ವಿಷ್ಣು ದಾದ ತಾವೇ ಮನಸಾರೆ ಬಹಳ ಇಷ್ಟ ಪಟ್ಟು ಕಥೆ ಬರೆಯುತ್ತಾರೆ. ಆ ಸಿನಿಮಾದಲ್ಲಿ ನಟಿಸಬೇಕು ಅಂದುಕೊಳ್ಳುತ್ತಾರೆ ಆದ್ರೆ ಅದು ಸಾಧ್ಯ ಆಗಲಿಲ್ಲ ಯಾಕೆ ಗೊತ್ತಾ.? ತಿಳಿದ್ರೆ ನಿಜಕ್ಕೂ ಬೇಸರವಾಗುತ್ತೆ.
ಡಾಕ್ಟರ್ ವಿಷ್ಣುವರ್ಧನ್ ಅವರದ್ದು ಬಹುಮುಖ ಪ್ರತಿಭೆ ಎಂತಹದೇ ಪಾತ್ರವಿರಲಿ, ಪಾತ್ರದ ಒಳಗೆ ತಲ್ಲೀನರಾಗಿ ನೈಜತೆಯ ರಂಗು ನೀಡುವ ಅಭಿನಯ; ಸುಮಧುರವಾದ ಗಂಭೀರ ಕಂಠ; ಕಥೆಯ ಮೂಲವನ್ನು ಕೇಂದ್ರೀಕರಿಸಿ ಸುತ್ತಲೂ ಅನೇಕ ಸನ್ನಿವೇಶಗಳನ್ನು ಹೆಣೆದು ಬೆಸೆಯುವ ಬರವಣಿಗೆ; ಇವಿಷ್ಟೇ ಸಾಕು ಅವರ ಪಾಂಡಿತ್ಯವನ್ನು ಮೆಚ್ಚಿ ಒಪ್ಪಿಕೊಳ್ಳಲು. ಅವರು ಹಾಡಿದ ಹಾಡುಗಳಲ್ಲಿ ಹೇಗೆ ಶಬ್ದಗಳ ಸ್ಪಷ್ಟತೆಯು ಧ್ವನಿಯಲ್ಲಿ ವ್ಯಕ್ತವಾಗುತ್ತಿತ್ತೋ ಹಾಗೆ ಅವರು ಬರೆದ ಕಥೆಗಳಲ್ಲಿ ಸಮಯ ಪ್ರಜ್ಞೆ, ಹಾಸ್ಯ ಪ್ರಜ್ಞೆ ಜನತೆಗೆ ನೀಡಬೇಕಾದ ಸಂದೇಶವು ಎದ್ದು ಕಾಣುತ್ತಿತ್ತು. ಡಾಕ್ಟರ್…