ಕನ್ನಡದ ಎವರ್ಗ್ರೀನ್ ಹೀರೋ, ಆಕ್ಷನ್ ಪ್ರಿನ್ಸ್ ಅರ್ಜುನ್ ಸರ್ಜಾ ಕನ್ನಡದಂತೆ ತಮಿಳು ಚಿತ್ರರಂಗದಲ್ಲೂ ಕೂಡ ಫೇಮಸ್ ಆಗಿದ್ದಾರೆ. ಬಹುಭಾಷಾ ತಾರೆ ಅರ್ಜುನ್ ಸರ್ಜಾ ರವರು ನಿರ್ಮಾಪಕನಾಗಿ, ನಿರ್ದೇಶಕನಾಗಿ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯಕ್ಕೆ ಈಗ ಹಲವು ವರ್ಷಗಳಿಂದ ಚೆನ್ನೈನಲ್ಲಿಯೇ ನೆಲೆಸಿರುವ ಇವರು ಆಂಜನೇಯನ ಪರಮ ಭಕ್ತ ಎನ್ನುವುದು ಎಲ್ಲರಿಗೂ ಗೊತ್ತು.
ಚೆನ್ನೈನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ದೇವಸ್ಥಾನವನ್ನು ಕೂಡ ಕಟ್ಟಿಸಿರುವ ಇವರು ಈಗ ಅದೇ ದೇವಸ್ಥಾನದಲ್ಲಿ ತಮ್ಮ ಮಗಳಿಗೆ ನಿಶ್ಚಿತಾರ್ಥ ಕೂಡ ಮಾಡಿಸಿದ್ದಾರೆ. ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಸರ್ಜಾ ತನ್ನ ಬಹುಕಾಲದ ಗೆಳೆಯ ಉಮಾಪತಿಯೊಂದಿಗೆ ನೆನ್ನೆ ಎಂಗೇಜ್ ಆಗಿದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ನಿಶ್ಚಿತಾರ್ಥದ ಅನೇಕ ವಿಡಿಯೋಗಳು ಹರಿದಾಡುತ್ತಿದ್ದು ಇದುವರೆಗೆ ಇದ್ದ ಎಲ್ಲಾ ಗಾಳಿ ಸುದ್ದಿಗೂ ತೆರೆ ಎಳೆದಿದೆ.
ನಟ ನಟಿಯರ ಹೆಸರುಗಳು ರಾಜಕಾರಣಿಗ ಅಥವಾ ಕ್ರಿಕೆಟ್ ತಾರೆಯರ ಅಥವಾ ಸಿನಿಮಾ ಸ್ಟಾರ್ ಗಳ ಜೊತೆಗೆ ತಳಕು ಹಾಕಿಕೊಳ್ಳುವುದು ಮಾಮೂಲು. ಆದರೆ ಐಶ್ವರ್ಯ ಅವರ ಹೆಸರು ಉಮಾಪತಿ ಜೊತೆಗೆ ಹೆಚ್ಚು ಕೇಳಿ ಬರುತ್ತಿತ್ತು. ಇವರಿಬ್ಬರು ಪ್ರೀತಿಯಲ್ಲಿದ್ದಾರೆ ಎಂದು ಅನೇಕ ದಿನಗಳಿಂದ ಊಹಿಸಲಾಗಿತ್ತು.
ಉಮಾಪತಿಯವರು ಕೂಡ ತಮಿಳು ಚಿತ್ರರಂಗದ ಉದಯೋನ್ಮುಖ ನಟರಾಗಿದ್ದು ತಮಿಳುನಾಡಿನ ಖ್ಯಾತ ನಟ ತಂಬಿ ರಾಮಯ್ಯ ಅವರ ಕಿರಿಯ ಮಗನಾಗಿದ್ದಾರೆ. ತಂಬಿ ರಾಮಯ್ಯ ಹಾಗೂ ಉಮಾಪತಿಯವರು ಅರ್ಜುನ್ ಸರ್ಜಾ ಅವರು ನಡೆಸಿಕೊಡುವ ಸರ್ವೈವರ್ ಎನ್ನುವ ಕಿರುತೆರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಲ್ಲಿನಿಂದಲೇ ಐಶ್ವರ್ಯ ಸರ್ಜಾ ಹಾಗೂ ಉಮಾಪತಿ ಅವರ ನಡುವೆ ಸ್ನೇಹ ಚಿಗುರೊಡೆದು ನಂತರ ಪ್ರೀತಿಯಾಗಿ ಬದಲಾಗಿ ಎರಡು ಕುಟುಂಬದ ಒಪ್ಪಿಗೆ ಮೇರೆಗೆ ಮುಂದಿನ ಹಂತಕ್ಕೆ ಹೋಗಿದೆ. ಕಳೆದ ಕೆಲವು ತಿಂಗಳಿಂದ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸುದ್ದಿಯಾಗುತ್ತಿತ್ತು.
ಇಲ್ಲಿ ತನಕ ಈ ಬಗ್ಗೆ ಸ್ಪಷ್ಟನೆ ನೀಡದ ಇವರು ದಿಢೀರೆಂದು ನಿಶ್ಚಿತಾರ್ಥ ಮಾಡಿಕೊಂಡು ಎಲ್ಲರಿಗೂ ಸರ್ಪ್ರೈಸ್ ನೀಡಿದ್ದಾರೆ. ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ಅರ್ಜುನ್ ಸರ್ಜಾ ರವರೇ ನಿರ್ಮಿಸಿರುವ ಆಂಜನೇಯನ ಸನ್ನಿಧಾನದಲ್ಲಿ ಈ ಶುಭ ಕಾರ್ಯ ಶಾಸ್ತ್ರೋಕ್ತತವಾಗಿ ನಡೆದಿದೆ ಮದುವೆಯು ಇನ್ನಷ್ಟು ಅದ್ದೂರಿಯಾಗಿ ನಡೆಯಲಿದೆ.
ಬಲವಾದ ಮೂಲಗಳ ಮಾಹಿತಿ ಪ್ರಕಾರ ಇದೇ ಜನವರಿಯಲ್ಲಿ ಈ ಕಲ್ಯಾಣ ಅದ್ದೂರಿಯಾಗಿ ನಡೆಯಲಿದೆ ಎನ್ನುವ ಮಾಹಿತಿ ಇದೆ. ಎರಡು ಸಿನಿಮಾ ರಂಗದ ಖ್ಯಾತರುಗಳು ಮತ್ತು ದೇಶದ ಇನ್ನಿತರ ಪ್ರಮುಖರು ಕೂಡ ಈ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಊಹಿಸಲಾಗುತ್ತಿದೆ.
ಎಂಗೇಜ್ಮೆಂಟ್ ಫೋಟೋ ಹಾಕೋ ವಿಡಿಯೋಗಳು ಹರಿದಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಧ್ರುವ ಸರ್ಜಾ ಮತ್ತು ಅರ್ಜುನ್ ಸರ್ಜಾ ರವರೇ ಮುಂದೆ ನಿಂತು ಈ ಕಾರ್ಯಕ್ರಮ ನಡೆಸಿ ಕೊಟ್ಟಿದ್ದಾರೆ. ಮಗಳು ರಿಂಗ್ ಬದಲಾಯಿಸಿದ್ದನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಂಡ ಸರ್ಜಾ ರವರು ಹೂವುಗಳನ್ನು ಸುರಿಸುವ ಮೂಲಕ ತಮ್ಮ ಶುಭ ಹಾರೈಕೆ ತಿಳಿಸಿದ್ದಾರೆ.
ತಿಳಿ ಗುಲಾಬಿ ಬಣ್ಣದ ಕಾಸ್ಚ್ಯೂನ್ ನಲ್ಲಿ ದೇವಲೋಕದ ಅಪ್ಸರೆಯಂತೆ ಐಶ್ವರ್ಯ ಕಂಗೊಳಿಸಿದ್ದಾರೆ ಉಮಾಪತಿಯವರು ಸಹ ಮನದರಸಿ ಐಶ್ವರ್ಯ ಕಾಶ್ಚ್ಯೂಮ್ ಹೊಂದಾಣಿಕೆಯಾಗುವ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ ಜೋಡಿ ಬಹಳ ಮುದ್ದಾಗಿದ್ದು ಶುಭವಾಗಲಿ ಎಂದು ನಾವು ಸಹ ಹರಸೋಣ.