ಈ ವರ್ಷ ಸತಿಪತಿಗಳಾಗಿರುವ ಸ್ಯಾಂಡಲ್ವುಡ್ ನ ತಾರಾ ಜೋಡಿ, ಹರಿಪ್ರಿಯಾ (Haripriya) ಹಾಗೂ ವಸಿಷ್ಠ ಸಿಂಹ (Vasista Simha) ಅವರ ಮದುವೆ (Marriage) ಸಂಭ್ರಮದ ಅಪೂರ್ವ ಕ್ಷಣಗಳ ಸಾಕಷ್ಟು ಫೋಟೋಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಮತ್ತು ಈ ಜೋಡಿ ಮದುವೆ ಅನೌನ್ಸ್ ಮಾಡಿಕೊಂಡ ಬಳಿಕ ನಿಶ್ಚಿತಾರ್ಥ ದಿನದಿಂದಲೂ ಅವರಿಬ್ಬರ ಜೋಡಿಯ ಸಾಕಷ್ಟು ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡಿವೆ.
ಅದರಲ್ಲಿ ಮಧು ಮಕ್ಕಳಿಬ್ಬರು ಅರಿಶಿನ ಶಾಸ್ತ್ರದಲ್ಲಿ ಬಿಳಿ ಬಣ್ಣದ ಉಡುಗೆಯಲ್ಲಿ ರಾಜಕುಮಾರಿ ಹಾಗೂ ರಾಜಕುಮಾರನಂತೆ ಮಿಂಚಿದ್ದು, ಹಳದಿ ನೀರಿನಲ್ಲಿ ಮಿಂದೇದಿದ್ದು ಮತ್ತು ವಶಿಷ್ಟ ಸಿಂಹ ಅವರು ಹರಿಪ್ರಿಯಾ ಅವರಿಗೆ ಮಾಂಗಲ್ಯ ಧಾರಣೆ ಮಾಡಿದ ಆ ಘಳಿಗೆಯ ಫೋಟೋ, ವಸಿಷ್ಠ ಸಿಂಹ ಅವರು ಹರಿಪ್ರಿಯಾ ಅವರಿಗೆ ಅರುಂಧತಿ ನಕ್ಷತ್ರ ತೋರಿಸುತ್ತಿದ್ದ ವಿಡಿಯೋ ಮತ್ತು ಅದ್ದೂರಿಯಾಗಿ ನಡೆದ ಇವರಿಬ್ಬರ ರಿಸೆಪ್ಶನ್ ವಿಡಿಯೋ ವೈರಲ್ ಆಗಿ ಈಗಾಗಲೇ ಎಲ್ಲರ ಕಣ್ಮನ ಸೆಳೆದಿದೆ.
ಈಗ ಜೋಡಿ ಮತ್ತೊಂದು ಶಾಸ್ತ್ರದ ವಿಡಿಯೋ ಅನ್ನು ಹಂಚಿಕೊಂಡಿದ್ದಾರೆ. ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ವಸಿಷ್ಠ ಸಿಂಹ ಅವರ ಆಸೆಯಂತೆ ಸರಳವಾಗಿ ಇವರಿಬ್ಬರ ಮದುವೆ ಕಾರ್ಯಕ್ರಮ ಜರುಗಿತ್ತು. ಇದಾದ ಬಳಿಕ ಸ್ಯಾಂಡಲ್ವುಡ್ನ ಗಣ್ಯರನ್ನು ಸ್ಟಾರ್ ಕಲಾವಿದರನ್ನು ಮತ್ತು ಸ್ನೇಹಿತರನ್ನು ಹಾಗೂ ಕುಟುಂಬಸ್ಥರನ್ನು ಕರೆದು ಅದ್ದೂರಿಯಾಗಿ ಬೆಂಗಳೂರಿನಲ್ಲಿ ರಿಸೆಪ್ಶನ್ ಕೂಡ ಮಾಡಿಕೊಂಡಿದ್ದರು. ಬಹುಕಾಲದ ಪ್ರೀತಿಗೆ ಇಬ್ಬರು ಬೆಲೆಕೊಟ್ಟು ಒಂದೇ ಸೂರಿನ ಅಡಿಯಲ್ಲಿ ಅರ್ಧಾಂಗಿಗಳಾಗಿ ಬಾಳಲು ನಿರ್ಧಾರ ಮಾಡಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ನಿಶ್ಚಿತಾರ್ಥದ ವಿಷಯ ಸುದ್ದಿಯಾಗುತ್ತಿದ್ದಂತೆ ಸಾಕಷ್ಟು ಜನ ಜೋಡಿಗಳಿಗೆ ವಿಶ್ ಮಾಡಿ ಹಾರೈಸಿದ್ದಾರೆ. ಜೊತೆಗೆ ಜೋಡಿಗಳು ಸಹ ಇವರಿಬ್ಬರಿಗೆ ಸಂಬಂಧಪಟ್ಟ ಒಂದಲ್ಲ ಒಂದು ವಿಷಯಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಲೇ ಇದ್ದಾರೆ. ಮೊನ್ನೆ ಮೊನ್ನೆ ಅಷ್ಟೇ ಹರಿಪ್ರಿಯಾ ಅವರು ಪತಿ ತನಗಾಗಿ ಅಡುಗೆ ಮಾಡುತ್ತಿರುವ ಫೋಟೋ ಕಳುಹಿಸಿ ಮೆಚ್ಚುಗೆ ಬರಹವನ್ನು ಕೂಡ ಬರೆದುಕೊಂಡಿದ್ದರು ಸದ್ಯಕ್ಕೆ ಮದುವೆಯಾಗಿ ಇಬ್ಬರು ಖುಷಿ ಖುಷಿಯಾಗಿದ್ದಾರೆ.
ಈ ಖುಷಿಯ ನಡುವೆ ತಮ್ಮ ಮದುವೆ ತಯಾರಿಯ ಮತ್ತು ಮದುವೆ ಶಾಸ್ತ್ರದ ಮತ್ತೊಂದಷ್ಟು ಫೋಟೋ ಹಾಗೂ ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇವರಿಬ್ಬರ ಮದುವೆ ಶಾಸ್ತ್ರದ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಯಾವ ಸಿನಿಮಾ ಸೀನ್ ಗೂ ಕಡಿಮೆ ಇರದಂತೆ ಈ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. ಇದು ಸಿಂಹ ಪ್ರಿಯ ಜೋಡಿಯ ಮೆಹಂದಿ ಶಾಸ್ತ್ರದ ವಿಡಿಯೋ ಆಗಿದೆ. ಅದ್ದೂರಿ ಸೆಟ್ಟಿನಲ್ಲಿ ಆರ್ಕೆಸ್ಟ್ರಾ ನಡುವೆ ಜೋಡಿ ಮೆಹಂದಿ ಶಾಸ್ತ್ರ ನೆರವೇರಿಸಿಕೊಂಡಿದ್ದಾರೆ.
ಇಬ್ಬರು ಸಹ ಪರ್ಪಲ್ ಬಣ್ಣದ ಕಾಶ್ಚ್ಯೂಮ್ ಅಲ್ಲಿ ಕಂಗೊಳಿಸಿದ್ದಾರೆ. ಸ್ವತಃ ವಸಿಷ್ಠ ಸಿಂಹ ಅವರೇ ಹರಿಪ್ರಿಯ ಅವರಿಗೆ ಮೆಹಂದಿಯನ್ನು ಹಚ್ಚಿರುವ ಕ್ಷಣಗಳು ಕೂಡ ಈ ವಿಡಿಯೋದಲ್ಲಿ ಸೆರೆ ಆಗಿದೆ. ಬಳಿಕ ಸ್ನೇಹಿತರ ಜೊತೆ ಹರಿಪ್ರಿಯ ಮತ್ತು ವಶಿಷ್ಠ ಸಿಂಹ ಇಬ್ಬರು ಸೇರಿ ಖುಷಿ ಖುಷಿಯಾಗಿ ಹೆಜ್ಜೆ ಹಾಕಿದ್ದಾರೆ. ಈ ಜೋಡಿ ಮಾಡಿರುವ ನೃತ್ಯ ಮತ್ತು ಇವರಿಬ್ಬರ ಜೋಡಿಗೆ ಸುತ್ತ ನೆರದಿದ್ದ ಸ್ನೇಹಿತರು ಕೊಟ್ಟಿರುವ ಸಾಥ್ ಯಾವುದೋ ಸಿನಿಮಾದ ಮದುವೆ ಸೆಟ್ಟಿನಲ್ಲಿ ತೆಗೆದಿರುವ ರೀತಿ ಭಾಸವಾಗುತ್ತದೆ ಅಷ್ಟು ಮುದ್ದು ಮುದ್ದಾಗಿ ಈ ಜೋಡಿ ಕಾಣುತ್ತಿದ್ದಾರೆ. ನೀವು ಸಹ ಈ ವಿಡಿಯೋವನ್ನ ಒಮ್ಮೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.