‘ಒಂದು ಸರಳ ಪ್ರೇಮ ಕಥೆ’ ಎಂಬ ಚಿತ್ರವನ್ನು ವಿನಯ್ ಅವರು ಮಾಡುತ್ತಿರುವುದು ನಮಗೆಲ್ಲರಿಗೂ ತಿಳಿದೆ ಇದೆ. ಇವರನ್ನು ಸಂದರ್ಶನಕಾರರೊಬ್ಬರು ಭೇಟಿಯಾದಾಗ, ‘ಯುವ ಟೈಟಲ್ ಯಾಕೆ?..ರಾಜಕುಮಾರ್ ಡೈರೆಕ್ಟರ್ ಜೊತೆ ಸಿನಿಮಾ ಮಾಡಲಿದ್ದೀರಾ?…ಎಲ್ಲರೂ ಫ್ಯಾನ್ ಇಂಡಿಯಾ ಸಿನಿಮಾ ಮಾಡಿದರೆ ನೀವು ಈ ತರ ಯಾಕೆ ಮಾಡುತ್ತಿದ್ದೀರಾ?’ ಎಂದೆಲ್ಲ ಪ್ರಶ್ನೆಗಳನ್ನು ಕೇಳಿದಾಗ ಅವರು ಉತ್ತರ ನೀಡಿದ್ದಾರೆ.
‘ಒಂದು ಸರಳ ಪ್ರೇಮ ಕಥೆ’ ಚಿತ್ರದ ಕುರಿತಾಗಿ ಮಾತನಾಡಿದ ವಿನಯ್ ಅವರು, ‘ಇದೊಂದು ಪ್ರೀತಿ ಹಾಗೂ ಕಾಮಿಡಿ ಎರಡು ಕಂಬೈನ್ ಆಗಿ ಮಾಡಿದ ಚಿತ್ರ. ಇದೊಂದು ರೋಮ್ಯಾಂಟಿಕ್ ಕಾಮಿಡಿ ಚಿತ್ರ ಅಷ್ಟೇ ಅಲ್ಲದೆ ಮ್ಯೂಸಿಕಲ್ ಲವ್ ಸ್ಟೋರಿ ಕೂಡ ಹೌದು. ಯಾಕೆಂದರೆ ಈ ಚಿತ್ರದ ನಾಯಕ ಅಂದರೆ ಅತಿಶಯ ಎಂಬ ಪಾತ್ರ ದಾರಿಯು ಮ್ಯೂಸಿಕ್ ಡೈರೆಕ್ಟರ್ ಆಗಲು ಇಷ್ಟಪಟ್ಟಿರುತ್ತಾನೆ. ಈ ಅತಿಶಯನ ಪಾತ್ರವನ್ನು ನಾನೇ ಮಾಡುತ್ತಿದ್ದೇನೆ. ಈ ಚಿತ್ರದಲ್ಲಿ ಸಾಕಷ್ಟು ಹಾಡುಗಳಿವೆ. ಐದು ಹಾಡುಗಳೊಂದಿಗೆ ತುಂಬಾ ಮ್ಯೂಸಿಕಲ್ ಬೀಟ್ಸ್ಗಳಿವೆ’ ಎಂದರು.
ವಿನಯ್ ಅವರು ಇತ್ತೀಚೆಗೆ ಮಾಡುತ್ತಿರುವ ಚಿತ್ರದ ಪೋಸ್ಟರ್ ಬೇರೆ ಚಿತ್ರಗಳಿಗೆ ಹೋಲಿಸಿದರೆ ತುಂಬಾ ವಿಭಿನ್ನವಾಗಿದೆ. ಚಿತ್ರದ ಪೋಸ್ಟರ್ಗಳಲ್ಲಿ ಸಾಮಾನ್ಯವಾಗಿ ನಾಯಕ ನಟನನ್ನು ಅಥವಾ ನಟಿಯನ್ನು ಹೈಲೈಟ್ ಮಾಡಿರಲಾಗುತ್ತದೆ. ಆದರೆ ಈ ಚಿತ್ರದಲ್ಲಿ ಜನರ ಮಧ್ಯೆ ಇರುವ ನಾಯಕನ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಆ ಬಗ್ಗೆ ಪ್ರಶ್ನೆಸಿದಾಗ ವಿನಯ್ ಅವರು, ‘ಇದು ಚಿತ್ರದ ಕಥೆಗೆ ತಕ್ಕನಾಗಿದೆ. ಚಿತ್ರದ ಟ್ಯಾಗ್ ಹೇಳುವ ಹಾಗೆ ಇದೊಂದು ವಿರಳ ಕಥೆಯು ಹೌದು.
ಸರಳ ಕಥೆಯು ಹೌದು. ಪ್ರತಿಯೊಬ್ಬರ ಮನೆಯಲ್ಲಿಯೂ ಇಂತಹ ಘಟನೆಯು ನಡೆಯುತ್ತದೆ’ ಎಂದರು. ಹಿಂದಿನ ಚಿತ್ರವನ್ನು ಗಮನಿಸಿದರೆ ವಿನಯ್ ಅವರು, ಸಕ್ಕತ್ ಟಫ್ ಆಗಿ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಚಿತ್ರದಲ್ಲಿ ಫುಲ್ ಕ್ಲಾಸ್. ವೃತ್ತಿ ಜೀವನದ ಪ್ರಾರಂಭಿಕ ದಿನಗಳಲ್ಲಿಯೇ ಈ ರೀತಿಯಾಗಿ ವಿಭಿನ್ನ ಚಿತ್ರಗಳು ವಿನಯವರನ್ನು ಹುಡುಕಿಕೊಂಡು ಬರುತ್ತಾ ಇರುವುದಕ್ಕೆ ಅವರಿಗೆ ಹೆಮ್ಮೆಗಿಂತಲೂ ಜಾಸ್ತಿ, ಖುಷಿ ಇದೆಯಂತೆ. ತನ್ನನ್ನು ಎಲ್ಲಾ ದೃಷ್ಟಿಯಲ್ಲಿಯೂ ನೋಡಿ ಚಿತ್ರಕಥೆಗಳನ್ನು ಬರೆದು ತರುತ್ತಿರುವುದಕ್ಕೆ ವಿನಯ್ ಅವರಿಗೆ ಸಂತಸವಾಗಿದೆಯಂತೆ.
‘ಇತ್ತೀಚಿನ ದಿನಗಳಲ್ಲಿ ಫ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿದ್ದಾರೆ. ನೀವೇಕೆ ಸ್ಕ್ರಿಪ್ಟ್ ಒರಿಯೆಂಟೆಡ್ ಅಥವಾ ಜನಕ್ಕೆ ತುಂಬಾ ಹತ್ತಿರವಾಗುವಂತಹ ಚಿತ್ರಗಳನ್ನು ಮಾಡುತ್ತಿದ್ದೀರಿ?’ ಎಂದು ಪ್ರಶ್ನೆಸಿದಾಗ ವಿನಯ್ ಅವರು, ‘ಪ್ಯಾನ್ ಇಂಡಿಯಾ ಸಿನಿಮಾವನ್ನು ಅವರವರ ಸ್ಕ್ರಿಪ್ಟ್ ಗೆ ತಕ್ಕನ ಹಾಗೆ ನೋಡಿಕೊಂಡು ಮಾಡುತ್ತಿದ್ದಾರೆ. ಚಿತ್ರದ ಕಥೆ ತುಂಬಾ ಚೆನ್ನಾಗಿದ್ದರೆ ಅದಾಗಿಯೇ ಫ್ಯಾನ್ ಇಂಡಿಯಾ ಸಿನಿಮಾ ಆಗುತ್ತದೆ’ ಎಂದಿದ್ದಾರೆ.
‘ನಿಮ್ಮ ತಮ್ಮ ಕೂಡ ಇಂಡಸ್ಟ್ರಿಗೆ ಬಂದಿದ್ದಾರೆ..ಅವರ ಚಿತ್ರದ ಟೀಸರ್ ಈಗಾಗಲೇ ಅಭಿಮಾನಿಗಳಿಗೆ ತುಂಬಾ ಇಷ್ಟ ಆಗಿದೆ..ಇದರ ಬಗ್ಗೆ ಹಾಗೂ ‘ಯುವ’ ಎಂಬ ಟೈಟಲ್ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂಬ ಪ್ರಶ್ನೆ ಹಾಕಿದ್ದಾರೆ. ಇದಕ್ಕೆ ಉತ್ತರಿಸಿದ ವಿನಯ ಅವರು, ‘ತಮ್ಮನ ಚಿತ್ರದ ಬಗ್ಗೆ ನನಗೂ ಖುಷಿ ಇದೆ. ನಾನು ಕೂಡ ಆತನ ಅಭಿಮಾನಿ. ಇನ್ನು ಯುವ ಎಂಬ ಟೈಟಲ್ ಚಿತ್ರಕ್ಕೆ ಒಪ್ಪುತ್ತದೆ. ನಮಗೆಲ್ಲರಿಗೂ ಗುರು ಎಂದು ಗೊತ್ತು. ಆದರೆ ಜನರಿಗೆಲ್ಲರಿಗೂ ಯುವ ಎಂಬುದಾಗಿ ಪರಿಚಯ. ಯುವ ಅಂತಾನೆ ಎಲ್ಲರ ಬಾಯಲ್ಲಿ ಇದ್ದರೆ ಇನ್ನು ಚೆನ್ನಾಗಿರುತ್ತೆ ಎಂಬ ಕಾರಣಕ್ಕಾಗಿ ಆ ಟೈಟಲ್ ಇಟ್ಟಿರೋದು’ ಎಂದರು.
‘ರಾಜಕುಮಾರ ಚಿತ್ರದ ಖ್ಯಾತಿಯ ನಿರ್ದೇಶಕರಾದ ಸಂತೋಷ್ ಅವರೊಂದಿಗೆ ಚಿತ್ರವನ್ನು ಮಾಡುವ ಯಾವುದೇ ಪ್ಲಾನ್ಗಳಿಲ್ಲ. ಆದರೆ ಅವರೊಬ್ಬ ಒಳ್ಳೆಯ ನಿರ್ದೇಶಕರು. ಅವರೊಂದಿಗೆ ಚಿತ್ರ ಮಾಡುವ ಅವಕಾಶ ದೊರೆತರೆ, ನನಗೆ ತುಂಬಾ ಖುಷಿ ನೀಡುತ್ತದೆ’ ಎಂದು ವಿನಯ್ ಅವರು ಹೇಳಿದ್ದಾರೆ.