ಕನ್ನಡ ಇಂಡಸ್ಟ್ರಿಯ ಪವರ್ ಸ್ಟಾರ್(Puneeth Rajkumar) ನಮ್ಮೆಲ್ಲರ ಪ್ರೀತಿಯ ಅಪ್ಪು ಹೆಸರು ಸೂರ್ಯ ಚಂದ್ರ ಇರುವವರೆಗೂ ಕನ್ನಡಿಗರ ಮನದಲ್ಲಿ ಅಜರಾಮರ. ಯಾಕೆಂದರೆ ಅವರು ಮಾಡಿದ ಕಲಾ ಸೇವೆಗಿಂತ ಅವರು ಮಾಡಿದ ಸಮಾಜ ಸೇವೆಯೇ ಹೆಚ್ಚು ಜನರನ್ನು ಮುಟ್ಟಿದ್ದೆ ಎನ್ನುವ ಕಾರಣದಿಂದ. ಆದರೆ ಅದೆಲ್ಲ ಪುನೀತ್ ಅವರು ಬದುಕಿರುವಾಗ ಯಾರಿಗೂ ತಿಳಿದಿರಲಿಲ್ಲ ಅವರಿಗೆ ಪ್ರಚಾರ ಇಷ್ಟವಿಲ್ಲದ ಕಾರಣ ಬಲಗೈನಲ್ಲಿ ಕೊಟ್ಟದ್ದು ಎಡಗೈಗೂ ತಿಳಿಯಬಾರದು ಎಂಬಂತೆ ಕರ್ನಾಟಕದ ಬಹುತೇಕ ಮಂದಿಗೆ ಕೊಡಗೈ ದಾನಿಯಂತೆ ಸಹಾಯ ಹಸ್ತ ಚಾಚಿ ಸುಮ್ಮನಾಗಿದ್ದರು.
ಇಂದು ಅವರಿಲ್ಲದ ನೋವಿನಲ್ಲಿ ಅದೆಲ್ಲಾ ಆಚೆ ಬಂದಿದ್ದು ಅಭಿಮಾನಿಗಳನ್ನೇ ದೇವರು ಎಂದು ಕರೆದಿದ್ದ ರಾಜ ಕುಟುಂಬದ ಕೀರ್ತಿ ಕಳಶ ಪುನೀತ್ ರಾಜಕುಮಾರನನ್ನು ಜನ ಅಭಿಮಾನಿಗಳ ದೇವರೆಂದು ಆರಾಧಿಸುತ್ತಿದ್ದಾರೆ. ಈಗಾಗಲೇ ಕರ್ನಾಟಕದಲ್ಲಿ ಪುನೀತ್ ಅವರ ಬಗ್ಗೆ ಅಭಿಮಾನ ಎಷ್ಟಿದೆ ಎನ್ನುವುದಕ್ಕೆ ಹಲವು ಸಾಕ್ಷಿಗಳು ಕಂಡು ಬಂದಿದೆ. ಪುನೀತ್ ಅವರ ಅಗಲಿಕೆ ನಂತರ ನಮ್ಮ ರಾಜ್ಯದ ಪ್ರತಿ ಗ್ರಾಮಗಳಲ್ಲೂ ಕೂಡ ಒಂದು ರಸ್ತೆ ಹೆಸರು ಪುನೀತ್ ರಾಜಕುಮಾರ್(Appu) ಅವರಿಗೆ ಮೀಸಲಿಡಲಾಗಿದೆ.
ಅದೆಷ್ಟೋ ಪಾರ್ಕುಗಳು, ಅದೆಷ್ಟೋ ಸರ್ಕಲ್ಲುಗಳು ಹಾಗೂ ಅಭಿಮಾನಿಗಳ ಮನೆಗೂ ಸಹ ಅಪ್ಪು ಹೆಸರನ್ನು ಇಡಲಾಗಿದೆ. ಈಗ ಅಭಿಮಾನಿಗಳ ಮನೆಯ ದೇವರ ಕೋಣೆಯಲ್ಲಿ ಕೂಡ ಅಪ್ಪು ಫೋಟೋಗೆ ಪೂಜೆ ನಡೆಯುತ್ತಿದೆ ಮತ್ತು ಊರ ಯಾವುದೇ ದೇವರ ಜಾತ್ರೆ ರಥೋತ್ಸವ ನಡೆದರೂ ಅಪ್ಪು ಫೋಟೋ ಅಲ್ಲಿ ಮೆರವಣಿಗೆಗೆ ಇರುತ್ತದೆ. ಈ ಅಭಿಮಾನಿಗಳ ಅಭಿಮಾನ ಪದಗಳಿಗೆ ನಿಲುಕದ್ದು, ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಅದೆಷ್ಟೋ ಕಡೆ ಅಪ್ಪು ಪ್ರತಿಮೆ ನಿಲ್ಲಿಸಲಾಗಿದೆ.
ಅದರಲ್ಲೂ ಹೊಸಪೇಟೆಯಲ್ಲಿ ಅಪ್ಪುವಿಗಾಗಿ ಮಾಡಿರುವ ಪ್ರತಿಮೆ ಬಹಳ ವಿಶೇಷವಾದದ್ದು ಅಭಿಮಾನಿಗಳೆಲ್ಲಿ ಅಪ್ಪುಗೋಸ್ಕರ ಈ ಪ್ರತಿಮೆ ನಿರ್ಮಿಸಿ ಅದರ ಉದ್ಘಾಟನಾ ಸಮಾರಂಭವನ್ನು ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಸರಕಾರದ ಸಹಕಾರದೊಂದಿಗೆ ಅದ್ದೂರಿಯಾಗಿ ಮಾಡಿದ್ದರು. ಈಗ ಹೊಸಪೇಟೆ ಬಳಿಕ ಬಳ್ಳಾರಿಯಲ್ಲಿ ಕೂಡ ಅಪ್ಪು ಪ್ರತಿಮೆ ನಿಲ್ಲಿಸಲು ತಯಾರಿ ನಡೆಯುತ್ತಿದೆ. ಈಗಾಗಲೇ ಕಳೆದ ವರ್ಷದಿಂದಲೇ ಶ್ರೀ ರಾಮುಲು ಅವರ ಮುಖ್ಯಸ್ಥಿಕೆಯಲ್ಲಿ ಅದರ ಕೆಲಸಗಳು ಶುರು ಆಗಿದ್ದು ಕೆಜಿಎಫ್ ಸಿನಿಮಾದಲ್ಲಿ ಯಶ್ ಅವರ ಪ್ರತಿಮೆಯನ್ನು ನಿರ್ಮಿಸಿದ ಜೀವನ್ ಶಿಲ್ಲಿ ಎನ್ನುವವರೇ ಈ ಪ್ರತಿಮೆಯನ್ನು ಮಾಡಿದ್ದಾರೆ.
ಈ ಪ್ರತಿಮೆ ಮತ್ತೊಂದು ವಿಶೇಷತೆ ಏನು ಎಂದರೆ ಇದುವರೆಗೆ ಅಪ್ಪುಗಾಗಿ ನಿರ್ಮಿಸಲಾದ ಎಲ್ಲಾ ಪ್ರತಿಮೆಗಳಿಗಿಂತಲೂ ಇದೇ ಅತಿ ಎತ್ತರವಾದದ್ದು ಬರೋಬ್ಬರಿ 23 ಅಡಿಗಳ ಎತ್ತರವಾಗಿದೆ. ಅಪ್ಪು ಪ್ರತಿಮೆ ಬಳ್ಳಾರಿಯ ನಲ್ಲಾಚರಾವು ಪ್ರದೇಶದ ಜಿಲ್ಲಾ ಕ್ರೀಡಾಂಗಣದ ಮುಂದೆ ತಲೆ ಎತ್ತುತ್ತಿದೆ, ಇದರ ಉದ್ಘಾಟನೆಯನ್ನು ಸಹ ಬಹಳ ವಿಜೃಂಭಣೆಯಿಂದ ಮಾಡಬೇಕು ಎನ್ನುವ ಕೋರಿಕೆ ಅಭಿಮಾನಿಗಳ ಕಡೆಯಿಂದ ಇದೆ. ಈ ಪ್ರತಿಮೆ ತಯಾರಿಸುವುದಕ್ಕೆ ಹದಿನೈದು ಕೆಲಸಗಾರರ ತಂಡವು ಬರೋಬರಿ 5 ತಿಂಗಳ ಅವಧಿಯನ್ನು ತೆಗೆದುಕೊಂಡಿದ್ದು, ಈ ತಿಂಗಳಷ್ಟೇ ಅದರ ಫಿನಿಶಿಂಗ್ ಟಚ್ ಕೂಡ ಮುಗಿದಿದೆ.
ಇದೇ ತಿಂಗಳಲ್ಲಿ ಉದ್ಘಾಟನೆ ಕಾರ್ಯಕ್ರಮವೂ ನಡೆಯಲಿದೆ ಈ ಪ್ರತಿಮೆಯ ಜೊತೆಗೆ ಪಕ್ಕದಲ್ಲಿರುವ ಕ್ರೀಡಾ ಪಾರ್ಕ್ ಹಾಗೂ 14 ಎಕರೆಗಳ ವಿಶಾಲ ಕೆರೆಗೂ ಕೂಡ ಅಪ್ಪು ಹೆಸರನ್ನು ಇಡಲು ನಿರ್ಧರಿಸಲಾಗಿದೆ. ಇದೇ ಜನವರಿ 21ರ ಶುಕ್ರವಾರ ಸಂಜೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಅಲ್ಲಿಯ ಅಪ್ಪು ಅಭಿಮಾನಿಗಳ ಆಸೆಯಂತೆ ಅಪ್ಪು ಪ್ರತಿಮೆ ಅನಾವರಣಗೊಳ್ಳಲಿದೆ. ಅಪ್ಪುವಿನ ಈ ಕಾರ್ಯಕ್ರಮಕ್ಕೆ ಅತಿಥಿಗಳನ್ನಾಗಿ ಯಾರನ್ನು ಕರೆಸಲಾಗುತ್ತದೆ ಎನ್ನುವುದರ ಬಗ್ಗೆ ಇನ್ನೂ ಕೂಡ ಸ್ಪಷ್ಟವಾದ ಮಾಹಿತಿ ದೊರೆತಿಲ್ಲ ಆದರೆ ಅಪ್ಪುವಿನ ಹೆಸರನ್ನು ಹೇಳಿದರೆ ಕರ್ನಾಟಕ ಮಾತ್ರವಲ್ಲ ಇಡೀ ಭಾರತ ಚಿತ್ರರಂಗದ ಯಾರೇ ಮುಖ್ಯ ಸ್ಟಾರ್ ಗಳಾದರೂ ಕೂಡ ಬಂದು ಹಾಜರಾಗುತ್ತಾರೆ.
ಈಗಾಗಲೇ ಅಪ್ಪುವಿನ ಪುನೀತ ಪರ್ವ ಕಾರ್ಯಕ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳ ಸಲುವಾಗಿ ರಜನಿಕಾಂತ್, ಜೂನಿಯರ್ ಎನ್ಟಿಆರ್, ಸೂರ್ಯ ಮುಂತಾದ ಸೂಪರ್ ಸ್ಟಾರ್ ಗಳು ಕೂಡ ಬಂದಿದ್ದಾರೆ. ಈಗಲೂ ಸ್ಟಾರ್ಗಳೇ ಮುಖ್ಯ ಅತಿಥಿಗಳಾಗಿ ಬರುವ ಸಾಧ್ಯತೆಗಳು ಇರಬಹುದು. ಅಪ್ಪುವಿನ ಹೆಸರಿನ ಕಾರ್ಯಕ್ರಮ ಎಲ್ಲಿ ನಡೆದರೂ ಕೂಡ ಕರ್ನಾಟಕದ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಇಂತಹ ಕರ್ನಾಟಕ ಕಂಡ ಕನ್ನಡ ತಾಯಿಯ ಹೆಮ್ಮೆಯ ಪುತ್ರನಿಗೆ ಗೌರವ ಸಲಿಸುವ ಸಲುವಾಗಿ ಕೈ ಜೋಡಿಸ ಬೇಕಾದದ್ದು ಇಲ್ಲಿರುವ ಪ್ರತಿಯೊಬ್ಬರ ಕರ್ತವ್ಯ. ಈಗ ಮತ್ತೊಮ್ಮೆ ಅವರಿಗಾಗಿ ನಾವೆಲ್ಲಾ ಒಂದಾಗಿ ಅಪ್ಪು ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ.