ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮಾಸ್ ಡೈಲಾಗ್ ಗಳಿಂದಲೇ ಸಕ್ಕತ್ ಫೇಮಸ್ ಆಗಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ (Rakshak Bullet) ಅವರು ಈ ಬಾರಿಯ ಬಿಗ್ ಬಾಸ್ ಸೀಸನ್ 10ರಲ್ಲಿ (BB S10) ಕಂಟೆಸ್ಟೆಂಟ್ ಆಗಿ ಮನೆ ಸೇರಿದ್ದರು.
ಹೊರಗೆ ಇದ್ದಾಗ ಬುಲೆಟ್ ನಂತೆ ಡೈಲಾಗ್ ಹೊಡೆದು ಮನೋರಂಜಿಸುತ್ತಿದ್ದ ಅವರು ಒಳಗೂ ಕೂಡ ಅದೇ ರೀತಿಯ ಖಡಕ್ ಮಾತುಗಳಿಂದ ಆರಂಭದಲ್ಲಿ ಉತ್ತಮ ಪ್ಲೇಯರ್ ಎನಿಸಿಕೊಂಡು ಉತ್ತಮ ಪಟ್ಟಿ ಪಡೆದು ಒಂದು ಬಾರಿ ಮನೆಯ ಕ್ಯಾಪ್ಟನ್ ಕೂಡ ಆಗಿದ್ದರು.
ಆದರೆ ಬರು ಬರುತ್ತಾ ರಕ್ಷಕ್ ಗ್ರಾಫ್ ಇಳಿಯತೊಡಗಿತು. ಅಂತಿಮವಾಗಿ ಅವರ ಬಿಗ್ ಬಾಸ್ ಮನೆಯ ಜರ್ನಿ ನಾಲ್ಕನೇ ವಾರಕ್ಕೆ ಅಂತ್ಯವಾಗಿದೆ. ಬಹಳ ಚಿಕ್ಕ ವಯಸ್ಸಿಗೆ ಬಿಗ್ ಬಾಸ್ ಮನೆ ಪ್ರವೇಶಿಸಿದ್ದ ರಕ್ಷಕ್ ಬುಲೆಟ್ ಈ ವಾರದಲ್ಲಿ ಆಗಾಗ ನನ್ನಿಂದ ಆದಷ್ಟು ಎಫರ್ಟ್ ಹಾಕುತ್ತಿದ್ದೇನೆ ಇದನ್ನು ಮೀರಿ ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ.
ನನಗೆ ಈ ಆಟವೇ ಅರ್ಥ ಆಗುತ್ತಿಲ್ಲ ಎಂದೆಲ್ಲ ಮಾತನಾಡಿದ್ದರು. ಬಹುಶಃ ಅದೇ ಅವರ ಆಟಕ್ಕೆ ಮುಳುವಾಯಿತೋ ಏನೋ ಈ ವಾರದ ಟಾಸ್ಕ್ಗಳಲ್ಲೂ ಅಷ್ಟೇನೂ ಕಾಣಿಸಿಕೊಳ್ಳದ ಕಾರಣಕ್ಕಾಗಿ ಮನೆಯಿಂದ ಹೊರ ಬಿದ್ದಿದ್ದಾರೆ (Eliminated). ಕೊನೆಯವರೆಗೂ ಕೂಡ ನಾನು ಆಚೆ ಹೋದರು ಚಿಂತೆ ಇಲ್ಲ ಎನ್ನುತ್ತಿದ್ದವರು.
ಸ್ಟೇಜ್ ಮೇಲೆ ತಮ್ಮ ಜರ್ನಿ ವಿಡಿಯೋ ಕ್ಲಿಪಿಂಗ್ (VT) ನೋಡುತ್ತಿದ್ದಂತೆ ಭಾವುಕರಾಗಿ ಬಿಗ್ ಬಾಸ್ ಮನೆಯನ್ನು ನಾಳೆಯಿಂದ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಬುಲೆಟ್ ಪ್ರಕಾಶ್ ಅವರಿಗೆ ತಮ್ಮ ಮಗ ಕೂಡ ದೊಡ್ಡ ಹೀರೋ ಆಗಬೇಕು ಎನ್ನುವ ಆಸೆ ಇತ್ತು ಆದರೆ ರಕ್ಷಕ್ ಬಣ್ಣ ಹಚ್ಚುವ ಮುನ್ನವೇ ಬುಲೆಟ್ ಪ್ರಕಾಶ್ ಅವರು ಕಣ್ಮುಚ್ಚಿಕೊಂಡಿದ್ದರು.
ಕಳೆದ ವರ್ಷ ತೆರೆ ಕಂಡ ಗುರು ಶಿಷ್ಯರು ಸಿನಿಮಾದ (debut by Gurushishyaru Movie) ಮೂಲಕ ರಕ್ಷಕ್ ಕೂಡ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ನಟ ಶರಣ್, ಪ್ರೇಮ್ ಮುಂತಾದ ಸ್ಟಾರ್ ಗಳ ಮಕ್ಕಳ ಜೊತೆ ರಕ್ಷಕ್ ಕೂಡ ಆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಮತ್ತೊಂದು ಆಕ್ಷನ್ ಸಿನಿಮಾದಲ್ಲಿ ಸೋಲೋ ಹೀರೋ ಆಗಿ ಕಾಣಿಸಿಕೊಳ್ಳುವ ಆಸೆಯನ್ನು ಕೂಡ ಹೊಂದಿದ್ದಾರೆ.
ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಇದರ ಕುರಿತು ಗಾಳಿ ಸುದ್ದಿ ಕೂಡ ಹರಿದಾಡುತ್ತಿರುತ್ತದೆ. ಆದರೆ ಈಗ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆ ರಕ್ಷಕ್ ಬುಲೆಟ್ ಅವರ ಮತ್ತೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬಿಗ್ ಬಾಸ್ ಆಟದಲ್ಲಿ ಪಡೆದ ಹಣವನ್ನು ಅವರು ಒಂದು ಸತ್ಕಾರಕ್ಕೆ ಬಳಸಿಕೊಂಡ (Social work) ಕಾರಣದಿಂದಾಗಿ ಈ ವಿಡಿಯೋ ಕೂಡ ವೈರಲ್ ಆಗುತ್ತಿದೆ.
ರಕ್ಷಕ್ ಬುಲೆಟ್ ಅವರು ತಾವು ಬಿಗ್ ಬಾಸ್ ಮನೆಯಲ್ಲಿ ಸಂಪಾದನೆ ಮಾಡಿದ ಹಣದಿಂದ ಆಶ್ರಮವೊಂದರ ನಿರ್ಮಾಣಕ್ಕೆ 100 ಮೂಟೆ ಸಿಮೆಂಟ್ ಕೊಟ್ಟಿದ್ದಾರೆ. ಸ್ವತಃ ಆಶ್ರಮದ ಉಸ್ತುವಾರಿ ವಹಿಸಿಕೊಂಡಿರುವಂತಹ ನಕ್ಷತ್ರ ಎನ್ನುವವರು ಸಹ ಈ ವಿಡಿಯೋದಲ್ಲಿ ಕಾಣಿಸಿಕೊಂಡು ಇಷ್ಟು ಚಿಕ್ಕ ವಯಸ್ಸಿಗೆ ರಕ್ಷಕ್ ಗೆ ಇಷ್ಟು ಒಳ್ಳೆಯ ಮನಸ್ಸಿರುವುದು ನಿಜಕ್ಕೂ ಅಪರೂಪ.
ಈಗಿನ ಕಾಲದ ಮಕ್ಕಳಿಗೆ ಪಬ್ ಪಾರ್ಟಿ ಬಿಟ್ಟು ಬೇರೆ ಗೊತ್ತಿರುವುದಿಲ್ಲ. ಸಮಾಜದಲ್ಲಿ ಕ’ಷ್ಟದಲ್ಲಿರುವವರನ್ನು ನೋಡಿ ಉಳ್ಳವರು ಸಹಾಯ ಮಾಡಿದರೆ ಅವರು ಕೂಡ ಬದುಕುತ್ತಾರೆ ಸಾಧ್ಯವಾದಷ್ಟು ಜನ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ. ಈ ಆಶ್ರಮ ನಿರ್ಮಾಣ ಮಾಡುವುದಕ್ಕೆ ಸಹಾಯ ಮಾಡುವ ಮನಸ್ಸಿರುವವರು ಈ ಸಂಖ್ಯೆಗೆ ಕರೆ ಮಾಡಿ.
9535236199