ಇತ್ತೀಚಿನ ದಿನಗಳಲ್ಲಿ ಜಗತ್ತು ಮುಂದುವರೆಯುತ್ತಾ ಹೋದಂತೆ ಹೆಚ್ಚು ಮಾರ್ಡನ್ ಆಗುತ್ತಾ ಹೋದ ಮನುಷ್ಯನ ಆಯಸ್ಸು ಕೂಡ ಕಡಿಮೆಯಾಗುತ್ತಾ ಹೊರಟಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಇಂದಿನ ಜೀವನ ಶೈಲಿ ಮೊದಲಿನ ಕಾಲದಲ್ಲಿ ಕ.ಷ್ಟ ಪಟ್ಟು ಬೆವರು ಸುರಿಸಿ ಕೆಲಸ ಮಾಡುತ್ತಿದ್ದರು ಆದರೆ ಈಗ ಕುಳಿತಲ್ಲೇ ಕೆಲಸ ದೇಹಕ್ಕೆ ಕಸರತ್ತು ಇಲ್ಲವೇ ಇಲ್ಲ ಆಹಾರ ಸೇವನೆಯೂ ಕೂಡ ಇನ್ನೊಂದು ಕಾರಣವಾಗಿದೆ.
ಊಟ ಮಾಡುವಾಗ ಹಲವು ಪದ್ಧತಿ ನಿಯಮಗಳನ್ನು ಅನುಸರಿಸಬೇಕು ಎಂದು ಹಿಂದೂ ಧರ್ಮದಲ್ಲಿ ತಿಳಿಸಲಾಗಿದೆ ಆ ನಿಯಮವನ್ನು ನಾವು ಅನುಸರಿಸುವುದರಿಂದ ನಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಮತ್ತು ನಮಗೆ ಆರ್ಥಿಕ ಸಮಸ್ಯೆಯೂ ಬರುವುದಿಲ್ಲ ಆದರೆ ಆ ನಿಯಮವನ್ನು ಪಾಲಿಸದೆ ಇದ್ದಲ್ಲಿ ಆರೋಗ್ಯ ಅದೃಷ್ಟ ಎರಡು ಕೈ ತಪ್ಪುತ್ತದೆ ಹಾಗಾಗಿ ನಾವಿಂದು ಊಟ ಮಾಡುವಾಗ ಯಾವ ನಿಯಮಗಳನ್ನು ಅನುಸರಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಊಟ ಮಾಡುವಾಗ ಪಾಲಿಸಬೇಕಾದ ಮೊದಲನೆಯ ನಿಯಮ ಎಂದರೆ ಕೈಕಾಲು ತೊಳೆದು ಊಟಕ್ಕೆ ಕುಳಿತುಕೊಳ್ಳಬೇಕು ಈಗಲೂ ಹಲವಾರು ಜನ ಈ ನಿಯಮ ಪಾಲಿಸುತ್ತಿರುವುದು ಉತ್ತಮ ವಿಚಾರ, ಇದು ಬರೀ ನಿಯಮವಲ್ಲ ಇದರಿಂದ ನಮ್ಮ ಆರೋಗ್ಯದ ಮೇಲು ಕೆಟ್ಟ ಪರಿಣಾಮ ಬೀಳುವುದಿಲ್ಲ ಹಾಗಾಗಿ ಊಟಕ್ಕೆ ಕುಳಿತುಕೊಳ್ಳುವ ಮೊದಲು ಸ್ವಚ್ಛವಾಗಿ ಕೈಕಾಲು ತೊಳೆದುಕೊಳ್ಳಿ.
ಎರಡನೆಯದಾಗಿ ನೆಲದ ಮೇಲೆ ಕಾಲನ್ನು ಮಡಚಿ ಕುಳಿತು ಊಟ ಮಾಡಿದರೆ ನಮ್ಮ ಆರೋಗ್ಯಕ್ಕೆ ಉತ್ತಮವೆಂದು ಹೇಳಲಾಗುತ್ತದೆ ಮತ್ತು ಇದು ಊಟ ಮಾಡುವ ಸರಿಯಾದ ನಿಯಮ ಆದರೆ ಈಗಿನ ಕಾಲದಲ್ಲಿ ಕೆಲವರು ಡೈನಿಂಗ್ ಟೇಬಲ್ ಬಳಸಿ ಊಟ ಮಾಡುತ್ತಾರೆ. ಕುಳಿತುಕೊಳ್ಳಲು ತೊಂದರೆ ಇದ್ದವರು ಹೀಗೆ ಮಾಡಿದರೆ ತಪ್ಪಿಲ್ಲ ಆದರೆ ನೀವು ಆರೋಗ್ಯವಂತರಾಗಿದ್ದರು ಕೂಡ ಡೈನಿಂಗ್ ಟೇಬಲ್ ಅಥವಾ ಬೆಡ್ ಮೇಲೆ, ಸೋಫಾ ಮೇಲೆ ಮಲಗಿದ ರೀತಿ ಕುಳಿತು ಊಟ ಮಾಡುವುದು ಉತ್ತಮವಲ್ಲ ನೆಲದ ಮೇಲೆ ಸರಿಯಾಗಿ ಕುಳಿತು ಊಟ ಮಾಡಿ.
ಮೂರನೆಯದಾಗಿ ಮಾತನಾಡದೆ ಮೌನವಾಗಿ ಊಟ ಮಾಡಬೇಕು ಕೆಲವರು ಊಟ ಮಾಡುವಾಗ ಹರಟೆ ಹೊಡೆಯುತ್ತಾರೆ ಅಥವಾ ಮೊಬೈಲ್ ಟಿವಿ ನೋಡುತ್ತಾ ಊಟ ಮಾಡುತ್ತಾರೆ ಇದು ಆರೋಗ್ಯಕ್ಕೆ ಉತ್ತಮವಲ್ಲ ಊಟ ಮಾಡುವಾಗ ಮೌನವಾಗಿ ಆಹಾರದ ರುಚಿ ಆನಂದಿಸುತ್ತಾ ಊಟ ಮಾಡುವುದು ಉತ್ತಮ
ನಾಲ್ಕನೆಯದಾಗಿ ನಾವು ನಮಗೆ ಸಿಗುವ ಆಹಾರವನ್ನು ಸಿಟ್ಟು ಮಾಡದೆ ತಿನ್ನಬೇಕು ಕೆಲವರಿಗೆ ಕೆಲವು ಪದಾರ್ಥಗಳು ಇಷ್ಟವಾಗುವುದಿಲ್ಲ ಹಾಗಾಗಿ ನನಗೆ ಇದು ಬೇಡವೆಂದು ಊಟವನ್ನು ಅದಕ್ಕೆ ಬಿಟ್ಟು ಹೋಗುತ್ತಾರೆ ಹಾಗೆ ಮಾಡುವುದು ತಪ್ಪು ಇದು ನೀವು ಅನ್ನಪೂರ್ಣೇಗೆ ಮಾಡುವ ಅ.ವ.ಮಾ.ನ ನಿಮಗೆ ಸಿಗುವ ಊಟಕ್ಕೆ ಗೌರವ ಕೊಟ್ಟು ಸೇವಿಸಿ ಏಕೆಂದರೆ ಕೆಲವರಿಗೆ ಒಂದು ಹೊತ್ತಿನ ಊಟ ಕೂಡ ಸಿಗುವುದಿಲ್ಲ.
ನಿಮಗೆ ತಿನ್ನಲು ಎಷ್ಟು ಸಾಧ್ಯವೊ ಅಷ್ಟೇ ಅಗತ್ಯವಿದ್ದಷ್ಟು ಆಹಾರವನ್ನು ಮಾತ್ರ ತಟ್ಟೆಯಲ್ಲಿ ಹಾಕಿಕೊಳ್ಳಿ ಕೊನೆಯ ನಿಯಮವೆಂದರೆ ಬೆಳಗ್ಗೆ ರಾಜ್ಯ ರಾಜನಂತೆ ಮಧ್ಯಾಹ್ನ ಸಾಮಾನ್ಯರಂತೆ ಮತ್ತು ರಾತ್ರಿ ಬಡವನಂತೆ ಊಟ ಮಾಡಬೇಕು ಇದು ವೈಜ್ಞಾನಿಕವಾಗಿ ಸಾಬೀತಾದ ವಿಷಯ.
ಬೆಳಗ್ಗಿನ ಆಹಾರ ಕಟ್ಟುವ ಮನೆಗೆ ಫೌಂಡೇಶನ್ ಇದ್ದ ಹಾಗೆ ನಿಮ್ಮ ಮನೆ ಅಂದರೆ ನಿಮ್ಮ ದೇಹ ಗಟ್ಟಿಮುಟ್ಟಾಗಿ ಇರಬೇಕು ಎಂದರೆ ಬೆಳಿಗ್ಗೆ ಆರೋಗ್ಯಕರ ಆಹಾರವನ್ನು ಸರಿಯಾಗಿ ಸೇವಿಸಬೇಕು ಮತ್ತು ಮಧ್ಯಾಹ್ನದ ಊಟವನ್ನು ಸರಿಯಾದ ಸಮಯಕ್ಕೆ ತಿನ್ನಬೇಕು ರಾತ್ರಿ ಸ್ವಲ್ಪ ಕಡಿಮೆ ಊಟವನ್ನೇ ಮಾಡಬೇಕು ಈ ಎಲ್ಲಾ ನಿಯಮಗಳನ್ನು ಪಾಲಿಸಿದರೆ ನೀವು ನೂರು ವರ್ಷ ಚೆನ್ನಾಗಿ ಬಾಳುತ್ತೀರಾ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.