ರಾಜ್ಯದಲ್ಲಿ ರೈತರ ಬದುಕು ಬಹಳ ದಯಾಹೀನವಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಬೀಳದ ಕಾರಣ ಬರಗಾಲದ ಪರಿಸ್ಥಿತಿ ಉಂಟಾಗಿದೆ. ಈಗಾಗಲೇ ಕೇಂದ್ರ ಸರ್ಕಾರದ ಗೈಡ್ಲೈನ್ಸ್ ಪ್ರಕಾರ 195 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ, ಮುಂದೆ ಈ ಸಂಖ್ಯೆ ಇನ್ನೂ ಏರಿಕೆಯಾಗುವ ಲಕ್ಷಣವೂ ಕೂಡ ಕಾಣುತ್ತಿದೆ.
ಅಲ್ಲಲ್ಲಿ ಸ್ವಲ್ಪ ಪ್ರಮಾಣದ ಬೆಳೆ ಬಿತ್ತಲಾಗಿದ್ದರು ಅದು ಉಳಿಯುವುದು ಕ’ಷ್ಟ. ಈಗ ಇದೆಲ್ಲದರ ನಡುವೆ ಕುಯ್ಲಿಗೆ ಬಂದಿರುವ ಬೆಳೆಗೂ ಬೆಲೆ ಇಲ್ಲದ ಕಾರಣ ರೈತ ಅದನ್ನು ಕಟಾವು ಮಾಡಿಸದೆ ಉಳುಮೆ ಮಾಡಿಸುವ ಪರಿಸ್ಥಿತಿಗೆ ಬಂದಿದ್ದಾನೆ. ತರಕಾರಿ ಬೆಳೆದ ರೈತರು ಈ ರೀತಿ ಸಂಕಷ್ಟಕ್ಕೀಡಾಗಿ ಸೌತೆಕಾಯಿ, ಹೂಕೋಸು, ಟೊಮೆಟೊ ಮುಂತಾದ ಬೆಳೆಗಳನ್ನು ನಾಶಪಡಿಸಿದ ಉದಾಹರಣೆ ನೋಡುತ್ತಿದ್ದೆವು.
ತಂದೆ ಹೆಸರಲ್ಲಿ ಇರುವ ಮನೆ, ಮಕ್ಕಳ ಹೆಸರಿಗೆ ಮಾಡೋದು ಹೇಗೆ.? ಬೇಕಾಗುವ ದಾಖಲೆಗಳೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಈಗ ಹೂ ಬೆಳಕಾಲರಿಗೂ ಕೂಡ ಆ ಬಿಸಿ ತಟ್ಟಿದೆ ಹೂವಿನ ಕೃಷಿ ಹಾಗು ಮಾರಾಟ ಹೂವಿನಷ್ಟೇ ಹಗುರ ಎಂದು ಭಾವಿಸಲಾಗುತ್ತಿತ್ತು. ಆದರೆ ನಿಜಕ್ಕೂ ಅದು ಅಷ್ಟು ಸುಲಭವಲ್ಲ. ಹೂ ಬೆಳೆಗಾರರಿಗೆ ತಮ್ಮ ಬೆಳಗ್ಗೆ ಸಿಂಪಡಿಸಲು ಬೇಕಾದ ಕ್ರಿಮಿನಾಶಕ, ಕೀಟನಾಶಕ ಮುಂತಾದ ಔಷಧಿಗಳಿಗೆ ಮತ್ತು ಕೂಲಿ ಆಳುಗಳಿಗೆ ಲಕ್ಷಗಟ್ಟಲೆ ಖರ್ಚಾಗುತ್ತದೆ.
ಆದರೆ ಬೇಡಿಕೆ ಇರುತ್ತದೆ ಎನ್ನುವ ನಂಬಿಕೆ ಅದರಲ್ಲೂ ಹಬ್ಬಗಳ ಸೀಸನ್ ಆದರೆ ಏನು ಒಂದು ಧೈರ್ಯ ಆದರೆ ಈ ಬಾರಿ ಅದೆಲ್ಲವೂ ಹುಸಿಯಾಗಿದೆ. ಈಗಷ್ಟೇ ಗಣೇಶ ಚತುರ್ಥಿ ಮುಗಿದಿದೆ ಇನ್ನು ಕೆಲವೇ ದಿನಗಳಲ್ಲಿ ನವರಾತ್ರಿ ಆರಂಭವಾಗಲಿದೆ ಮಹಾಲಯ ಅಮಾವಾಸ್ಯೆಯಿಂದ ಸಂಕ್ರಾಂತಿ, ಶಿವರಾತ್ರಿವರೆಗೂ ಕೂಡ ಹಬ್ಬಗಳ ಸಾಲಿದೆ.
ಅದರಲ್ಲೂ ಹಿಂದುಗಳ ಹಬ್ಬದಲ್ಲಿ ಹೂವಿಗೆ ಹೆಚ್ಚು ಬೇಡಿಕೆ ಹೀಗಾಗಿ ಮಹಾಲಕ್ಷ್ಮಿ ಸಮಯಕ್ಕೆ ಬೆಳೆ ಬಂದರೆ ಲಾಭವಾಗುತ್ತದೆ, ಗೌರಿ ಹಬ್ಬಕ್ಕೆ ಸೇವಂತಿಗೆ ವಿಶೇಷ ಹಾಗಾಗಿ ಲಾಭ ಆಗುತ್ತದೆ ಕ’ಷ್ಟ ತೀರುತ್ತದೆ ಎಂದುಕೊಂಡು ಅದಕ್ಕೆ ತಕ್ಕನಾಗಿ ಪ್ಲಾನ್ ಮಾಡಿಕೊಂಡ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕಂಚನಹಳ್ಳಿ ಹೂ ಬೆಳೆಗಾರ ರೈತ ಯೋಗರಾಜ್ ತನ್ನ ಜಮೀನ ಪೂರ್ತಿ ಸೇವಂತಿಗೆ ಹೂವು ಬೆಳೆಸಿದ್ದರು.
ಈ ಬಾರಿ ಆತನ ಲೆಕ್ಖಾಚಾರ ಉಲ್ಟಾ ಹೊಡೆದಿದೆ. ಸೇವಂತಿಗೆ ಹೂವಿನ ಬೆಲೆ ತೀರಾ ಕುಸಿದಿದ್ದು, ಇದರಿಂದ ರೈತ ಕಂಗಲಾಗಿ ಹೋಗಿದ್ದಾನೆ. ರೈತನ ಪರಿಸ್ಥಿತಿ ಹೇಗಾಗಿದೆ ಎಂದರೆ ಹೂವನ್ನು ಬಿಡಿಸಲು ಬರುವ ಕೂಲಿ ಆಳುಗಳಿಗೆ ಮತ್ತು ಅದನ್ನು ಸಾಗಿಸುವ ಸಾಗಣೆ ವೆಚ್ಚಕ್ಕೂ ಕೂಡ ಹೂವನ್ನು ಮಾರುವ ದುಡ್ಡು ಸಾಲುತ್ತಿಲ್ಲ ಎನ್ನುವಂತಾಗಿ ಇದರಿಂದ ಬೇಸರಗೊಂಡ ರೈತನು ತನ್ನ ಜಮೀನಿನ ಪೂರ್ತಿ ಇದ್ದ ಸೇವಂತಿಗೆ ಹೂವನ್ನು ಬಿಡಿಸದೆ ಅದಕ್ಕೆ ಟ್ರಾಕ್ಟರ್ ಹೊಡಿಸಿದ್ದಾನೆ.
ಬಟ್ಟೆ ಧರಿಸದೆ ಕೇವಲ ಆಭರಣಗಳಿಂದ ಮೈ ಮುಚ್ಚಿಕೊಂಡು ಫೋಟೋಶೂಟ್ ಮಾಡಿಸಿಕೊಂಡ ನಟಿ.!
ಮಂಡ್ಯ ಕೆಆರ್ ಪೇಟೆ ಮತ್ತು ಪಾಂಡವಪುರ ಭಾಗದಲ್ಲಿ ಮಾತವಲ್ಲದೆ ಗದಗ, ಚಿಕ್ಕಬಳ್ಳಾಪುರ ಮುಂತಾದ ಹೂ ಪ್ರಮುಖವಾಗಿ ಬೆಳೆಯುವ ಅನೇಕ ಕಡೆ ರೈತರ ಪರಿಸ್ಥಿತಿ ಹೀಗೆ ಇದೆ. ಸಾಲು ಹಬ್ಬಗಳಲ್ಲಿ ಹೂವಿಗೆ ಬಂಗಾರಂಥ ರೇಟ್ ಸಿಗುತ್ತದೆ ಎಂದು ಭಾವಿಸಿ ಹೂ ಬೆಳೆದಿದ್ದರು. ಇನ್ನೇನೂ ನನ್ನ ಕಷ್ಟ ದೂರವಾಗುತ್ತದೆ, ಭರ್ಜರಿ ಲಾಭವಾಗುತ್ತದೆ ಅಂತಿದ್ದ ನೇಗಿಲಯೋಗಿಗೆ ಈಗ ಬರಸಿಡಿಲು ಬಡಿದಂತಾಗಿದೆ.
ಭೀಕರ ಬರಗಾಲವಿದ್ದರೂ ಅಲ್ಪಸ್ವಲ್ಪ ಕಡೆ ರೈತರ ಪರಿಸ್ಥಿತಿ ಸುಧಾರಿಸಿದೆ ಎನ್ನುವ ನಂಬಿಕೆ ಇತ್ತು ಆದರೆ, ಮಾರುಕಟ್ಟೆಯಲ್ಲಿ ಈ ಬಾರಿ ಸೇವಂತಿಗೆ ಬೆಲೆ ಸಿಗುತ್ತಿಲ್ಲ. ಈ ಕಾರಣಕ್ಕೆ ಬೇಸತ್ತ ಮಣ್ಣಿನ ಮಗ ಸಮೃದ್ಧವಾಗಿ ಬೆಳೆದ ನಿಂತಿದ್ದ ಹಳದಿ ಬಂಗಾರ ಸೇವಂತಿಗೆ ಕೃಷಿಯನ್ನು ತಾನೇ ಟ್ರ್ಯಾಕ್ಟರ್ ಮೂಲಕ ನಾಶ ಪಡಿಸಿದ್ದಾನೆ. ರೈತನ ಬದುಕಿಗೆ ನೆರವಾಗಬೇಕಾಗಿದ್ದ ಹೂವು ಈಗ ಜಮೀನಿಗೆ ಗೊಬ್ಬರವಾಗುವ ಪರಿಸ್ಥಿತಿ ಬಂದಿದೆ.