ಹೊಸ ಕಾರನ್ನು ಖರೀದಿಸುವ ಸಂಭ್ರಮದಲ್ಲಿದ್ದ ವ್ಯಕ್ತಿ ನಿಯಂತ್ರಣ ತಪ್ಪಿ ಶೋ ರೂಮ್ ನ ಗ್ಲಾಸ್ ಹೊಡೆದು ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಮಹೀಂದ್ರ ಶೋ ರೂಮ್ ನಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಆ ಫೋಟೋ ಹಾಕುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೋ ಹಾಗೂ ವಿಡಿಯೋ ಸ್ಥಳದಲ್ಲಾಗಿರುವ ಅತಾಚುರ್ಯವನ್ನು ಕಣ್ಣಿದ ಕಟ್ಟಿದ ಹಾಗೆ ಹೇಳುತ್ತಿವೆ.
ಹೊಸ ಕಾರ್ ಖರೀದಿಸಿದ ಸಂಭ್ರಮದಲ್ಲಿ ಖುಷಿ ಖುಷಿಯಾಗಿ ವ್ಯಕ್ತಿ ಡ್ರೈವರ್ ಸೀಟ್ ನಲ್ಲಿ ಕುಳಿತಿದ್ದಾನೆ, ಆದರೆ ಕಾರ್ ನ್ನು ಶೋರೂಮ್ ನಿಂದ ಹೊರಗೆ ತೆಗೆದುಕೊಂಡು ಹೋಗುವ ವೇಳೆ ನಿಯಂತ್ರಣ ತಪ್ಪಿ ಶೋರೂಮ್ ಗ್ಲಾಸ್ ಗಳಿಗೆ ಗುದ್ದಿ ಚಿಂದಿಯಾಗಿಸಿದ್ದಾರೆ.
ಕೆಲವೇ ಸೆಕೆಂಡ್ ಇರುವ ಈ ಘಟನೆ ವಿಡಿಯೋ ಕ್ಲಿಪ್ಪಿಂಗ್ ನಲ್ಲಿ ವ್ಯಕ್ತಿ ಸೀದಾ ಗ್ಲಾಸ್ ಒಡೆದು ಆ ಫ್ಲೋರ್ ನ ತುದಿಗೆ ಕಾರ್ ತಂದು ನಿಲ್ಲಿಸಿರುವುದು ಕಾಣುತ್ತದೆ. ಕ್ಷಣದಲ್ಲಿ ಸಂತಸ ಕರಗಿ ಗೊಂದಲಮಯ ವಾತಾವರಣ ಸೃಷ್ಟಿಯಾಗಿ, ಸುತ್ತಮುತ್ತ ಅನೇಕ ಜನರು ಸುತ್ತುವರೆದಿದ್ದಾರೆ ಮತ್ತು ಶೋ ರೂಮ್ ಸಿಬ್ಬಂದಿಗಳು ಸಹ ಕಾರನ್ನು ಹಿಂಬದಿಗೆ ತೆಗೆದುಕೊಂಡು ಹೋಗಲು ಹರಿದಾಡುತ್ತಿದೆ ಸಾಹಸ ಮಾಡುತ್ತಿದ್ದಾರೆ.
ಇನ್ನು ಸಹಾ ಒಂದು ಬಾರಿಯೂ ರಸ್ತೆಗಳಿಯದ ಕಾರ್ ತನ ಮಾಲೀಕನ ತಪ್ಪಿನಿಂದ ಡ್ಯಾಮೇಜ್ ಆಗಿ ಹೋಗಿದೆ. ಅದೃಷ್ಟವಶಾತ್ ಆ ಸಮಯದಲ್ಲಿ ಅಲ್ಲಿ ನೆರೆದಿದ್ದ ಯಾರಿಗೂ ಏನು ಅ’ಪಾ’ಯ’ವಾಗಿಲ್ಲ ಎನ್ನುವುದೇ ಸಮಾಧಾನಕರ ಸಂಗತಿಯಾಗಿದೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವುದರಿಂದ ಜನರು ಬಹಳ ತಮಾಷೆಯಾಗಿ ಇದಕ್ಕೆ ಕಾಮೆಂಟ್ ಗಳನ್ನು ನೀಡುತ್ತಿದ್ದಾರೆ.
ಇನ್ಸೂರೆನ್ಸ್ ಕ್ಲೈಮ್ ಆಗುತ್ತಾ ಇಲ್ಲವಾ ಎಂದು ಚೆಕ್ ಮಾಡಿದ್ದಾರೆ ಎನಿಸುತ್ತದೆ ಎಂದೋರ್ವರು ಕಮೆಂಟ್ ಮಾಡಿದ್ದರೆ ಮತ್ತೊಬ್ಬರು ಶೋ ರೂಮ್ ನಲ್ಲೇ ಕ್ವಾಲಿಟಿ ಟೆಸ್ಟ್ ಮಾಡಿದ್ದಾರೆ ಎಂದಿದ್ದಾರೆ, ಹಣದಿಂದ ಕಾರ್ ಖರೀದಿಸಬಹುದು ಆದರೆ ಡ್ರೈವಿಂಗ್ ಮಾಡುವ ಸ್ಕಿಲ್ ನಲ್ಲ ಎಂದೊಬ್ಬರು ತತ್ವಜ್ಞಾನ ನುಡಿದಿದ್ದರೆ,
ಇನ್ನೊಮ್ಮೆ ಗ್ರಾಹಕರಿಗೆ ಕಾರ್ ಕೀ ಹಸ್ತಾಂತರಿಸುವ ಮುನ್ನ ಅವರ ಡ್ರೈವಿಂಗ್ ಲೈಸೆನ್ಸ್ ಚೆಕ್ ಮಾಡಿ ಕೊಡಿ ಎಂದೊಬ್ಬರು ಶೋ ರೂಮ್ ಮಾಲೀಕರಿಗೆ ಸಲಹೆ ನೀಡಿದ್ದಾರೆ. ಸೇಫ್ಟಿ ಟೆಸ್ಟ್ ಇರಬೇಕು, ಇಲ್ಲಾ ಇದರಲ್ಲಿ ಏನೋ ವಾಸ್ತು ದೋಷವಿರಬೇಕು ಅಷ್ಟೇ ಅಂತಲೂ ಕಾಲೆಳೆದಿದ್ದಾರೆ.
ಇದೇ ಲಾಸ್ಟ್ ಇನ್ನು ಮುಂದೆ ಶೋರೂಮ್ ಸಿಬ್ಬಂದಿಗಳೇ ಕಾರ್ ಹೊರಗೆ ತಂದು ನೀಡಬಹುದು ಎನಿಸುತ್ತದೆ ಎಂದು ಮುಂದಿನದನೊಬ್ಬರು ಈಗಲೇ ಲೆಕ್ಕಾಚಾರ ಹಾಕಿದ್ದಾರೆ. ಒಟ್ಟಿನಲ್ಲಿ ಇದು ತಮಾಷೆಯಾಗಿ ಕಾಣುತ್ತಿದ್ದರೂ ವೇಳೆ ಕೂಡ ಒಂದು ಏನಾದರೂ ಆಗಬಾರದು ಆಗಿದ್ದರೆ ಇಡೀ ಚಿತ್ರಣವೇ ಬದಲಾಗಿ ಹೋಗುತ್ತಿತ್ತು.
ಈ ರೀತಿ ಆಗುತ್ತಿರುವುದು ಇದೇ ಹೊಸದೇನಲ್ಲ, ಕೆಲ ದಿನಗಳ ಹಿಂದೆಯೂ ಹೈದರಾಬಾದ್ ನ ಶೋ ರೂಮ್ ಒಂದರಲ್ಲಿ ಕೂಡ ಇದೇ ರೀತಿಯ ಇನ್ಸಿಡೆಂಟ್ ಆಗಿತ್ತು ಅಲ್ಲಿಯೂ ಸಹ ಕಾರ್ ಖರೀದಿಸಿದ ವ್ಯಕ್ತಿ ಅದನಕ ಹೊರಗೆ ತರುವ ವೇಳೆಗೆ ಸಿಕ್ಕಾಪಟ್ಟೆ ಸುಸ್ತಾಗಿದ್ದ. ಪದೇ ಪದೇ ಅಕ್ಕಪಕ್ಕದಲ್ಲಿದ್ದ ಗೋಡೆಗಳಿಗೆ ಅಡ್ಡಾದಿಡ್ಡಿ ಗುದ್ದಿಸಿ ನಗೆ ಪಾಟಲಾಗಿದ್ದ. ವೈರಲ್ ಆಗುತ್ತಿರುವ ಈ ಫೋಟೋ ಹಾಗೂ ವಿಡಿಯೋಗಳನ್ನು ನೀವು ಒಮ್ಮೆ ಗಮನಿಸಿ ನಂತರ ನಗುವುದೋ, ಅಳುವುದೋ ನೀವೇ ಹೇಳಿ.