ರೂಪೇಶ್ ರಾಜಣ್ಣ(Rupesh Rajanna) ಅವರು ಕನ್ನಡಪರ ಹೋರಾಟಗಾರರು ಕನ್ನಡಕ್ಕಾಗಿ ಅವರು ಈಗಾಗಲೇ ಸಾಕಷ್ಟು ವಿಷಯಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಕನ್ನಡದ ವಿಷಯ ಬಂದಾಗ ಎಲ್ಲರನ್ನು ಸಂಘಟನೆಗೂಡಿಸಿ ಕನ್ನಡದ ಹೆಸರುಳಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಗ್ ಬಾಸ್ ಇಂದ ಬಂದ ಮೇಲೆ ಅವರ ಖ್ಯಾತಿ ಇನ್ನೂ ಹೆಚ್ಚಾಗಿದ್ದು ಇನ್ನೂ ಹೆಚ್ಚು ಜನರಿಗೆ ತಲುಪಿದ್ದಾರೆ. ಇದೀಗ ಅವರು ಮತ್ತೊಂದು ವಿಷಯದಿಂದ ಸುದ್ದಿ ಆಗುತ್ತಿದ್ದಾರೆ ಅದೇನೆಂದರೆ ಕಿಶೋರ್(Kishor) ಅವರ ಅಭಿನಯದ ಗುರು ದೇಶಪಾಂಡೆ ಅವರ ನಿರ್ದೇಶನದ ಪೆಂಟಗಾನ್(Pentagon) ಸಿನಿಮಾದ ಟೀಸರ್ ವಿರುದ್ಧ ವೇದಿಕೆ ಮೇಲೆ ಅವರು ಮಾತನಾಡಿದ್ದಾರೆ.
ಸಿನಿಮಾ ತಂಡವು ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಸಿನಿಮಾದಲ್ಲಿ ಸಣ್ಣ ಪಾತ್ರವನ್ನು ಕೂಡ ಮಾಡಿರುವ ರೂಪೇಶ್ ರಾಜಣ್ಣ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಟೀಸರ್ ಬಿಡುಗಡೆಯಾದ ತಕ್ಷಣ ವೇದಿಕೆ ಮೇಲೆ ಬಂದ ರೂಪೇಶ್ ರಾಜಣ್ಣ(Roopesh Rajanna) ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅವರಿಗೆ ಬೇಸರಾಗುವಂತಹ ವಿಷಯ ಎನ್ನುವುದಕ್ಕಿಂತ ಕನ್ನಡಪರ ಹೋರಾಟಗಾರರಿಗೆ ಸಂಬಂಧಸಿದ್ದು ಎನ್ನುವ ವಿಷಯ ಅವರನ್ನು ಕೆಣಕಿದೆ.
ವೇದಿಕೆ ಮೇಲೆ ಅವರು ಟೀಸರ್ ನೋಡಿ ಈ ರೀತಿ ಮಾತನಾಡಿದರು ಟೀಸರ್ ನಲ್ಲಿ ಇರುವುದು ಏನೆಂದರೆ ಸಿನಿಮಾ ಕಥೆಯ ಪ್ರಕಾರ ಐದು ಕಥೆಗಳನ್ನು ಒಟ್ಟುಗೂಡಿಸಿ ಟೈಟಲ್ ಗೆ ತಕ್ಕ ಹಾಗೆ ಒಂದಕ್ಕೊಂದು ಜೋಡಿಸಿ ಸಿನಿಮಾವನ್ನು ತೆಗೆಯಲಾಗಿದೆ. ಈ ಸಿನಿಮಾದಲ್ಲಿ ಕಿಶೋರ್ ಪಾತ್ರವು ಮಾಜಿ ರೌಡಿಯ ಪಾತ್ರ ಆಗಿದ್ದು ನಂತರ ಆತನು ಕನ್ನಡ ಪರ ಹೋರಾಟಗಾರ ಎಂದು ಕನ್ನಡದ ಹೆಸರು ಹೇಳಿಕೊಂಡು ದುಡ್ಡು ಮಾಡುತ್ತಿರುತ್ತಾನೆ. ಕಥೆ ಇದೇ ರೀತಿ ಸಾಗುವುದರಿಂದ ಟೀಸರ್ ಅಲ್ಲೂ ಕೂಡ ಇದಕ್ಕೆ ಹೆಚ್ಚು ಗಮನ ಕೊಡಲಾಗಿದೆ.
ಟೀಸರ್ ಅಲ್ಲಿ ನ್ಯೂಸ್ ಚಾನೆಲ್ ಆಂಕರ್ ಆಗಿ ಪೃಥ್ವಿ ಅಂಬರ್ ಅವರು ಕಾಣಿಸಿದ್ದು ಕಿಶೋರ್ ಅವರಿಗೆ ಕೆಲವು ಪ್ರಶ್ನೆಗಳನ್ನು ಅವರಿಂದ ಕೇಳಿಸಲಾಗಿದೆ. ಅದರಲ್ಲೂ ಕೂಡ ಅವರು ಡೈರೆಕ್ಟಾಗಿ ಕನ್ನಡದ ವಿಷಯವನ್ನು ಎತ್ತಿ ಮಾತನಾಡಿ ನೀವು ಕನ್ನಡಪರ ಹೋರಾಟಗಾರ ಎಂದು ಕನ್ನಡದ ಹೆಸರು ಹೇಳಿಕೊಂಡು ರೋಲ್ ಕಾಲ್ ಮಾಡುತ್ತಿದ್ದೀರಾ, ಪರಭಾಷೆ ಸಿನಿಮಾಗಳು ಕನ್ನಡದಲ್ಲಿ ಬಿಡುಗಡೆ ಆಗಬಾರದು ಎಂದು ತಡೆದಿದ್ದಕ್ಕಾಗಿ ಎಷ್ಟು ಹಣ ಪಡೆದಿದ್ದೀರ, ನೀವು ಕನ್ನಡವನ್ನು ಬಿಸಿನೆಸ್ ಗಾಗಿ ಬಳಸಿಕೊಳ್ಳುತ್ತಿದ್ದೀರಾ ನೀವು ಕನ್ನಡ ಪರ ಹೋರಾಟಗಾರ ಎನ್ನುವುದು ಮುಖವಾಡ ಅಷ್ಟೇ ಎಂಬಿತ್ಯಾದಿ ಮಾತುಗಳನ್ನು ಕಿಶೋರ್ ಅವರಿಗೆ ಕೇಳಿರುವುದು ಟೀಸರ್ ಅಲ್ಲಿ ಕೇಂದ್ರೀಕೃತವಾಗಿದೆ.
ಇದನ್ನು ನೋಡಿದ ರೂಪೇಶ್ ರಾಜಣ್ಣ ಅವರು ಅದೇ ವಿಷದ ಕುರಿತು ವೇದಿಕೆ ಮೇಲೆ ಗುರು ದೇಶಪಾಂಡೆ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟರಿದ್ದಾರೆ. ನೀವು ಈ ವಿಷಯದ ಬಗ್ಗೆ ಹೇಳುವುದಾದರೆ ಅವರ ಹೆಸರನ್ನೇ ಇಟ್ಟುಕೊಂಡು ಹೇಳಬಹುದಿತ್ತಲ್ಲ ನೀವೇಕೆ ಹೆಸರು ಹೇಳದೆ ಕಥೆ ಹೇಳಿದ್ದೀರ ಇದರಿಂದ ತಪ್ಪು ಸಂದೇಶ ಹೋಗುವುದಿಲ್ಲವೇ, ನೀವು ಆ ರೀತಿ ಅವರನ್ನು ನೋಡಿದ್ದರೆ ಅವರ ಹೆಸರು ಹೇಳಿ ಮಾಡಬಹುದಿತ್ತಲ್ಲ ಇಂಥವರೆಂದು ಹೇಳಬಹುದಿತ್ತಲ್ಲಾ ಎಂದು ಕೇಳಿದ್ದಾರೆ.
ಅದಕ್ಕೆ ಗುರು ದೇಶಪಾಂಡೆ ಅವರು ಸಹ ಇದು ಬಯೋಪಿಕ್ ಅಲ್ಲ ನೀವು ಹೇಳಿದ ರೀತಿ ಎಲ್ಲಾ ಇಲಾಖೆಗಳ ಕುರಿತು ಕೂಡ ಭ್ರಷ್ಟತೆ ಇದೆ. ಅದರ ಬಗ್ಗೆಯೂ ಸಿನಿಮಾಗಳು ಆಗಿವೆ. ಟೀಸರ್ ಅಲ್ಲಿ ಪ್ರಶ್ನೆಗಳಷ್ಟೇ ಕೇಳಿದ್ದಿರಾ, ಉತ್ತರವೂ ಸಹ ನಮ್ಮಲ್ಲಿ ಇದೆ ಅದು ಸಿನಿಮಾದಲ್ಲಿ ಹೊರಬರುತ್ತದೆ ಅನ್ನೋದು ಅಷ್ಟೇ ವಿಷಯ. ಇದನ್ನು ಕನ್ನಡದ ಒಳಿತುಗಾಗಿ ನಾವು ಮಾಡಿದ್ದೇವೆ ಹೊರತು ಎಲ್ಲೂ ಈ ಸಿನಿಮಾದಿಂದ ಕನ್ನಡದ ಹೆಸರು ಹಾಳಾಗುವುದಿಲ್ಲ ಎನ್ನುವ ಭರವಸೆ ಅಂತೂ ಖಂಡಿತ ಕೊಡುತ್ತೇವೆ ಎಂದು ಹೇಳಿ ರಾಜಣ್ಣ ಅವರಿಗೆ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.