ನಾವು ಆಸ್ತಿಯನ್ನು ಹೊಂದಿದ್ದರೆ ಸಾಲದು ಆಸ್ತಿಗೆ ಸಂಬಂಧ ಪಟ್ಟಂತಹ ಎಲ್ಲಾ ಪತ್ರಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ನಾವು ಹೊಸದಾಗಿ ಖರೀದಿ ಮಾಡಿದಂತಹ ಆಸ್ತಿಯ ಪತ್ರ ಹಾಗೂ ನಮಗೆ ಪಿತ್ರಾರ್ಜಿತವಾಗಿ ಅಥವಾ ಸ್ವಯಾರ್ಜಿತವಾಗಿ ಬಂದಂತಹ ಆಸ್ತಿ ಪತ್ರಗಳನ್ನು ನಾವು ಜೋಪಾನವಾಗಿ ಮನೆಯಲ್ಲಿ ಅಥವಾ ಬ್ಯಾಂಕ್ ನಲ್ಲಿ ಇಡುವುದು ತುಂಬಾ ಉತ್ತಮ. ಆಸ್ತಿ ಪತ್ರ ಕಳುವಾದರೆ ತಕ್ಷಣ ಏನು ಮಾಡಬೇಕು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವಂತಹ ಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿ ತಿಳಿಸಲಾಗಿದೆ.
ನಮ್ಮ ಆಸ್ತಿಯ ಪತ್ರ ಕಳ್ಳತನವಾದ ತಕ್ಷಣ ನಾವು ಈ ಕೆಳಕಂಡಂತಹ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
* ನಿಮ್ಮ ಆಸ್ತಿಯ ಪತ್ರ ಕಳ್ಳತನ ವಾಗಿದ್ದರೆ ಅಥವಾ ಕಳೆದುಕೊಂಡಿದ್ದರೆ ಮೊದಲಿಗೆ ನೀವು ಯಾವ ಏರಿಯಾ ಲಿಮಿಟ್ ನಲ್ಲಿ ಕಳ್ಳತನವಾಗಿರುತ್ತದೆಯೋ ಅಲ್ಲಿರುವಂತಹ ಪೊಲೀಸ್ ಠಾಣೆಯಲ್ಲಿ ನೀವು FIR ದಾಖಲೆ ಮಾಡಬೇಕು.
* FIR ದಾಖಲು ಮಾಡಿರುವಂತಹ ಅಕ್ನಾಲೆಡ್ಜ್ಮೆಂಟ್ ನೀವು ತೆಗೆದುಕೊಳ್ಳಿ ಯಾಕೆಂದರೆ ಇದು ಬಹಳ ಮುಖ್ಯವಾದಂತಹ ದಾಖಲೆ ಆಗಿರುವುದರಿಂದ ಇದನ್ನು ದುರುಪಯೋಗ ಪಡಿಸಿಕೊಳ್ಳುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ.
* ನಿಮ್ಮ ಆಸ್ತಿ ಇರುವ ಜಾಗಕ್ಕೆ ಸೇರಿದ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಹೋಗಿ ದಾಖಲಾತಿ ಕಳೆದುಹೋಗಿದೆ ಅಥವಾ ಕಳ್ಳತನವಾಗಿದೆ ಎಂದು ಒಂದು ಕಂಪ್ಲೇಂಟ್ ನೀಡಿ.
* ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಇರುವ ದಾಖಲಾತಿಯಲ್ಲಿ ಕಳ್ಳತನವಾಗಿರುವುದನ್ನು ಉಲ್ಲೇಖ ಮಾಡಿದರೆ ಇದರಿಂದ ಆಸ್ತಿಪತ್ರದ ವರ್ಗಾವಣೆ ಮಾಡುವುದು ಅಥವಾ ಇನ್ನಿತರ ಯಾವುದೇ ಕ್ರಮಗಳನ್ನು ಕೈಕೊಂಡರೆ ನಿಮಗೆ ತಿಳಿಯುತ್ತದೆ.
* ಯಾರಾದರೂ ನಮ್ಮ ಆಸ್ತಿಪತ್ರಗಳ ಮೇಲೆ ವ್ಯವಹಾರ ಮಾಡಲು ಬಂದರೆ ತಪ್ಪದೇ ನಮಗೆ ತಿಳಿಸಿ ಎಂದು ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ನೀವು ಹೇಳಿ.
* ನಿಮ್ಮ ಅಸ್ತಿ ಪತ್ರದ ದಾಖಲಾತಿಗಳು ಬೇಕಾಗಿದ್ದರೆ ನೀವು ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಸರ್ಟಿಫೈಡ್ ಕಾಫಿಗೆ ಅಪ್ಲೈ ಮಾಡಿ ಪಡೆದುಕೊಳ್ಳಿ ಸೀಲು ಮತ್ತು ಸೈನ್ ಹಾಕಿಸಿಕೊಳ್ಳಿ.
* ಸರ್ಟಿಫೈಡ್ ಕಾಪಿ ಮೂಲ ದಾಖಲಾತಿ ರೀತಿಯಲ್ಲಿಯೇ ಇರುತ್ತದೆ ಇದನ್ನು ನೀವು ಯಾವುದೇ ವ್ಯವಹಾರಗಳಿಗೆ ಬೇಕಾದರೂ ಬಳಸಬಹುದು.
* ನಂತರ ನೀವು ವಕೀಲರ ಮುಖಾಂತರ ಕೋರ್ಟಿನಲ್ಲಿ ಡಿಕ್ಲೆರೇಷನ್ ಸೂಟ್ ಅನ್ನು ಹಾಕಿ ಆಸ್ತಿ ಪತ್ರಗಳು ಕಳ್ಳತನವಾಗಿದೆ ಇದರ ಮಾಲೀಕ ನಾನೇ ಎಂದು ಕೋರ್ಟ್ ನ ಮುಖಾಂತರ ನೀವು ಪಡೆದುಕೊಳ್ಳಬೇಕು.
ಆಸ್ತಿಯ ದಾಖಲಾತಿಗಳು ಕಳ್ಳತನವಾಗಿದೆ ಎಂದು ದಿನಪತ್ರಿಕೆಗಳಲ್ಲಿ ನೀವು ನಮೂದಿಸಿ ಎಲ್ಲಾದರೂ ಸಿಕ್ಕರೆ ತಂದು ಕೊಡಿ ಎಂದು ನೀವು ಪ್ರಕಟಣೆ ನೀಡಬಹುದು. ಇದು ಕಳ್ಳತನ ವಾಗಿದ್ದರೆ ಅಥವಾ ಕಳೆದು ಹೋಗಿದ್ದರೆ ಯಾರಿಗೆ ಸಿಕ್ಕಿರುತ್ತದೆ ಅಂತಹವರಿಗೆ ನೋಟಿಸ್ ಅನ್ನು ನೀಡಿದ ಹಾಗೆ ಆಗುತ್ತದೆ ಅವರು ಎಚ್ಚರಿಕೆಯಿಂದ ಪೊಲೀಸ್ ಠಾಣೆಯ ಮೆಟ್ಟಿಲು ಅಥವಾ ಕೋರ್ಟ್ ನ ಮೆಟ್ಟಿಲು ಹತ್ತಬೇಕಾಗುತ್ತದೆ ಎನ್ನುವ ಕಾರಣದಿಂದ ನಿಮ್ಮ ಆಸ್ತಿ ಪತ್ರಗಳನ್ನು ನಿಮಗೆ ಹಿಂದಿರುಗಿಸುವಂತಹ ಸಾಧ್ಯತೆ ಬಹಳಷ್ಟು ಇರುತ್ತದೆ.
ಕೋರ್ಟ್ ಎಲ್ಲ ಮಾಹಿತಿಗಳನ್ನು ಪರಿಶೀಲಿಸಿ ಆಸ್ತಿಯ ದಾಖಲಾತಿಗಳು ನಿಮ್ಮದೇ ಎಂದು ಡಿಕ್ಲೆರೇಶನನ್ನು ಕೊಡುತ್ತದೆ. ಕಾನೂನಿನ ಮುಖಾಂತರ ನಾವು ಈ ರೀತಿಯಾದಂತಹ ಕ್ರಮಗಳನ್ನು ಕೈಗೊಂಡು ಆಸ್ತಿಯ ಪತ್ರವನ್ನು ಪಡೆದುಕೊಳ್ಳಬೇಕು ಇಲ್ಲವಾದರೆ ಆಸ್ತಿ ನಮ್ಮ ಕೈತಪ್ಪಿ ಹೋಗುವಂತಹ ಅವಕಾಶಗಳು ಬಹಳಷ್ಟು ಇರುತ್ತದೆ. ಆಸ್ತಿ ಪತ್ರ ಕಳುವಾಗಿದ್ದರೆ ಅಥವಾ ಕಳೆದುಕೊಂಡಿದ್ದರೆ ಚಿಂತಿಸುವಂತಹ ಅಗತ್ಯವಿಲ್ಲ ಕಾನೂನಿನ ಮುಖಾಂತರ ಮೇಲೆ ತಿಳಿಸಿದಂತಹ ಎಲ್ಲ ಕ್ರಮಗಳನ್ನು ಕೈಗೊಂಡರೆ ಕೆಲವೇ ದಿನಗಳಲ್ಲಿ ನಿಮ್ಮ ಅಸ್ತಿ ಪತ್ರ ನಿಮ್ಮ ಕೈ ಸೇರುತ್ತದೆ ಅದನ್ನು ನಾವು ಎಷ್ಟು ಎಚ್ಚರಿಕೆಯಿಂದ ಇಡುತ್ತೇವೆ ಅಷ್ಟು ನಿಮಗೆ ಒಳ್ಳೆಯದು.
ಆಸ್ತಿ ಪತ್ರ ಕಳುವಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಳ್ಳದಿದ್ದರೆ ಅಥವಾ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಇದರ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಇದ್ದರೆ ಅದಕ್ಕೂ ಸಹ ಕೋರ್ಟ್ ನ ಮೆಟ್ಟಿಲನ್ನು ಏರಿ ನ್ಯಾಯ ಪಡೆದುಕೊಳ್ಳಬಹುದು. ಕಳೆದುಕೊಂಡು ವ್ಯಥೆ ಪಡುವ ಬದಲು ಅದನ್ನು ಇರುವಾಗಲೇ ಜೋಪಾನವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯ.