ಕೇಂದ್ರ ಸರ್ಕಾರವು ರೈತರಿಗೆ ಆರ್ಥಿಕವಾಗಿ ನೆರವನ್ನು ನೀಡುವಂತಹ ಸಲುವಾಗಿ PM ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತಂದಿತು ಈ ಯೋಜನೆಯ ಅಡಿಯಲ್ಲಿ ಪ್ರತಿ ವರ್ಷವೂ ಸಹ ಮೂರು ಕಂತುಗಳಲ್ಲಿ ತಲಾ 2000 ರೂಪಾಯಿಗಳಂತೆ ಒಂದು ವರ್ಷಕ್ಕೆ 6 ಸಾವಿರ ರೂಪಾಯಿಗಳನ್ನು ಫಲಾನುಭವಿ ರೈತರ ಖಾತೆಗೆ ನೇರವಾಗ ಜಮಾ ಮಾಡುವುದಾಗಿ ಸರ್ಕಾರ ತೀರ್ಮಾನವನ್ನು ಕೈಗೊಂಡು ಈ ಯೋಜನೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಇದೇ ವರ್ಷದ ಫೆಬ್ರವರಿ 26ರಂದು ಈ ಯೋಜನೆಯ ಅಡಿಯಲ್ಲಿ 13ನೇ ಕಂತಿನ ಹಣ ಬಿಡುಗಡೆಯಾಗಿದ್ದು ಅದರ ಮುಂದಿನ ಕಂತು ಅಂದರೆ 14ನೇ ಕಂತಿನ ಹಣವನ್ನು ಇಂದು ಎಲ್ಲ ರೈತರ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿದೆ. 14ನೇ ಕಂತಿನ ಹಣ ಯಾರಿಗೆಲ್ಲ ಬರುತ್ತದೆ ಯಾರೆಲ್ಲಾ ಫಲಾನುಭವಿಗಳು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಾರೆ ಕರ್ನಾಟಕದ ಎಷ್ಟು ಜನ ರೈತರಿಗೆ ಈ ಯೋಜನೆ ಲಾಭ ಲಭಿಸುತ್ತದೆ ಎಂಬಂತಹ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಕರ್ನಾಟಕ ರಾಜ್ಯದ 51 ಲಕ್ಷ ರೈತರಿಗೆ ಈ ಯೋಜನೆಯ ಲಾಭವು ದೊರಕಲಿದೆ. ಇಂದು ರೈತರಿಗೆ ಭರ್ಜರಿ ಗುಡ್ ನ್ಯೂಸ್ ಜುಲೈ 27ರಂದು ರೈತರ ಖಾತೆಗೆ 2,000ಗಳನ್ನು ಡಿಬಿಟಿ ಮೂಲಕ ಜಮಾ ಮಾಡಲಾಗುತ್ತಿದೆ. 14ನೇ ಹಣದ ಕಂತಿನ ಹಣದಲ್ಲಿ ನಮ್ಮ ಕರ್ನಾಟಕದ 51 ಲಕ್ಷ ಜನ ರೈತರಿಗೆ ಈ ಹಣ ಜಮಾ ಆಗುತ್ತಿದೆ. ನೀವು ಕೂಡ ಪಿ ಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಾಗಿದ್ದರೆ 2,000 ಹಣ ಬಂದಿದೆಯೋ ಇಲ್ಲವೋ ಎಂದು ಪರೀಕ್ಷೆ ಮಾಡಿಕೊಳ್ಳಿ.
ಕೇಂದ್ರದಿಂದ ಇಂದು ನಿಮ್ಮ ಖಾತೆಗೆ ಹಣವನ್ನು ವರ್ಗಾಯಿಸಲು ಮುಂದಾಗಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಫೀಶಿಯಲ್ ವೆಬ್ಸೈಟ್ ಗೆ ಹೋಗಿ ಅದರಲ್ಲಿ ನೋ ಯುವರ್ ಸ್ಟೇಟಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ ರಿಜಿಸ್ಟ್ರೇಷನ್ ನಂಬರನ್ನು ಹಾಕಿ ಒಂದು ವೇಳೆ ನಿಮಗೆ ರಿಜಿಸ್ಟ್ರೇಷನ್ ನಂಬರ್ ತಿಳಿಯದೆ ಇದ್ದಲ್ಲಿ ನೋ ಯುವರ್ ರಿಜಿಸ್ಟ್ರೇಷನ್ ನಂಬರ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಮೊಬೈಲ್ ನಂಬರ್ ಕೇಳುತ್ತದೆ
ನಿಮ್ಮ ಮೊಬೈಲ್ ನಂಬರ್ ಹಾಕಿದ ನಂತರ ಒಂದು ಓಟಿಪಿ ಬರುತ್ತದೆ ಆ ಒಂದು ಓಟಿಪಿಯನ್ನು ನೀವು ಇಲ್ಲಿ ಹಾಕಿದರೆ ನಿಮ್ಮ ರಿಜಿಸ್ಟ್ರೇಷನ್ ನಂಬರ್ ಪಡೆದುಕೊಳ್ಳಬಹುದು. ನಂತರ ಅಲ್ಲಿ ಕಾಣಿಸುವಂತಹ ಕ್ಯಾಪ್ಚಾವನ್ನು ನೀವು ಎಂಟರ್ ಮಾಡಿದರೆ ಪಿಎನ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಸ್ಟೇಟಸ್ ಓಪನ್ ಆಗುತ್ತದೆ ನಂತರ ನಿಮಗೆ ಅಲ್ಲಿ ಪರ್ಸನಲ್ ಇನ್ಫರ್ಮೇಷನ್ ಸಹ ಸಿಗುತ್ತದೆ.
ನಿಮ್ಮ ಒಂದು ಸ್ಟೇಟಸ್ ಕಾಣುವಂತಹ ಮೂರು ಆಪ್ಷನ್ ಗಳಲ್ಲಿಯೂ ಸಹ ಎಸ್ ಎಂಬ ಟಿಕ್ ಮಾರ್ಕ್ ಇರಬೇಕು ಹಾಗಿದ್ದರೆ ನಿಮಗೆ ಹಣ ಬಂದೇ ಬರುತ್ತದೆ. ಯಾರಿಗೆಲ್ಲ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ರಿಜಿಸ್ಟ್ರೇಷನ್ ಆಗಿದೆಯೋ ಅಂತಹವರ ಖಾತೆಗೆ ಇಂದು ಹಣ ಜಮೆಯಾಗಲಿದೆ ಒಂದು ವೇಳೆ ಇಂದು ಹಣ ಜಮಾ ಆಗದೇ ಇದ್ದಲ್ಲೇ ನಾಳೆಯೂ ಸಹ ಹಣ ಜಮೆಯಾಗುವ ಸಾಧ್ಯತೆ ಇದೆ.
ನೀವು ಕೂಡಲೇ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಚೆಕ್ ಮಾಡಿದರೆ ನಿಮ್ಮ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎಂಬುದು ತಿಳಿಯುತ್ತದೆ. ಕರ್ನಾಟಕದಲ್ಲಿ ಸಾಕಷ್ಟು ರೈತರು ಈ ಯೋಜನೆಯ ಲಾಭವನ್ನು ಪಡೆದು ಪಡೆದುಕೊಳ್ಳುತ್ತಿದ್ದು ಇದರಿಂದ ರೈತರಿಗೆ ಆರ್ಥಿಕ ನೆರವು ಉಂಟಾಗುತ್ತದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.