Thursday, September 28, 2023
Home cinema news ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಪ್ರಿಯಾಂಕ ಅಭಿನಯದ "ಮಲ್ಲ" ಸಿನಿಮಾ ಆ ಕಾಲದಲ್ಲಿ ಮಾಡಿದ್ದ ಕಲೆಕ್ಷನ್ ಎಷ್ಟು...

ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಪ್ರಿಯಾಂಕ ಅಭಿನಯದ “ಮಲ್ಲ” ಸಿನಿಮಾ ಆ ಕಾಲದಲ್ಲಿ ಮಾಡಿದ್ದ ಕಲೆಕ್ಷನ್ ಎಷ್ಟು ಗೊತ್ತ.?

“ಮಲ್ಲ” ಚಿತ್ರವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರೇ ದ್ವಿಪಾತ್ರಗಳಲ್ಲಿ ಬರೆದು ನಿರ್ದೇಶಸಿ ಸಂಯೋಜಿಸಿದ್ದಾರೆ. ಈ ಚಿತ್ರವನ್ನು ರಾಮ ಅವರು ತಮ್ಮ ಹೋಂ ಬ್ಯಾನರ್ ರಾಮ್ ಎಂಟರ್ಪ್ರೈಸಸ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಇದು ರವಿಚಂದ್ರನ್ ಅವರ ಮೊದಲ ತಂಡ. ಇದೊಂದು ರೋಮ್ಯಾಂಟಿಕ್ ಡ್ರಾಮಾ ಮೂವಿ. ಕನ್ನಡ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ದೇಶಕರಾದ ಕ್ರೇಜಿಸ್ಟಾರ್ ರವಿಚಂದ್ರನ್ ಅವರೇ ಚಿತ್ರದ ನಾಯಕರಾಗಿದ್ದು.

ಜೊತೆಯಾಗಿ ತೆರೆಯಲ್ಲಿ ಕಾಣಿಸಿಕೊಂಡವರು ಪ್ರಿಯಾಂಕ ಉಪೇಂದ್ರ ಅವರು. 2014ರಲ್ಲಿ ತೆರೆಕಂಡ ಈ ಚಿತ್ರವು ಕನ್ನಡದ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಹಣವನ್ನು ಗಳಿಸಿದ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಚಿತ್ರದಲ್ಲಿ ದೊಡ್ಡಣ್ಣ, ಅವಿನಾಶ್, ರಂಗಾಯಣ ರಘು, ಮತ್ತು ಸಾಧು ಕೋಕಿಲ ಮುಂತಾದ ಕಲಾವಿದರನ್ನು ಒಳಗೊಂಡು, ಜನರಿಗೆ ಮನರಂಜನೆಯನ್ನು ನೀಡಿ ಗಲ್ಲಾ ಪೆಟ್ಟಿಗೆಯಲ್ಲಿ ಕೋಟಿ ಕೋಟಿ ಹಣಗಳನ್ನು ಮಾಡಿತ್ತು.

ಮಲ್ಲನ ಪ್ರೀತಿ ಹಾಗೂ ಕುಟುಂಬದ ನಿರ್ವಹಣೆಯೇ ಚಿತ್ರದ ಮೂಲ ಕಥೆ. ಮಲ್ಲನು ಪ್ರಿಯಾಳನ್ನು ಮನಸಾರೆ ಒಪ್ಪಿ ಪ್ರೀತಿಸುತ್ತಾನೆ. ಕುಟುಂಬದ ಎದುರಲ್ಲಿ ನಿಷ್ಠೆಯನ್ನು ತೋರಿಸಿ, ಮರ್ಯಾದೆ ಗೌರವವನ್ನು ಉಳಿಸಿಕೊಂಡು ಹೋಗುವ ಮತ್ತು ಪ್ರೀತಿಯನ್ನು ಆಯ್ದುಕೊಳ್ಳುವ ಪ್ರಸಂಗವು ಎದುರಾದಾಗ ಚಿತ್ರವು ಪಡೆದುಕೊಳ್ಳುತ್ತದೆ. ಚಿತ್ರದ ಕಥೆ ವಸ್ತುವು ಮಲ್ಲನಲ್ಲಿಯೇ ಕೇಂದ್ರೀಕೃತವಾಗಿದ್ದು, ಆತ್ಮೀಯತೆಯ ದೃಶ್ಯಗಳು ಮತ್ತು ಪತಿ-ಪತ್ನಿಯರ ನಡುವಿನ ಸಂಬಂಧವನ್ನು ಎತ್ತಿ ತೋರಿಸುತ್ತದೆ.

ಈ ಚಿತ್ರವು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ ಆದರೂ ಪತಿ-ಪತ್ನಿಯರ ದೃಶ್ಯ ಅವಳಿಗಳು ಮಹಿಳಾ ಪ್ರೇಕ್ಷಕರನ್ನು ಮತ್ತಷ್ಟು ಚಿತ್ರದ ಕಡೆ ಆಕರ್ಷಿಸಿ ನೋಡುವಂತೆ ಮಾಡಿದೆ. ಮಲ್ಲನ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಅಭಿನಯಿಸಿದ್ದು, ಪ್ರಿಯಾಳ ಪಾತ್ರದಲ್ಲಿ ಪ್ರಿಯಾಂಕ ಉಪೇಂದ್ರ ಅವರು ನಟಿಸಿ, ಇವರಿಬ್ಬರ ಜೋಡಿಯು ತೆರೆಯ ಮೇಲೆ ಸಕ್ಕತ್ ಮೋಡಿ ಮಾಡಿತ್ತು.

ಕೇರಳ ಮೂಲದ ಪ್ರಸಿದ್ಧ ಸಾಂಪ್ರದಾಯಿಕ ಕಲೆ ಕಲರಿಪ್ಪಯಟ್ಟು ಅನ್ನು ಕನ್ನಡ ಸಿನಿಮಾ ರಂಗದಲ್ಲಿ ಪರಿಚಯಿಸಿದ ಮೊದಲ ಚಿತ್ರವೆಂಬ ಹೆಗ್ಗಳಿಕೆಗೆ ಈ ‘ಮಲ್ಲ’ ಚಿತ್ರವು ಪಾತ್ರವಾಗಿತ್ತು. ಚಿತ್ರದ ಬಳಿಕ ಸ್ಟಂಟ್ ಮಾಸ್ಟರ್ ಕೇಡಿ ವೆಂಕಟೇಶ್ ಅವರಿಗೆ ವಿಶೇಷ ವಿಭಾಗದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ಈ ಚಿತ್ರವು ಎಲ್ಲಾ ವರ್ಗದ ಅಂದರೆ ಎಲ್ಲಾ ವಯಸ್ಸಿನ ಜನರು ಇಷ್ಟಪಡುವಂತೆ ಇತ್ತು. ಚಿತ್ರದಲ್ಲಿ ಪ್ರೀತಿ ಹಾಸ್ಯ ಆಕ್ಷನ್ ಕ್ರೌರ್ಯ ದುಃಖ ಗ್ಲಾಮರ್ ಎಲ್ಲವೂ ಸೊಗಸಾಗಿ ಮೂಡಿಬಂದಿತ್ತು. ವಿಭಿನ್ನ ರೀತಿಯ ಸೆಟ್ ಗಳನ್ನು ಹಾಕುವುದರಲ್ಲಿ ಪ್ರಸಿದ್ಧಿಯನ್ನು ಪಡೆದ ರವಿಚಂದ್ರನ್ ಅವರು ಕೈ ಆಕಾರದ ಮಲಗುವ ಹಾಸಿಗೆಯೊಂದನ್ನು ಸಿದ್ಧಪಡಿಸುವ ಮೂಲಕ ಈ ಚಿತ್ರದಲ್ಲಿಯೂ ಪ್ರದರ್ಶಿಸಿದ್ದರು. ಅಂಜದಗಂಡು ಚಿತ್ರದ ಕೆಲವು ಸನ್ನಿವೇಶಗಳನ್ನು ಮಲ್ಲ ಚಿತ್ರವು ನೆನಪಿಸುತ್ತಿತ್ತು.

“ಯಮ್ಮೋ ಯಮ್ಮೋ” ಹಾಡನ್ನು ಶ್ರೀನಿವಾಸ್ ಹಾಗೂ ಅನುರಾಧ ಶ್ರೀರಾಮ್, “ಕರುನಾಡೆ” ಹಾಡನ್ನು ಎಲ್ಎನ್ ಶಾಸ್ತ್ರಿ, “ಈ ಪ್ರೀತಿಯ ಮರೆತು” ಹಾಡನ್ನು ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಗೂ ಚಿತ್ರಾ, “ಒಳಗಿರೋದು” ಹಾಡನ್ನು ಉದಿತ್ ನಾರಾಯಣ್ ಹಾಗೂ ಸುಮಾ ಶಾಸ್ತ್ರಿ, “ಮಾಂಗಲ್ಯಂ” ಹಾಡನ್ನು ಎಲ್. ಎನ್ ಶಾಸ್ತ್ರಿ ಹಾಗೂ ಸುಮಾ ಶಾಸ್ತ್ರಿ, “ಬಂಗಾಡಿ” ಹಾಡನ್ನು ಮನೋ ಹಾಗೂ ಕೆಎಸ್ ಚಿತ್ರಾ ಹಾಡಿದ್ದಾರೆ.

ಅನೇಕ ಪ್ರಣಯದ ದೃಶ್ಯಗಳನ್ನು ಹೊಂದಿ, ಪ್ರೇಕ್ಷಕರನ್ನು ಸೆಳೆದು, ಜನಪ್ರಿಯಗೊಂಡ ಮಲ್ಲ ಚಿತ್ರವು ಹಿಟ್ ಆಗಲು ಕಥಾವಸ್ತು ಪ್ರಭಾವಶಾಲಿ ಪಾತ್ರ ವರ್ಗ ಹಾಗೂ ಮರೆಯಲಾಗದ ಹಾಡುಗಳು ಕೂಡ ಕಾರಣವಾಯಿತು. ಈ ಚಿತ್ರವು ಅಂದಿನ ಕಾಲದಲ್ಲಿಯೇ ಎಂಟು ಕೋಟಿಗಿಂತಲೂ ಅಧಿಕ ಹಣವನ್ನು ಗಳಿಸಿತ್ತು. ಅಲ್ಲದೆ ಐದು ವರ್ಷಗಳ ಕಾಲ ಪೂರ್ಣ ಪ್ರದರ್ಶನಗಳೊಂದಿಗೆ ಓಡಿತ್ತು.

- Advertisment -