ಬಿಗ್ ಬಾಸ್ ಆದ್ಮೇಲೆ ಆಫರ್ ಗಳೇ ಇರಲಿಲ್ಲ ಆಗ ಶಿವಣ್ಣ ನನ್ಗೆ ಹೇಳಿದ್ದು ಒಂದೇ…

 

ಅಪ್ಪು ಹಾಗೂ ಶಿವಣ್ಣ ವಿಜಯ ರಾಘವೇಂದ್ರ ಅವರ ಕಷ್ಟದ ದಿನಗಳಲ್ಲಿ ಹೇಗೆ ಜೊತೆಗಿರುತ್ತಿದ್ದರು ಗೊತ್ತಾ? ಬಿಗ್ ಬಾಸ್ ಇಂದ ಬಂದ ಮೇಲೆ ಆಫರ್ ಗಳೇ ಇಲ್ಲವಾದಾಗ ಕೈ ಹಿಡಿದೋರು ಯಾರು ಗೊತ್ತಾ? ಚಿನ್ನಾರಿ ಮುತ್ತನಾಗಿ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಪಾದಾರ್ಪಣೆ ಮಾಡಿದ ವಿಜಯ ರಾಘವೇಂದ್ರ ಅವರು ಆನಂತರ ಲವರ್ ಬಾಯ್ ಆಗಿ ತಮ್ಮ ಇಮೇಜನ್ನು ಬದಲಾಯಿಸಿಕೊಂಡರು. 20ರ ದಶಕದಲ್ಲಿ ನಿನಗಾಗಿ, ಪ್ರೇಮ ಖೈದಿ, ರೋಮಿಯೋ ಜೂಲಿಯೆಟ್, ಹಾರ್ಟ್ ಬೀಟ್, ಸೇವಂತಿ ಸೇವಂತಿ ಇನ್ನು ಮುಂತಾದ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟು ಯಶಸ್ಸಿನಲ್ಲಿ ಉತ್ತುಂಗದಲ್ಲಿದ್ದರು ವಿಜಯ ರಾಘವೇಂದ್ರ.

ಒಂದು ಸಮಯದ ನಂತರ ಅವರ ಸಿನಿಮಾಗಳು ಸೋಲಲು ಶುರುವಾದವು ಅದೇ ಸಮಯಕ್ಕೆ ಬಿಗ್ ಬಾಸ್ ಕಾರ್ಯಕ್ರಮವನ್ನು ಮೊದಲ ಬಾರಿಗೆ ಕನ್ನಡದ ಕಿರುತೆರೆಯಲ್ಲಿ ಈಟಿವಿ ವಾಹಿನಿ ಪ್ಲಾನ್ ಮಾಡುತ್ತಿತ್ತು. ವಿಜಯ ರಾಘವೇಂದ್ರ ಅವರನ್ನು ಸಂಪರ್ಕಿಸಿ ಮಾತನಾಡಿದಾಗ ಮೊದಲ ಸೀಸನ್ ಎನ್ನುವ ಕೊಂಚವೂ ಅಳುಕಿಲ್ಲದೆ ಮನೆ ಹೊಕ್ಕಿ ತಮ್ಮ ನಿಜವಾದ ವ್ಯಕ್ತಿತ್ವ ಪ್ರದರ್ಶನ ಮಾಡಿ ಕನ್ನಡಿಗರ ಕಣ್ಮಣಿ ಆದರು. ಇದೇ ಕಾರಣಕ್ಕೆ ಆ ಸೀಸನ್ ವಿನ್ನರ್ ಕೂಡ ಆದರು.

ಎಲ್ಲರಿಗೂ ಕೂಡ ಈ ರೀತಿ ರಿಯಾಲಿಟಿ ಶೋ ಇಂದ ಬಂದ ಮೇಲೆ ಆಫರ್ಗಳು ಹೆಚ್ಚಾಗುತ್ತದೆ, ಅದೃಷ್ಟ ಬದಲಾಗುತ್ತದೆ ಎನ್ನುವ ನಂಬಿಕೆ ಇರುತ್ತದೆ. ಅಂತೆಯೇ ಹಲವರು ಭವಿಷ್ಯ ಸಹ ನುಡಿದಿರುತ್ತಾರೆ. ವಿಜಯ ರಾಘವೇಂದ್ರ ಅವರಿಗೂ ಕೆಲವರು ಇದನ್ನೇ ಹೇಳಿದ್ದರು ಆದರೆ ರಾಘು ಅದನ್ನು ಅಷ್ಟೊಂದು ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ. ಆದರೆ ಬಿಗ್ ಬಾಸ್ ಇಂದ ಬಂದ ಮೇಲೆ ಏನಾದರೂ ಹೊಸ ರೀತಿ ಬದಲಾವಣೆ ಆಗಬಹುದೆಂದು ನಿರೀಕ್ಷಿಸಿದ್ದರು. ಅದು ಕೂಡ ಹುಸಿಯಾಯಿತು, ಅವರಿಗೆ ಒಂದೇ ಒಂದು ಸಿನಿಮಾ ಅವಕಾಶಗಳು ಕೂಡ ಇಲ್ಲದ ರೀತಿ ಆಗಿಹೋಯಿತು.

ಆ ಸಮಯದಲ್ಲಿ ಎಲ್ಲರೂ ಅವರಿಗೆ ನೀವೇ ಯಾಕೆ ಒಂದು ಸಿನಿಮಾ ಮಾಡಬಾರದು ಎನ್ನುವ ಐಡಿಯಾ ಕೊಟ್ಟರಂತೆ. ಇಷ್ಟು ವರ್ಷ ಇಂಡಸ್ಟ್ರಿಯಲ್ಲಿ ಇದ್ದೀರಿ, ಎಷ್ಟೊಂದು ಜನರ ಪರಿಚಯ ಇರುತ್ತದೆ ಹಾಗಾಗಿ ನೀವೇ ಸಿನಿಮಾ ಮಾಡಿ ಎಂದು ಹೇಳುತ್ತಿದ್ದರಂತೆ. ಇಷ್ಟು ವರ್ಷದ ಸಿನಿಮಾ ಅನುಭವ ಇದೆ ಸಿನಿಮಾ ಮಾಡಿದರೆ ಮತ್ತಷ್ಟು ಏನಾದರೂ ಕಲಿತಂತೆ ಆಗುತ್ತದೆ ಸಿನಿಮಾ ಮಾಡೋಣ ಎಂದು ವಿಜಯಾ ರಾಘವೇಂದ್ರ ಅವರು ಯೋಚಿಸುತ್ತಿದ್ದಾಗ ಅಪ್ಪು ಒಂದು ದಿನ ನೇರಂ ಚಿತ್ರ ತೋರಿಸಿದರಂತೆ.

ನೀನು ಸಿನಿಮಾ ಮಾಡಬೇಕು ಅಂದುಕೊಂಡರೆ ಈ ಚಿತ್ರ ಮಾಡು ಎಂದು ಹೇಳಿದರಂತೆ, ಅದರ ಬಜೆಟ್ ಮತ್ತು ಇನ್ನಿತರ ವಿಷಯಗಳು ಇವರಿಗೆ ಹೊಂದಿಕೆ ಆಗುತ್ತಿದ್ದ ಕಾರಣ ಅದೇ ಸಿನಿಮಾವನ್ನು ಕನ್ನಡದಲ್ಲಿ ಮಾಡೋಣ ಎಂದು ನಿರ್ಧಾರ ಕೂಡ ಮಾಡಿದರಂತೆ. ಆ ಚಿತ್ರವೇ ಕನ್ನಡದ ಕಿಸ್ಮತ್ ಸಿನಿಮಾ. ಸಿನಿಮಾ ಚೆನ್ನಾಗಿಯೇ ತಯಾರಾದರೂ ಕಾರಣಾಂತರಗಳಿಂದ ಬೇಗ ರಿಲೀಸ್ ಮಾಡಲು ಆಗಲಿಲ್ಲ. ಅದನ್ನು ಹೇಳಿಕೊಳ್ಳುವ ವಿಜಯ್ ರಾಘವೇಂದ್ರ ಅವರು ಸಿನಿಮಾ ಮಾಡುವುದು ದೊಡ್ಡದಲ್ಲ ಅದನ್ನು ಬಿಡುಗಡೆ ಮಾಡುವುದು ದೊಡ್ಡ ವಿಷಯ.

ಅದು ಲೇಟ್ ಆದಷ್ಟು ಆ ಸಮಯದ ಟ್ರೆಂಡ್ ಬದಲಾಗಬಹುದು. ನನ್ನ ಸಿನಿಮಾ ಚೆನ್ನಾಗಿತ್ತು ಆದರೆ ಅದನ್ನು ರಿಲೀಸ್ ಮಾಡಲು ನಾಲ್ಕು ವರ್ಷ ತೆಗೆದುಕೊಂಡೆ ಅದು ತಪ್ಪಾಯ್ತು ಎಂದು ಕನ್ನಡ ಸುದ್ದಿ ಮಾಧ್ಯಮದ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಆಗ ನಿರೂಪಕರು ದೊಡ್ಮನೆ ಸಂಬಂಧಿಕರು ನೀವು ನಿಮ್ಮ ಬಳಗ ದೊಡ್ಡದಿದೆ. ಹೀಗೆ ಎಲ್ಲರೂ ಮಾತಿಗೆ ಕುಳಿತಾಗ ಶಿವಣ್ಣ ಮತ್ತು ಅಪ್ಪು ಜೊತೆ ಸುಖ-ದುಃಖಗಳ ಬಗ್ಗೆ ಮಾತನಾಡುತ್ತಿದ್ರಾ ಎಂದಾಗ ಶಿವಣ್ಣನ ಜೊತೆ ಮಾತಿಗೆ, ಚರ್ಚೆಗೆ ಇಳಿಯುವಷ್ಟು ನಾನು ದೊಡ್ಡವನಲ್ಲ. ಆದರೆ ಅವರು ನನ್ನ ಜೊತೆ ಮಾತನಾಡುತ್ತಾ, ಸಲಹೆ ಕೊಡುತ್ತಾರೆ.

ಸಿನಿಮಾ ವಿಚಾರವೇ ಬಂದಾಗ ಸಿನಿಮಾ ಸೋಲುವುದು ಗೆಲ್ಲುವುದು ನಮ್ಮ ಕೈಲಿಲ್ಲ. ಆದರೆ ಅದನ್ನ ನಿರ್ಧರಿಸುವವರು ಆಡಿಯನ್ಸ್ ತಾನೇ ಅವರಿಗೋಸ್ಕರ ಮತ್ತೆ ನೀನು ಸಿನಿಮಾ ಮಾಡ. ಬಂದ ಯಾವ ಅವಕಾಶವನ್ನು ಕಳೆದುಕೊಳ್ಳಬಾರದು. ಅದರಲ್ಲಿ ನೂರಕ್ಕೆ ನೂರರಷ್ಟು ನಿನ್ನ ಎಫರ್ಟ್ ಹಾಕಿ ನಿನ್ನ ಬೆಸ್ಟ್ ಕೊಡು ಎಂದು ಸಲಹೆ ಕೊಡುತ್ತಿದ್ದರು. ಹಾಗೆ ಅಪ್ಪು ಅವರು ಯಾವುದಾದರೂ ಸಮಯದಲ್ಲಿ ಒಟ್ಟಿಗೆ ಸಿಕ್ಕಾಗ ತಮ್ಮ ಕ್ರಿಯೇಟಿವ್ ಯೋಚನೆಗಳ ಬಗ್ಗೆ ಮಾಡುತ್ತಿದ್ದರಂತೆ. ಜೊತೆಗೆ ನನ್ನ ಐಡಿಯಾಸ್ ಈ ರೀತಿ ಇದೆ ನೀನು ನನ್ನ ಜೊತೆ ಇರಬೇಕು ಎನ್ನುತಿದ್ದರಂತೆ. ಜೊತೆಗೆ ನೀನು ಏನೇ ಮಾಡಿದರೂ ನಾ ನಿನ್ನ ಸಪೋರ್ಟ್ ಇರ್ತೇನೆ ಎಂದು ಧೈರ್ಯ ತುಂಬುತ್ತಿದ್ದರಂತೆ.

Leave a Comment