ಕರ್ನಾಟಕದಲ್ಲಿ (Karnataka) ಈ ಬಾರಿ ಭೀಕರ ಬರಗಾಲ (drought) ಎದುರಾಗಿದೆ ಮುಂಗಾರು ಮಳೆ ಕುಸಿತವಾಗಿರುವ ಕಾರಣದಿಂದಾಗಿ 195 ತಾಲೂಕುಗಳು ಬರ ಘೋಷಿತವಾಗಿದೆ.ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಅಭಾವ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ ಇದರ ನಡುವೆ ತಮಿಳುನಾಡಿಗೆ ಕಾವೇರಿ (Cauvery water) ಹರಿಸಲಾಗುತ್ತಿದೆ.
ಇದರ ವಿರುದ್ಧ ಕಾವೇರಿ ಕೊಳ್ಳದ ರೈತರು (farmer) ರೊಚ್ಚಿಗೆದ್ದು, ಕನ್ನಡ ಪರ ಸಂಘಟನೆಗಳು ಮತ್ತು ವಿವಿಧ ಸಂಘಟನೆಗಳೊಂದಿಗೆ ಹೋರಾಟ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವು ಇಲ್ಲಿನ ಪರಿಸ್ಥಿತಿಯನ್ನು ಪ್ರಾಧಿಕಾರ ಹಾಗೂ ಸುಪ್ರೀಂಕೋರ್ಟ್ ಮುಂದೆ ಸರಿಯಾಗಿ ಮನವರಿಕೆ ಮಾಡಿಕೊಟ್ಟು ಇನ್ನು ಮುಂದೆ ತಮಗೆ ನೀರು ಹರಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಬೇಕು.
ಮಾಡ್ರನ್ ಡ್ರೆಸ್ ಧರಿಸಿದ್ದರು ಮಾಂಗಲ್ಯ ತೆಗೆಯದ ನಟಿ ಹರ್ಷಿಕಾ, ಶಭಾಷ್ ಎಂದ ನೆಟ್ಟಿಗರು.!
ಮತ್ತು ಈ ಕೂಡಲೇ ಕರ್ನಾಟಕ ತಮಿಳುನಾಡಿಗೆ ನೀರು ಹರಿಯುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ (protest). ಇದರ ಪ್ರಯುಕ್ತ ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್ (Karnataka bandh) ಕೂಡ ಆಚರಿಸಲಾಯಿತು. ಕನ್ನಡ ಚಲನಚಿತ್ರ ಮಂಡಳಿ ಕೂಡ ಇದಕ್ಕೆ ಸಹಕಾರ ನೀಡಿ ಕನ್ನಡದ ಖ್ಯಾತ ಕಲಾವಿದರು ಹೋರಾಟದಲ್ಲಿ ಭಾಗಿಯಾಗಿದ್ದರು.
ಆದರೆ ಅಂದು ತಮಿಳು ನಟ ಸಿದ್ಧಾರ್ಥ್ (Thamil actor Siddarth) ತಮ್ಮ ಚಿಕ್ಕು ಸಿನಿಮಾ (Chikku movie) ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನ ಮಲ್ಲೇಶ್ವರಂ (Malleshwaram SRV theatre) ನಲ್ಲಿರುವ SRV ಥಿಯೇಟರ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಸಿನಿಮಾದ ಪ್ರಚಾರ ಕಾರ್ಯ ನಡೆಯುತ್ತಿತ್ತು, ಆದರೆ ಒಮ್ಮೆಲೇ ಆಗಮಿಸಿದ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಸುದ್ದಿ ಗೋಷ್ಠಿಯನ್ನು ತಡೆದು ಸಿನಿಮಾ ಪ್ರಚಾರ ಮಾಡದಂತೆ ಅಡ್ಡಿ ಪಡಿಸಿದ್ದಾರೆ (Pressmeet disruption).
ಮಕ್ಕಳನ್ನು ಹಾಸ್ಟೆಲ್ ಗೆ ಕಳುಹಿಸಿದ್ರೆ, ಅವರು ತಂದೆ ತಾಯಿಯನ್ನು ವೃದ್ದಾಶ್ರಮಕ್ಕೆ ಕಳುಹಿಸುತ್ತಾರೆ.!
ಸಿದ್ದಾರ್ಥ್ ಅವರನ್ನು ಅವಮಾನಿಸುವ ಅಥವಾ ಇನ್ಯಾವುದೇ ದುರುದ್ದೇಶ ಕಾರ್ಯಕರ್ತರಿಗೆ ಇರಲಿಲ್ಲ. ನಮ್ಮ ರಾಜ್ಯದಲ್ಲಿ ಇಂದು ಬಂದ್ ನಡೆಯುತ್ತಿದೆ, ನಿಮ್ಮ ಸಿನಿಮಾ ಪ್ರಚಾರ ಕಾರ್ಯ ಈ ಸಮಯದಲ್ಲಿ ಮಾಡುವುದು ಸರಿಯಲ್ಲ ಆದ್ದರಿಂದ ದಯವಿಟ್ಟು ನಿಲ್ಲಿಸಿ ಎಂದು ತಡೆಯೊಡ್ಡಿದ್ದರು. ಆ ಸಮಯದಲ್ಲಿನ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಿದ್ದಾರ್ಥ್ ಅವರಿಗೆ ಮುಖ ಭಂಗವಾಯಿತು ಎನ್ನುವ ರೀತಿ ಬಿಂಬಿಸಲಾಯಿತು.
ಇದೀಗ ಈ ಘಟನೆ ಬಗ್ಗೆ ತಮಿಳುನಾಡಿನ ನಾಮ್ ತಮಿಳರ್ ಕಚ್ಚಿ ಸಂಘಟನೆಯ ಅಧ್ಯಕ್ಷ ಸೀಮಾನ್ (NTK Chief Seeman) ಪ್ರತಿಕ್ರಿಯಿಸಿದ್ದಾರೆ. ಕನ್ನಡ ಸಿನಿಮಾಗಳ ವಿರುದ್ಧ ತಿರುಗಿ ಬಿದ್ದಿರುವ ಸೀಮಾನ್ ಕರ್ನಾಟಕದಲ್ಲಿ ತಮಿಳು ನಟನ ಸಿನಿಮಾಕ್ಕೆ ಆದ ಅವಮಾನವಿದು ಇದನ್ನು ಖಂಡಿಸುತ್ತೇನೆ, ಕಾವೇರಿ ವಿಚಾರದಲ್ಲಿ ಕಲಾವಿದರಿಗೆ ಅವಮಾನಿಸುವುದೆಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.
ಸೇವಂತಿ ಹೂವಿನ ದರ ಕುಸಿತ, ಬೆಳೆದ ಹೂವನ್ನು ಸ್ವತಃ ತಾನೇ ನಾ-ಶ ಮಾಡಿದ ರೈತ.!
ತಮಿಳುನಾಡಿನಲ್ಲಿ ಕನ್ನಡ ಸಿನಿಮಾಗಳನ್ನು ನಿಲ್ಲಿಸುವುದು ದೊಡ್ಡ ವಿಚಾರವೇ ಅಲ್ಲ. ಕೆಲವೇ ನಿಮಿಷಗಳಲ್ಲಿ ಕನ್ನಡ ಸಿನಿಮಾ ಪ್ರದರ್ಶನ ನಿಲ್ಲಿಸಬಹುದು ಎಂದೂ ಎ’ಚ್ಚ’ರಿ’ಕೆಯ ಸಂದೇಶ ರವಾನಿಸಿದ್ದಾರೆ. ಯಶ್ ನಟನೆಯ KGF ಸಿನಿಮಾ ಎರಡು ಭಾಗಗಳಲ್ಲಿ ತಮಿಳುನಾಡಿನಲ್ಲಿ ರಿಲೀಸ್ ಆಯ್ತು. ಹಾಗಂತ ನಾವು ಆ ಸಿನಿಮಾ ವಿರೋಧಿಸಲಿಲ್ಲ, ಆತ್ಮೀಯವಾಗಿ ಸ್ವಾಗತ ನೀಡಿದೆವು.
ಒಂದು ವೇಳೆ ಕನ್ನಡದ ಯಾವುದೇ ಸಿನಿಮಾ ತಮಿಳುನಾಡಿನಲ್ಲಿ ತೆರೆ ಕಾಣುವುದಿಲ್ಲ ಎಂದು ಹೇಳಿಕೆ ನೀಡಿದರೆ ಬಿಡುಗಡೆ ಮಾಡಲು ಸಾಧ್ಯವೇ? ಸವಾಲು ಹಾಕಿದ್ದಾರೆ. ಕಾವೇರಿ ನೀರಿನ ವಿಚಾರವನ್ನು ಎರಡೂ ರಾಜ್ಯದ ರಾಜಕೀಯ ಪಕ್ಷದವರು ಒಟ್ಟಿಗೆ ಕುಳಿತು ಮಾತನಾಡಿಕೊಂಡು ಪರಿಹಾರ ಕಂಡುಕೊಳ್ಳಬೇಕು. ಅದನ್ನು ಬಿಟ್ಟು ಸಿನಿಮಾ ಕಲಾವಿದನ ಪತ್ರಿಕಾಗೋಷ್ಠಿಗೆ ಮುತ್ತಿಗೆ ಹಾಕುವುದು ಎಷ್ಟು ಸರಿ.?
ತಂದೆ ಹೆಸರಲ್ಲಿ ಇರುವ ಮನೆ, ಮಕ್ಕಳ ಹೆಸರಿಗೆ ಮಾಡೋದು ಹೇಗೆ.? ಬೇಕಾಗುವ ದಾಖಲೆಗಳೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಆ ಹಾಲ್ನಲ್ಲಿ ಗಾರ್ಡ್ಗಳಿದ್ದರೂ, ಅವರು ಹೋರಾಟಗಾರರನ್ನು ಯಾಕೆ ತಡೆಯಲಿಲ್ಲ, ಇದೇ ಘಟನೆ ತಮಿಳುನಾಡಲ್ಲಿ ಆಗಿದ್ದರೆ ಇಷ್ಟೊತ್ತಿಗೆ ಅವರ ಬಂಧನವಾಗಿರುತ್ತಿತ್ತು ಎಂದಿದ್ದಾರೆ ಸೀಮಾನ್. ಅಂದು ಸಿದ್ಧಾರ್ಥ್ ಅವರ ಸುದ್ದಿಗೋಷ್ಠಿಗೆ ಅಡ್ಡಿಯಾಗಿದೆ ಎಂದು ತಿಳಿದ ತಕ್ಷಣವೇ ನಟ ಶಿವರಾಜ್ ಕುಮಾರ್ (actor Shivarajkumar) ಅವರು ಕನ್ನಡಿಗರು ಬಹಳ ಒಳ್ಳೆಯವರು, ಎಲ್ಲರನ್ನು ಹೃದಯದಿಂದ ಪ್ರೀತಿಸುತ್ತಿದ್ದಾರೆ, ಇಂದು ಆದ ಘಟನೆಗೆ ಕ್ಷಮಿಸಿ ಎಂದು ಬಹಿರಂಗ ವೇದಿಕೆಯಲ್ಲಿ ಕ್ಷಮೆ ಕೇಳಿದ್ದರು.