ಪ್ರಪಂಚದಾದ್ಯಂತ ಬಹುತೇಕ ಎಲ್ಲಾ ಭಾಷೆಗಳಲ್ಲೂ ಕೂಡ ಬಿಗ್ ಬಾಸ್ (Bigboss) ಕಾರ್ಯಕ್ರಮ ಪ್ರಸಾರವಾಗುತ್ತದೆ. ಆದರೆ ನಮ್ಮ ಕನ್ನಡದ ಬಿಗ್ ಬಾಸ್ ಪೂರ್ತಿಯಾಗಿ ಅದೇ ರೀತಿ ಇರುತ್ತದೆ ಎಂದು ಹೇಳವುದಕ್ಕೆ ಆಗುವುದಿಲ್ಲ. ನಮ್ಮ ಕನ್ನಡಿಗರ ಭಾವನೆಗಳಿಗೆ ದಕ್ಕೆ ಆಗದಂತೆ ಇಲ್ಲಿ ನೇಟಿವಿಟಿಗೆ ತಕ್ಕಹಾಗೆ ನಿಯಂತ್ರಣವನ್ನು ಮಾಡಲಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಕಾಂಟ್ರವರ್ಸಿ ಇದ್ದದ್ದೇ, ಒಳಗೆ ಕೊಡುವ ಯಾವುದೇ ಹೇಳಿಕೆಗಳು ಅಥವಾ ಎದುರಾಳಿಯ ಸ್ಪರ್ಧಿಯು ನಡೆದುಕೊಳ್ಳುವ ರೀತಿಯು ಹೊರಗಿನಿವರ ಕಣ್ಣಿನಲ್ಲಿ ತಪ್ಪಾಗಿ ಕಂಡಾಗ ಬಿಗ್ ಬಾಸ್ ಮನೆ ಮುಂದೆ ಧರಣಿಗಳು ನಡೆದಿವೆ, ದೂರು ದಾಖಲಾಗಿವೆ. ಆ ನಡವಳಿಕೆಗಳನ್ನು ಖಂಡಿಸಿ ಸೋಶಿಯಲ್ ಮೀಡಿಯಾದಲ್ಲಿ ವಿರೋಧಗಳು ವ್ಯಕ್ತವಾಗಿವೆ.
ಆದರೆ ಇದುವರೆಗೆ ಕನ್ನಡದ ಬಿಗ್ ಬಾಸ್ ನಲ್ಲಿ ಒಮ್ಮೆ ಕೂಡ ಬಿಗ್ ಬಾಸ್ ಮನೆ ಒಳಗಡೆ ಹೊರಗಿನಿಂದ ಪೊಲೀಸರು ಹೋಗಿ ಸ್ಪರ್ಧಿಯೊಬ್ಬರನ್ನು ಅರೆಸ್ಟ್ ಮಾಡಿದ್ದ ಉದಾಹರಣೆಗಳು ಇರಲಿಲ್ಲ. ಆದರೆ ಹಿಂದಿ ಹಾಗೂ ಇನ್ನಿತರ ಭಾಷೆಗಳಲ್ಲಿ ಈ ರೀತಿ ನಡೆದಿದೆ. ಇಂತಹದೊಂದು ಘಟನೆಗೆ ಈಗ ಕನ್ನಡದ ಬಿಗ್ ಬಾಸ್ ಕೂಡ ಕಾರಣವಾಗಿ ಬಿಟ್ಟಿದೆ.
ಅಕ್ಟೋಬರ್ 22 ವನ್ಯ ಪ್ರಾಣಿ ಸಂರಕ್ಷಣಾ ಕಾಯ್ದೆ (WPA) ನಿಯಮ ಉಲ್ಲಂಘನೆಯಾಗಿದೆ ಎಂದು ಸ್ಪರ್ಧಿ ವರ್ತೂರ್ ಸಂತೋಷ್ (Varthur Santhosh arrest) ಅವರನ್ನು ಪೋಲಿಸರು ಅರೆಸ್ಟ್ ಮಾಡಿಕೊಂಡು ಬಂದಿದ್ದಾರೆ. ಇದು ಬಿಗ್ ಬಾಸ್ ಮನೆ ಆಟವನ್ನೇ ಅದಲು ಬದಲು ಮಾಡಿ ಸ್ಪರ್ಧಾರ್ಥಿಗಳಲ್ಲಿ ಗೊಂದಲವನ್ನು ಸೃಷ್ಟಿ ಮಾಡಿದೆ.
ರೈತನಾಗಿ ಹಳ್ಳಿಕಾರ್ ತಳಿ ಉಳಿವಿಗಾಗಿ ಹೋರಾಡುತ್ತಿರುವ ಕೆಚ್ಚೆದೆಯ ಕಲಿಯಂತೆ ಹೊರಗೆ ಗುರುತಿಸಿಕೊಂಡಿದ್ದ ಇವರು ಜೊತೆಗೆ ಸೀದಾಸಾದ ಡೈಲಾಗ್ ಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಬಿಗ್ಮನೆ ಸೇರಿದ್ದರು. ಈಗ ಇದ್ದಕ್ಕಿದ್ದಂತೆ ಅರೆಸ್ಟ್ ಆಗಲು ಕಾರಣವೇನೆಂದರೆ ಅವರು ಧರಿಸಿದ್ದ ಬಂಗಾರದ ಒಡವೆ ಎಂದೇ ಹೇಳಬಹುದು.
ವರ್ತೂರ್ ಸಂತೋಷ್ ರವರು ಹೊರಗೆ ಹಾಗೂ ಮನೆ ಒಳಗೂ ಕೂಡ ದಪ್ಪ ದಪ್ಪ ಬಂಗಾರದ ಸರಗಳನ್ನು ಧರಿಸುತ್ತಿದ್ದರು, ಉಂಗುರಗಳನ್ನು ಹಾಕುತ್ತಿದ್ದರು. ಆದರೆ ಅವರು ಹಾಕಿದ ಚಿನ್ನದ ಸರದಲ್ಲಿದ್ದ ಡಾಲರ್ ಹುಲಿ ಉಗುರಿನಿಂದ (Dollar) ಮಾಡಲಾಗಿದೆ ಎನ್ನುವುದನ್ನು ಗುರುತಿಸಿದ ಪ್ರೇಕ್ಷಕ ಶರತ್ ಎನ್ನುವವರು ತಕ್ಷಣವೇ ಹೋಗಿ ರಾಮೋಹಳ್ಳಿ ಪೊಲೀಸ್ ಠಾಣೆಗೆ ಎರಡು ದಿನಗಳ ಹಿಂದೆ ದೂರು ದಾಖಲಿಸಿದ್ದಾರೆ.
ಇದರ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆಗಾಗಿ ಬಿಗ್ ಬಾಸ್ ಪರ್ಮಿಷನ್ ನೊಂದಿಗೆ ಮನೆಗೆ ಹೋಗಿ ರಾಮೋಹಳ್ಳಿ ಪೊಲೀಸರು (Ramohalli) ಸ್ಪರ್ಧಿಯನ್ನು ಅರೆಸ್ಟ್ ಮಾಡಿಕೊಂಡು ಬಂದಿದ್ದಾರೆ. ಪ್ರಾಣಿ ಸಂರಕ್ಷಣಾ ಕಾಯ್ದೆಯು ಕಟ್ಟುನಿಟ್ಟದ ನಿಯಮವಾಗಿದ್ದು, ನಾನ್ ಬೇಲೇಬಲ್ ಕೇಸ್ ಆಗಿದೆ. ಇಂದೇ ವರ್ತೂರ್ ಸಂತೋಷ್ ಅವರನ್ನು ನ್ಯಾಯಾಲಯಕ್ಕೆ ಹಾಜರಪಡಿಸುವ ಸಾಧ್ಯತೆ ಕೂಡ ಇದೆ.
ಒಂದು ವೇಳೆ ಅಲ್ಲಿ ವರ್ತೂರ್ ಸಂತೋಷ್ ಅವರ ಮೇಲಿರುವ ಆರೋಪ ಸಾಬೀತಾದರೆ ಜೈಲು ಶಿಕ್ಷೆ ಕೂಡ ಅನುಭವಿಸಬೇಕಾಗುತ್ತದೆ. ಯಾಕೆಂದರೆ ಈ ರೀತಿ ಹುಲಿ ಉಗುರು ಮತ್ತು ಚರ್ಮಗಳಿಗಾಗಿಯೇ ಹುಲಿಗಳನ್ನು ಬೇಟೆಯಾಡಿಕೊಳ್ಳುತ್ತಿರುವೆ ಕೇಸ್ ಗಳು ಹೆಚ್ಚಾಗಿರುವುದರಿಂದ ಈ ಬಗ್ಗೆ ರೂಲ್ಸ್ ಟೈಟ್ ಮಾಡಲಾಗಿದೆ.
ಇದನ್ನು ಪ್ಲಾಸ್ಟಿಕ್ ಅಥವಾ ಇನ್ನಿತರ ಲೋಹದಲ್ಲೂ ಕೂಡ ಡಿಸೈನ್ ಮಾಡಲಾಗುತ್ತದೆ, ಇವರದ್ದು ಆ ರೀತಿ ಬೇರೆ ಲೋಹದ್ದಾಗಿದ್ದರೆ ವಿಚಾರಣೆಯಲ್ಲಿ ತಿಳಿಯುತ್ತದೆ. ಆಗಲೂ ಮತ್ತೆ ವರ್ತೂರ್ ಸಂತೋಷ ಅವರಿಗೆ ಬಿಗ್ ಬಾಸ್ ಮನೆಗೆ ಹೋಗುವ ಚಾನ್ಸಸ್ ಕಡಿಮೆ ಅನಿಸುತ್ತದೆ. ಯಾಕೆಂದರೆ ಬಿಗ್ ಬಾಸ್ ನಿಯಮದ ಪ್ರಕಾರ ಒಮ್ಮೆ ಮನೆಯಿಂದ ಹೊರ ಬಿದ್ದರೆ ಮತ್ತೆ ಮನೆ ಒಳಗೆ ಹೋಗುವುದು ಕಷ್ಟ. ಹಾಗಾದರೆ ಮುಂದೇನಾಗುತ್ತದೆ ಕಾದು ನೋಡೋಣ.