Thursday, September 28, 2023
Home Viral News ರಸ್ತೆ ಉದ್ಘಾಟನೆ ಹೆಸರಿನಲ್ಲಿ ಅಪ್ಪು ಅವರಿಗೆ ಅವಮಾನ ಮಾಡಿತ ಸರ್ಕಾರ.? ರೊಚ್ಚಿಗೆದ್ದ ಕರುನಾಡ ಸಂಘ ಸೇವಕರು...

ರಸ್ತೆ ಉದ್ಘಾಟನೆ ಹೆಸರಿನಲ್ಲಿ ಅಪ್ಪು ಅವರಿಗೆ ಅವಮಾನ ಮಾಡಿತ ಸರ್ಕಾರ.? ರೊಚ್ಚಿಗೆದ್ದ ಕರುನಾಡ ಸಂಘ ಸೇವಕರು ಮಾಡಿದ್ದು ಏನು ಗೊತ್ತಾ.?

 

ಫೆಬ್ರವರಿ 7ರಂದು ಕರ್ನಾಟಕ ಸರ್ಕಾರ (Karnataka government) ಮತ್ತೊಮ್ಮೆ ಪುನೀತ್ ರಾಜ್ ಕುಮಾರ್ (Punith raj kumar) ಅವರ ಸ್ಮರಣೆಯನ್ನು ಮಾಡಿ ಕೊಂಡಿದೆ. ಕನ್ನಡ ರಾಜ್ಯೋತ್ಸವದಲ್ಲಿ ಕರ್ನಾಟಕ ರತ್ನ (Karnataka Rathna) ಪ್ರಶಸ್ತಿಯನ್ನು ಕೊಟ್ಟು ಗೌರವ ನೀಡಿದ್ದ ಸರ್ಕಾರ ಇಂದು ಬೆಂಗಳೂರಿನ ರಸ್ತೆಯೊಂದಕ್ಕೆ ಪುನೀತ್ ರಾಜ್ ಕುಮಾರ್ ರಸ್ತೆ (Punith raj kumar road) ಎಂದು ನಾಮಕರಣ ಮಾಡಿದೆ.

ಬೆಂಗಳೂರಿನ ನಾಯಂಡಳ್ಳಿ ಇಂದ ಬನ್ನೆರುಘಟ್ಟ ಸೇರುವ ವರ್ತುಲ ರಸ್ತೆಗೆ ಡಾಕ್ಟರ್ ಪುನೀತ್ ರಾಜ್ ಕುಮಾರ್ ರಸ್ತೆ ಎಂದು ಹೆಸರಿಟ್ಟು ಉದ್ಘಾಟನಾ ಸಮಾರಂಭವನ್ನು (Naming ceremony) ಕೂಡ ಅದ್ದೂರಿಯಾಗಿ ನಡೆಸಿದೆ. ಕನ್ನಡ ಚಲನಚಿತ್ರ ಮಂಡಳಿ ಇದಕ್ಕೆ ಸಹಕಾರ ನೀಡಿದ್ದು ಈ ಉದ್ಘಾಟನಾ ಸಮಾರಂಭದ ಅಂಗವಾಗಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸಿದೆ.

ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು ಹಾಗೂ ದೊಡ್ಮನೆ ಕುಟುಂಬದವರು ಆಗಮಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣ ಮಾಡಿದ್ದಾರೆ. ಹಲವು ತಿಂಗಳ ಹಿಂದಿನಿಂದಲೇ ಇದಕ್ಕಾಗಿ ತಯಾರಿ ನಡೆದಿತ್ತು. ಎಲ್ಲವೂ ಸರಿಯಾಗಿ ನಡೆದಿದೆ ಎಂದುಕೊಳ್ಳುವಷ್ಟರಲ್ಲಿ ರಾಜ್ಯ ಸರ್ಕಾರ ಮಾಡಿರುವ ಎಡವಟ್ಟಿನಿಂದ ಕನ್ನಡಿಗರೆಲ್ಲಾ ಅವರ ಮೇಲೆ ಆ.ಕ್ರೋ.ಶ ಪಡುವಂತೆ ಆಗಿದೆ.

ಉದ್ಘಾಕಟ ಸಮಾರಂಭದ ಬ್ಯಾನರ್ ಮಾಡಿಸಿರುವ ಕರ್ನಾಟಕ ಸರ್ಕಾರವು ಆ ಬ್ಯಾನರ್ ಅಲ್ಲಿ ಪುನೀತ್ ರಾಜಕುಮಾರ್ ರಸ್ತೆ ಉದ್ಘಾಟನಾ ಸಮಾರಂಭ ಎಂದು ಬರೆಸಿದೇ ಹೊರತು ಅಲ್ಲಿ ಅಪ್ಪುವಿನ ಒಂದೇ ಒಂದು ಫೋಟೋ ಕೂಡ ಹಾಕಿಸಿಲ್ಲ. ಬದಲಾಗಿ ಬಸವರಾಜ ಬೊಮ್ಮಾಯಿ, ನರೇಂದ್ರ ಮೋದಿ ಮತ್ತು ಆರ್ ಅಶೋಕ್ ಇವರುಗಳ ಫೋಟೋ ಇದೆ. ಇದರಿಂದ ಸಾರ್ವಜನಿಕರ ಕಣ್ಣು ಕೆಂಪಾಗಿದೆ. ಇದರಿಂದ ಬೇಸರಗೊಂಡು ರೊಚ್ಚಿಗೆದ್ದ ಕರುನಾಡ ಸಂಘ ಸೇವಕರು ಸರ್ಕಾರಕ್ಕೆ ಬುದ್ಧಿ ಕಲಿಸುವ ಕೆಲಸವನ್ನು ಸಹ ಮಾಡಿದ್ದಾರೆ.

ಕರುನಾಡ ಸಂಘ ಸೇವಕರು ಈ ಬ್ಯಾನರ್ ಎಲ್ಲೆಲ್ಲಿ ಹಾಕಿದ್ದಾರೋ ಅಲ್ಲೆಲ್ಲ ಹೋಗಿ ಸ್ವತಃ ತಾವೇ ಅಪ್ಪುವಿನ ಒಂದು ಫೋಟೋವನ್ನು ಅಂಟಿಸಿದ್ದಾರೆ. ಜೊತೆಗೆ ವಿಡಿಯೋವನ್ನು ಮಾಡಿ ಘನ ಸರ್ಕಾರವನ್ನು ಬೈಯುತ್ತಾ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ನೀವು ಪುನೀತ್ ರಾಜ್ ಕುಮಾರ್ ಅವರಿಗೆ ಅವಮಾನ ಮಾಡಿದ್ದೀರಿ, ಅವರ ಹೆಸರಿನ ರಸ್ತೆ ಉದ್ಘಾಟನೆ ಸಮಾರಂಭಕ್ಕೆ ಅವರ ಫೋಟೋವನ್ನೇ ಹಾಕಿಸದೆ ನಿರ್ಲಕ್ಷ ಮಾಡಿದ್ದೀರಾ ಅಥವಾ ಅಹಂಕಾರದ ಪರಮಾವಧಿಯನ್ನು ತೋರಿಸುತ್ತಿದ್ದೀರಾ?

ಬೇಡದ ಎಲ್ಲಾ ರಾಜಕೀಯ ವ್ಯಕ್ತಿಗಳ ಫೋಟೋ ಇದೆ ಆದರೆ ದೇವತಾ ಮನುಷ್ಯ ಅಪ್ಪುವಿನ ಫೋಟೋ ಇಲ್ಲ. ಈ ಕಾರ್ಯಕ್ರಮವನ್ನು ವೋಟ್ ಬ್ಯಾಂಕ್ ಆಗಿ ಬಳಸುತ್ತಿದ್ದೀರಾ, ಅಪ್ಪು ಹೆಸರು ಹೇಳಿಕೊಂಡು ಪ್ರಚಾರ ಗಿಟ್ಟಿಸಿ ಕೊಳ್ಳುತ್ತಿದ್ದೀರಾ ಇದನ್ನು ನಾವು ಎಂದು ಸಹಿಸಿಕೊಳ್ಳುವುದಿಲ್ಲ ಎಂದು ತಮ್ಮ ಕೋಪವನ್ನು ಹೊರ ಹಾಕಿದ್ದಾರೆ. ನೀವು ಅಪ್ಪು ಅವರ ಫೋಟೋವನ್ನು ಹಾಕದೆ ಇದ್ದರೆ ಏನಾಯ್ತು ನಾವೇ ಈ ಕೆಲಸವನ್ನು ಮಾಡುತ್ತೇವೆ ಎಂದು ಮುಂದಾಗಿ ಅಪ್ಪು ಫೋಟೋವನ್ನು ಬ್ಯಾನರ್ ಮೇಲೆ ಅವರೇ ಅಂಟಿಸುತ್ತಿದ್ದಾರೆ.

ಇಂದು ಬೆಳಿಗ್ಗೆ ಇಂದಲೇ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗಿ ಚರ್ಚೆಯನ್ನು ಹುಟ್ಟು ಹಾಕಿದೆ. ಸರ್ಕಾರ ಮರೆತು ಈ ರೀತಿ ಎಡವಟ್ಟು ಮಾಡಿಕೊಂಡಿದ್ದೆಯೋ ಅಥವಾ ನಿರ್ಲಕ್ಷವೋ ತಿಳಿದಿಲ್ಲ. ಆದರೆ ಕರುನಾಡ ಜನ ಇಂತಹ ಒಂದು ದಿವ್ಯ ನಿರ್ಲಕ್ಷವನ್ನು ಸಹಿಸೋದು ಕಷ್ಟ. ಅದೇನಿದ್ದರೂ ಆಗಿದ್ದು ಹಾಗೆ ಹೋಗಿದೆ ಮುಂದೆ ಆದರೂ ಸರ್ಕಾರ ಇಂತಹ ವಿಚಾರಗಳಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳುವಂತೆ ಆಗಲಿ.

- Advertisment -