ನಮ್ಮ ನಾಡಿನ ಜನರು ಸೆಲೆಬ್ರಿಟಿಗಳನ್ನು ಬಹಳ ವಿಶೇಷವಾಗಿ ಕಾಣುತ್ತಾರೆ. ಅದರಲ್ಲೂ ಸಿನಿಮಾ ತಾರೆಯರ ಮೇಲೆ ಇನ್ನೂ ವಿಶೇಷ ಒಲವು. ಹೀಗಾಗಿ ನಮ್ಮಲ್ಲಿ ಪ್ರತಿಯೊಬ್ಬ ಸೂಪರ್ ಸ್ಟಾರ್ ಗೂ ಕೂಡ ಕೋಟಿಗಟ್ಟಲೆ ಅಭಿಮಾನಿಗಳು ಇದ್ದಾರೆ. ಆ ಅಭಿಮಾನಿಗಳು ಅವರನ್ನು ಕುಟುಂಬದವರಂತೆ ಕಾಣುತ್ತಾರೆ, ಪ್ರೀತಿಸುತ್ತಾರೆ. ಗುರು ಬಾಸು ಎಂದೆಲ್ಲ ಅವರನ್ನು ಕರೆದು ಅವರನ್ನು ಅನುಸರಿಸುತ್ತಾರೆ. ಹೀಗಾಗಿ ಸೆಲೆಬ್ರಿಟಿಗಳು ಆ ಸ್ಥಾನ ತಲುಪಿದ ಮೇಲೆ ತುಂಬಾ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಈ ಮಾತು ನಟರಿಗಷ್ಟೇ ಅಲ್ಲದೇ ನಟಿಯರಿಗೂ ಸಹ ಅನ್ವಯಿಸುತ್ತದೆ. ಆದರೆ ಈಗ ನಮ್ಮ ಕನ್ನಡದ ಸ್ಟಾರ್ ನಟಿ ಒಬ್ಬರು ದೇಶದ ಗಣರಾಜ್ಯೋತ್ಸವ ದಿನದ ಕುರಿತು ಉಡಾಫೆ ಆಗಿ ಮಾತನಾಡಿ ಸಂ.ಕ.ಷ್ಟ.ಕ್ಕೆ ಸಿಲುಕಿದ್ದಾರೆ. ಕ್ರಾಂತಿ(Kranti) ಸಿನಿಮಾದ ಪ್ರಚಾರದ ವೇಳೆ ಸಿನಿಮಾದ ನಾಯಕಿ ನಟಿ ಆಗಿರುವ ರಚಿತಾ ರಾಮ್(Rachita Ram) ಮಾತಿನ ಭರದಲ್ಲಿ ಈ ರೀತಿ ಮಾತನಾಡಿ ವಿಪರೀತ ಟೀಕೆಗೆ ಗುರಿಯಾಗಿದ್ದಾರೆ. ರಚಿತಾ ರಾಮ್ ಹಲವು ಬಾರಿ ಹಲವು ವಿಷಯಗಳಿಂದ ವಿವಾದ ಮಾಡಿಕೊಂಡಿದ್ದಾರೆ. ಆದರೆ ಈ ಬಾರಿ ಅವರು ಗಣರಾಜ್ಯೋತ್ಸವದ ಬಗ್ಗೆ ಮಾತನಾಡಿರುವುದು ತೀರ ಅಸಹನೀಯವಾದದ್ದು.
ಯಾಕೆಂದರೆ ಗಣರಾಜ್ಯೋತ್ಸವ (Republic Day) ದಿನ ಎಷ್ಟು ವಿಶೇಷ ಎನ್ನುವುದು ಭಾರತೀಯನಾದ ಪ್ರತಿಯೊಬ್ಬನಿಗೂ ಗೊತ್ತಿದೆ. ಅದನ್ನು ಅರಿತು ಆ ದಿನಕ್ಕೆ ಗೌರವ ಕೊಟ್ಟು ನಡೆದುಕೊಳ್ಳಬೇಕಾದ ಕರ್ತವ್ಯ ಇಲ್ಲಿಯ ಪ್ರತಿಯೊಬ್ಬ ನಾಗರಿಕನದ್ದು. ಡಾ. ಬಿ ಆರ್ ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಅಳವಡಿಸಿಕೊಂಡ ದಿನ ಜನವರಿ 26. ಆ ಸಂವಿಧಾನದ ಅಡಿಯಲ್ಲಿ ಅದು ಹಾಕಿ ಕೊಟ್ಟಿರುವ ಚೌಕಟ್ಟಿನಲ್ಲಿ ಇಂದು ನಾವು ಬದುಕು ಸಾಗಿಸುತ್ತಿರುವುದು. ಹಾಗಾಗಿ ಇಂತಹ ವಿಶೇಷ ದಿನದ ಬಗ್ಗೆ ನಟಿ ಈ ರೀತಿ ಮಾತನಾಡುವುದು ತೀರ ಬೇಸರವಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯಕ್ಕಾಗಿ ಅವರನ್ನು ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಕ್ರಾಂತಿ ಸಿನಿಮಾದ ಪ್ರಚಾರ ಮಾಡುತ್ತಿರುವ ಚಿತ್ರತಂಡ ನಾನಾ ರೀತಿಯಲ್ಲಿ ಸಿನಿಮಾ ಗೆ ಪ್ರಚಾರ ಕೊಡುತ್ತಿದ್ದೆ. ಹೀಗೆ ಇದೇ ರೀತಿ ಸಂದರ್ಶನ ಕಾರ್ಯಕ್ರಮ ಒಂದದಲ್ಲಿ ಭಾಗಿಯಾಗಿ ವೇದಿಕೆ ಮೇಲೆ ಮಾತನಾಡುತ್ತಿದ್ದ ರಚಿತಾ ರಾಮ್ ಅವರು ಜನವರಿ 26ರ ಎಂದರೆ ಪ್ರತಿ ವರ್ಷ ನಾವು ಗಣರಾಜ್ಯೋತ್ಸವ ಎಂದೇ ಹೇಳುತ್ತಿದ್ದೆವು ಎಂದು ಹೇಳಿ, ಅದನ್ನು ಸಹ ಕೊಂಚ ಅನುಮಾನದಿಂದಲೇ ಹೇಳಿದ್ದಾರೆ. ಅಕ್ಕಪಕ್ಕ ಇದ್ದವರು ರಿಯಾಕ್ಷನ್ ನೋಡಿ ಒಂದು ಕ್ಷಣ ನಾನೆ ಶಾ-ಕ್ ಆದೆ ಅವತ್ತೇ ಅಲ್ಲವಾ ಎಂದು ಕೇಳಿದ್ದಾರೆ ಮತ್ತು ಮುಂದುವರಿದು ಈ ವರ್ಷ ಗಣರಾಜ್ಯೋತ್ಸವ ಎಲ್ಲವನ್ನು ಮರೆತು ಬರಿ ಕ್ರಾಂತಿಯೋತ್ಸವ ಅಷ್ಟೇ ಅದಕ್ಕೆ ರೆಡಿಯಾಗಿರಿ ಎಂದಿದ್ದಾರೆ.
ಇವರ ಈ ಮಾತಿನ ವೀಡಿಯೋ ವೈರಲ್ ಆಗುತ್ತಿದ್ದಂತೆ ರಚಿತರಾಮ್ ಅವರ ಬಗ್ಗೆ ನೆಟ್ಟಿಗರು ಕಮೆಂಟ್ ಮಾಡಿ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಗಣರಾಜ್ಯೋತ್ಸವ ದಿನಕ್ಕೆ ಗೌರವ ಕೊಡದ ನೀವು ಭಾರತದಲ್ಲಿ ಇರುವುದಕ್ಕೆ ಯೋಗ್ಯರಲ್ಲ ಪಾಕಿಸ್ತಾನಕ್ಕೆ ಹೋಗಿ ಅಲ್ಲೇ ನಿಮ್ಮ ಕ್ರಾಂತಿ ಸಿನಿಮಾ ರಿಲೀಸ್ ಮಾಡಿಕೊಳ್ಳಿ ಎಂದು ಒಬ್ಬರು ಕೋಪಗೊಂಡು ಕಮೆಂಟ್ ಮಾಡಿದ್ದರೆ, ಮತ್ತೊಬ್ಬರು ಕ್ರಾಂತಿ ಆಗಲಿ ಮತ್ತೊಂದೇ ಇರಲಿ ಮೊದಲು ದೇಶ ನಂತರ ಸಿನಿಮಾ ಎಂದಿದ್ದಾರೆ. ಇನ್ನು ಮುಂದುವರೆದು ಕೆಲವು ಪ್ರಜ್ಞಾವಂತರು ರಚಿತರಾಮ್ ಅವರಿಗೆ ನೀವು ಒಬ್ಬ ಸೆಲೆಬ್ರಿಟಿ, ನಿಮ್ಮನ್ನು ಅನುಸರಿಸುವ ಸಾವಿರಾರು ಅಭಿಮಾನಿಗಳು ಇರುತ್ತಾರೆ.
ಅಭಿಮಾನಿಗಳಿಗೆ ಕೊಂಚ ಸಾಮಾನ್ಯ ಜ್ಞಾನ ಕಡಿಮೆ ಇರಬಹುದು. ತಿಳುವಳಿಕೆ ಇಲ್ಲದೆ ಇರಬಹುದು ಆದರೆ ಅದನ್ನು ತಿದ್ದುವ ಜವಾಬ್ದಾರಿ ಸ್ಟಾರ್ ಗಳಿಗೆ ಇರುತ್ತದೆ. ನೀವೇ ಈ ರೀತಿ ಅನಕ್ಷರಸ್ಥರಂತೆ ಮಾತನಾಡಿದರೆ ಅವರ ಗತಿಯೇನು ಎಂದು ಪ್ರಶ್ನೆ ಕೇಳಿದ್ದಾರೆ. ನಮ್ಮ ಇಂಡಸ್ಟ್ರಿಯ ಸ್ಟಾರ್ ಗಳ ಅಕ್ಷರ ಜ್ಞಾನ ಮತ್ತು ಸಾಮಾನ್ಯ ಜ್ಞಾನ ಬೇರೆ ಲೆವೆಲ್ ಗೆ ಹೋಗುತ್ತಿದೆ ಎಂದೊಬ್ಬರು ಪರೋಕ್ಷವಾಗಿ ಚುಚ್ಚಿದ್ದಾರೆ, ಹಾಗೇ ಇನ್ನೊಬ್ಬಾತ ಈಗಾಗಲೇ ಬಾಲಿವುಡ್ ಕೆಲಸ ಸ್ಟಾರ್ ಗಳು ಈ ರೀತಿ ದೇಶದ ಬಗ್ಗೆ ಉಡಾಫೆ ಉತ್ತರ ಕೊಟ್ಟು ನಂತರ ಅವರ ಸ್ಥಿತಿ ಏನಾಗಿದೆ ಎನ್ನುವುದನ್ನು ನೋಡಿದ್ದೀರಾ ದೇಶದ ಬಗ್ಗೆ ಮಾತನಾಡುವಾಗ ಎಚ್ಚರ ಇರಬೇಕು ಎಂದು ಎಚ್ಚರಿಸಿದ್ದಾರೆ.
ಇವರು ಆಡಿರುವ ಈ ಮಾತುಗಳು ಮುಂದೆ ಇನ್ಯಾವ ದೊಡ್ಡ ಮಟ್ಟಕ್ಕೆ ತಲುಪಲಿದ್ಯೋ ಗೊತ್ತಿಲ್ಲ. ಆದರೆ ಈಗಾಗಲೇ ಈ ರೀತಿಯ ನಾನಾ ವಿವಾದಗಳು ಆಗಿರುವುದರಿಂದ ಕ್ಯಾಮರ ಮುಂದೆ ಆಗಲಿ ಅಥವಾ ಕ್ಯಾಮರ ಇರದೆ ಇರುವಾಗಲೇ ಆಗಲಿ ದೊಡ್ಡವರು ಪ್ರಜ್ಞೆಯಿಂದ ಮಾತನಾಡಬೇಕು. ಮಾತಿನ ಭರದಲ್ಲಿ ಬಾಯಿಗೆ ಬಂದದ್ದನ್ನೆಲ್ಲ ಮಾತನಾಡಿದರೆ ನಂತರ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿ ಹಾಕಿಕೊಳ್ಳಬೇಕಾಗುತ್ತದೆ. ಈಗಾಗಲೇ ಇದಕ್ಕೆ ನಮ್ಮ ರಾಜ್ಯದಲ್ಲೇ ಸಾಕಷ್ಟು ಉದಾಹರಣೆ ಇದೆ ಅದನ್ನು ಕಂಡು ಕಂಡು ಮತ್ತೆ ಇದೇ ರೀತಿ ನಡೆದುಕೊಳ್ಳುತ್ತಿರುವವರ ಸಂಖ್ಯೆಗೇನು ಕಡಿಮೆ ಇಲ್ಲ ಇನ್ನಾದರೂ ಸ್ಟಾರ್ ಗಳು ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಲಿ ಎನ್ನುವುದೇ ಕಮೆಂಟಿಗರ ಆಶಯ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮುಖಾಂತರ ಉತ್ತರಿಸಿ.