ಜನವರಿ 8ರಂದು ರಾಕಿಂಗ್ ಸ್ಟಾರ್ ಯಶ್ (Rocking Star Yash Birrhday) ಅವರ ಹುಟ್ಟುಹಬ್ಬ. ಕನ್ನಡ ಚಿತ್ರರಂಗವನ್ನು KGF ಸಿನಿಮಾ ಮೂಲಕ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ರಾಕಿ ಬಾಯ್ (Rocky Bai) ಈಗ ಇಂಟರ್ನ್ಯಾಷನಲ್ ಸ್ಟಾರ್. ಇವರಿಗಿರುವ ಅಭಿಮಾನಿಗಳ ಸಂಖ್ಯೆ ಕೋಟಿಗಟ್ಟಲೆ ಇದೆ ಮತ್ತು ಅಭಿಮಾನಿಗಳೆಲ್ಲರೂ ಕೂಡ ಹುಟ್ಟು ಹಬ್ಬದ ಆ ದಿನಕ್ಕಾಗಿ ಅವರಿಗೆ ಕೈಕುಲುಕಿ ವಿಶ್ ಮಾಡುವ ಕ್ಷಣಕ್ಕಾಗಿ ಕಾಯುತ್ತಿರುತ್ತಾರೆ.
ಆದರೆ ಇದೇ ಹುಟ್ಟು ಹಬ್ಬದ ಸಂಭ್ರಮ ಪ್ರತಿ ವರ್ಷ ಯಶ್ ಅವರಿಗೆ ನೋ’ವುಂ’ಟು ಮಾಡುತ್ತಿದೆ. ಈ ಕಾರಣಕ್ಕಾಗಿ ಅವರು ಈ ವರ್ಷ ನನ್ನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸೇರುವುದು ಬೇಡ ನಾನು ಆ ದಿನ ಹೊರಗೆ ಉಳಿಯುತ್ತಿದ್ದೇನೆ ಇರುವಲ್ಲಿಯೇ ಹರಸಿ ಎಂದು ವಿನಮ್ರವಾಗಿ ಪತ್ರ ಬರೆದು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು.
ಅವರ ಅನುಪಸ್ಥಿತಿಯಲ್ಲಿ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದರು ಮತ್ತು ಈ ಮೂಲಕ ನಟನ ಮೇಲಿರುವ ತಮ್ಮ ಅಪಾರವಾದ ಪ್ರೀತಿಯನ್ನು ಪ್ರದರ್ಶಿಸಲು ಹೋಗಿ ನೆನ್ನೆ ಗದಗ್ ಜಿಲ್ಲೆಯ ಲಕ್ಷ್ಮೇಶ್ವರದ ಮೂರು ಜನ ಯುವಕರು ಯಶ್ ಹುಟ್ಟು ಹಬ್ಬದ ಬ್ಯಾನರ್ ಕಟ್ಟುವ ಸಮಯದಲ್ಲಿ ಕರೆಂಟ್ ಶಾಕ್ ಗೆ ತುತ್ತಾಗಿ ಸಾ’ವನ್ನಪ್ಪಿದರು.
ಸರಣಿ ಮುಂದುವರಿದಿದ್ದು ನಿನ್ನೆ ರಾತ್ರಿ ಯಶ್ ಅವರನ್ನು ನೋಡುವ ಹುಚ್ಚಾಟದಿಂದ ಕಾರು ಹಿಂಬಾಲಿಸಿದ ಯುವಕನೊಬ್ಬ ಅ’ಪ’ಘಾ’ತಕ್ಕೀಡಾಗಿ ಚಿಕಿತ್ಸೆ ಫಲಿತದೆ ಇಂದು ಕೊನೆಯುಸಿರೆಳೆದಿದ್ದಾರೆ. ಗದಗದ ಬಿಂಕದಕಟ್ಟಿ ನಿವಾಸಿ ನಿಖಿಲ್ ಗೌಡ ಅಂತಿಮ ವರ್ಷದ ಇಂಜಿನಿಯರ್ ವಿದ್ಯಾರ್ಥಿಯಾಗಿದ್ದು ಯಶ್ ಅವರ ಅಪ್ಪಟ ಅಭಿಮಾನಯಾಗಿದ್ದ.
ಗದಗದ ಲಕ್ಷ್ಮೇಶ್ವರ ಬಳಿ ನೆನ್ನೆ ಕರೆಂಟ್ ಶಾ.ಕ್ ನಿಂದ ಮುರಳಿ, ನವೀನ್, ಹನುಮಂತ ಎಂಬ ಮೂವರು ಯುವಕರು ಮೃ’ತಪಟ್ಟ ಕಹಿ ಸುದ್ದಿ ಕೇಳಿದ ಯಶ್ ರವರು ಅವರು ಕುಟುಂಬಕ್ಕೆ ಸಾಂತ್ವನ ಹೇಳಲು ವಿಷಯ ತಿಳಿದ ಕೂಡಲೆ ಗೋವಾದಿಂದ ಬಂದಿದ್ದರು.
ಯಶ್ ಅವರು ಗದಗಕ್ಕೆ ಬರುತ್ತಿರುವ ಸುದ್ದಿಯನ್ನು ತಿಳಿದ ನಿಖಿಲ್ ಹುಬ್ಬಳ್ಳಿಗೆ ವಾಪಸ್ಸಾಗುವಾಗ ತನ್ನ ಬೈಕಿನಲ್ಲಿ ಯಶ್ ಕಾರ್ ಫಾಲೋ ಮಾಡಿ ಯಶ್ ಅವರನ್ನು ಭೇಟಿಯಾಗಲೇಬೇಕು ಎಂದುಕೊಂಡು ಹಿಂಬಾಲಿಸಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಅ’ಪ’ಘಾ’ತ ಮಾಡಿಕೊಂಡಿದ್ದಾರೆ.
ನಿಖಿಲ್ ಕೂಡ ಗಂಭೀರ ಗಾಯಗೊಂಡಿದ್ದರಿಂದ ಅವರನ್ನು ಕೂಡ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು ಆದರೆ ಇಂದು ಚಿಕಿತ್ಸೆ ಫಲಿಸದೇ ನಿಖಿಲ್ ಆಸ್ಪತ್ರೆಯಲ್ಲಿಯೇ ಸಾ’ವ’ನ್ನಪ್ಪಿದ್ದಾರೆ. ಸದ್ಯ ಆಸ್ಪತ್ರೆ ಬಳಿ ನಿಖಿಲ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ನೆನ್ನೆಯಷ್ಟೇ ಈ ಬಗ್ಗೆ ತಮ್ಮ ನೋ’ವನ್ನು ಹಂಚಿಕೊಂಡಿದ್ದ ಯಶ್ ನನ್ನ ಹುಟ್ಟು ಹಬ್ಬಕ್ಕೆ ಎಂದು ಕೂಡ ಈ ರೀತಿ ಆಗಬಾರದು ಬ್ಯಾನರ್ ಕಟ್ಟಲೇಬೇಕು ಎಂದಿಲ್ಲ, ನನ್ನನ್ನು ನೋಡಲೇಬೇಕು ಎಂದು ಏನು ಇಲ್ಲ. ನೀವು ಇರುವಲ್ಲಿಯೇ ನನ್ನನ್ನು ಹರಸಿದರೆ ಅದೇ ನನಗೆ ದೊಡ್ಡ ಬಹುಮಾನ ಹಾಗೂ ಆಶೀರ್ವಾದ.
ದಯವಿಟ್ಟು ಇನ್ನೂ ಮುಂದೆ ಯಾರು ಈ ರೀತಿ ಮಾಡಬೇಡಿ ಇತ್ತೀಚೆಗೆ ನನಗೆ ನನ್ನ ಹುಟ್ಟುಹಬ್ಬ ಎಂದರೆ ಭ’ಯವಾಗುತ್ತಿದೆ ಈಗ ನನ್ನ ಮೇಲೆ ನನಗೆ ಅ’ಸ’ಹ್ಯ ಮೂಡುತ್ತಿದೆ ನಿಮಗೂ ಕೂಡ ಕುಟುಂಬ ಅರ್ಥಮಾಡಿಕೊಳ್ಳಿ ಎಂದು ದುಃಖಿಸಿದ್ದರು.
ಇನ್ನಾದರೂ ಯುವ ಜನತೆ ಎಚ್ಚೆತ್ತುಕೊಳ್ಳಲಿ ಅಭಿಮಾನ ಅತಿರೇಕವಾಗದಿರಲಿ ಜೀವಕ್ಕಿಂತ ಕುಟುಂಬ ಮುಖ್ಯ, ನಮಗಾಗಿ ಕಾಯುತ್ತಿರುವ ಕುಟುಂಬಕ್ಕಿಂತ ಮಿಗಿಲಾದದ್ದು ಏನು ಇಲ್ಲ ಎನ್ನುವುದು ಮನವರಿಕೆಯಾಗಲಿ ಎನ್ನುವುದೇ ನಮ್ಮ ಅಂಕಣದ ಆಶಯ ಕೂಡ.