ನಮ್ಮ ಹಿಂದೂ ಸಂಪ್ರದಾಯದಲ್ಲಿ ಮಹಿಳೆಯರನ್ನು ಮಹಾಲಕ್ಷ್ಮಿ ಎಂದು ಕರೆಯಲಾಗುತ್ತದೆ ಮಹಿಳೆಯಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಐಶ್ವರ್ಯ ಆರೋಗ್ಯ ಎಲ್ಲವೂ ಸಹ ನೆಲೆಸುತ್ತದೆ ಈ ಕಾರಣಕ್ಕಾಗಿಯೇ ಅವಳನ್ನು ಮನೆಯ ಮಹಾಲಕ್ಷ್ಮಿ ಎಂದು ಹಿಂದಿನಿಂದಲೂ ಕರೆಯುತ್ತಾರೆ.
ಕೆಲವು ಮಹಿಳೆಯರು ಮಾಡುವ ತಪ್ಪಿನಿಂದ ಮನೆಯಲ್ಲಿ ಅಶಾಂತಿ ದರಿದ್ರ ಅನಾರೋಗ್ಯ ಇನ್ನೂ ಹಲವು ರೀತಿಯಾದಂತಹ ಸಮಸ್ಯೆಗಳು ಹುಟ್ಟುಕೊಳ್ಳುತ್ತವೆ ಮಹಿಳೆಯರು ಮನೆಯಲ್ಲಿ ಮಾಡುವಂತಹ ಕೆಲವೊಂದು ತಪ್ಪುಗಳನ್ನು ನಾವು ಈ ಕೆಳಕಂಡಂತೆ ತಿಳಿಸುತ್ತಿದ್ದೇವೆ.
ಸೂರ್ಯೋದಯಕ್ಕೂ ಮುಂಚೆ ಎದ್ದು ಮನೆಯ ಮುಂದೆ ರಂಗೋಲಿ ಇಟ್ಟು ಬೇಗ ಸ್ನಾನ ಪೂಜೆ ಮುಗಿಸಬೇಕು ಆದರೆ ಕೆಲವೊಂದು ಮಹಿಳೆಯರು ಈ ಯಾವ ಕೆಲಸವನ್ನು ಮಾಡದೆ ಸೂರ್ಯೋದಯ ಆದ ನಂತರ ಎದ್ದೇಳುತ್ತಾರೆ ಈ ಕಾರಣದಿಂದಾಗಿ ಮನೆಗೆ ದರಿದ್ರ ಉಂಟಾಗುತ್ತದೆ ಅವರ ಹಾಲಸ್ಯದಿಂದ ಮನೆಗೆ ಒಳ್ಳೆಯದಾಗುವುದಿಲ್ಲ.
ಕೆಲವೊಂದು ಸಲ ಎಲ್ಲ ಇದ್ದರೆ ನನಗೆ ಏನೂ ಇಲ್ಲ ನನಗೆ ಅದೃಷ್ಟವೇ ಸರಿ ಇಲ್ಲ ಎಂದು ತಮಗೆ ತಾವೇ ಬೈದುಕೊಳ್ಳುತ್ತಾರೆ ಈ ರೀತಿ ಪದೇಪದೇ ಹೇಳುವುದರಿಂದ ಮನೆಯಲ್ಲಿ ಹಣಕಾಸಿನ ತೊಂದರೆ ಉಂಟಾಗುತ್ತದೆ ಎಲ್ಲ ಸೌಕರ್ಯ ಅಚ್ಚುಕಟ್ಟಾಗಿ ಇದ್ದರೂ ಸಹ ತಮಗೆ ಏನು ಇಲ್ಲ ಎಂದು ಹೇಳಿಕೊಳ್ಳುವುದು ಸಹ ತಪ್ಪು. ಇದರಿಂದ ದೇವರ ದೃಷ್ಟಿಗೆ ಗುರಿಯಾಗುತ್ತಾರೆ ಹಾಗೆ ಇದು ಮನೆಗೆ ಒಳಿತಲ್ಲ.
ಮನೆಯನ್ನು ಯಾವಾಗಲೂ ಸ್ವಚ್ಛತೆಯಿಂದ ಇಟ್ಟುಕೊಂಡರೆ ಮನಸ್ಸಿಗೆ ನೆಮ್ಮದಿ ಇರುತ್ತದೆ ಹಾಗೆಯೇ ಪಾಸಿಟಿವ್ ಎನರ್ಜಿ ಮನೆಗಳಲ್ಲಿ ತುಂಬಿರುತ್ತದೆ ಆದರೆ ಕೆಲವು ಮಹಿಳೆಯರು ಯಾವಾಗಲೂ ಮನೆಯನ್ನು ಸ್ವಚ್ಛವಾಗಿ ಇಡುವುದೆ ತಮ್ಮ ಸೋಮಾರಿತನದಿಂದ ಮನೆ ಸ್ವಚ್ಛ ಮಾಡದೇ ಹಾಗೆ ಬಿಟ್ಟಿರುತ್ತಾರೆ ಇದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ಸೃಷ್ಟಿಯಾಗುತ್ತದೆ.
ಒಂದು ಸಮಸ್ಯೆ ಮನೆಯಲ್ಲಿ ಉಂಟಾದಾಗ ಅದನ್ನು ಯಾವ ರೀತಿ ನಿಭಾಯಿಸಬಹುದು ಎನ್ನುವುದನ್ನು ಯೋಚಿಸಿ ಮಾತನಾಡಿ ಅದನ್ನು ಪರಿಹಾರ ಮಾಡಿಕೊಳ್ಳಬೇಕು. ಅದಕ್ಕೆ ಮಾತೆ ಮುತ್ತು, ಮಾತೆ ಮೃ’ತ್ಯು ಅಂತ ಹಿರಿಯರು ಹೇಳುತ್ತಾರೆ ಆದರೆ ಕೆಲವು ಮಹಿಳೆಯರು ಜಗಳಕ್ಕೆ ರೆಡಿಯಾಗಿ ಇರುತ್ತಾರೆ ಯೋಚಿಸದೇ ಮಾತನಾಡಿ ಜಗಳಕ್ಕೆ ಕಾರಣ ಹುಡುಕುತ್ತಾರೆ. ಇದರಿಂದ ಮನೆಯಲ್ಲಿ ಜಗಳ ಜಾಸ್ತಿಯಾಗುತ್ತದೆ ಅಶಾಂತಿ ಉಂಟಾಗುತ್ತದೆ ಕೆಲವು ದರಿದ್ರ ಲಕ್ಷಣವಿರೋ ಮಹಿಳೆಯರು ಸಣ್ಣ ಪುಟ್ಟ ವಿಚಾರಗಳಿಗೂ ಅಳುತ್ತಾ ಇರುತ್ತಾರೆ.
ಹೆಣ್ಣನ್ನು ಲಕ್ಷ್ಮಿಗೆ ಹೋಲಿಸುತ್ತಾರೆ ಇನ್ನೂ ಮನೆಯಲ್ಲಿ ಕಣ್ಣೀರಿಡುವುದು ಮನೆಗೆ ಯಶಸ್ಸು ಅಲ್ಲ ಆದ್ದರಿಂದ ಇಂತಹ ಗುಣವನ್ನು ಯಾರು ಇಷ್ಟಪಡುವುದಿಲ್ಲ ಹಾಗೆ ಸುಮ್ಮನೆ ಅಳುವುದು ಒಳ್ಳೆಯ ಲಕ್ಷಣವೂ ಕೂಡ ಅಲ್ಲ ಯಾವಾಗಲೂ ನಗುಮುಖದಿಂದ ಇರಬೇಕು.
ಕೆಲವು ಮಹಿಳೆಯರು ನಾನೊಬ್ಬಳೇ ಸರಿ ಮಿಕ್ಕವರೆಲ್ಲ ಸರಿ ಇಲ್ಲ ಎನ್ನುವ ಭಾವನೆಯಲ್ಲಿ ಇರುತ್ತಾರೆ. ಯಾರ ಮಾತಿಗೂ ಗೌರವ ಕೊಡುವುದಿಲ್ಲ ಮತ್ತು ಚಾಡಿ ಹೇಳಿ ಬೇರೆಯವರ ಮನೆಯಲ್ಲಿ ಅಶಾಂತಿ ತರುವುದೇ ಅವರ ಉದ್ದೇಶ ಆಗಿರುತ್ತದೆ ಇವೆಲ್ಲ ದರಿದ್ರ ಲಕ್ಷಣವಿರುವ ಮಹಿಳೆಯರಾಗಿರುತ್ತಾರೆ.
ಇದನ್ನು ಓದಿ:- ರೈತರಿಗೆ ಟ್ರ್ಯಾಕ್ಟರ್ ಖರೀದಿಗೆ 80% ಸಬ್ಸಿಡಿ ಘೋಷಣೆ. ಕೂಡಲೇ ಅರ್ಜಿ ಸಲ್ಲಿಸಿ.
ಹೆಣ್ಣು ಮನೆಯಲ್ಲಿ ಇದ್ದರೆ ಮನೆ ಮನಸ್ಸು ಎಲ್ಲವೂ ಸ್ವಚ್ಛಗೊಂಡಿರುತ್ತದೆ ಹಾಗೆ ಹೆಣ್ಣಾದವಳು ಎಲ್ಲರನ್ನೂ ಎಲ್ಲ ವಿಷಯದಲ್ಲೂ ಹೊಂದಿಕೊಂಡು ಹೋಗಬೇಕು ಮೆಟ್ಟಿದ ಮನೆಗೆ ಯಶಸ್ವಿಯಾಗಿ ಶ್ರಮಿಸಿ ಆ ಮನೆಯನ್ನು ಮುಂದುವರಿಸಬೇಕು ಒಂದು ಒಳ್ಳೆಯ ಹೆಣ್ಣು ಮಗಳು ಎಂದು ಬೇರೆಯವರಿಗೆ ಸ್ಪೂರ್ತಿ ಹಾಗಬೇಕು ಹೊರತು ದರಿದ್ರ ಮಹಿಳೆ ಆಗಬಾರದು.