವಾಗಿ ಕಲೆಗಳನ್ನು ಹೋಗಲಾಡಿಸ ಬಹುದು.
ಈ ಒಂದು ಲಿಕ್ವಿಡ್ ಅನ್ನು ತಯಾರಿಸಿಕೊಳ್ಳಲು ನಾವು ಆರು ನಿಂಬೆಹಣ್ಣನ್ನು ತೆಗೆದುಕೊಳ್ಳಬೇಕು ನಿಮ್ಮ ಮನೆಯಲ್ಲಿ ಕಿತ್ತಳೆ ಹಣ್ಣು ತಿಂದಿದ್ದರೆ ಅದರ ಸಿಪ್ಪೆಯನ್ನು ಸಹ ನೀವು ಇದಕ್ಕೆ ಸೇರಿಸಿಕೊಳ್ಳಬಹುದು ನಿಂಬೆ ಹಣ್ಣನ್ನು ಕಟ್ ಮಾಡಿ ಒಂದು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ ನಂತರ ಅದನ್ನು ಶೋಧಿಸಿಕೊಂಡು ಅದಕ್ಕೆ ಒಂದು ಟೇಬಲ್ ಸ್ಪೂನ್ ಉಪ್ಪು, ಒಂದು ಟೇಬಲ್ ಸ್ಪೂನ್ ಅಡಿಗೆ ಸೋಡಾ, ಒಂದು ಟೇಬಲ್ ಸ್ಪೂನ್ ಸೋಪ್ ಪೌಡರ್, ಒಂದು ಟೇಬಲ್ ಸ್ಪೂನ್ ನಷ್ಟು ವಿಮ್ ಲಿಕ್ವಿಡ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಈ ಲಿಕ್ವಿಡ್ ಒಂದು ಲೀಟರ್ ನಷ್ಟು ತಯಾರಿಸಿಕೊಂಡು ನಂತರ ಒಂದು ಸ್ಪ್ರೇ ಬಾಟಲಿನಲ್ಲಿ ಹಾಕಿ ನಿಮ್ಮ ಬಾತ್ರೂಮ್ ನಲ್ಲಿ ಟೈಲ್ಸ್ ಗಳು ಎಲ್ಲಿ ಕಪ್ಪು ಕಲೆ ಅಥವಾ ಉಪ್ಪು ಕಲೆ ಆಗಿರುತ್ತದೆ ಅಂತಹ ಜಾಗಕ್ಕೆ ಚೆನ್ನಾಗಿ ಸ್ಪ್ರೇ ಮಾಡಿ ಗೋಡೆಯ ಟೈಲ್ಸ್ ಗಳಿಗೆ ಮಾತ್ರವಲ್ಲದೆ ಫ್ಲೋರ್ ಟೈಲ್ಸ್ ಗು ಸಹ ನೀವು ಇದನ್ನು ಉಪಯೋಗ ಮಾಡಿಕೊಳ್ಳಬಹುದು.
ಸ್ಪ್ರೇ ಮಾಡಿ 30 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಒಂದು ಬ್ರಷ್ ನ ಸಹಾಯದಿಂದ ಬಾತ್ರೂಮ್ ಅನ್ನು ಉಜ್ಜಿ ತೊಳೆದರೆ ಉಪ್ಪು ಕಲೆಗಳೆಲ್ಲ ಮಾಯವಾಗುತ್ತದೆ. ತುಂಬಾ ಜೋರಾಗಿ ತಿಕ್ಕಿ ತೊಳೆಯುವಂತಹ ಅವಶ್ಯಕತೆ ಇಲ್ಲ ಸುಲಭವಾಗಿ ತಿಕ್ಕಿದರೆ ಸಾಕು.
ಬಾತ್ರೂಮ್ ಡೋರ್ ತುಂಬಾ ಕಲೆಗಳಾಗಿ ಬಿಳಿ ಬಿಳಿಯ ಚಕ್ಕೆಯತರ ಉಂಟಾಗಿರುತ್ತದೆ ಅದಕ್ಕಾಗಿ ನೀವು ರೆಡಿ ಮಾಡಿಕೊಂಡಿರುವ ಸಲ್ಯೂಷನ್ ಜೊತೆಗೆ ಒಂದು ಟೇಬಲ್ ಸ್ಪೂನ್ ಹಾರ್ಪಿಕ್ ಅನ್ನು ಮಿಕ್ಸ್ ಮಾಡಿ ಡೋರ್ ಗೆ ಅಪ್ಲೈ ಮಾಡಿ ನಂತರ ಡೋರನ್ನು ವಾಶ್ ಮಾಡುವುದರಿಂದ ಬಾತ್ರೂಮ್ ಡೋರ್ ತುಂಬಾ ಚೆನ್ನಾಗಿ ಹೊಳೆಯುತ್ತದೆ.
ಕೇವಲ ಟೈಲ್ಸ್ ಗಳು ಮಾತ್ರವಲ್ಲದೆ ನೀರಿನ ಟ್ಯಾಪ್ ಗಳು ಸಹ ಇದರಿಂದ ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತದೆ ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ. ಹಾಗೆಯೇ ನಿಮ್ಮ ಅನಿಸಿಕೆಯನ್ನು ಕಮೆಂಟ್ಸ್ ಮೂಲಕ ತಿಳಿಸಿ.