Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ದರ್ಶನ್ ಸರ್ ನನ್ನ ಸಿನಿಮಾದಿಂದ ಬ್ಯಾನ್ ಮಾಡಿಸ್ತಿನಿ ಅಂತಿದ್ದಾರೆ ಎಂದು ಕಣ್ಣೀರು ಹಾಕಿದ ನಟಿ ನಯನ, ಡಿ ಬಾಸ್ ಈ ರೀತಿ ಹೇಳಲು ಕಾರಣವೇನು ಗೊತ್ತ.?

Posted on January 10, 2023 By Admin No Comments on ದರ್ಶನ್ ಸರ್ ನನ್ನ ಸಿನಿಮಾದಿಂದ ಬ್ಯಾನ್ ಮಾಡಿಸ್ತಿನಿ ಅಂತಿದ್ದಾರೆ ಎಂದು ಕಣ್ಣೀರು ಹಾಕಿದ ನಟಿ ನಯನ, ಡಿ ಬಾಸ್ ಈ ರೀತಿ ಹೇಳಲು ಕಾರಣವೇನು ಗೊತ್ತ.?
ದರ್ಶನ್ ಅವರು ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ ಅವರನ್ನು ಸಿನಿಮಾದಿಂದ ಬ್ಯಾನ್ ಮಾಡಿಸುತ್ತೇನೆ ಎಂದಿದ್ದರಂತೆ. ಕಾರಣ ಏನು ಗೊತ್ತಾ.?

ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರು ಎಂತಹ ಸಹೃದಯದ ವ್ಯಕ್ತಿ. ಅವರ ಮನಸ್ಸು ಎಷ್ಟು ಮೃದು, ಅವರು ಎಂತಹ ಸ್ನೇಹ ಜೀವಿ ಎನ್ನುವುದನ್ನು ಈಗಾಗಲೇ ಅವರ ಬಳಗದವರೆಲ್ಲರೂ ಸಾಕಷ್ಟು ವೇದಿಕೆಗಳಲ್ಲಿ ಹೇಳಿಕೊಂಡಿದ್ದಾರೆ. ದರ್ಶನ್ ಅವರನ್ನು ನೋಡಿದರೆ ಗೊತ್ತಾಗುತ್ತದೆ ಅವರು ಎಷ್ಟು ವಿಶಾಲ ಹೃದಯವಂತರು ಎಂದು ನೋಡುವುದಕ್ಕೆ ಆರಡಿ ಕಟೌಟು ಹಾಗೂ ಖಡಕ್ ವ್ಯಕ್ತಿತ್ವ ಆಗಿದ್ದರೂ ಕೂಡ ಕಷ್ಟದಲ್ಲಿದ್ದವರನ್ನು ಕಂಡರೆ ಕರಗಿ ಬಿಡುವ ಜೀವ ಅದು.

ಜೊತೆಗೆ ತಾನು ಬೆಳೆದು ತನ್ನವರನ್ನು ಬೆಳೆಸಲು ಆಸೆ ಪಡುವ ಗುಣ. ದರ್ಶನ್ ಅವರಿಗೆ ಈ ರೀತಿ ಹಠ ಇರುವುದಕ್ಕೆ ಕಾರಣ ಅವರು ಬೆಳೆದು ಬಂದಿರುವ ದಾರಿ ಹೀಗಾಗಿ ಅವರು ತನ್ನಂತೆ ಇತರರು ಚೆನ್ನಾಗಿರಬೇಕು ಎಂದೆ ಬಯಸುತ್ತಾರೆ. ಇಷ್ಟೆಲ್ಲಾ ಗುಣ ಹೊಂದಿರುವ ದರ್ಶನ್ ಅವರು ಒಮ್ಮೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ ಅವರಿಗೆ ಇಂಡಸ್ಟ್ರಿಯಿಂದ ಬ್ಯಾನ್ ಮಾಡಿಸುತ್ತೇನೆ ಎಂದು ಹೆದರಿಸಿದ್ದರಂತೆ. ಕ್ರಾಂತಿ ಸಿನಿಮಾದ ಪ್ರಚಾರದಲ್ಲಿ ಇಡೀ ಚಿತ್ರತಂಡ ತೊಡಗಿಕೊಂಡಿದೆ. ಈ ಸಿನಿಮಾದಲ್ಲಿ ನಯನ ಅವರು ಸಹ ಒಂದು ಪಾತ್ರ ಮಾಡಿದ್ದಾರೆ.

ಹೀಗೆ ಸಂದರ್ಶನ ಒಂದರಲ್ಲಿ ನಯನ(Nayana) ಅವರು ದರ್ಶನ್ ಅವರ ಭೇಟಿ ಮೊದಲ ಬಾರಿಗೆ ಹೇಗೆ ಆಯಿತು ,ನಂತರ ಈಗ ಅವರು ಎಷ್ಟು ಹತ್ತಿರವಾಗಿದ್ದಾರೆ ಎನ್ನುವುದನ್ನು ಹೇಳಿಕೊಳ್ಳುವ ಬರದಲ್ಲಿ ಈ ವಿಷಯವನ್ನು ಸಹ ಹೇಳಿದ್ದಾರೆ. ದರ್ಶನ್ ಅವರು ಈ ಮಾತು ಹೇಳಲು ಕಾರಣ ಕೂಡ ಇದೆ. ಅದೇನೆಂದರೆ ನಯನ ಅವರು ಮೊದಲ ಬಾರಿಗೆ ದರ್ಶನ್ ಅವರನ್ನು ನೋಡಿದ್ದು ಒಡೆಯ ಸಿನಿಮಾದ ಶೂಟಿಂಗ್ ಅಲ್ಲಿ. ಒಡೆಯ ಸಿನಿಮಾದ ಮಳವಳ್ಳಿ ಮಾವನ ಮಗಳು ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಅದೇ ಸೆಟ್ ಅಲ್ಲಿ ನಯನ ಅವರ ಶಾಟ್ ಕೂಡ ಇತ್ತಂತೆ.

ನಯನ ಅವರು ಬೆಳ್ಳಂಬೆಳಗ್ಗೆ ತಿಂಡಿ ಕೂಡ ಮಾಡದೆ ಎಕ್ಸೈಟ್ಮೆಂಟ್ ಇಂದ ದರ್ಶನ್ ಅವರನ್ನು ನೋಡಲು ಬಂದಿದ್ದರಂತೆ. ಆದರೆ ಸೆಟ್ಟಿಗೆ ಬಂದ ಮೇಲೆ ತಿಳಿಯುತ್ತದೆ ಅವರ ಪಾತ್ರ ಇರುವುದು ಮಧ್ಯಾಹ್ನದ ಮೇಲೆ ಎಂದು. ಆಗ ಬಹಳ ಹೊಟ್ಟೆ ಹಸಿವಿನಿಂದ ಸುಸ್ತಾಗಿದ್ದ ನಯನ ಅವರು ತಮ್ಮ ಅಸಿಸ್ಟೆಂಟ್ ಅನ್ನು ಕರೆದು ತಿನ್ನಲು ಏನಾದರೂ ತೆಗೆದುಕೊಂಡು ಬಾ ಎಂದು ಕೇಳಿಕೊಳ್ಳುತ್ತಾರಂತೆ. ಇವರ ಹಸಿವನ್ನು ಕಂಡ ಅಸಿಸ್ಟೆಂಟ್ ಚೆನ್ನಾಗಿ ಭರ್ಜರಿ ಊಟವನ್ನು ತಂದು ಕೊಡುತ್ತಾರೆ. ಹೊಟ್ಟೆ ತುಂಬಾ ಎಲ್ಲವನ್ನು ತಿಂದಿದ್ದ ನಯನ ಅವರಿಗೆ ಶಾ-ಕ್ ಆಗಿರುತ್ತದೆ.

ಯಾಕೆಂದರೆ ನಯನ ಅವರು ಊಟ ಮಾಡಿದ ಒಂದೇ ಗಂಟೆಯಲ್ಲಿ ಡೈರೆಕ್ಟರ್ ಬ್ರೇಕ್ ಹೇಳಿರುತ್ತಾರೆ ಮತ್ತು ಅದೇ ಸಮಯದಲ್ಲಿ ದರ್ಶನ್ ಅವರು ಸಹ ನಯನ ಅವರಿಗೆ ಸಿಗುತ್ತಾರೆ. ಮೊದಲ ಬಾರಿಗೆ ದರ್ಶನ್ ಅವರನ್ನು ಕಂಡ ನಯನ ಅವರು ಬಹಳ ಖುಷಿ ಪಟ್ಟು ಮಾತನಾಡಿಸುತ್ತಾರೆ. ಅಷ್ಟೆಲ್ಲಾ ಕಲಾವಿದರ ನಡುವೆ ಕೂಡ ನಯನ ಅವರನ್ನು ದರ್ಶನ್ ಅವರು ಸಹ ಗುರುತಿಸಿ, ಜೂನಿಯರ್ ಉಮಾಶ್ರೀ ಅಂದೆಲ್ಲ ಹೇಳುತ್ತಾರಂತೆ. ನಂತರ ಎಲ್ಲರನ್ನು ಕ್ಯಾರವಾನಿಗೆ ಊಟಕ್ಕೆ ಕರೆತನ್ನಿ ಎಂದು ಹೇಳಿ ಹೋಗಿರುತ್ತಾರೆ. ಊಟ ಮಾಡಲು ನಯನ ಅವರು ಹೋಗುತ್ತಾರೆ ಆದರೆ ಈಗಾಗಲೇ ಹೊಟ್ಟೆ ತುಂಬ ಊಟ ಮಾಡಿದ್ದ ಅವರಿಗೆ ಮಧ್ಯಾಹ್ನದ ಊಟ ಮಾಡಲು ಕಷ್ಟ ಆಗುತ್ತದೆ.

ಅದಲ್ಲದೆ ದರ್ಶನ್ ಅವರ ಎದುರೇ ಕೂತಿದ್ದ ಕಾರಣ ದರ್ಶನ್ ಅವರು ಪದೇ ಪದೇ ಕೇಳುತ್ತಿದ್ದರಂತೆ. ನಯನ ಅವರು ಹೇಗೋ ಕಷ್ಟ ಪಟ್ಟು ಸ್ವಲ್ಪ ಸ್ವಲ್ಪ ಊಟ ಮಾಡುತ್ತಿದ್ದರಂತೆ. ಊಟ ಎಲ್ಲ ಮುಗಿದ ಮೇಲೆ ದರ್ಶನ್ ಅವರು ಯಾಕೆ ಸರಿಯಾಗಿ ಊಟ ಮಾಡಲಿಲ್ಲ ಚೆನ್ನಾಗಿರಲಿಲ್ಲವ ಎಂದು ಕೇಳಿದಾಗ, ನಯನ ಇಲ್ಲ ಸರ್ ಈಗಷ್ಟೇ ಬ್ರೇಕ್ ಹೇಳುವ ಒಂದು ಗಂಟೆ ಮುಂದೆ ಚೆನ್ನಾಗಿ ತಿಂದು ಬಿಟ್ಟೆ ಅದಕ್ಕೆ ಊಟ ಸೇರುತ್ತಿಲ್ಲ ಹಸಿವಾಗುತ್ತಿಲ್ಲ ಎಂದು ಹೇಳುತ್ತಿದ್ದಂತೆ ಡೈರೆಕ್ಟರ್ ಅನ್ನು ಕರೆಯಿರಿ ಅವರು ಬ್ರೇಕ್ ಹೇಳುವ ಮುಂಚೆ ಊಟ ಮಾಡಿದ್ದಾರೆ. ಇವರನ್ನು ಸಿನಿಮಾದಿಂದ ಬ್ಯಾನ್ ಮಾಡಿಸೋಣ ಎಂದು ಭಯ ಹುಟ್ಟಿಸಿದ್ದರಂತೆ.

ನಯನ ಅವರು ನಿಜ ಎಂದುಕೊಂಡು ದಯವಿಟ್ಟು ಕ್ಷಮಿಸಿ ಎಂದು ರಿಕ್ವೆಸ್ಟ್ ಮಾಡಿಕೊಳ್ಳುತ್ತಿದ್ದರಂತೆ ಅದಕ್ಕೆ ಇಲ್ಲ ಬಿಡಮ್ಮ ತಮಾಷೆ ಮಾಡಿದೆ ಎಂದು ದರ್ಶನ್ ಅವರು ಹೇಳಿದರಂತೆ. ಅಂದಿನಿಂದ ಇಂದಿನ ತನಕ ಒಬ್ಬ ಕೇರಿಂಗ್ ಅಣ್ಣನಾಗಿ ದರ್ಶನ್ ಕಾಣುತ್ತಾರೆ. ದರ್ಶನ್ ಅವರ ಯಾವುದೇ ಸಿನಿಮಾ ಇದ್ದರೂ ಕೂಡ ಯಾವ ಪಾತ್ರ ಕೊಟ್ಟರು ಕೂಡ ನಾನು ಕಣ್ಣು ಮುಚ್ಚಿಕೊಂಡು ಅಪ್ಪಿಕೊಂಡು ಒಪ್ಪಿಕೊಳ್ಳುತ್ತೇನೆ. ಯಾಕೆಂದರೆ ನನಗೆ ಬಾಲ್ಯದಿಂದಲೂ ದರ್ಶನ್ ಅಂದರೆ ತುಂಬಾ ಇಷ್ಟ ನಾನು ಕೂಡ ಅವರ ಒಬ್ಬ ಅಭಿಮಾನಿ ಇಂದು ಅವರ ಜೊತೆ ಅಭಿನಯ ಅವಕಾಶ ಸಿಗುತ್ತಿದೆ ಎಂದರೆ ಅದು ನನ್ನ ಅದೃಷ್ಟ. ನಿಜಕ್ಕೂ ಡಿ ಬಾಸ್ ಅವರನ್ನು ಅವರ ಸೆಲೆಬ್ರಿಟಿಗಳು ಯಾಕೆ ಅಷ್ಟು ಇಷ್ಟಪಡುತ್ತಾರೆ ಎಂದು ಅವರನ್ನು ಹತ್ತಿರದಿಂದ ಕಂಡವರಿಗೆ ಮಾತ್ರ ಗೊತ್ತಿರುತ್ತದೆ ಎಂದೆಲ್ಲಾ ದರ್ಶನ್ ಬಗ್ಗೆ ಮಾತನಾಡಿದ್ದಾರೆ.

Viral News Tags:Challenging Star Darshan, D Boss, Darshan, Kranti, Nayana

Post navigation

Previous Post: Eminem – Stronger Than I Was
Next Post: ಗಣರಾಜ್ಯೋತ್ಸವ ಮರೆತು ಕ್ರಾಂತಿ ಸಿನಿಮಾ ನೋಡಿ ಎನ್ನುವ ವಿವಾದಾತ್ಮಕ ಹೇಳಿಕೆ ಕೊಟ್ಟು ಸಮಸ್ಯೆಗೆ ಸಿಲುಕಿಕೊಂಡ ನಟಿ ರಚಿತರಾಮ್ ಈ ವಿಡಿಯೋ ನೋಡಿ ನಿಜಕ್ಕೂ ಶಾ-ಕ್ ಆಗ್ತೀರಾ

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme