ದರ್ಶನ್ (Darshan) ಮನೆ ಮುಂದೆ ಕಾರ್ ಪಾರ್ಕ್ ಮಾಡಿದ್ದ ಮಹಿಳೆ ಮೇಲೆ ದರ್ಶನ್ ಮನೆ ನಾಯಿಗಳು ಅಟ್ಯಾಕ್ (pets attack) ಮಾಡಿ ಕಚ್ಚಿ ಗಾಯಗೊಳಿಸಿವೆ. ಈ ಸಂಬಂಧ ಮಹಿಳೆಯು ದರ್ಶನ್ ಮೇಲೆ ಆರ್.ಆರ್ ನಗರ ಠಾಣೆಯಲ್ಲಿ ಕಂಪ್ಲೇಂಟ್ (Complaint against Darshan at RR Nagar) ದಾಖಲಿಸಿದ್ದಾರೆ.
ನೆನ್ನೆ ತಡರಾತ್ರಿ ಈ ಘಟನೆ ನಡೆದಿದ್ದು ಇಂದು ಮಾಧ್ಯಮಗಳೆದುರು ಸಂತ್ರಸ್ತೆ ಅದು ಸಮಸ್ಯೆ ಏನಾಯಿತು ಎಂದು ಹೇಳಿಕೊಂಡಿದ್ದಾರೆ. ಅಮಿತ್ ಜಿಂದಾಲ್ ಎನ್ನುವ ಮಹಿಳೆಯ ಆರ್.ಆರ್ ನಗರದ ದರ್ಶನ್ ನಿವಾಸದ ಬಳಿ ಇರುವ SLV ಆಸ್ಪತ್ರೆಗೆ ಕಾರ್ಯಕ್ರಮ ಒಂದಕ್ಕೆ ಹೋಗಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ಬೇಗ ತೆರಳಬೇಕು ಎಂದು ದರ್ಶನ್ ಮನೆ ಮುಂದೆ ಖಾಲಿ ಜಾಗ ಇದ್ದ ಕಾರಣದಿಂದಾಗಿ ಅಲ್ಲೇ ಕಾರ್ ನಿಲ್ಲಿಸಿದ್ದಾರೆ.
ಆ ಸಮಯದಲ್ಲಿ ಅಲ್ಲಿ ನೋ ಪಾರ್ಕಿಂಗ್ ಬೋರ್ಡ್ ಕೂಡ ಇರಲಿಲ್ಲ ಹಾಗೂ ಯಾವುದೇ ನಾಯಿಯೂ ಇರಲಿಲ್ಲ, ಹಾಗಾಗಿ ಬೇಗ ಹೋಗಬೇಕು ಎಂದು ಅಲ್ಲಿ ಕಾರ್ ನಿಲ್ಲಿಸಿದ್ದರಂತೆ. ಕಾರ್ಯಕ್ರಮ ಮುಗಿಸಿ ಬಂದು ನೋಡುವ ವೇಳೆಗೆ ಕಾರ್ ಬಳಿ ದರ್ಶನ್ ಸಿಬ್ಬಂದಿ ಸಾಕು ನಾಯಿಗಳನ್ನು ಬಿಟ್ಟಿದ್ದರಂತೆ.
ನಾಯಿಗಳನ್ನು ನೋಡಿ ಭಯಗೊಂಡ ಮಹಿಳೆಯು ನಾಯಿಗಳನ್ನು ನೋಡಿಕೊಳ್ಳುತ್ತಿದ್ದ ಸಿಬ್ಬಂದಿಯ ಬಳಿ ನಾಯಿಗಳನ್ನು ಹಿಂದಕ್ಕೆ ಕರೆದುಕೊಳ್ಳುವಂತೆ ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ. ನನಗೆ ಕಚ್ಚುತ್ತವೆ ಎಂದು ಭ’ಯ ಆಗುತ್ತದೆ ನಿಮ್ಮ ನಾಯಿಗಳನ್ನು ಹಿಂದಕ್ಕೆ ತೆಗೆದುಕೊಳ್ಳಿ ಎಂದು ಕೇಳಿಕೊಂಡರಂತೆ ಆದರೆ ಮಹಿಳೆಯೊಂದಿಗೆ ವಾಗ್ವಾದಕ್ಕಿಳಿದ ಸಿಬ್ಬಂದಿ ನಿಮ್ಮನ್ನು ಯಾರು ಇಲ್ಲಿ ಪಾರ್ಕ್ ಮಾಡಲು ಹೇಳಿದ್ದು.
ನೀವು ಯಾಕೆ ಇಲ್ಲಿ ಕಾರ್ ನಿಲ್ಲಿಸಿದ್ದೀರಿ, ಅಲ್ಲಿ ಜಾಗ ಇರಲಿಲ್ಲವೇ, ಏನಕ್ಕಾಗಿ ಇಲ್ಲಿಗೆ ಬಂದಿದ್ದೀರಿ, ಯಾವ ಕಾರ್ಯಕ್ರಮ ಎಂಬಿತ್ಯಾದಿ ಹತ್ತಾರು ಪ್ರಶ್ನೆಗಳನ್ನು ಕೇಳಿದರು ಮಹಿಳಾ ಸಮಾಧಾನವಾಗಿ ಉತ್ತರ ಕೊಟ್ಟರಂತೆ. ನೀವು ನಾಯಿಗಳನ್ನು ಹೀಂದಕ್ಕೆ ಕರೆದುಕೊಂಡರೆ ನಾನು ಕಾರು ತೆಗೆದುಕೊಂಡು ಹೋಗಿ ಬಿಡುತ್ತೇನೆ ನನಗೆ ಗೊತ್ತಿರಲಿಲ್ಲ
ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ ಮೊದಲೇ ಹೇಳಿದ್ದರೆ ನಾನು ಇಲ್ಲಿ ನಿಲ್ಲಿಸುತ್ತಿರಲಿಲ್ಲ ಆ ದಯವಿಟ್ಟು ತೆಗೆದುಕೊಳ್ಳಿ ನನಗೆ ಬೇಗ ಹೊರಡಬೇಕು ಎಂದು ಕೇಳಿಕೊಂಡರಂತೆ. ಆದರೆ ಸಿಬ್ಬಂದಿ ನಾನು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಖಾರವಾಗಿ ಹೇಳಿದ ಕಾರಣ ಕೊನೆಗೆ ಮಹಿಳೆಯು ಮಾತಾಡುವುದು ಬೇಡ ಕಾರ್ ತೆಗೆದುಕೊಂಡು ಹೋಗೋಣ ಎಂದು ಪ್ರಯತ್ನ ಪಟ್ಟ ಸಮಯದಲ್ಲಿ ನಾಯಿಗಳು ಬಂದು ಮಹಿಳೆಯ ಹೊಟ್ಟೆ ಹಾಗೂ ಕಾಲು ಕೈಗಳ ಮೇಲೆ ಕಚ್ಚಿ ಗಾಯಗೊಳಿಸಿದೆ.
ಅದಕ್ಕೀಗ ಮಹಿಳೆ ಅವರು ಬೇಕೆಂದರೆ ನಮ್ಮ ಮೇಲೆ ನಾಯಿ ಕೂಡ ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಆ ವೇಳೆ ಕೂಡ ಅದು ದರ್ಶನ್ ನಾಯಿ ಎಂದು ಆಕೆಗೆ ಗೊತ್ತಿರಲಿಲ್ಲವಂತೆ. ನಾಯಿ ಕಚ್ಚಿದ ಸಮಯದಲ್ಲಿ ಕೂಡ ಸಿಬ್ಬಂದಿಯ ಸಹಾಯ ಮಾಡುವ ಅಥವಾ ಆಸ್ಪತ್ರೆಗೆ ಕರೆದುಕೊಂಡು ಪ್ರಯತ್ನವನ್ನು ಮಾಡಲಿಲ್ಲವಂತೆ, ಕಂಪ್ಲೇಂಟ್ ಕೊಟ್ಟರೆ ಮಾಡಿಕೊಳ್ಳಿ ಹೋಗಿ ಎಂದು ಉಡಾಫೆ ಉತ್ತರ ಕೊಟ್ಟರಂತೆ.
ನಂತರ ಮಹಿಳೆಯೇ ಸ್ನೇಹಿತೆಯ ಮಗನಿಗೆ ಕರೆ ಮಾಡಿ ಆಸ್ಪತ್ರೆಗೆ ಹೋದರಂತೆ ಹಾಗೆಯೇ ಸ್ಥಳದಲ್ಲಿಯೇ ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಪೊಲೀಸ್ ಕಂಪ್ಲೇಂಟ್ ದಾಖಲಿಸುವಾಗ ಸಿಬ್ಬಂದಿಯನ್ನು A1 ಹಾಗೂ A2 ಆರೋಪಿಯಾಗಿ ದರ್ಶನ್ ಹೆಸರನ್ನು ಕಂಪ್ಲೀಟ್ ಕೊಟ್ಟಿರುವ ಕಾರಣ ನಂತರ ಯಾರೋ ಒಬ್ಬರು ಬಂದು ನಮ್ಮ ಬಾಸ್ ಇಲ್ಲಿ ಇಲ್ಲ ಅದಕ್ಕೂ ಇದಕ್ಕೂ ಸಂಬಂಧ ಇಲ್ಲ.
ಆದರೂ ನಿಮ್ಮ ಮೆಡಿಕಲ್ ಚಾರ್ಜಸ್ ಏನಾಗಿದೆ ಅದನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದರಂತೆ. ಒಟ್ಟಿನಲ್ಲಿ ನಟ ದರ್ಶನ್ ಅವರ ತಪ್ಪು ಇಲ್ಲ ಎಂದರೂ ಕೂಡ ಮತ್ತೆ ಅವರು ಪೊಲೀಸ್ ಠಾಣೆ ಮೆಟ್ಟಿಲಿರುವಂತೆ ಆಗಿದೆ. ಪದೇಪದೇ ದರ್ಶನ್ ಹೆಸರು ಕಾಂಟ್ರವರ್ಸಿ ಆಗುತ್ತಿರುವುದಕ್ಕೆ ಡಿ ಬಾಸ್ ಅಭಿಮಾನಿಗಳು ಬೇಸರಿಸಿಕೊಂಡಿದ್ದಾರೆ.