ಬಿಗ್ ಬಾಸ್ ಸೀಸನ್ 10 ರ (Kannada bigboss S10) ಆಟ ದಿನೇ ದಿನೇ ಹೆಚ್ಚು ಕ್ಯುರಿಯಾಸಿಟಿ ಹುಟ್ಟು ಹಾಕುತ್ತಿದೆ. ಕಳೆದ ಒಂದೆರಡು ಸೀಸನ್ ಗಳಲ್ಲಿ ಬಾರಿ ಸಪ್ಪೆ ಎನಿಸಿದ್ದ ಬಿಗ್ ಬಾಸ್ ಗೆ ಈಗ ಹೊಸ ಕಳೆ ಬಂದಿದೆ. ಇದಕ್ಕೆಲ್ಲ ಪ್ರಮುಖ ಕಾರಣ ಈ ಬಾರಿಯ ಕಂಟೆಸ್ಟಂಟ್ ಗಳ ಆಟ ಜನರಿಗೆ ಇಷ್ಟವಾಗಿರುವುದು.
ತನಿಷಾ ನೇರ ನುಡಿ, ಡ್ರೋನ್ ಪ್ರತಾಪ್ ಟ್ಯಾಲೆಂಟ್, ವಿನಯ್ ಗೌಡ ಆಟಿಟ್ಯೂಡ್, ಸಂಗೀತ ಶೃಂಗೇರಿ ಕಾರ್ತಿಕ್ ಅವರ ಕೆಮಿಸ್ಟ್ರಿ, ಮೈಕಲ್ ಅವರ ಪ್ರಾಮಾಣಿಕತೆ, ತುಕಾಲಿ ಸಂತೋಷ್ ಕಾಮಿಡಿ ಇತ್ಯಾದಿಗಳು ಈ ಬಾರಿಯ ಪ್ರಮುಖ ಆಕರ್ಷಣೆ ಎನ್ನಬಹುದು.
ಟಾಸ್ಕ್ (task) ಎಂದು ಬಂದಾಗ ಮನೆ ಮಂದಿ ಒಬ್ಬರಿಗಿಂತ ಒಬ್ಬರು ಗೆಲ್ಲುವುದಕ್ಕಾಗಿ ಹೋರಾಡುವುದು ಈ ಎಪಿಸೋಡ್ ಗಳನ್ನು ಜನರು ಮಿಸ್ ಮಾಡಿಕೊಳ್ಳಲೇಬಾರದು ಎನಿಸುವಂತೆ ಮಾಡುತ್ತದೆ. ಹಾಗೆ ಟಾಸ್ಕ್ ಮಧ್ಯೆ ವೈ ಮನಸುಗಳು ಉಂಟಾದಾಗ ಅದನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂದು ನೋಡುವ ಕುತೂಹಲ ಕೂಡ ಉಳಿದುಕೊಂಡಿರುತ್ತದೆ.
ಅದೇ ರೀತಿ ಈ ವಾರದಲ್ಲಿ ಹಳ್ಳಿ ಮನೆ ಥೀಮ್ ನಲ್ಲಿ (Halli mane theme) ಟಾಸ್ಕಳನ್ನು ಬಿಗ್ ಬಾಸ್ ಏರ್ಪಡಿಸಿದ್ದಾರೆ. ಸಂಗೀತವ್ವ ಹಾಗೂ ವಿನಯಪ್ಪನ ಎರಡು ಟೀಮ್ ಆಗಿ ಅಂದರೆ ಎರಡು ಮನೆಯಾಗಿ ಬಿಗ್ ಬಾಸ್ ಮನೆ ಒಡೆದಿದೆ. ಎದುರು ಬದುರು ಮನೆಯಾಗಿರುವುದರಿಂದ ನೆರೆಹೊರೆಯಂತೆ ಹೊಂದಾಣಿಕೆಯಾಗಿ ಮುಂದುವರಿಸಬೇಕಾಗಿದ್ದ ಆಟ ಆರಂಭದಲ್ಲಿ ತಮಾಷೆಯಾಗಿ ಆರಂಭಗೊಂಡಿದ್ದಾದರೂ.
ಟಾಸ್ಕ್ ಮಧ್ಯೆ ಕಾಂಪಿಟೇಷನ್ ಜೋರಾಗಿ ಪರಸ್ಪರ ದಾಯಾದಿ ಮನೆಗಳಂತೆ ಎರಡು ಮನೆಯವರು ಕಿತ್ತಾಡಿಕೊಳ್ಳುತ್ತಿದ್ದಾರೆ. ನೆನ್ನೆ ಆರಂಭವಾಗಿರುವ ಹಳ್ಳಿ ಮನೆ ಆಟದಲ್ಲಿ ಒಂದು ಸಂದರ್ಭದಲ್ಲಿ ಈ ಜಗಳ ತಾರಕಕ್ಕೇರಿ ವಿನಯ್ ವರ್ಸಸ್ ಕಾರ್ತಿಕ್ (Vinay v/s Karthik) ಮತ್ತು ನಮ್ರತ ವರ್ಸಸ್ ಸಂಗೀತ (Namratha v/s Kathik) ನಡುವೆ ಭಾರಿ ದೊಡ್ಡ ಮಾತಿನ ಕಾಳಗವೇ ಏರ್ಪಟ್ಟಿದೆ.
ಒಬ್ಬರಿಗೊಬ್ಬರು ವೈಯಕ್ತಿಕವಾಗಿ ಟೀಕಿಸುವ ಮಟ್ಟಕ್ಕೆ ಇದು ಮುಟ್ಟಿದ್ದು ಇಂದಿನ ಎಪಿಸೋಡ್ ನಲ್ಲಿ ಅದು ಪ್ರಸಾರವಾಗಲಿದೆ ಮತ್ತು ಚಾನೆಲ್ ಈಗಾಗಲೇ ಇದನ್ನು ತನ್ನ ಪ್ರೊಮೋದಲ್ಲಿ ಬಿಡುಗಡೆ ಮಾಡಿದೆ. ಈ ಪ್ರೋಮೋದಲ್ಲಿ ಹರಿದಾಡುತ್ತಿರುವ ಕ್ಲಿಪಿಂಗ್ ನಲ್ಲಿ ವಿನಯ್ ಅವರು ಕಾರ್ತಿಕ್ ಅವರನ್ನು ಆಟ ಆಡಿದರೆ ಗಂಡಸು ತರ ಆಡು ಬಳೆ ಹಾಕಿಕೊಂಡು ಹೆಂಗಸುತರ ಆಡುವುದಲ್ಲ.
ನನ್ನ ಜೊತೆ ಕಿತ್ತಾಡಲು ಬಂದರೆ ಕಪಾಳಕ್ಕೆ ಕೊಡುತ್ತೇನೆ ಎಂದು ಹೇಳುತ್ತಾರೆ ಹಾಗೂ ಲೂಸರ್ ಎಂದು ಕಾರ್ತಿಕ್ ಮೇಲೆ ಕಿರುಚಾಡಿದ್ದಾರೆ. ಸಂಗೀತ ಶೃಂಗೇರಿ ಅವರ ಜೊತೆಗೆ ಕೂಡ ಮರ್ಯಾದೆ ಇಲ್ಲದೆ ನಿಂತಂತವಳ ಜೊತೆ ನಾನೇನು ಮಾತನಾಡುವುದು ಎಂದು ಕೂಗಾಡಿದ್ದಾರೆ.
ಹಾಗೆಯೇ ವಿನಯ್ ಅವರ ತಂಡದಲ್ಲಿರುವ ನಮ್ರತ ಹಾಗೂ ಸಂಗೀತ ನಡುವೆಯೂ ಬಹಳ ದೊಡ್ಡ ಜಗಳ ನಡೆದಿದ್ದು ಸಂಗೀತಾ ಅವರು ನಮ್ರತ ಅವರನ್ನು ಬಾಯಿ ಮುಚ್ಚಿಕೊಂಡು ಆಟ ಆಡು ಎಂದಿದ್ದಕ್ಕಾಗಿ ಕೋಪಗೊಂಡ ನಮ್ರತ ನನ್ನನ್ನು ಬಾಯಿ ಮುಚ್ಚಿಕೊಂಡು ಹಾಡು ಎನ್ನುವುದಕ್ಕೆ ನೀನು ಯಾವಳು ಕಿತ್ತೋದವಳು ಎಂದಿದ್ದಾರೆ.
ಇದು ಇಷ್ಟಕ್ಕೆ ನಿಲ್ಲದೆ ಯಾವ ಮಟ್ಟಕ್ಕೆ ತಲುಪಲಿದೆಯೋ ಎನ್ನುವುದನ್ನು ನೋಡಲು ಇಂದಿನ ಎಪಿಸೋಡ್ ಟೆಲಿಕಾಸ್ಟ್ ಆಗುವವರೆಗೂ ಕೂಡ ಕಾಯ ಬೇಕಾಗಿದೆ. ಕನ್ನಡಿಗರಿಗೆ ಇಂದಿನ ಎಪಿಸೋಡ್ ಬಹಳ ಕುತೂಹಲ ಹುಟ್ಟಿಸಿದ್ದು ಈಗಾಗಲೇ ತಮ್ಮ ನೆಚ್ಚಿನ ಕಂಟೆಸ್ಟೆಂಟ್ಗಳ ಪರ ಸೋಶಿಯಲ್ ಮೀಡಿಯಾದಲ್ಲಿ ವಕಲತ್ತು ವಹಿಸಿದ್ದಾರೆ, ಒಟ್ಟಿನಲ್ಲಿ ಈ ಬಾರಿಯ ಸೀಸನ್ 10 ಮನೆಮನೆಯ ಮಾತಾಗಿದೆ.