ತಮ್ಮ ಯುವರಾಜ್ ಕುಮಾರ್ ಮದುವೆ ಆಗಿ 4 ವರ್ಷವಾದರೂ ಅಣ್ಣ ವಿನಯ್ ರಾಜಕುಮಾರ್ ಇನ್ನು ಯಾಕೆ ಮದುವೆ ಆಗಿಲ್ಲ ಗೊತ್ತಾ.?

 

ಕರ್ನಾಟಕದಲ್ಲಿ ದೊಡ್ಮನೆಯಿಂದೇ ಹೆಸರುವಾಸಿಯಾಗಿರುವ ಡಾಕ್ಟರ್ ರಾಜಕುಮಾರ್ ಅವರದು ಮೂಲತಃ ಕಲಾವಿದರ ಕುಟುಂಬ. ರಾಜಕುಮಾರ್ ತಂದೆಯು ಕೂಡ ನಾಟಕಗಳಲ್ಲಿ ಬಣ್ಣ ಹಚ್ಚಿದ್ದರಿಂದ ಆ ಕಲೆ ಸಹಜವಾಗಿಯೇ ಅಣ್ಣಾವ್ರಿಗೂ ಬಂತು. ಮುತ್ತುರಾಜ್ ಆಗಿದ್ದ ಅಣ್ಣಾವ್ರು ಡಾ.ರಾಜ್ ಕುಮಾರ್ ಆಗಿ ಕರ್ನಾಟಕದ ದಂತಕಥೆ ಆದರು. ವರನಟ, ಮೇರುನಟ, ನಟಸಾರ್ವಬೌಮ ಬಿರುದುಗಳನ್ನು ಪಡೆದುಕೊಳ್ಳುವುದರ ಜೊತೆಗೆ ಕನ್ನಡ ಸಿನಿಮಾ ಇಂಡಸ್ಟ್ರಿ ಕಟ್ಟುವಲ್ಲಿ ದೊಡ್ಡ ಪಾತ್ರ ವಹಿಸಿದರು.

ಡಾ.ರಾಜ್ ಕುಮಾರ್ ಅವರಂತೆ ಅವರ ಹಿಂದೆ ಬಂದ ಅವರ ಕುಟುಂಬದ ಬಹುತೇಕರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಲಾವಿದರಾದರು. ಮಕ್ಕಳಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್ ಮತ್ತು ಅಳಿಯನಾದ ರಾಮಕುಮಾರ್ ಎಲ್ಲರೂ ಸಹ ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಹೀರೋಗಳೇ. ಅಲ್ಲದೆ ಪಾರ್ವತಮ್ಮ ರಾಜಕುಮಾರ್ ಅವರು ವಜ್ರೇಶ್ವರಿ ಕಂಬೈನ್ಸ್ ನಿರ್ಮಿಸಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದರು.

ಈಗ ಮೂರನೇ ತಲೆಮಾರಿನಲ್ಲೂ ಅಣ್ಣಾವ್ರ ಮೊಮ್ಮಕ್ಕಳು ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇದಾಗಲೇ ಶಿವಣ್ಣ ಅವರ ಎರಡನೇ ಮಗಳು ನಿವೇದಿತ ನಿರ್ಮಾಪಕಿಯಾಗಿದ್ದಾರೆ. ಇದರೊಂದಿಗೆ ರಾಮ್ ಕುಮಾರ್ ಅವರ ಇಬ್ಬರು ಮಕ್ಕಳಾದ ಧೀರನ್ ರಾಮ್ ಕುಮಾರ್ ಮತ್ತು ಧನ್ಯ ರಾಮ್ ಕುಮಾರ್ ಅವರು ಕೂಡ ನಾಯಕ ಮತ್ತು ನಾಯಕಿಯಾಗಿ ಲಾಂಚ್ ಆಗಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಚಿತ್ರರಂಗವನ್ನು ಆಳಿದ ರೀತಿ ಮತ್ತು ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ದೇವರಾಗಿ ಕುಳಿತಿರುವ ಬಗ್ಗೆ ಎಲ್ಲರಿಗೂ ಗೊತ್ತಿದೆ.

ಆದರೆ ಅವರ ಮಕ್ಕಳು ಇನ್ನು ಚಿಕ್ಕವರಾದ ಕಾರಣ ಅವರಿನ್ನೂ ಇಂಡಸ್ಟ್ರಿಗೆ ಬರುವ ಬಗ್ಗೆ ಯೋಚಿಸಿಲ್ಲ. ಇನ್ನು ರಾಘವೇಂದ್ರ ರಾಜಕುಮಾರ್ ಅವರ ಇಬ್ಬರು ಮಕ್ಕಳಲ್ಲಿ ಮೊದಲನೇ ಮಗ ವಿನಯ್ ರಾಜಕುಮಾರ್ ಅವರು ಮಾಡಿರುವ ಕೆಲವೇ ಸಿನಿಮಾಗಳಿಂದಲೇ ಕನ್ನಡಿಗರ ಗಮನ ಸೆಳೆದಿದ್ದಾರೆ. ಇವರು ಅಭಿನಯಿಸಿರುವ ಸಿದ್ದಾರ್ಥ ಸಿನಿಮಾ ಮೊದಲ ಸಿನಿಮಾ ಆಗಿದ್ದರೂ ಬಾಲ ಕಲಾವಿದನಾಗಿಯೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಾಣಿಸಿಕೊಂಡಿದ್ದರು ಎನ್ನುವುದು ಅನೇಕರಿಗೆ ತಿಳಿದಿಲ್ಲ.

ಒಡಹುಟ್ಟಿದವರು, ಆಕಸ್ಮಿಕ, ಅನುರಾಗದ ಅಲೆಗಳು ಈ ಸಿನಿಮಾಗಳಲ್ಲಿ ಬಾಲಕಲಾವಿದನಾಗಿ ಕಾಣಿಸಿಕೊಂಡಿದ್ದಾರೆ. ಇವರ ನಟನೆಯ ರನ್ ಆಂಟೋನಿ ಒಂದು ಪ್ರಯೋಗಾತ್ಮಕ ಸಿನಿಮಾ ಆಗಿದ್ದು, ಥಿಯೇಟರ್ ನಲ್ಲಿ ಇದು ಹೆಚ್ಚು ಕಲೆಕ್ಷನ್ ಮಾಡದೆ ಹೋದರು ಕನ್ನಡದಲ್ಲಿ ಹೊಸ ಎಕ್ಸ್ಪರಿಮೆಂಟ್ ಮಾಡಿ ಗೆದ್ದ ಸಿನಿಮಾ ಎಂದು ಹೇಳಬಹುದು. ಇಂದಿಗೂ ಸಹ ಈ ಸಿನಿಮಾ ಕಂಟೆಂಟ್ ಗೆ ಅನೇಕರು ಫಿದಾ ಆಗಿದ್ದಾರೆ. ನಂತರ ಕಾಣಿಸಿಕೊಂಡ ಅನಂತು ವರ್ಸಸ್ ನುಸ್ರತ್ ಸಿನಿಮಾ ಕೆಲ ವಿವಾದಗಳನ್ನು ಹುಟ್ಟು ಹಾಕಿದ್ದರೂ ಚರ್ಚೆಯಿಂದಲೇ ಹಿಟ್ ಆಗ ಸಿನಿಮಾ ಆಗಿದೆ.

ಇನ್ನು ಇವರ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿ ಅಂದೊಂದಿತ್ತು ಕಾಲ ಮತ್ತು ಗ್ರಾಮಾಯಣ ಸಿನಿಮಾಗಳು ಆ ಸಾಲಿನಲ್ಲಿವೆ. ಸಿನಿಮಾ ಬಿಟ್ಟು ಇವರ ವೈಯುಕ್ತಿಕ ವಿಷಯಗಳ ಬಗ್ಗೆ ರಾಜ್ ಕುಟುಂಬಕ್ಕೆ ಸದಾ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತವೆ. ಅದರಲ್ಲಿ ಎದುರಾಗುವ ಮೊದಲ ಪ್ರಶ್ನೆ ಇವರ ಮದುವೆ ಬಗ್ಗೆ. ಕಾರಣ ವಿನ್ನರ್ ರಾಜಕುಮಾರ್ ಅವರಿಗೆ 32 ವರ್ಷ ಆಗಿದೆ. ಜೊತೆಗೆ ಅಣ್ಣಾವ್ರ ಕುಟುಂಬದಲ್ಲಿ ಒಂದು ರೂಢಿ ಇದೆ. ಅದೇನೆಂದರೆ ಯಾರೇ ಹೀರೋಗಳು ಈ ಮನೆಯಿಂದ ಇಂಡಸ್ಟ್ರಿಗೆ ಬಂದರು ಅವರು ಮದುವೆ ಆದ ನಂತರವೇ ಇಂಡಸ್ಟ್ರಿಗೆ ಬರುವುದು.

ಈಗಾಗಲೇ ಶಿವಣ್ಣ ರಾಘಣ್ಣ ಪುನೀತ್ ಮತ್ತು ಯುವ ರಾಜ್ ಕುಮಾರ ದೇ ರೀತಿಯಾಗಿ ಮದುವೆ ಆದ ಬಳಿಕ ಇಂಟರೆಸ್ಟ್ರಿಗೆ
ಬಂದಿದ್ದಾರೆ. ಆದರೆ ವಿನಯ್ ರಾಜಕುಮಾರ್ ಅವರು ಮಾತ್ರ ಮದುವೆಗೆ ಮುನ್ನವೇ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರಿಗಿಂತ ಮೊದಲೇ ತಮ್ಮ ಯುವ ಅವರು 25ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಇನ್ನೂ ಎಲ್ಲೂ ವಿನಯ್ ಅವರ ಮದುವೆ ಬಗ್ಗೆ ಸುದ್ದಿಯೇ ಇಲ್ಲ. ಹಾಗಾಗಿ ಇವರು ಯಾರದೋ ಪ್ರೀತಿಯಲ್ಲಿ ಬಿದ್ದಿದ್ದಾರೆ ಅವರಿಗಾಗಿ ಕಾಯುತ್ತಿದ್ದಾರೆ ಎನ್ನುವ ಊಹಾಪೋಹಗಳು ಜೋರಾಗಿದೆ.

ಇದರ ಬಗ್ಗೆ ಒಮ್ಮೆ ರಾಘಣ್ಣ ಅವರು ಮಾತನಾಡಿ ವಿನಯ್ ರಾಜಕುಮಾರ್ ಕುಟುಂಬದ ಬಹಳ ಜವಾಬ್ದಾರಿ ಹೊತ್ತುಕೊಂಡಿದ್ದಾನೆ. ಜೊತೆಗೆ ಅವನಿಗೆ ಮದುವೆಗಿಂತ ಸಾಧನೆ ಬಗ್ಗೆ ಆಸಕ್ತಿ ಜಾಸ್ತಿ, ಹಾಗಾಗಿ ಅವನೇ ಮದುವೆ ಸದ್ಯಕ್ಕೆ ಬೇಡ ಎಂದು ನಿರ್ಧರಿಸಿರುವುದು. ಅದು ಅವನ ಇಚ್ಛೆಯ ವಿಷಯ ಆಗಿರುವುದರಿಂದ ನಾವು ಸಹ ಫೋರ್ಸ್ ಮಾಡಲು ಹೋಗಿಲ್ಲ. ಸದ್ಯದಲ್ಲೇ ಸಿಹಿ ಸುದ್ದಿ ಕೊಡಲಿದ್ದೇವೆ ಎಂದು ವಿಷಯವನ್ನು ತೇಲಿಸಿದ್ದಾರೆ.

Leave a Comment