ನಮಗೆಲ್ಲರಿಗೂ ತಿಳಿದಿರುವ ಹಾಗೆ ನಟಿ, ಸಪ್ತಮಿ ಗೌಡ ಅವರು ತಮ್ಮ ಚೊಚ್ಚಲ ಚಿತ್ರದಲ್ಲಿ ಭರ್ಜರಿ ಅಭಿಮಾನಿಗಳನ್ನು ಗಳಿಸಿದವರು. ಕಾಂತಾರ ಚಿತ್ರವು ದೇಶ-ವಿದೇಶಗಳಲ್ಲಿಯೂ ಹೆಸರು ಗಳಿಸಲು ಇವರ ಪಾತ್ರವೂ ಪ್ರಮುಖವಾದದ್ದೆ. ಗಲ್ಲ ಪೆಟ್ಟಿಗೆಯಲ್ಲಿ ಅಧಿಕ ಲಾಭವನ್ನು ಪಡೆದಿದ್ದ ಕಾಂತಾರ ಚಿತ್ರಕ್ಕಾಗಿ ಒಳ್ಳೆಯ ಸಂಭಾವನೆಯನ್ನು ಸಪ್ತಮಿ ಗೌಡ ಅವರು ಪಡೆದಿದ್ದರು. ಇದೀಗ ಯುವ ಚಿತ್ರಕ್ಕಾಗಿ ಇವರು ಪಡೆಯುತ್ತಿರುವ ಸಂಭಾವನೆಯು ಹಿಂದಿನ ಎಲ್ಲಾ ದಾಖಲೆಗಳನ್ನು ಬದಿಗೊತ್ತಿ ಮುನ್ನುಗ್ಗಿರುವುದು ನಿಜ.
ಡಾಕ್ಟರ್ ರಾಜಕುಮಾರ್ ಅವರ ಮೊಮ್ಮಗ, ದೊಡ್ಮನೆ ಕುಟುಂಬದ ಹೆಮ್ಮೆಯ ಪುತ್ರ ಯುವ ರಾಜ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಹೊಸದೊಂದು ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಚಿತ್ರವನ್ನು ಸಂತೋಷ್ ಆನಂದ್ ರಾಮ್ ನಿರ್ದೇಶಿಸಲಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಇದ್ದು ಹೊಂಬಾಳೆ ಸಂಸ್ಥೆಯ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿದೆ. ಚಿತ್ರೀಕರಣವು ಈಗಾಗಲೇ ಪ್ರಾರಂಭವಾಗಿದ್ದು, ಚಿತ್ರದಲ್ಲಿ ನಟಿಸುತ್ತಿರುವ ತಾರೆ ಯಾರು ಎಂಬ ಕುರಿತಾಗಿ ಪ್ರಶ್ನೆ ಎದ್ದಿತ್ತು.
ಮಲಯಾಳಂ ಚಿತ್ರರಂಗದ ಕಲ್ಯಾಣಿ ಪ್ರಿಯದರ್ಶನ್ ಅವರು ಯುವ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿತ್ತು. ನಂತರ ಈ ವದಂತಿಯನ್ನು ತಳ್ಳಿ ಹಾಕಿದ್ದು, ಉಪೇಂದ್ರ ಅವರ ಮಗಳು ನಟಿಸಲಿದ್ದಾರೆ ಎಂಬ ಸುದ್ದಿ. ಆದರೆ ಇತ್ತೀಚಿನ ವರದಿಗಳ ಪ್ರಕಾರ, ಯುವ ಚಿತ್ರದಲ್ಲಿ ಯುವರಾಜ್ ಕುಮಾರ್ ಅವರ ಜೊತೆಯಾಗಿ ನಗುಮೊಗದ ಸುಂದರಿ ಸಪ್ತಮಿ ಗೌಡ ಅವರು ಬಣ್ಣ ಹಚ್ಚಲಿದ್ದಾರೆ ಎಂದು ತಿಳಿದುಬಂದಿದೆ. ‘ ಯುವರಾಜನ ಅರಸಿಗೆ ಸುಸ್ವಾಗತ’ ಎಂಬ ಬರಹಗಳೊಂದಿಗೆ ಸಪ್ತಮಿ ಗೌಡ ಅವರ ಫೋಟೋವನ್ನು ಹಂಚಿಕೊಂಡಿದ್ದರಿಂದ ಯುವ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳುವುದು ಖಚಿತವಾಗಿದೆ.
ಕಾಂತಾರ ಚಿತ್ರವು ದಾಖಲೆಗಳನ್ನು ಬರೆದು ಇತಿಹಾಸದ ಪುಟ ಸೇರಿದ ಬಳಿಕ ಚಿತ್ರದ ನಾಯಕ ನಾಯಕಿಯರು ಸೇರಿದಂತೆ ಚಿತ್ರತಂಡದ ಎಲ್ಲಾ ಕಲಾವಿದರಿಗೂ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಸಂಪೂರ್ಣವಾಗಿ ಪಾತ್ರಕ್ಕೆ ಇಳಿದು, ನೈಜತೆಯ ಬಣ್ಣ ತುಂಬಿ ಅಭಿನಯಿಸಿ ಸಿನಿಪ್ರೇಮಿಗಳ ಮನು ಗೆದ್ದಿದ್ದಷ್ಟೇ ಅಲ್ಲದೆ ನಿರ್ದೇಶಕರ, ನಿರ್ಮಾಪಕರ, ನಿರ್ಮಾಣ ಸಂಸ್ಥೆಗಳ ನಂಬಿಕೆಗೂ ಅರ್ಹರಾಗಿದ್ದಾರೆ. ಸಪ್ತಮಿ ಗೌಡ ಬಾಲಿವುಡ್ನಲ್ಲಿ ದಿ ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಭಿಷೇಕ್ ಅವರ ಚಿತ್ರದಲ್ಲಿಯೂ ಇವರೇ ನಾಯಕಿ.
ನಟರಿರಲಿ, ನಟಿಯರಿರಲಿ; ಅಭಿನಯದಲ್ಲಿ ನುರಿತು, ಅರಿತು, ಕಲಾ ದೇವತೆಯ ಆಶೀರ್ವಾದವನ್ನು ಪಡೆಯುತ್ತಿದ್ದಂತೆ ಹೆಚ್ಚಿನ ಬೇಡಿಕೆ ಉಳ್ಳವರಾಗಿ ಹೆಚ್ಚಿನ ಸಂಭಾವನೆಯನ್ನು ಪಡೆದುಕೊಳ್ಳುವುದು ಸಹಜ. ಯುವ ಚಿತ್ರತಂಡವು ಸಪ್ತಮಿ ಗೌಡ ಅವರನ್ನು ಪೋಸ್ಟರ್ ಶೇರ್ ಮಾಡಿಕೊಳ್ಳುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿತ್ತು. ಇದು ದೊಡ್ಮನೆಯ ಮೂರನೇ ತಲೆಮಾರಿನ ನಟ, ಯುವ ರಾಜ್ ಕುಮಾರ್ ಅವರ ಮೊದಲ ಚಿತ್ರವಾಗಿದ್ದು, ಇವರೊಂದಿಗೆ ತೆರೆ ಹಂಚಿಕೊಳ್ಳಲಿರುವ ಸಪ್ತಮಿ ಗೌಡ ಅವರ ಸಂಭಾವನೆಯ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆದಿವೆ.
ನಟನೆ ಹಾಗೂ ಸೌಂದರ್ಯ ಎರಡರಲ್ಲಿಯೂ ಸಮಾನವಾಗಿ ಬಿಂಬಿತವಾಗುವ ಸಪ್ತಮಿ ಗೌಡ ಅವರು ಯುವ ಚಿತ್ರಕ್ಕಾಗಿ ದಾಖಲೆಯ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಸಂಭಾವನೆಯು ಎಷ್ಟೆಂದು ತಿಳಿದವರು, ತಮ್ಮ ಮಾಸಿಕ ಸಂಬಳದ ಎಷ್ಟು ಪಟ್ಟು ಹೆಚ್ಚಿನ ಸಂಭಾವನೆಯನ್ನು ಸಪ್ತಮಿ ಅವರು ಪಡೆದುಕೊಳ್ಳುತ್ತಿದ್ದಾರೆ ಎಂದು ಲೆಕ್ಕಾಚಾರ ಹಾಕಿ ಗಲ್ಲದ ಮೇಲೆ ಬೆರಳಿಟ್ಟು ಯೋಚಿಸುತ್ತಿದ್ದಾರಂತೆ. ಹೌದು. ಸಪ್ತಮಿ ಗೌಡ ಅವರು ಯುವ ಚಿತ್ರದಲ್ಲಿ ನಟಿಸುವುದಕ್ಕಾಗಿ ಬರೋಬ್ಬರಿ ನಾಲ್ಕು ಕೋಟಿ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯಲಿದ್ದಾರೆ ಎಂದು ಹಲವು ಮೂಲಗಳಿಂದ ತಿಳಿದು ಬಂದಿದೆಯಂತೆ.