ಕಾರು ಮತ್ತು ಬೈಕ್ ಹೊಂದಿರುವವರು ತಿಳಿಯಲೇ ಬೇಕಾದಂತಹ ವಿಷಯ.! ನೋಂದಣಿಯಲ್ಲಿ ಬಹಳ ದೊಡ್ಡ ಬದಲಾವಣೆ.

ಸರ್ಕಾರವು ಜನರ ಹಿತ ದೃಷ್ಟಿಯನ್ನು ಕಾಪಾಡುವಂತಹ ಕಾರಣದಿಂದಾಗಿ ಹೊಸ ರೀತಿಯ ನಿಯಮಗಳನ್ನು ಜಾರಿಗೆ ತರುತ್ತಲೇ ಇರುತ್ತದೆ ಅಂತಹ ನಿಯಮಗಳಲ್ಲಿ ಇದೀಗ ಹಳೆಯ ವಾಹನಗಳ ನೋಂದಣಿ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ತರಲಾಗಿದೆ ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ವಾಹನಗಳಿಗೆ ಸಂಬಂಧಪಟ್ಟ ಹಾಗೆ ಈ ನಿಯಮವನ್ನು ಜಾರಿಗೆ ತಂದಿದ್ದು ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಣಕ್ಕೆ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ ಈ ಹಿಂದೆ ಸರ್ಕಾರದ ಹಳೆಯ ವಾಹನಗಳ ನೋಂದಣಿ ರದ್ದುಗೊಳಿಸಲು ಸರ್ಕಾರ ನಿರ್ಧರಿಸಿತ್ತು

ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸಾಕಷ್ಟು ಸಂಚಾರಿ ನಿಯಮಗಳನ್ನು ಜಾರಿಗೊಳಿಸಿದ್ದಾರೆ ಸಂಚಾರ ನಿಯಮವನ್ನು ಉ.ಲ್ಲಂ.ಘನೆ ಮಾಡಿದಂತಹವರಿಗೆ ದಂ.ಡವನ್ನು ವಿಧಿಸಲಾಗುತ್ತದೆ ಹಾಗೆಯೇ ಮೋಟಾರ್ ವಾಹನ ಕಾಯ್ದೆಯ ಅಡಿಯಲ್ಲಿ ಹತ್ತು ವರ್ಷ ಹಳೆಯ ಡೀಸೆಲ್ ವಾಹನಗಳು ಮತ್ತು 15 ವರ್ಷ ಹಳೆಯ ಪೆಟ್ರೋಲ್ ವಾಹನಗಳ ನೋಂದಣಿಯನ್ನು ವೃದ್ಧಿಗೊಳಿಸಲು ಸರ್ಕಾರ ನಿರ್ಧರಿಸಿತ್ತು.

ನಿಮ್ಮ ಮನೆಯಲ್ಲಿ ಹಿಂದೆ ಖರೀದಿಸಿದಂತಹ ಕಾರು ಮತ್ತು ಬೈಕ್ ಹೊಂದಿದ್ದರೆ ಈ ನಿಯಮವನ್ನು ನೀವು ತಿಳಿದುಕೊಳ್ಳಲೇಬೇಕು ಹಳೆಯ ಖಾಸಗಿ ವಾಹನಗಳ ನೋಂದಣಿ ನಿಯಮಗಳು ಬದಲಾಯಿಸುವ ಬಗ್ಗೆ ನಿರ್ಧರಿಸಲಾಗಿದೆ ವರದಿಗಳ ಪ್ರಕಾರ 15 ವರ್ಷಕ್ಕಿಂತ ಹಳೆಯದಾದ ಖಾಸಗಿ ವಾಹನಗಳನ್ನು ನವೀಕರಿಸಲು ಸಾರಿಗೆ ಇಲಾಖೆಯ ಅನುಮೋದನೆ ಅಗತ್ಯವಿದೆ.

ಹೊಸ ನಿಯಮಗಳ ಪ್ರಕಾರವಾಗಿ ಜಿಲ್ಲಾ ಸಾರಿಗೆ ಅಧಿಕಾರಿ ಮತ್ತು ಮೋಟಾರು ವಾಹನ ನಿರೀಕ್ಷಕರು ಸಂಬಂಧಿಸಿದ ವಾಹನ ಅಥವಾ ವಾಹನದ ಜಂಟಿ ತಪಾಸಣೆಯನ್ನು ನಡೆಸುತ್ತಾರೆ. ವಾಹನದ ಮಾಲೀಕರು ಯಾರು ಇರುತ್ತಾರೆ ಅಂತಹವರ ಮುಂದೆ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದೆ ಹಾಗೆಯೇ ಅಂತಿಮ ಅನುಮೋದನೆಗಾಗಿ ಅರ್ಜಿಯನ್ನು ಇಲಾಖೆಗೆ ಕಳುಹಿಸಿಕೊಡಲಾಗುತ್ತದೆ.

ಹಳೆಯ ವಾಹನಗಳ MVI ವಾಹನ ತಪಾಸಣೆ ದಾಖಲೆಗಳ ಪರಿಶೀಲನೆ ಕಾರ್ಯ ಮಾಡಲಾಗುತ್ತದೆ. ದಾಖಲೆಗಳೆಲ್ಲವನ್ನು ಪರಿಶೀಲಿಸಿದ ನಂತರ ಮರು ನೋಂದಣಿ ಸೇವೆಯನ್ನು ನೀಡಲಾಗುತ್ತದೆ ವಾಹನದ ಮರು ನೋಂದಣಿಯನ್ನು ಸ್ವೀಕರಿಸಲು ಅಥವಾ ತಿರಸ್ಕರಿಸಲು DTO ಅಂತಿಮ ಅಧಿಕಾರವನ್ನು ಹೊಂದಿರುತ್ತದೆ.

ಖಾಸಗಿ ಮತ್ತು ವಾಣಿಜ್ಯ ವಾಹನಗಳು ಮಾತ್ರ ನೋಂದಣಿ ನವೀಕರಣಕ್ಕೆ ಅರ್ಹ ವಾಗಿರುತ್ತದೆ. ಖಾಸಗಿ ವಾಹನಗಳನ್ನು ಈ ರೀತಿಯಾದಂತಹ ನೋಂದಣಿ ನಿಯಮ ಜಾರಿಗೆ ತರಲಾಗಿದ್ದು ಸರ್ಕಾರವು ವಾಹನಗಳ ನವೀಕರಣಕ್ಕೆ ಅನುಮೋದನೆಯನ್ನು ನೀಡಲು ಮುಂದಾಗಿದೆ ನವೀಕರಿಸಿದಂತಹ ವಾಹನಗಳನ್ನು ನೀವು ಮರು ನೊಂದಣಿ ಮಾಡಿಸಿಕೊಳ್ಳಬೇಕು.

ಸಾರಿಗೆಗೆ ಸಂಬಂಧಪಟ್ಟ ಹಾಗೆ ಹಲವಾರು ರೀತಿಯಾದಂತಹ ನಿಯಮಗಳನ್ನು ಜಾರಿಗೆ ತರುತ್ತಿದ್ದು ಅದರಲ್ಲಿ ಸಾರಿಗೆ ನವೀಕರಣ ನಿಯಮವು ಸಹ ಒಂದಾಗಿದೆ ಈ ನಿಯಮದ ಅಡಿಯಲ್ಲಿ ಯಾರೆಲ್ಲಾ ಖಾಸಗಿ ವಾಹನಗಳನ್ನು ಹೊಂದಿರುತ್ತಾರೆ ಅಂತಹವರು ಖುದ್ದಾಗಿ 15 ವರ್ಷಕ್ಕಿಂತ ಹಳೆಯ ವಾಹನಗಳು ನಿಮ್ಮಲ್ಲಿ ಇದ್ದರೆ ಅಂತಹ ವಾಹನಗಳನ್ನು ನೀವು ನವೀಕರಿಸಿಕೊಳ್ಳಬೇಕು. ಈ ನಿಯಮವು ಪೆಟ್ರೋಲ್ ವಾಹನಗಳು ಹಾಗೂ ಡೀಸೆಲ್ ವಾಹನಗಳು ಎರಡಕ್ಕೂ ಸಹ ಅನ್ವಯವಾಗುತ್ತದೆ. ಈ ವಿಷಯದ ಕುರಿತಾದ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.

Leave a Comment