Tuesday, October 3, 2023
Home News ಈ ಕೆಲಸ ಮಾಡಿಸದೆ ಹೋದರೆ ಗೃಹಲಕ್ಷ್ಮಿಯ ಹಣ ನಿಮ್ಮ ಖಾತೆಗೆ ಬರುವುದಿಲ್ಲ, ಅರ್ಜಿ ಹಾಕುವಂತವರು ತಪ್ಪದೆ...

ಈ ಕೆಲಸ ಮಾಡಿಸದೆ ಹೋದರೆ ಗೃಹಲಕ್ಷ್ಮಿಯ ಹಣ ನಿಮ್ಮ ಖಾತೆಗೆ ಬರುವುದಿಲ್ಲ, ಅರ್ಜಿ ಹಾಕುವಂತವರು ತಪ್ಪದೆ ತಿಳಿಯಿರಿ.

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತಹಹ ಹಲವಾರು ಗೊಂದಲಗಳು ಜನರಲ್ಲಿ ಮೂಡುತ್ತಿದೆ ಈ ಒಂದು ಕೆಲಸವನ್ನು ಮಾಡಿದರೆ ಮಾತ್ರ ನಿಮಗೆ ಗೃಹಲಕ್ಷ್ಮಿ ಯೋಜನೆ 2000 ಖಾತೆಗೆ ಬರುತ್ತದೆ ಈ ವಿಷಯದ ಕುರಿತು ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ e-KYC ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಲು ಏನು ಮಾಡಬೇಕು ಎಂದು ನೋಡುವುದಾದರೆ. ಕರ್ನಾಟಕ ರಾಜ್ಯದಾದ್ಯಂತ ಈಗಾಗಲೇ ಅರ್ಹ ಮಹಿಳೆಯರು ಅರ್ಜಿಯನ್ನು ಸಲ್ಲಿಸಿದ್ದಾರೆ ಒಂದು ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದು ಈ ತಿಂಗಳು ಯೋಜನೆ ಲಾಂಚ್ ಆಗುವುದರ ಜೊತೆಗೆ ಹೆಣ್ಣು ಮಕ್ಕಳ ಖಾತೆಗೆ ಹಣ ಬರಲಿದೆ ಎಂದು ಸರ್ಕಾರ ತಿಳಿಸಿದೆ.

ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಬರಬೇಕು ಎಂದರೆ e-KYC ಮಾಡಿಸುವುದು ಕಡ್ಡಾಯವಾಗಿದೆ ಬ್ಯಾಂಕ್ ಅಕೌಂಟ್ ಗು ಸಹ e-KYC ಇದೆ. ಗೃಹಲಕ್ಷ್ಮಿ ಯೋಜನೆಯ e-KYC ಎಂದರೆ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಗೆ ಓಟಿಪಿ ಬರುವುದು.

ನೀವು ಅರ್ಜಿ ಸಲ್ಲಿಸುವಾಗ ನಿಮ್ಮ ಬ್ಯಾಂಕ್ ಖಾತೆ ವಿವರಣೆ ಕೊಟ್ಟಿಲ್ಲವಾದರೆ ನಿಮ್ಮ ಆಧಾರ್ ಕಾರ್ಡ್ ಮ್ಯಾಪಿಂಗ್ ಆದಂತಹ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುತ್ತದೆ ಉದಾಹರಣೆಗೆ ನೀವು ಈಗಾಗಲೇ ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣ ಪಡೆದುಕೊಂಡಿದ್ದರೆ ಅದೇ ಅಕೌಂಟ್ ಗೆ ಹಣ ಜಮೆ ಆಗುತ್ತದೆ ಒಂದು ವೇಳೆ ನಿಮ್ಮ ಅಕ್ಕಿ ಹಣ ಇನ್ನು ಜಮೆ ಆಗದೆ ಇದ್ದರೆ ತಪ್ಪದೇ e-KYC ಹಾಗು ಆಧಾರ್ ಮ್ಯಾಪಿಂಗ್ ಮಾಡಿಸಿಕೊಂಡು ಸರಿ ಮಾಡಿಕೊಳ್ಳಿ.

ಇಲ್ಲವಾದರೆ ಈ ಯೋಜನೆಯ ಹಣ ನಿಮ್ಮ ಖಾತೆಗೆ ಬರದೇ ಇರಬಹುದು. ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವಾಗ ನೀವು ನೀಡಿದಂತಹ ಬ್ಯಾಂಕ್ ಡಿಟೈಲ್ಸ್ ಚಾಲ್ತಿಯಲ್ಲಿ ಇದೆಯೋ ಅಥವಾ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ನಿಮ್ಮ ಖಾತೆ ಚಾಲ್ತಿಯಲ್ಲಿ ಇಲ್ಲವಾದರೆ ಹಣ ಬರುವ ಸಾಧ್ಯತೆ ಕಡಿಮೆ. ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 16ರಂದು ಚಾಲನೆ ನೀಡಲು ಸರ್ಕಾರ ತಿಳಿಸಿದೆ.

ಅಂದರೆ ಸ್ವಾತಂತ್ರ್ಯ ದಿನಾಚರಣೆಯ ಮರುದಿನವೇ ಈ ಯೋಜನೆಗೆ ಚಾಲನೆ ಸಿಗುತ್ತದೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೂಡ ಆಗಸ್ಟ್ 16ರ ಒಳಗೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಮೊದಲ ತಿಂಗಳ 2000 ರೂಪಾಯಿಗಳನ್ನು ಜಮಾ ಮಾಡುವುದಾಗಿ ಹೇಳಿದ್ದಾರೆ. ಗೃಹಲಕ್ಷ್ಮಿ ಮನೆ ಯಜಮಾನಿಯರ ಪಟ್ಟಿ ಬಿಡುಗಡೆ ಆಗಿದೆ.

ನೀವು ಸಹ ಹಣ ಪಡೆದುಕೊಳ್ಳಲು ಆಗಸ್ಟ್ ತಿಂಗಳು ಮನೆಯ ಯಜಮಾನಿ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ ಇದರಲ್ಲಿ ನಿಮ್ಮ ಹೆಸರು ಇದೆ ಎಂದು ಒಮ್ಮೆ ಚೆಕ್ ಮಾಡಿಕೊಳ್ಳಿ ಇಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನಿಮಗೆ ಯೋಜನೆಯ ಹಣ ನಿಮ್ಮ ಖಾತೆಗೆ ಬಂದು ಸೇರುತ್ತದೆ. https://ahara.kar.nic.in/Home/EServices ಮೇಲೆ ತಿಳಿಸಿದಂತಹ ಲಿಂಕನ್ನು ಓಪನ್ ಮಾಡಿ ಕೇಳಿದ ಮಾಹಿತಿಗೆ ಎಲ್ಲವನ್ನು ಎಂಟರ್ ಮಾಡಿದರೆ ನಿಮಗೆ ನಿಮ್ಮ ಹೆಸರು ಇದೆಯಾ ಇಲ್ಲವೋ ಎಂದು ತಿಳಿಯುತ್ತದೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.

 

- Advertisment -