Thursday, September 28, 2023
Home Viral News ಕ್ರಾಂತಿ ಸಿನಿಮಾದ ಪ್ರಚಾರಕ್ಕಾಗಿ ದರ್ಶನ್ ಬೇಕಾಂತಾನೇ ಚಪ್ಪಲಿಯಲ್ಲಿ ಹೊಡಸ್ಕೊಂಡ ಅಪ್ಪು ಅಭಿಮಾನಿ ಬಿಚ್ಚಿಟ್ಟ ಕಟು ಸತ್ಯ.

ಕ್ರಾಂತಿ ಸಿನಿಮಾದ ಪ್ರಚಾರಕ್ಕಾಗಿ ದರ್ಶನ್ ಬೇಕಾಂತಾನೇ ಚಪ್ಪಲಿಯಲ್ಲಿ ಹೊಡಸ್ಕೊಂಡ ಅಪ್ಪು ಅಭಿಮಾನಿ ಬಿಚ್ಚಿಟ್ಟ ಕಟು ಸತ್ಯ.

 

 

ದರ್ಶನ್ ಅವರ ಮೇಲಾದ ಚಪ್ಪಲಿ ಏಟಿನ ಘಟನೆಯ ಹಿಂದಿನ ಸತ್ಯ ಬಿಚ್ಚಿಟ್ಟ ಅಪ್ಪು ಅಭಿಮಾನಿ ಕರ್ನಾಟಕದಲ್ಲಿ ನಡೆದ ಅತ್ಯಂತ ಅಮಾನವೀಯ ಘಟನೆ ಇದು. ನಮ್ಮ ಚಂದನವನದ ಸ್ಟಾರ್ ಹೀರೋ ಒಬ್ಬರ ಮೇಲೆ ಚಪ್ಪಲಿ ಎಸೆತ ಆಗಿರುವುದು ಇಡೀ ಇಂಡಸ್ಟ್ರಿಗೆ ಕಪ್ಪು ಚುಕ್ಕೆ. ಈ ಬಗ್ಗೆ ಎಲ್ಲಾ ಕಲಾವಿದರಿಗಳಿಗೂ ಸಹ ಖಂಡಿತವಾಗಿಯೂ ಬೇಸರ ಇದೆ. ಅಂದು ಕ್ರಾಂತಿ ಸಿನಿಮಾದ ಪ್ರಚಾರದ ಅಂಗವಾಗಿ ವಿಶೇಷ ರೀತಿಯಲ್ಲಿ ಹಾಡನ್ನು ರಿಲೀಸ್ ಮಾಡಲು ಹೋಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಹೊಸಪೇಟೆಯಲ್ಲಿ ಕಿಡಿಗೇಡಿಗಳಿಂದ ಚಪ್ಪಲಿ ಎಸೆತ ಆಗಿತ್ತು.

ವಿಷಯ ಹಬ್ಬುತ್ತಿದ್ದಂತೆ ಆ ವಿಡಿಯೋ ಎಲ್ಲೆಡೆ ವೈರಲ್ ಆಗಿ ಇಡೀ ಕರ್ನಾಟಕದಾದ್ಯಂತ ದರ್ಶನ್ ಅಭಿಮಾನಿಗಳು ಇದನ್ನು ಬಹಳವಾಗಿ ಖಂಡಿಸಿದರು. ದರ್ಶನ್ ಅವರಿಗೆ ಬೆಂಬಲವಾಗಿ ಎಲ್ಲಾ ಕಲಾವಿದರು ಕೂಡ ನಿಂತು ಘಟನೆಯನ್ನು ಖಂಡಿಸಿದರು ನಂತರ ಆದ ಬೆಳವಣಿಗೆಯೇ ಈಗ ಬೇರೆ ತಿರುವು ಪಡೆದುಕೊಂಡಿದೆ. ಹೊಸಪೇಟೆಯನ್ನು ಮೊದಲಿನಿಂದಲೂ ರಾಜ್ ಕುಟುಂಬದ ಅಖಾಡ ಎಂದು ಹೇಳಲಾಗುತ್ತಿದೆ. ದರ್ಶನ್ ಅವರು ಹೋಗುವ ಹಿಂದಿನ ದಿನದವರೆಗೂ ನಾರ್ಮಲ್ ಆಗಿದ್ದ ಹೊಸಪೇಟೆಯಲ್ಲಿ ರಾತ್ರೋ ರಾತ್ರಿ ಅಪ್ಪು ಫ್ಲೆಕ್ಸ್ ಹಾಕಲಾಗಿತ್ತು.

ಹೀಗಾಗಿ ಅಪ್ಪು ಅವರ ತವರುಮನೆ ಅಂತಿರುವ ಹೊಸಪೇಟೆಯಲ್ಲಿ ಬೇರೆ ಸ್ಟಾರ್ ಹೀರೋ ಬಂದು ಪ್ರಚಾರ ಮಾಡುವುದು ಅಪ್ಪು ಅಭಿಮಾನಿಗಳಿಗೆ ಇಷ್ಟ ಆಗದೆ ಅವರು ಈ ರೀತಿ ತಪ್ಪಾಗಿ ನಡೆದುಕೊಂಡಿದ್ದಾರೆ ಎಂದು ದರ್ಶನ್ ಅಭಿಮಾನಿಗಳು ನೇರವಾಗಿ ಪುನೀತ್ ಅಭಿಮಾನಿಗಳನ್ನು ಖಂಡಿಸಿದರು. ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ಸ್ಟಾರ್ ಕೆಸರೆರಚಾಟ ಮುಂದುವರೆದು ನೇರವಾಗಿ ದರ್ಶನ್ ಅಭಿಮಾನಿಗಳು ದೊಡ್ಮನೆ ಕುಟುಂಬವನ್ನೇ ಬೆಟ್ಟು ಮಾಡಿ ತೋರಿಸಲು ಶುರು ಮಾಡಿದರು. ದಿನದಿಂದ ದಿನಕ್ಕೆ ವಿಷಯ ತಾರಕಕ್ಕೆ ಏರಿ ಈಗ ಇಷ್ಟು ದಿನದವರೆಗೆ ಇದ್ದ ದಚ್ಚು ಕಿಚ್ಚ ಫ್ಯಾನ್ಸ್ ಜೊತೆಗೆ ಈಗ ದಚ್ಚು ಅಪ್ಪು ಫ್ಯಾನ್ಸ್ ವಾರ್ ಶುರು ಆಗಿ ಬಿಟ್ಟಿದೆ.

ಈಗ ಅಪ್ಪು ಅಭಿಮಾನಿಗಳು ಘಟನೆಯ ಕುರಿತು ಈ ರೀತಿ ಹೇಳುತ್ತಿದ್ದಾರೆ. ಈಗಾಗಲೇ ಕನ್ನಡ ಫಿಲಂ ಚೇಂಬರ್ ಗೆ ದೂರ ಸಲ್ಲಿಸಲು ಹೋಗಿರುವ ದೊಡ್ಮನೆ ಕುಟುಂಬದ ಅಭಿಮಾನಿಗಳು ನಾವು ಫಿಲಂ ಚೇಂಬರ್ ಅಧ್ಯಕ್ಷರಾದ ಭಾಮ ಹರೀಶ್ ಅವರನ್ನು ಎಷ್ಟೋ ಬಾರಿ ಮಾತುಕತೆಗೆ ಶಾಂತಿಯುತವಾಗಿ ಕರೆದಿದ್ದರು ನಮ್ಮ ಅಹವಾಲು ಅವರು ಕೇಳುತ್ತಿಲ್ಲ. ಬಹಳ ರೂಡಾಗಿ ಮಾತಾಡದಾಡುತ್ತಿದ್ದಾರೆ. ನಮ್ಮ ಮಾತು ಇಷ್ಟೇ ಬೇಕಂತಲೇ ದರ್ಶನ್ ಅವರ ಅಭಿಮಾನಿಗಳು ಪುನೀತ್ ಹಾಗೂ ದೊಡ್ಮನೆ ಹೆಸರು ಹಾಳುಮಾಡಲು ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ.

ಸಿನಿಮಾ ಪ್ರಚಾರಕ್ಕಾಗಿ ಅವರು ಈ ಗಿಮಿಕ್ ಬಳಸಿದ್ದಾರೆ. ಅವರೇ ಚಪ್ಪಲಿ ಎಸೆಯುವಂತೆ ಮಾಡಿ ಅವರೇ ಅದನ್ನು ವಿಡಿಯೋ ಮಾಡಿಕೊಂಡು ಅವರ ಬಾಸ್ ಸಿನಿಮಾಗೆ ಹೆಸರು ತರಲು ಈ ರೀತಿ ಸೀನ್ ಕ್ರಿಯೇಟ್ ಮಾಡಿದ್ದಾರೆ. ಇದರಲ್ಲಿ ಯಾವುದೇ ಕಾರಣಕ್ಕೂ ಅಪ್ಪು ಅಭಿಮಾನಿಗಳ ಕೈವಾಡ ಇಲ್ಲ. ಹಾಗಾಗಿ ಅವರೆಲ್ಲರೂ ಕ್ಷಮೆ ಕೇಳಬೇಕು ಇಲ್ಲವಾದರೆ ಕ್ರಾಂತಿ ಸಿನಿಮಾ ರಿಲೀಸ್ ಆಗದಂತೆ ತಡೆಯುತ್ತೇವೆ ಮತ್ತು ಜನವರಿ 26ರಂದು ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಹಠ ಹಿಡಿದಿದ್ದಾರೆ. ಇಲ್ಲಿಯವರೆಗೆ ಕ್ರಾಂತಿ ಸಿನಿಮಾನೇ ಬ್ಯಾನ್ ಮಾಡಬೇಕು ಎಂದು ಹೇಳಲಾಗುತ್ತಿತ್ತು.

ನಂತರ ಕ್ರಾಂತಿ ಸಿನಿಮಾ ರಿಲೀಸ್ ಮಾಡುವುದನ್ನು ತಡೆಯುತ್ತೇವೆ ಎಂದು ಹೇಳುತ್ತಿದ್ದರಾದರೂ ಅದು ಫಿಲಂ ಚೇಂಬರ್ ನ ನಿರ್ಧಾರ ಆಗಿರುತ್ತದೆ, ಆ ಬಗ್ಗೆ ಅಧ್ಯಕ್ಷರು ಮಾತನಾಡಬೇಕಿದೆ. ಆದರೆ ಅವರ ಮೇಲೆ ಒತ್ತಡ ತರುವುದಕ್ಕಾಗಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಬಳಿ ಧರಣಿ ಮಾಡುವುದು ಮುತ್ತಿಗೆ ಹಾಕುವುದು ಈ ಪ್ರಯತ್ನಗಳು ಆಗಿವೆ. ಈಗ ಅವರನ್ನೆಲ್ಲಾ ಸುಧಾರಿಸುವ ಕೆಲಸ ನಡೆಯುತ್ತಿದ್ದರು ಕರ್ನಾಟಕನ ಬಂದ್ ಮಾಡುವ ಮಟ್ಟಿಗೆ ಅಪ್ಪು ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಈ ಘಟನೆಗೆ ನಿಜವಾದ ಕಾರಣ ಅಥವಾ ತೆರೆ ಹಿದಿನ ಸತ್ಯ ಏನಿದೆಯೋ ಗೊತ್ತಿಲ್ಲ ಆದರೆ ದರ್ಶನ್ ಅವರ ಮೇಲೆ ಈ ರೀತಿ ಹಲ್ಲೆ ಮಾಡಿದ ಆರೋಪಿಗಳಲ್ಲಿ ಮೂರು ಜನ ಸಿಕ್ಕಿಹಾಕಿಕೊಂಡಿದ್ದಾರೆ.

ಈ ಘಟನೆಯನ್ನು ಮೊದಲು ಖಂಡಿಸಿದ್ದೇ ಶಿವಣ್ಣ ಅವರು. ಅಂದೆ ಆ ವಿಷಯ ತಿಳಿಯುತ್ತಿದ್ದಂತೆ ಮರುದಿನ ಬೆಳಿಗ್ಗೆ ತಮ್ಮ instagram ಖಾತೆಯಿಂದ ವಿಡಿಯೋ ಒಂದನ್ನು ಶೇರ್ ಮಾಡಿ ಘಟನೆ ಬಗ್ಗೆ ಖಂಡಿಸಿ ದರ್ಶನ್ ಪರ ಇರುವುದಾಗಿ ಹೇಳಿದ್ದರು. ಆದರೆ ಸಹ ದರ್ಶನ್ ಅಭಿಮಾನಿಗಳು ದೊಡ್ಮನೆ ಅವರೇ ಇದಕ್ಕೆಲ್ಲ ಕಾರಣ ಎಂದು ಹೇಳುತ್ತಿದ್ದಾರೆ ಹಾಗೂ ಅಪ್ಪು ಅಭಿಮಾನಿಗಳು ಈ ರೀತಿ ನಮ್ಮ ದೇವರ ಹೆಸರನ್ನು ಹಾಳು ಮಾಡುವ ಕೆಲಸ ಮಾಡಬೇಡಿ ಎಂದು ಅವರ ಮೇಲೆ ತಿರುಗಿ ಬಿದ್ದಿದ್ದಾರೆ. ಪ್ರಕರಣ ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆಯೋ ಮತ್ತು ಸಿಕ್ಕಿಬಿದ್ದಿರುವ ಆರೋಪಿಗಳ ಬಾಯಿಂದಲೇ ಸತ್ಯ ಆಚೆ ಬರಲಿ ಎಂದು ಎಲ್ಲರೂ ಕಾಯುತ್ತಿದ್ದಾರೆ.

- Advertisment -