ಆಗಸ್ಟ್ 24ರಂದು 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (69th National film award) ಘೋಷಿಸಲಾಗಿತ್ತು. ಅಕ್ಟೋಬರ್ 17ರಂದು ದೆಹಲಿಯ (Dehli) ವಿಜ್ಞಾನ ಭವನದ ಸಭಾಂಗಣದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಅದ್ದೂರಿಯಾಗಿ ಜರುಗಿದೆ. ನಮ್ಮ ಕನ್ನಡದಿಂದ ಈ ವರ್ಷ ಆಯ್ಕೆಗೊಂಡ ಏಕೈಕ ಚಿತ್ರ ಚಾರ್ಲಿ777 ಆಗಿದೆ. ಚಾರ್ಲಿ777 ಸಿನಿಮಾ ಫೀಚರ್ ಫಿಲ್ಮ್ಸ್ ವಿಭಾಗದಲ್ಲಿ (feature film in kannada category) ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಬಾಚಿಕೊಂಡಿದೆ.
ಚಿತ್ರತಂಡದ ಪರವಾಗಿ ಚಾರ್ಲಿ 777 ಚಿತ್ರದ ನಟರಾದ ಮತ್ತು ನಿರ್ಮಾಣದ ಹೊರೆ ಹೊತ್ತಿದ್ದ ರಕ್ಷಿತ್ ಶೆಟ್ಟಿ (Actor and producer of the movie Rakshith Shetty) ಯವರು ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರಿಂದ ಈ ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ. ನಂತರ ಸಿನಿಮಾಗೆ ಮುಖ್ಯ ಕಾರಣಕರ್ತರಾದ ನಿರ್ದೇಶಕ ಕಿರಣ್ ರಾಜ್ (director Kiran Raj) ಜೊತೆ ಅವಾರ್ಡ್ ಶೇರ್ ಮಾಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಕಳೆದೆರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಚಾರ್ಲಿ ಗುಣಗಾನವೇ ನಡೆಯುತ್ತಿದೆ. ಇಡಿ ಚಿತ್ರತಂಡಕ್ಕೆ ಮತ್ತು ಕಿರಣ್ ರಾಜ್ ಅವರ ಕನಸಿಗೆ, ಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ರಕ್ಷಿತ್ ! ಸಂತಸವನ್ನು ಹಂಚಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ, ರಾಜ್.ಬಿ.ಶೆಟ್ಟಿ, ಸಂಗೀತ ಶೃಂಗೇರಿ, ಅಭಿಜಿತ್ ಮಹೇಶ್, ಭಾರ್ಗವಿ ನಾರಾಯಣ್ ಮುಂತಾದ ಕಲಾವಿದರ ಜೊತೆಗೆ ಸಿನಿಮಾದ ಮುಖ್ಯ ಆಕರ್ಷಣೆ ಆಗಿದ್ದು ಚಾರ್ಲಿ ಅಲಿಯಾಸ್ ಶ್ವಾನ ಲ್ಯಾಬ್ರಡಾರ್ ರಿಟ್ರೈವರ್.
ಒಂಟಿ ಮನುಷ್ಯ ಹಾಗೂ ಶ್ವಾನವೊಂದರ ನಡುವಿನ ನಂಟನ್ನು ಅತ್ಯದ್ಭುತವಾಗಿ ಕಟ್ಟಿದ್ದರು ನಿರ್ದೇಶಕ ಕಿರಣ್ ರಾಜ್. ಸಿನಿಮಾದಲ್ಲಿನ ಸಂದೇಶ ಹಾಗೂ ಭಾವನಾತ್ಮಕ ನಟನೆ ನೋಡುಗರ ಹೃದಯ ತಟ್ಟಿದ್ದು ಪರಿಣಾಮವಾಗಿ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ, ಮಲಯಾಳಂ ಹೀಗೆ ಅನೇಕ ಭಾಷೆಗಳಲ್ಲಿ ಈ ಸಿನಿಮಾ ಗೆದ್ದಿದೆ. ಕಳೆದ ವರ್ಷದಲ್ಲಿ ಇಡೀ ಭಾರತವನ್ನು ಸ್ಯಾಂಡಲ್ವುಡ್ ಕಡೆ ತಿರುಗಿ ನೋಡುವಂತೆ ಮಾಡಿದ ಚಿತ್ರಗಳಲ್ಲಿ ಇದು ಕೂಡ ಒಂದಾಗಿತ್ತು.
ದೇಶದ ಅನೇಕ ಸಿನಿಮಾ ಅವಾರ್ಡ್ ಗಳನ್ನು ಬಾಚಿಕೊಂಡ ಚಿತ್ರವು ಸಿನಿಮಾ ಒಂದಕ್ಕೆ ದಕ್ಕಬಹುದಾದ ಅತ್ಯಂತ ಶ್ರೇಷ್ಠ ಪ್ರಶಸ್ತಿಯನ್ನು ಕೂಡ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಕನ್ನಡದಲ್ಲಿ ಇದೊಂದು ವಿಶೇಷ ಪ್ರಯತ್ನವಾಗಿದ್ದು, ಈ ರೀತಿ ಸದಾ ವಿಭಿನ್ನ ಕಂಟೆಂಟ್ ಇರುವ ಸಿನಿಮಾ ಮಾಡುವುದರಲ್ಲಿ ಪರಮಂವ್ ಸ್ಟುಡಿಯೋ ಸ್ ನ ಮಾಲೀಕರಾಗಿರುವ ರಕ್ಷಿತ್ ಶೆಟ್ಟಿ ಅವರು ಮುಂದಿರುತ್ತಾರೆ.
ಇದೇ ಮೊದಲ ಬಾರಿಗೆ ರಾಷ್ಟ್ರೀಯ ಪ್ರಶಸ್ತಿಯೊಂದಕ್ಕೆ ಬಾಜನರಾಗಿದ್ದಾರೆ. ಈ ಸಂತಸದ ಬಗ್ಗೆ ನಿರ್ದೇಶಕ ಕಿರಣ್ ರಾಜ್ ಅವರು ಕೂಡ ಮಾತನಾಡಿ ಸತತ ಐದು ವರ್ಷಗಳ ಶ್ರಮಕ್ಕೆ ಸಿಕ್ಕ ಪ್ರತಿಫಲ ಇದು. ಸಿನಿಮಾ ಈ ಮಟ್ಟದ ಹೈಪ್ ಕ್ರಿಯೇಟ್ ಮಾಡುತ್ತದೆ ಎಂದು ಗೊತ್ತಿತ್ತು, ಯಾಕೆಂದರೆ ಸಿನಿಮಾ ತಯಾರು ಮಾಡುವಾಗಲೇ ನಮಗೆ ಪಾಸಿಟಿವ್ ಫೀಲ್ ಬರುತ್ತಿತ್ತು.
ಮಧ್ಯದಲ್ಲಿ ಕೊರೋನ ಬೇರೆ ಬಂದ ಕಾರಣ ಸಿನಿಮಾ ಬಹಳ ಕಷ್ಟವಾಗಿತ್ತು, ಅಂತಿಮವಾಗಿ ಜನ ನಮ್ಮ ಪರಿಶ್ರಮ ಹಾಗೂ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ ಎಂದು ಸಂತಸ ಪಟ್ಟಿದ್ದಾರೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (Ministry of Information and broadcasting) ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ರಕ್ಷಿತ್ ಶೆಟ್ಟಿ ಅವರನ್ನು ಗೌರವಿಸಿದರು.
ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಅನುರಾಗ್ ಠಾಕೂರ್ ರವರು ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದರು. ಸಿನಿಮಾ ವನ್ನೇ ತನ್ನ ಪ್ಯಾಷನಾಗಿಸಿಕೊಂಡಿರುವ ರಕ್ಷಿತ್ ಶೆಟ್ಟಿ ಅವರಿಗೆ ಖಂಡಿತವಾಗಿ ಇಂತಹದೊಂದು ಗೌರವ ಬೇಕಾಗಿತ್ತು, ಇದೇ ಹುರುಪಿನಲ್ಲಿ ಅವರು ಇನ್ನು ಅತ್ಯುತ್ತಮವಾದ ಚಿತ್ರಗಳನ್ನು ತಯಾರಿಸಲಿ. ಕನ್ನಡಿಗರಿಗೆ ಅದನ್ನು ನೋಡಿ ಕಣ್ತುಂಬಿಕೊಳ್ಳುವ ಭಾಗ್ಯ ಸಿಗಲಿ, ಮತ್ತೊಮ್ಮೆ ಚಾರ್ಲಿ ತಂಡಕ್ಕೆ ಶುಭವಾಗಲಿ ಎಂದು ನಾವು ಕೂಡ ಹರಸೋಣ.