ರೈತ ದೇಶದ ಬೆನ್ನೆಲುಬು ಆತ ಉತ್ತು ಬಿದ್ದು ಬೆಳೆಯನ್ನು ಬೆಳೆದರೆ ಇತರರ ಹೊಟ್ಟೆ ತುಂಬುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಅದಕ್ಕಾಗಿ ನಮ್ಮ ರಾಜ್ಯ ಸರ್ಕಾರವು ರೈತರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತದೆ ಇದರಿಂದ ರೈತರು ತಮ್ಮ ಜಮೀನಿನಲ್ಲಿ ಬೆಳೆಯಲು ತುಂಬಾ ಸಹಾಯಕ.
ಕೃಷಿಯಾಂತ್ರಿಕರಣ ಯೋಜನೆಯು ರೈತರಿಗೆ ಸಹಾಯ ಮಾಡಲು ಎಂದೆ ಸಿದ್ದಪಡಿಸಿರುವಂತಹ ಒಂದು ಕಾರ್ಯಕ್ರಮವಾಗಿದೆ ಇದು ಅವರಿಗೆ ಬೆಳೆಗಳನ್ನು ಬೆಳೆಯಲು ಸಹಾಯ ಮಾಡುವ ಯಂತ್ರಗಳಂತೆ ಕೃಷಿಯನ್ನು ಸುಲಭಗೊಳಿಸಲು ವಿಶೇಷ ಉಪಕರಣಗಳು ಮತ್ತು ಯಂತ್ರಗಳನ್ನು ಖರೀದಿಸಲು ಈ ಯೋಜನೆಯ ಅಡಿಯಲ್ಲಿ ಸರ್ಕಾರವು ರೈತರಿಗೆ ಹಣವನ್ನು ನೀಡಲು ನಿರ್ಧರಿಸಿದೆ.
ಸರ್ಕಾರವು ರಾಜ್ಯದ ರೈತರಿಗೆ ಹಣವನ್ನು ನೀಡುವುದರಿಂದ ಅವರು ಉತ್ತಮವಾದ ಯಂತ್ರೋಪಕರಣಗಳನ್ನು ಖರೀದಿಸಿ ತಮ್ಮ ಜಮೀನಿನಲ್ಲಿ ಉಳುಮೆ ಮಾಡಿ ಉತ್ತು ಬಿತ್ತು ಕಡಿಮೆ ಸಮಯದಲ್ಲಿ ಹೆಚ್ಚು ಬೆಳೆಯನ್ನು ಬೆಳೆಯಬಹುದು ಈ ಕಾರಣದಿಂದಾಗಿ ಕೃಷಿಯಾಂತ್ರೀಕರಣ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
,ಹಿಂದಿನ ಕಾಲದಲ್ಲಿ ರೈತರು ತುಂಬಾ ಕಷ್ಟಪಟ್ಟು ಉಳುಮೆ ಮಾಡಿ ಬಿತ್ತನೆ ಬೀಜ ಮಾಡಿ ಹಾಗೆ ಬೆಳೆ ಕೈ ಸೇರುವ ತನಕ ತುಂಬಾ ಕಷ್ಟ ಪಡುತ್ತಿದ್ದರು ಆದರೆ ಇತ್ತೀಚಿನ ದಿನಗಳು ಯಂತ್ರೋಪಕರಣಗಳ ಸಹಾಯದಿಂದ ಅವರ ಕೆಲಸವೂ ಅಲ್ಪ ಮಟ್ಟದಲ್ಲಿ ಕಡಿಮೆಯಾಗಿದೆ.
ರಾಜ್ಯ ಸರ್ಕಾರವು ರೈತರಿಗೆ ಸಹಾಯವಾಗುವಂತಹ ಕೃಷಿ ಪರಿಕರಗಳ ಖರೀದಿ ಮಾಡಲು ಸಹಾಯಧನ ಯೋಜನೆ ಎಂಬ ವಿಶೇಷ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ ಈ ಯೋಜನೆಯ ಅಡಿಯಲ್ಲಿ ರೈತರಿಗೆ ಕೃಷಿಗೆ ಅಗತ್ಯವಾಗಿ ಬೇಕಾದಂತಹ ಯಂತ್ರೋಪಕರಣಗಳನ್ನು ಖರೀದಿಸಲು ಹಣವನ್ನು ನೀಡಲಾಗುತ್ತದೆ ಈ ಯೋಜನೆಯ ಅಡಿಯಲ್ಲಿ ರೈತರಿಗೆ ರಿಪರ್ ಬೈಂಡರ್ ಎಂಬ ಇನ್ನೊಂದು ಯಂತ್ರವನ್ನು ಖರೀದಿಸಲು ಸಹಾಯ ಮಾಡಲು ಸರ್ಕಾರ ಹಣವನ್ನು ನೀಡುತ್ತದೆ ರೈತರು ತಮಗೆ ಬೇಕಾದಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಹಣವನ್ನು ಪಡೆದುಕೊಳ್ಳಬಹುದು.
ಸರ್ಕಾರದ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಬೇಕಾಗಿರುವಂತಹ ದಾಖಲಾತಿಗಳು
° ಆಧಾರ್ ಕಾರ್ಡ್
° ರೈತರ ನೋಂದಣಿ ಸಂಖ್ಯೆ
° ಸಂಖ್ಯೆ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ
° ಬ್ಯಾಂಕ್ ಪಾಸ್ ಬುಕ್.
ಯೋಜನೆಗೆ ಅರ್ಜಿ ಸಲ್ಲಿಸುವಂತಹ ಸಂಪೂರ್ಣ ವಿಧಾನ
ರೈತರು ತಮ್ಮ ಜಮೀನಿಗೆ ಈ ಯೋಜನೆಯ ಅಡಿಯಲ್ಲಿ ಯಂತ್ರೋಪಕರಣಗಳನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸುವ ವಿಧಾನ ನೋಡುವುದಾದರೆ www.farmech.bih.nic.in ಈ ಡೈರೆಕ್ಟ್ ಲಿಂಕ್ ಅನ್ನು ಓಪನ್ ಮಾಡಿದರೆ ವಿಶೇಷ ವೆಬ್ ಸೈಟ್ ಗೆ ಹೋಗಿ ನೀವು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಯ ಬಗ್ಗೆ ನಿಮಗೆ ಯಾವುದಾದರೂ ಗೊಂದಲಗಳು ಇದ್ದರೆ ಅಥವಾ ಕೃಷಿಗೆ ಸಂಬಂಧಪಟ್ಟ ಹಾಗೆ ಯಾವುದಾದರೂ ಸಹಾಯದ ಅವಶ್ಯಕತೆ ಇದ್ದರೆ ನಿಮ್ಮ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ. ಈ ವಿಷಯದ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತುಇತರರಿಗು ಶೇರ್ ಮಾಡಿ.