ಸಿನಿಮಾ ಇಂಡಸ್ಟ್ರಿಯೇ ಆಗಲಿ ಅಥವಾ ಇನ್ಯಾವುದೇ ಕ್ಷೇತ್ರವೇ ಆಗಲಿ ಒಬ್ಬರು ಹೆಸರು ಮಾಡಿದ್ದರೆ ಅದೇ ಹೆಸರು ಉಪಯೋಗಿಸಿಕೊಂಡು ಆ ಕುಟುಂಬದ ಮತ್ತಷ್ಟು ಸದಸ್ಯರು ಆ ಮೂಲಕ ಗುರುತಿಸಿಕೊಳ್ಳುವುದು ಮಾಮೂಲಾಗಿ ಬಿಟ್ಟಿದೆ ಜನಸಾಮಾನ್ಯರಿಂದ ಸೆಲಬ್ರೆಟಿ ಗಳ ವರೆಗೂ ಕೂಡ ಇದು ಮಾಮೂಲಿ.
ಕೆಲವೊಮ್ಮೆ ಜೀನ್ ಗಳಲ್ಲಿ ಆ ಟ್ಯಾಲೆಂಟ್ ಬಂದಿರುತ್ತದೆ ಆಗ ಸಹಜವಾಗಿ ಅದೇ ಕ್ಷೇತ್ರದಲ್ಲಿ ಆಸಕ್ತಿ ಮುಂದಿನವರೆಗೂ ವರ್ಗಾವಣೆ ಆಗಿರುತ್ತದೆ. ಆದರೆ ಬಹಳ ಬಾರಿ ಈಗಾಗಲೇ ಅವರು ಹೆಸರು ಮಾಡಿದ್ದಾರೆ ಅದೇ ಹೆಸರು ಉಪಯೋಗಿಸಿಕೊಂಡು ನಾವು ಕೂಡ ಹೆಸರು ಹಣ ಮಾಡೋಣ ಎನ್ನುವ ಯೋಚನೆಯು ಕೂಡ ಇರುತ್ತದೆ. ಆದರೆ ಇವುಗಳಲ್ಲೆಲ್ಲಾ ರಾಹುಲ್ ದ್ರಾವಿಡ್ (Rahul Dravid) ಕುಟುಂಬ ಬಹಳ ವಿಭಿನ್ನ ಎನಿಸಿಕೊಳ್ಳುತ್ತದೆ ಇದಕ್ಕೆ ಕಾರಣವೇನು ಗೊತ್ತಾ?
ಕರ್ನಾಟಕದ ಹೆಮ್ಮೆ ಮತ್ತು ಭಾರತದ ಕ್ರಿಕೆಟ್ ತಂಡದ ಕೋಚ್ ಆಗಿರುವಂತಹ ರಾಹುಲ್ ದ್ರಾವಿಡ್ ಎಷ್ಟು ಸೀದಾ ಸಾದಾ ಸರಳ ಅದೇ ರೀತಿ ಅವರ ಕುಟುಂಬದ ಮತ್ತೋರ್ವ ಪ್ರತಿಭೆ ಕೂಡ. ಯಾಕೆಂದರೆ ತಾನು ಕೂಡ ಸೆಲೆಬ್ರಿಟಿ ಆಗಿದ್ದರು ಇದುವರೆಗೆ ಎಲ್ಲೂ ಅಪ್ಪಿತಪ್ಪಿಯೂ ರಾಹುಲ್ ದ್ರಾವಿಡ್ ಹೆಸರನ್ನು ಆಕೆ ಹೇಳಿಲ್ಲ, ಆದರೆ ಇತ್ತೀಚಿಗೆ ಸೋಷಿಯಲ್ ಮೀಡಿಯಾ ಪ್ರಭಾವದಿಂದ ಇದು ಬಟಾ ಬಯಲಾಗಿದೆ.
ರಾಹುಲ್ ಗಾಂಧಿ ಅವರ ಸೊಸೆ ಅದಿತಿ ದ್ರಾವಿಡ್ (Aditi Dravid) ಕೂಡ ಮನೋರಂಜನೆ ಪ್ರಪಂಚದಲ್ಲಿ ಬಹಳ ದೊಡ್ಡ ಹೆಸರು ಮಾಡಿ, ಅದರಲ್ಲೂ ಕಿರುತೆರೆಯವರಿಗೆ ಬಹಳ ಹತ್ತಿರದವರಾಗಿದ್ದಾರೆ. ಬೆಳೆಯುವ ಮುನ್ನ ಅವಕಾಶಗಳಿಗಾಗಿಯೇ ಆಗಲಿ ಅಥವಾ ಹೆಸರು ಮಾಡಿದ ಮೇಲೆ ಹಮ್ಮಿನಿಂದಾಗಲಿ ರಾಹುಲ್ ದ್ರಾವಿಡ್ ಅವರ ಹೆಸರನ್ನು ಆಕೆ ಒಮ್ಮೆ ಕೂಡ ಹೇಳಿಕೊಂಡಿಲ್ಲ.
ಆದರೀಗ ಸೋಶಿಯಲ್ ಮೀಡಿಯಾದಲ್ಲಿ ಹರಿಡುತ್ತಿರುವ ಅದಿತಿ ಬಾಲ್ಯದ ಫೋಟೋಗಳ ಮೂಲಕ ಅವರು ರಾಹುಲ್ ಗಾಂಧಿ ಅವರಿಗೆ ಮುದ್ದಿನ ಸೊಸೆ ಎನ್ನುವುದು ಗೊತ್ತಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದ ಅದಿತಿ ಸದ್ಯಕ್ಕೆ ಮುಂಬೈನಲ್ಲಿ ನೆಲೆಸಿದ್ದಾರೆ. ಇವರ ಪೂರ್ತಿ ಹೆಸರು ಅದಿತಿ ವಿನಾಯಕ್ ದ್ರಾವಿಡ್. ಪುಣೆಯಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿದ ಇವರು ಶಾಲಾ ಶಿಕ್ಷಣವನ್ನು ಅಭಿನವ ವಿದ್ಯಾಲಯದಲ್ಲಿ ಮತ್ತು ಕಾಲೇಜು ಶಿಕ್ಷಣವನ್ನು BMCCಯಲ್ಲಿ ಪಡೆದರು.
ಮೊದಲಿಗೆ ಮರಾಠಿ ಧಾರಾವಾಹಿಗಳ (Marati Serials) ಮೂಲಕ ಮನೆ ಮನೆ ಮಾತಾಗಿದ್ದರೂ ಅದಿತಿ. ಮಜ್ಯಾ ನವ್ರಾಚಿ ಬಾಯ್ಕೋ ಮೂಲಕ ಎಂಟ್ರಿ ಕೊಟ್ಟ ಈಕೆ ಬಹಳ ಬೇಗನೇ ಫೇಮಸ್ ಆಗಿ ಹೋದರು. ರಾಹುಲ್ ದ್ರಾವಿಡ್ ಈಕೆಗೆ ಸಂಬಂಧದಲ್ಲಿ ಮಾವ ಆಗಬೇಕು ಆದರೂ ಕ್ರಿಕೆಟ್ ದಿಗ್ಗಜನ ಹೆಸರು ಬಳಸದೆ ಸ್ವಂತ ಪರಿಶ್ರಮ ಹಾಗೂ ಟ್ಯಾಲೆಂಟ್ ಇಂದ ಹೆಸರು ಮಾಡಿ ಮಾವನ ಹೆಸರು ಉಳಿಸಿದ್ದಾರೆ ಮುದ್ದಿನ ಸೊಸೆ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಸುಂದರ್ ಮನಮಧ್ಯೆ ಭರಾಲಿ ಈಕೆಗೆ ಇನ್ನಷ್ಟು ಹೆಸರು ತಂದುಕೊಟ್ಟ ಧಾರವಾಹಿಗಳು. ಇಷ್ಟಕ್ಕೆ ನಿಲ್ಲದ ಈಕೆ ಡ್ರೆಸ್ ಬ್ಯಾಂಡ್ ನಲ್ಲಿ ವಿಶೇಷ ಪ್ರಯೋಗ ಮಾಡಿದ್ದಾರೆ. ಮೂರು ವರ್ಷಗಳ ಕಾಲ ತನ್ನ ಸಮಯವನ್ನು ಇದಕ್ಕಾಗಿ ಮೀಸಲಿಟ್ಟ ಇವರು ಕಳೆದ ವರ್ಷ ಅಕ್ಷಯ ತೃತೀಯದ ದಿನದಂದು ತನ್ನ ಡ್ರೆಸ್ ಬ್ರ್ಯಾಂಡ್ ದಿ ಡ್ರೆಸ್ವಾಲಿ ಕಂ (the dresswali.com dressband) ಬಿಡುಗಡೆ ಮಾಡಿದ್ದಾರೆ.
ಇದುವರೆಗೂ ತಾವು ಕೂಡ ಒಂದು ಪ್ರತಿಷ್ಠಿತ ಮನೆಗೆ ಸೇರಿದವರು ಎನ್ನುವುದನ್ನು ಮುಚ್ಚಿಟ್ಟು ಸಾಮಾನ್ಯರಂತೆ ಬದುಕಿದ್ದ ಅದಿತಿ ಬಾಲ್ಯದ ಫೋಟೋಗಳಿಂದ ಈಗ ಈ ವಿಷಯ ಎಲ್ಲೆದೆಕ ವೈರಲ್ ಆಗಿದೆ. ನೆಟ್ಟಿಗರು ಈಗ ಅವರ ಟ್ಯಾಲೆಂಟ್ ಜೊತೆ ಗುಣವನ್ನು ಕೂಡ ಹೊಗಳುತ್ತಿದ್ದಾರೆ.