ವಂಶಿಕಾಳಿಗೆ ಕಿರುತೆರೆ ಶೋಗಳಿಂದ ಬರುತ್ತಿರುವ ಹಣ ಎಷ್ಟು ಗೊತ್ತಾ.? ಪುಟ್ಟ ಹುಡುಗಿ ಸಂಭಾವನೆ ಕೇಳಿದ್ರೆ ನಿಜಕ್ಕೂ ನೀವು ಶಾ-ಕ್ ಆಗ್ತೀರಾ.

 

ಕಿರುತರೆ ಲೋಕವು ಇಂದು ಮನೋರಂಜನ ವಿಷಯದಲ್ಲಿ ಬಹಳ ದೊಡ್ಡದಾಗಿ ಬೆಳೆಯುತ್ತಿದೆ. ಪ್ರತಿ ಚಾನೆಲ್ ನಡುವೆಯೂ ಕೂಡ ಟಿಆರ್‌ಪಿ ವಿಷಯವಾಗಿ ಕಾಂಪಿಟೇಶನ್ ಇರುವುದರಿಂದ ಹೊಸ ಹೊಸ ಮಾದರಿಯ ಧಾರಾವಾಹಿಗಳು, ವಿಭಿನ್ನ ಶೈಲಿಯ ರಿಯಾಲಿಟಿ ಶೋಗಳನ್ನು ಅದ್ದೂರಿಯಾಗಿ ನಡೆಸುತ್ತಿದ್ದು ಅದೇ ರೀತಿ ಟ್ಯಾಲೆಂಟೆಡ್ ಆದ ಸ್ಪರ್ಧಿಗಳನ್ನು ಬೆಳಕಿಗೆ ತರುತ್ತಿವೆ. ಈ ವಿಷಯದಲ್ಲಿ ಕಲರ್ಸ್ ಕನ್ನಡ ವಾಹಿನಿಯ ಶೋಗಳ ಬಗ್ಗೆ ಹೇಳಲೇಬೇಕು. ಡ್ಯಾನ್ಸಿಂಗ್ ಸ್ಟಾರ್, ಇಂಡಿಯನ್, ಮಜಾ ಭಾರತ, ಮಜಾ ಟಾಕೀಸ್, ಬಿಗ್ ಬಾಸ್ ಫ್ಯಾಮಿಲಿ ಪವರ್, ಇಂತಹ ರಿಯಾಲಿಟಿ ಶೋಗಳನ್ನು ನೀಡಿದ ಕಲರ್ಸ್ ಕನ್ನಡ ವಾಹಿನಿ ಹೊಸ ಮಾದರಿಯೊಂದನ್ನು ಈ ಎರಡು ಶೋಗಳಿಂದ ತಂದಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ನಮ್ಮ ಸೂಪರ್ ಸ್ಟಾರ್ ಮತ್ತು ಗಿಚ್ಚಗಿಲಿಗಿಲಿ ಪ್ರೇಕ್ಷಕ ವರ್ಗಕ್ಕೆ ಬಹಳ ಹಿಡಿಸಿದೆ. ಈ ಎರಡು ಶೋಗಳು ಕೂಡ ಹಿಟ್ ಆಗಲು ಒಂದರ್ಥದಲ್ಲಿ ಈ ಎರಡು ಕಾರ್ಯಕ್ರಮಗಳಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಬಾಲ ಪ್ರತಿಭೆ ವಂಶಿಕ ಅವರೇ ಕಾರಣ ಎಂದು ಹೇಳಬಹುದು. ಯಾಕೆಂದರೆ ವಂಶಿಕ ಅವರು ಸೋಶಿಯಲ್ ಮೀಡಿಯಾ ಗಳಲ್ಲಿ ಬಹಳ ಫೇಮಸ್ ಆಗಿದ್ದರು. ತಾಯಿ ಯಶಸ್ವಿನಿ ಜೊತೆ ನಮಮ್ಮ ಸೂಪರ್ ಸ್ಟಾರ್ ಗೆ ಹೋಗಿ ಮೊದಲ ಎಪಿಸೋಡ್ ಅಲ್ಲಿ ತಮ್ಮ ವಾಕ್ಚಾತುರ್ಯ ಯಾವ ರೀತಿ ಇದೆ ಎನ್ನುವುದನ್ನು ನಿರೂಪಿಸಿದ್ದರು.

ನಂತರ ಟಾಸ್ಕ್ ಮತ್ತು ಸ್ಕಿಟ್ ಗಳಲ್ಲಿ ಅದ್ಭುತವಾಗಿ ಅಭಿನಯಿಸಿದ್ದರಿಂದ ಅವರೇ ಆ ಸೀಸನ್ ವಿನ್ನರ್ ಕೂಡ ಆದರು. ಮಾಸ್ಟರ್ ಆನಂದ್ ಎನ್ನುವ ಕನ್ನಡದ ಹೆಮ್ಮೆಯ ಕಲಾವಿದನ ಪುತ್ರಿಯಾದ ಈಕೆ ತಂದೆಯಂತೆ ಇವಳು ಬಾಲಕಲಾವಿದೆಯಾಗಿ ಬಹಳ ಹೆಸರು ಮಾಡುತ್ತಿದ್ದಾಳೆ. ನಮ್ಮ ಸೂಪರ್ ಸ್ಟಾರ್ ಆದ ಬಳಿಕ ಗಿಚ್ಚಗಿಲಿಗಿಲಿ ಎನ್ನುವ ಕಾರ್ಯಕ್ರಮದಲ್ಲಿ ಕೂಡ ಈಕೆ ಶಿವ ಎಂಬ ಕಂಟೆಸ್ಟೆಂಟ್ ಗೆ ಜೋಡಿ ಆಗಿ ಕಾಣಿಸಿಕೊಂಡು ಪ್ರತಿವಾರ ಮನಮೋಹಕ ಸ್ಕಿಟ್ ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾಳೆ.

ಕಳ್ಳಿ, ಬಿಕ್ಷುಕಿ, ಮನೆ ಕೆಲಸದವಳ ಪಾತ್ರ, ಹೀರೋಯಿನ್ ಪಾತ್ರ ಹೀಗೆ ನಾನಾ ಪಾತ್ರಗಳನ್ನು ಸ್ಕಿಟ್ ಗಾಗಿ ಹಾಕಿ ಪ್ರತಿ ಪಾತ್ರಕ್ಕೂ ಪರಕಾಯ ಪ್ರವೇಶ ಮಾಡಿ ಯಾವ ದೊಡ್ಡ ನಟಿಗೂ ಕಡಿಮೆ ಇಲ್ಲದಂತೆ ಅಭಿನಯಿಸಿ ಎಲ್ಲರಿಗೂ ಶಾ’ಕ್ ನೀಡಿದ್ದಾಳೆ. ಈಕೆ ಅಭಿನಯಿಸಿದ ರತ್ನನ್ ಪ್ರಪಂಚ ಸ್ಕಿಟ್ ಎಲ್ಲರ ಕಣ್ಣುಂಚಿನಲ್ಲಿ ನೀರು ಕೂಡ ತರಿಸಿತ್ತು. ಸದಾ ಹಸನ್ಮುಖಿಯಾಗಿ, ಲವಲವಿಕೆಯಾಗಿ ಓಡಾಡಿಕೊಳ್ಳುತ್ತಾ ಪಂಚಿಂಗ್ ಡೈಲಾಗ್ ಹೊಡೆದು ತನ್ನ ವಿಶೇಷವಾದ ಹಾವಭಾವ ಮತ್ತು ಅಭಿನಯ ಚತುರತೆಯಿಂದ ಪ್ರೇಕ್ಷಕ ವರ್ಗವನ್ನು ಸೆಳೆದಿರುವ ವಂಶಿಕ ಈಗ ಜನಪ್ರಿಯ ಸೆಲೆಬ್ರಿಟಿ ಕೂಡ ಹೌದು.

ಈಕೆಗೆ ಇನ್ನು ಅನೇಕ ಶೋಗಳಿಂದ ಅನೇಕ ಶಾರ್ಟ್ ವೀಡಿಯೋಸ್ ಮತ್ತು ಶಾರ್ಟ್ ಮೂವೀಸ್ ಗಳನ್ನು ಕೂಡ ಆಕ್ಟಿಂಗ್ ಮಾಡಿಸುವಂತೆ ಆಫರ್ ಕೊಡಲಾಗುತ್ತಿದೆ ಅಂತೆ. ಆದರೆ ಕೆಲವರು ಮಾತ್ರ ವಂಶಿಕ ಅವರಿಗೆ ಶಾಲೆಗೆ ಕಳಿಸುವುದು ಬಿಟ್ಟು ಈ ರೀತಿ ಹಾಳು ಮಾಡುತ್ತಿದ್ದಾರೆ ಎಂದು ಅವರ ಪೋಷಕರನ್ನು ದೂರುತ್ತಿದ್ದಾರೆ, ಜೊತೆಗೆ ಹಣಕ್ಕಾಗಿ ಅವರ ಪೋಷಕರು ವಂಶಿಕಾ ಲೈಫ್ ಹಾಳು ಮಾಡುತ್ತಿದ್ದಾರೆ ಎನ್ನುವ ಆ’ರೋ’ಪಗಳನ್ನು ಮಾಡಿದ್ದಾರೆ. ಈ ಬಗ್ಗೆ ಬಹಳ ದಿನದವರೆಗೆ ಸುಮ್ಮನೆ ಇದ್ದ ಮಾಸ್ಟರ್ ಆನಂದ್ ಅವರು ಪತ್ನಿ ಯಶಸ್ವಿನಿ ಜೊತೆ ಒಮ್ಮೆ ಲೈವ್ ಬಂದು ತಮ್ಮ ಅನಿಸಿಕೆಗಳನ್ನೆಲ್ಲ ಹೊರ ಹಾಕಿದ್ದಾರೆ.

ಯಾವಾಗಲೂ ನನ್ನ ಮಗಳ ಬಗ್ಗೆ ನೆ’ಗೆ’ಟಿ’ವ್ ಆಗಿ ಕಮೆಂಟ್ ಬರುತ್ತಲೇ ಇರುತ್ತೆ. ಅದರ ಬಗ್ಗೆ ನಾವು ಕೇಳಿ ಸಾಕಾಗಿದ್ದೇವೆ ಎಂದು ಹೇಳಿದ ಮಾಸ್ಟರ್ ಆನಂದ್ ಅವರು ಅವಳ ವಿದ್ಯಾಭ್ಯಾಸ ಹಾಳಾಗಲು ಅವಳು ಈಗ ಐಎಎಸ್ ಮಾಡುತ್ತಿಲ್ಲ ಅವಳಿಗೆ ಏನು ಇಷ್ಟ ಅದನ್ನು ಮಾಡುತ್ತಿದ್ದಾಳೆ ಮತ್ತು ಆಕೆ ನಟಿಸಿರುವ ಸ್ಕಿಟ್ ಎಲ್ಲವೂ ಕೂಡ ಬರೀ ಹಾಸ್ಯಕ್ಕೆ ಸೀಮಿತವಾಗಿದೆ. ದೇವರು ಅವಳಿಗೆ ಕೊಟ್ಟಿರುವ ವರ ಆಕ್ಟಿಂಗ್, ಅದನ್ನು ಮಾಡಿದರೆ ತಪ್ಪೇನಿದೆ ಎಂದು ಕೇಳಿದ್ದಾರೆ.

ಹಣಕ್ಕಾಗಿ ಕಳಿಸುತ್ತಿದ್ದೀರಾ ಎಂದು ಆರೋಪಿಸುತ್ತಿದ್ದೀರಲ್ಲ ಎಂದು ಕ’ಣ್ಣೀ’ರು ಹಾಕಿ ಪತ್ನಿ ಭಾವುಕರಾಗಿದ್ದಾರೆ. ನಮ್ಮ ಮನೆಯಲ್ಲಿ ಸದ್ಯಕ್ಕೆ ಅಂತಹ ಪರಿಸ್ಥಿತಿ ಇಲ್ಲ, ಅವಳು ತರುವ ಹಣದಿಂದ ನಾವು ಬದುಕಬೇಕಿಲ್ಲ. ಆದರೆ ಮಕ್ಕಳ ಟ್ಯಾಲೆಂಟ್ ಏನಿದೆ ಅದನ್ನು ಗುರುತಿಸಿ ಅದಕ್ಕೆ ಘೋಷಣೆ ಮಾಡುವುದು ಪೋಷಕರ ಕರ್ತವ್ಯ. ನಾವು ಅದಷ್ಟೇ ಮಾಡುತ್ತಿದ್ದೇವೆ ಎಂದಿದ್ದಾರೆ. ಈಗ ಎಲ್ಲರಿಗೂ ಹಾಗಾದರೆ ವಂಶಿಕಾ ಸಂಭಾವನೆ ಏನಿರಬಹುದು ಎನ್ನುವ ಕುತೂಹಲ ಉಂಟಾಗಿದೆ. ವಂಶಿಕಾಳಿಗೆ ಒಂದು ಎಪಿಸೋಡ್ ಗೆ 20,000 ರೂಗಳನ್ನು ಕೊಡಲಾಗುತ್ತದೆಯಂತೆ. ಅದಕ್ಕೆ ವಾರದಲ್ಲಿ ಎರಡು ಮೂರು ದಿನ ಶೂಟಿಂಗ್ ಇರುತ್ತದೆ ಹಾಗಾಗಿ ಒಂದು ಅಂದಾಜಿನ ಪ್ರಕಾರ ತಿಂಗಳಿಗೆ 1 ಲಕ್ಷಗಳಷ್ಟು ಸಂಭಾವನೆಯನ್ನು ಈಗ ವಂಶಿಕ ಅವರು ಪಡೆಯುತ್ತಿದ್ದಾರೆ.

Leave a Comment