ಆಸ್ತಿಯ ರಿಜಿಸ್ಟ್ರೇಷನ್ ವಿಷಯದಲ್ಲಿ ಇದೀಗ ದೊಡ್ಡ ಬದಲಾವಣೆ, ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಮುಖ್ಯವಾದ ಅಂಶ ಒಂದನ್ನು ತಿಳಿಸಿಕೊಟ್ಟಿದ್ದಾರೆ ನಾವು ನೋಡಿರುವ ಹಾಗೆ ಸುಳ್ಳು ದಾಖಲೆಯನ್ನು ಕೊಟ್ಟು ಆಸ್ತಿ ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುತ್ತಾರೆ ಅಂತಹವರಿಗೆ ಈಗ ಶಾ’ಕಿಂ’ಗ್ ನ್ಯೂಸ್.
ಇದನ್ನು ಓದಿ:- ಆಟವಾಡುತ್ತಿದ್ದಾಗ ಮೊಬೈಲ್ ಚಾರ್ಜರ್ ಬಾಯಿಗೆ ಹಾಕಿಕೊಂಡು ಕರೆಂಟ್ ಶಾ’ಕ್ ನಿಂದ 8 ತಿಂಗಳ ಕಂದಮ್ಮನ ಬ’ಲಿ.
ಕಲ್ಬುರ್ಗಿಯಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಲಾಯಿತು. ಈ ಸಂದರ್ಭದಲ್ಲಿ ಕೃಷ್ಣ ಬೈರೇಗೌಡ ಅವರು ಮಾತನಾಡಿ ಸರ್ಕಾರ ಈಗ ಆಸ್ತಿ ರಿಜಿಸ್ಟ್ರೇಷನ್ ವಿಚಾರದಲ್ಲಿ ಹೊಸ ನಿಯಮವನ್ನು ಜಾರಿಗೆ ತಂದಿರುವ ವಿಷಯದ ಬಗ್ಗೆ ಅವರು ತಿಳಿಸಿದ್ದಾರೆ.
ಆಸ್ತಿ ರಿಜಿಸ್ಟ್ರೇಷನ್ ವಿಷಯದಲ್ಲಿ ಉಂಟಾಗಿರುವಂತಹ ಬದಲಾವಣೆ ಏನು ಎಂದು ನೋಡುವುದಾದರೆ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸುಳ್ಳು ಮಾಹಿತಿಗಳನ್ನು ನೀಡಿ ಮೋಸ ಮಾಡಿ ತಮ್ಮ ಪರ್ಸನಲ್ ಆಸ್ತಿ ಅಥವಾ ಸರ್ಕಾರದ ಆಸ್ತಿಯನ್ನು ರಿಜಿಸ್ಟರ್ ಮಾಡಿಸಿಕೊಂಡಿರುತ್ತಾರೋ ಅಂತಹ ಪ್ರಕರಣ ಕಂಡು ಬಂದರೆ ಈ ಕೂಡಲೇ ರಿಜಿಸ್ಟ್ರೇಷನ್ ಅನ್ನು ರದ್ದು ಮಾಡಲಾಗುತ್ತದೆ ಈ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ಕೊಡಲಾಗಿರುತ್ತದೆ ಎಂದು ಕೃಷ್ಣಬೈರೇಗೌಡ ಅವರು ತಿಳಿಸಿದ್ದಾರೆ.
ಇದನ್ನು ಓದಿ:-ರಾಯರಿಗೆ ಪ್ರಿಯವಾದ ಈ ಮಂತ್ರವನ್ನು ಹೇಳಿದರೆ ಸಾಕು ನಿಮ್ಮ ಕ.ಷ್ಟ ಕಾ.ರ್ಪ.ಣ್ಯಗಳೆಲ್ಲ ನಿವಾರಣೆಯಾಗುತ್ತದೆ.
ಬೇರೆಯವರ ಆಸ್ತಿಯನ್ನು ವಶಪಡಿಸಿಕೊಳ್ಳುವವರಿಗೆ ಮಧ್ಯ ನಿಂತು ಮೋಸ ಮಾಡುವ ದಲ್ಲಾಳಿಗಳ ಆಟ ಇನ್ನು ಮುಂದೆ ನಡೆಯುವುದಿಲ್ಲ ಇದು ಮೊದಲಲ್ಲ ಈ ಹಿಂದೆ ಕೂಡ ಮೋಸ ಮಾಡಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಆಸ್ತಿ ರಿಜಿಸ್ಟರ್ ಮಾಡಿಸಿಕೊಂಡು ಜನರಿಗೆ ತೊಂದರೆ ಕೊಡುವ ಸಾಕಷ್ಟು ಜನರಿಗೆ ತೊಂದರೆ ಕೊಟ್ಟಿದ್ದಾರೆ ಈ ಹಿಂದೆ ಅಧಿವೇಶನದಲ್ಲಿ ಆಸ್ತಿ ವಿಚಾರದ ಕಾಯ್ದೆಯ ತಿದ್ದುಪಡಿ ಮಾಡಲಾಗಿದೆ ಇದಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ಕೂಡ ಸಿಕ್ಕಿದೆ ಮುಂದಿನ ನಾಲ್ಕು ತಿಂಗಳ ಒಳಗಡೆ ಅಧಿಕೃತ ಆದೇಶ ಬರಲಿದೆ ಎಂದು ತಿಳಿಸಲಾಗಿದೆ.
ಸಾಕಷ್ಟು ಕಡೆಗಳಲ್ಲಿ ಈ ರೀತಿಯಾದಂತಹ ವಿಚಾರಗಳನ್ನು ನಾವು ಕೇಳಿರುತ್ತೇವೆ ಮುಖ್ಯವಾಗಿ ವಿಜಯಪುರದಲ್ಲಿ ಇಂತಹ ಸಾಕಷ್ಟು ಘಟನೆಗಳು ನಡೆದಿದೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಆಸ್ತಿ ರಿಜಿಸ್ಟ್ರೇಷನ್ ಮಾಡಿಸಿಕೊಂಡ ವಿಷಯ ಓನರ್ ಗೆ ಗೊತ್ತಾಗಿ ಅವರು ಆಸ್ತಿಯನ್ನು ಮತ್ತೆ ವಾಪಸ್ ಪಡೆಯಲು ಕೋರ್ಟ್ಗೆ ಗೆ ಹೋಗಿ ಸಾಕಷ್ಟು ವರ್ಷ ಅಲೆದಾಡಿದ್ದಾರೆ.
ಆದರೆ ಇನ್ನು ಮುಂದೆ ಈ ರೀತಿಯ ಕೆಲಸ ನಡೆಯುವುದಿಲ್ಲ ಸುಳ್ಳು ದಾಖಲೆಗಳನ್ನು ರದ್ದು ಮಾಡುವ ಅಧಿಕಾರವನ್ನು ನೋಂದಣಿ ಅಧಿಕಾರಿಗಳಿಗೆ ಕೊಡಲಾಗಿದೆ ಮೋಸ ಆದ ತಕ್ಷಣವೇ, ಮೋಸ ಆಗದ ಹಾಗೆ ತಡೆಯುವ ನ್ಯಾಯ ಕೊಡಿಸಲಾಗುತ್ತದೆ. ಈ ಕುರಿತು ಸ್ಪಷ್ಟವಾಗಿ ಕೃಷ್ಣೆಗೌಡ ಭೈರಪ್ಪ ಅವರು ತಿಳಿಸಿದ್ದಾರೆ.
ಆಸ್ತಿ ಪ್ರಕರಣಗಳ ಬಗ್ಗೆ ಮಾತನಾಡಿ ತಹಶೀಲ್ದಾರ್ ಮತ್ತು ಸಹಾಯಕ ಆಯುಕ್ತರಿಗೆ ಸಚಿವರ ಕಡೆಯಿಂದ ಮುಖ್ಯವಾದ ಸೂಚನೆ ನೀಡಲಾಗಿದೆ ಇನ್ನು ಉಳಿದಿರುವ ಆಸ್ತಿ ಪ್ರಕರಣಗಳನ್ನು 15 ದಿನಗಳಲ್ಲಿ ಮುಗಿಸಬೇಕು ಎಂದು ಹೇಳಿಕೆ ನೀಡಿದ್ದಾರೆ ಇನ್ನು ಮುಂದೆ ಆಸ್ತಿ ವಿಚಾರಕ್ಕೆ ದಲ್ಲಾಳಿಗಳಿಂದ ಅಥವಾ ಇನ್ಯಾರಿಂದಲೂ ಮೋಸ ಆಗುವುದಿಲ್ಲ ಎಂದು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ.
ಈ ರೀತಿಯಾಗಿ ಆಸ್ತಿಯನ್ನು ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುತ್ತಾರೋ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚನೆಯನ್ನು ನೀಡಿದ್ದಾರೆ. ಈಗಾಗಲೇ ಯಾರೆಲ್ಲಾ ಸುಳ್ಳು ದಾಖಲೆಗಳನ್ನು ನೀಡಿ ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುತ್ತಾರೋ ಅಂತಹವರು ತಮ್ಮ ತಪ್ಪನ್ನು ಒಪ್ಪಿಕೊಂಡು ನ್ಯಾಯಾಲಯಕ್ಕೆ ಶರಣಾಗಬೇಕು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.