ನಮ್ಮ ಭಾರತದಲ್ಲಿ ಕಾರ್ಮಿಕರ ಸಂಖ್ಯೆಯ ಅತಿ ಹೆಚ್ಚಾಗಿ ಕಂಡು ಬಂದು ಕಾರ್ಮಿಕರಿಗೆ ಒಂದೇ ಕಡೆ ಕೆಲಸ ಇರುತ್ತದೆ ಎಂದು ಹೇಳಲು ಆಗುವುದಿಲ್ಲ ಏಕೆಂದರೆ ಅವರು ಕೆಲಸವನ್ನು ಅರಸಿ ತಾವು ಇರುವಂತಹ ಸ್ಥಳವನ್ನು ಬಿಟ್ಟು ಬೇರೆ ಕಡೆ ವಲಸೆ ಹೋಗುವಂತಹ ಸಂದರ್ಭಗಳು ಸಾಕಷ್ಟು ಜನ ಕಾರ್ಮಿಕರಿಗೆ ಎದುರಾಗುತ್ತದೆ ಅಂತಹವರು ತಾವು ಕೆಲಸ ಮಾಡುವಂತಹ ಸ್ಥಳಗಳಲ್ಲಿ ವಲಸೆ ಹೋಗಿ ಸ್ವಂತ ಮನೆಯನ್ನು ಮಾಡಲು ಸಾಧ್ಯವಿಲ್ಲ ಅಂತಹವರಿಗಾಗಿ ಕೇಂದ್ರ ಸರ್ಕಾರ ಶ್ರಮಿಕ್ ನಿವಾಸಿ ಎನ್ನುವಂತಹ ಯೋಜನೆಯ ಮೂಲಕ ಸ್ವಂತ ಮನೆಗಳನ್ನು ಕಾರ್ಮಿಕರಿಗೆ ನೀಡಬೇಕು ಎನ್ನುವಂತಹ ಉದ್ದೇಶವನ್ನು ಹೊಂದಿದೆ.
ಶ್ರಮಿಕ್ ನಿವಾಸ್ ಈ ಯೋಜನೆಯ ಅಡಿಯಲ್ಲಿ ನರೇಂದ್ರ ಮೋದಿ ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಕಾರ್ಮಿಕರು ಉಚಿತವಾಗಿ ತಾವು ವಲಸೆ ಹೋಗಿ ಕೆಲಸ ಮಾಡುವ ಸ್ಥಳಗಳಲ್ಲಿ ಉಚಿತ ಮನೆಗಳನ್ನು ಪಡೆದುಕೊಳ್ಳಬಹುದಾಗಿದೆ. ಕಾರ್ಮಿಕರು ಉಚಿತವಾದಂತಹ ಹೊಸ ಮನೆಗಳನ್ನು ಪಡೆದುಕೊಳ್ಳಲು ಕಾರ್ಮಿಕ ಕಾರ್ಡ್ ಅಂದರೆ ಲೇಬರ್ ಕಾರ್ಡ್ ಅತ್ಯಗತ್ಯ ವಾಗಿ ಇದ್ದೇ ಇರುತ್ತದೆ ಈ ಒಂದು ಲೇಬರ್ ಕಾರ್ಡನ್ನು ನೀವು ಹೊಂದಿದ್ದರೆ ಎಲ್ಲಿ ಬೇಕಾದರೂ ಉಚಿತವಾದ ಮನೆಗಳನ್ನು ಪಡೆದುಕೊಳ್ಳಬಹುದು.
ಕಾರ್ಮಿಕರು ವಲಸೆ ಹೋಗಿ ದುಡಿಯುವಂತಹ ಸಂದರ್ಭದಲ್ಲಿ ಅವರಿಗೆ ವಸತಿಯ ಅವಶ್ಯಕತೆ ಇರುತ್ತದೆ ಅವರಿಗೆ ಯಾವುದೇ ಕೊರತೆಯಾಗಬಾರದು ಎನ್ನುವಂತಹ ದೃಷ್ಟಿಕೋನದಿಂದ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸುವಲ್ಲಿ ಸಿದ್ಧವಾಗಿದೆ ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಟ್ಟಡಗಳ ನಿರ್ಮಾಣವಾಗಿ ಉದ್ಘಾಟನೆಗೂ ಸಹ ಸಿದ್ಧವಾಗಿದೆ. ಕೇವಲ ಚಿಕ್ಕಬಳ್ಳಾಪುರ ಮಾತ್ರವಲ್ಲದೆ ಇಡೀ ದೇಶದಾದ್ಯಂತ ಇಂತಹ ಕಟ್ಟಡಗಳು ತಲೆಯೆತ್ತಿ ನಿಲ್ಲುವಂತೆ ಸರ್ಕಾರ ಎಲ್ಲಾ ಯೋಜನೆಗಳನ್ನು ರೂಪಿಸಿಕೊಂಡಿದೆ. ಉಚಿತವಾದ ಮನೆಗಳನ್ನು ಪಡೆದುಕೊಳ್ಳಲು ನಿಮ್ಮ ಬಳಿ ಲೇಬರ್ ಕಾರ್ಡ್ ಇರಬೇಕು ಲೇಬರ್ ಕಾರ್ಡ್ ಇಲ್ಲವಾದರೆ ಸೇವಾ ಸಿಂಧು ಕಚೇರಿಗೆ ಹೋಗಿ ನೀವು ಲೇಬರ್ ಕಾರ್ಡನ್ನು ಮಾಡಿಸಿಕೊಳ್ಳುವ ಮೂಲಕ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
ಸಾಕಷ್ಟು ಜನರಿಗೆ ಬೇರೆ ಕಡೆ ಕೆಲಸ ಸಿಗುತ್ತಿದ್ದರು ಸಹ ಅಲ್ಲಿ ವಸತಿಯ ಸೌಲಭ್ಯ ಇಲ್ಲದ ಕಾರಣ ಹೋಗಲು ಹಿಂದೇಟು ಹಾಕುತ್ತಿರುತ್ತಾರೆ ಅಂತಹವರಿಗೆ ಇನ್ನು ಮುಂದೆ ಯಾವುದೇ ತೊಂದರೆ ಇಲ್ಲದೆ ಉಚಿತ ಮನೆಗಳನ್ನು ಪಡೆದುಕೊಂಡು ತಮ್ಮ ದುಡಿಮೆಯನ್ನು ಮುಂದುವರಿಸಿಕೊಂಡು ಹೋಗಬಹುದು. ಪ್ರತಿಯೊಬ್ಬ ಕಾರ್ಮಿಕರು ಸಹ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು ಇನ್ನು ಮುಂದೆ ಯಾವುದೇ ತೊಂದರೆ ಇಲ್ಲದೆ ನೀವು ಬೇರೆ ಕಡೆ ವಲಸೆ ಹೋಗಿ ಕೆಲಸವನ್ನು ನಿರ್ವಹಿಸಬಹುದು. ಸರ್ಕಾರವು ಕಾರ್ಮಿಕರಿಗಾಗಿ ಮಾಡಿರುವಂತಹ ಈ ಯೋಜನೆಯು ದೇಶ ವ್ಯಾಪಿ ಎಲ್ಲಾ ಕಡೆ ಕಟ್ಟಡಗಳು ನಿರ್ಮಾಣವಾಗಿ ಉದ್ಘಾಟನೆ ಯಾಗಲಿ ಹಾಗೆಯೆ ವಲಸೆ ಕಾರ್ಮಿಕರಿಗೆ ಸಹಾಯವಾಗುವಂತೆ ಮಾಡಲಿ. ವಲಸೆ ಕಾರ್ಮಿಕರು ಕೇವಲ ಲೇಬರ್ ಕಾರ್ಡನ್ನು ತಮ್ಮೊಂದಿಗೆ ಇಟ್ಟುಕೊಂಡಿದ್ದರೆ ಉಚಿತವಾಗಿ ನಿವೇಶನವನ್ನು ಪಡೆದುಕೊಳ್ಳಬಹುದು.
ಸಾಕಷ್ಟು ಕಾರ್ಮಿಕರು ತಮ್ಮ ಕುಟುಂಬಸ್ಥರನ್ನು ಬಿಟ್ಟು ಬೇರೆ ಕಡೆ ಕೆಲಸಕ್ಕೆ ಹೋಗುತ್ತಿದ್ದಾರೆ ಅಂತಹವರಿಗೆ ಯಾವುದೇ ತೊಂದರೆ ಇಲ್ಲದೆ ತಮ್ಮ ಕುಟುಂಬದ ಸದಸ್ಯರೊಂದಿಗೆ ಹೋಗಿ ಅಲ್ಲಿ ನಿವೇಶನವನ್ನು ಪಡೆದುಕೊಂಡು ಜೀವನ ನಡೆಸಬಹುದು. ಈ ಯೋಜನೆಯ ಮುಖ್ಯ ಉದ್ದೇಶ ಎಂದರೆ ನಮ್ಮ ದೇಶದಲ್ಲಿ ಇರುವಂತಹ ಹಲವಾರು ನಿರುದ್ಯೋಗಿಗಳಿಗೆ ಉದ್ಯೋಗ ದೊರಕುವಂತೆ ಆಗಲಿ ಸಾಕಷ್ಟು ಜನರು ಉದ್ಯೋಗ ಸಿಕ್ಕರೂ ಸಹ ಬೇರೆ ಕಡೆ ಹೋಗಿ ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಕುಟುಂಬವನ್ನು ಬಿಟ್ಟು ಉದ್ಯೋಗ ನಿರ್ವಹಿಸಬೇಕು ಎನ್ನುವಂತಹ ದೃಷ್ಟಿಯಿಂದ ಹೋಗಲು ಮನಸ್ಸು ಮಾಡುವುದಿಲ್ಲ ಅಂತಹವರಿಗೆ ಇದು ದೊಡ್ಡ ಒಂದು ಅವಕಾಶ.
ಇನ್ನು ಮುಂದೆ ಎಲ್ಲಾ ಕಾರ್ಮಿಕರು ನಿವೇಶನದ ಚಿಂತೆಯನ್ನು ಬಿಟ್ಟು ತಮ್ಮ ಕೆಲಸವನ್ನು ನಿರ್ವಹಿಸುವತ್ತ ಗಮನಹರಿಸಿದರೆ ಸರ್ಕಾರವೇ ಉಚಿತವಾಗಿ ನಿವೇಶನವನ್ನು ನೀಡುತ್ತದೆ ಈ ರೀತಿಯಾದಂತಹ ಸಾಕಷ್ಟು ಸೌಲಭ್ಯಗಳನ್ನು ಸರ್ಕಾರವು ನಡೆಸುತ್ತಿದ್ದು ಜನರ ಹಿತ ದೃಷ್ಟಿಯಿಂದ ಈ ಎಲ್ಲಾ ಯೋಜನೆಗಳನ್ನು ರೂಪುಗೊಳಿಸುತ್ತಿದೆ ಇದರ ಫಲವನ್ನು ಅರ್ಹ ಫಲಾನುಭವಿಗಳು ಪಡೆದುಕೊಂಡರೆ ದೇಶ ಮುನ್ನಡೆಯಲ್ಲಿ ಸಾಗುತ್ತದೆ. ಈ ವಿಷಯದ ಕುರಿತಾಗಿ ಹೆಚ್ಚಿನ ಮಾಹಿತಿಗಾಗಿ 155214 ಈ ನಂಬರ್ಗೆ ಕರೆ ಮಾಡಿ ತಿಳಿದುಕೊಳ್ಳಬಹುದು. ಈ ಮಾಹಿತಿ ಇಷ್ಟ ಆದರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.