ಒಂದು ಕುಟುಂಬದಲ್ಲಿ ಹುಟ್ಟಿದ ಮಗುವಿಗೆ ಹುಟ್ಟಿನಿಂದಲೇ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇರುತ್ತದೆ. ತಾತನಿಂದ ತಂದೆಗೆ ಬಂದ ಆಸ್ತಿಯಲ್ಲಿ ಆ ತಂದೆಯ ಎಲ್ಲಾ ಮಕ್ಕಳು ಸಮಾನ ಅಧಿಕಾರ ಹೊಂದಿರುತ್ತಾರೆ. ಈ ರೀತಿಯ ಪಿತ್ರಾರ್ಜಿತ ಅಥವಾ ತಂದೆ ಸ್ವಯಾರ್ಜಿತವಾಗಿ ಸಂಪಾದನೆ ಮಾಡಿದ ಆಸ್ತಿಯನ್ನು ಮಗನಿಗೆ ಕೊಡಲು ಬಯಸಿದರೆ ಯಾವ ರೀತಿಯಾಗಿ ಅದನ್ನು ಮಕ್ಕಳ ಹೆಸರಿಗೆ ಮಾಡಬಹುದು ಎನ್ನುವುದು ನಮ್ಮಲ್ಲಿ ಅನೇಕರಿಗೆ ತಿಳಿದಿಲ್ಲ.
ಇದು ಪ್ರತಿಯೊಬ್ಬ ನಾಗರಿಕನಿಗೂ ಕೂಡ ಬಹಳ ಉಪಯುಕ್ತ ಮಾಹಿತಿ ಆಗಿದ್ದು, ಪ್ರತಿಯೊಬ್ಬರೂ ಇದರ ಬಗ್ಗೆ ಕನಿಷ್ಠ ಮಾಹಿತಿಯನ್ನು ತಿಳಿದುಕೊಂಡಿರಲೇಬೇಕು. ಅದಕ್ಕಾಗಿ ಈ ಅಂಕಣದಲ್ಲಿ ಇದರ ಕುರಿತು ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ? ದಾಖಲೆಗಳಾಗಿ ಏನೇನು ಬೇಕು? ಎಷ್ಟು ದಿನ ಸಮಯ ತೆಗೆದುಕೊಳ್ಳುತ್ತದೆ ಎನ್ನುವ ವಿವರಗಳನ್ನು ನೋಡಲು ಅಂಕಣವನ್ನು ಪೂರ್ತಿಯಾಗಿ ಓದಿ.
ಬೇಕಾಗುವ ದಾಖಲೆಗಳು:-
● ಮನೆ ಹಕ್ಕು ಪತ್ರ
● ಮನೆ ನಕ್ಷೆ
● ತೆರಿಗೆ ರಶೀದಿ
● ಪಂಚಾಯತಿ ಕಚೇರಿಯಿಂದ ಫಾರ್ಮ್ 11 ಮತ್ತು ಫಾರ್ಮ್ 9 ● ತಂದೆ ಮತ್ತು ಮಕ್ಕಳ ಆಧಾರ್ ಕಾರ್ಡ್
● ಸಾಕ್ಷಿಗಳ ಹಾಜರಿ ಹಾಗೂ ಅವರ ಸಹಿ
ಆಸ್ತಿ ಹೆಸರು ಬದಲಾವಣೆ ಹೇಗೆ ನಡೆಯುತ್ತದೆ:-
● ಮೂರು ವಿಧಾನದ ಮೂಲಕ ಒಬ್ಬ ತಂದೆಯು ತನ್ನ ಆಸ್ತಿಯನ್ನು ವರ್ಗಾವಣೆ ಮಾಡಬಹುದು. ದಾನ, ಕ್ರಯ ಹಾಗೂ ವಿಭಾಗದ ಮೂಲಕ ಮಾಡಬಹುದು. ಇದರಲ್ಲಿ ದಾನಪತ್ರದ ಮೂಲಕ ಮಾಡುವುದರಿಂದ ಖರ್ಚು ಕಡಿಮೆ ಆಗುತ್ತದೆ ಎನ್ನುವ ಕಾರಣಕ್ಕೆ ಹೆಚ್ಚಿನವರು ಇದನ್ನು ಆರಿಸುತ್ತಾರೆ.
● ಈ ವಿಧಾನ ಆರಿಸುವುದರಿಂದ ನೊಂದಣಿ ಖರ್ಚು ಕಡಿಮೆ ಹಾಗೂ ಸ್ಟ್ಯಾಂಪ್ ಡ್ಯೂಟಿ ಚಾರ್ಜ್ ಸಂಪೂರ್ಣವಾಗಿ ಉಳಿಯುತ್ತೆ.
● ದಾನ ಪತ್ರದ ಮೂಲಕ ನೊಂದಣಿ ಖರ್ಚು ಅಂದಾಜು 4-5 ಸಾವಿರ ಆಗಬಹುದು.
ಬಟ್ಟೆ ಧರಿಸದೆ ಕೇವಲ ಆಭರಣಗಳಿಂದ ಮೈ ಮುಚ್ಚಿಕೊಂಡು ಫೋಟೋಶೂಟ್ ಮಾಡಿಸಿಕೊಂಡ ನಟಿ.!
● ಮೇಲಿನ ಎಲ್ಲಾ ದಾಖಲೆಗಳನ್ನ ತೆಗೆದುಕೊಂಡು ಸಂಬಂಧಪಟ್ಟ ಉಪ ನೋಂದಣಿ ಕಚೇರಿಗೆ ಹೋಗಿ ನೋಂದಣಿ ಮಾಡಿಸಬೇಕು. ನೋಂದಣಿ ಪ್ರಕ್ರಿಯೆ ಹೇಗಿರುತ್ತೆ ಎಂದರೆ ಈ ಮೇಲಿನ ಎಲ್ಲಾ ದಾಖಲೆಗಳೊಂದಿಗೆ ತಂದೆ, ಮಕ್ಕಳು ಹಾಗೂ ಸಾಕ್ಷಿದಾರರು ಮುದ್ರಾಂಕದ ಹಾಳೆ ಮೇಲೆ ಮಗನಿಗೆ ಹಕ್ಕು ವರ್ಗಾವಣೆ ಮಾಡುವುದರ ಕುರಿತು ದಾನಪತ್ರ ಬರೆಸಬೇಕು, ದಾನಪತ್ರದಲ್ಲಿ ಮನೆಯ ಸಂಪೂರ್ಣ ವಿವರಣೆಯನ್ನು ನಮೂದಿಸಬೇಕು. ಅದರಂತೆ ಸದರಿ ಮನೆಯ ಚೆಕ್ಕುಬಂದಿ ವಿವರ ಸಹ ಬರೆಸಬೇಕು.
● ನೋಂದಣಿ ಸಮಯದಲ್ಲಿ ಸಾಕ್ಷಿಗಳ ಹಾಜರಿ ಮತ್ತು ಸಹಿ ಕಡ್ಡಾಯವಾಗಿರುತ್ತದೆ. ರಿಜಿಸ್ಟ್ರರ್ ಸಮಯದಲ್ಲಿ ಸರ್ಕಾರ ನಿರ್ಧರಿಸುವ ಶುಲ್ಕ ಪಾವತಿಸಬೇಕು ನಂತರ ನಿಮ್ಮ ತಾಲೂಕು ಉಪನೊಂದಣಿ ಕಚೇರಿಯಲ್ಲಿ ನೊಂದಣಿ ಮಾಡಿಸಬೇಕು.
● ಆಸ್ತಿಯ ರಿಜಿಸ್ಟರ್ ಆದ ಮಾತ್ರಕ್ಕೆ ಆಸ್ತಿ ವರ್ಗಾವಣೆಯ ಸಂಪೂರ್ಣ ಕೆಲಸ ಮುಗಿದಿದೆ ಎಂದರ್ಥವಲ್ಲ. ರಿಜಿಸ್ಟರ್ ಪತ್ರದ ನಕಲು ಪ್ರತಿ ತೆಗೆದುಕೊಂಡು ಖಾತೆ ಬದಲಾವಣೆಗಾಗಿ ಅರ್ಜಿ ಬರೆದು, ಗ್ರಾಮ ಪಂಚಾಯಿತಿಯಲ್ಲಿ ಕೊಡಬೇಕು.
BJP, JDS ಮೈತ್ರಿಯಿಂದಾಗಿ ಕಾರ್ಯಕರ್ತರ ಮುಂದೆ ತಲೆತಗ್ಗಿಸುವಂತಿಗಿದೆ ಎಂದ JDS ರಾಜ್ಯ ಘಟಕದ ಅಧ್ಯಕ್ಷರು.!
● ತಂದೆಯಿಂದ ಮಗನಿಗೆ ಆಸ್ತಿ ರಿಜಿಸ್ಟರ್ ಆದರೂ ಇ-ಸ್ವತ್ತು ಮಾಡಿಸಬೇಕಾಗುತ್ತದೆ. ಹಾಗೂ ಪಂಚಾಯತಿ ಅವರು ಅರ್ಜಿ ಪರಿಶೀಲಿಸಿ ಆಕ್ಷೇಪಣೆಗಾಗಿ ಪ್ರಚಾರ ಮಾಡಲಾಗುತ್ತದೆ. ಅವರು ನಿಗದಿಪಡಿಸಿದ ದಿನದೊಳಗೆ ಯಾವುದೇ ತಕರಾರು ಆದೇಶ ಬರದಿದ್ದರೆ ಖಾತೆ ಬದಲಾವಣೆ ಮಾಡಿ, ಆದೇಶ ಹೊರಡಿಸಲಾಗುತ್ತದೆ.
● ಇ-ಸ್ವತ್ತು ಮೂಲಕ ತಂದೆಯಿಂದ ಮಗನಿಗೆ ಖಾತೆ ಬದಲಾವಣೆ ಮಾಡಲಾಗುತ್ತದೆ. ರಿಜಿಸ್ಟರ್ ಮಾಡಿಸಿದ ನಂತರ ಇ-ಸ್ವತ್ತು ಮಾಡುವುದನ್ನ ಮರೆಯಬಾರದು.