ನಾವು ದೈನಂದಿನ ಜೀವನದಲ್ಲಿ ಹುಣಸೆ ಹಣ್ಣನ್ನು ಉಪಯೋಗ ಮಾಡುತ್ತೇವೆ ಹುಣಸೆಹಣ್ಣು ಅಡುಗೆಗೆ ತುಂಬಾ ಮುಖ್ಯವಾದ ವಸ್ತು ಹುಣಸೆ ಹಣ್ಣಿನಲ್ಲಿ ಹಲವಾರು ರೀತಿಯ ಔಷಧಿಯ ಗುಣಗಳು ಇರುತ್ತದೆ ಆದರೆ ತುಂಬಾ ಜನರಿಗೆ ಹುಣಸೆ ಹಣ್ಣಿನ ಬೀಜದ ಬಗ್ಗೆ ತಿಳಿಸುತ್ತಿದ್ದೇವೆ. ಹುಣಸೆ ಹಣ್ಣಿನ ಬೀಜದಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳು ಇವೆ.
ಇತ್ತೀಚಿನ ಜನರು ಸಾಕಷ್ಟು ಮಂಡಿ ನೋವಿನ ಸಮಸ್ಯೆಯಿಂದ ಬಾದೆ ಪಡುತ್ತಿರುತ್ತಾರೆ ಕೆಲವರಿಗೆ ಕೀಲು ನೋವು, ಮಾಂಸಖಂಡದ ನೋವು ಇತ್ಯಾದಿ ಸಮಸ್ಯೆಗಳು ಮಧ್ಯಮ ವಯಸ್ಸಿನಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ ಇದು ಅವರ ಅತಿಯಾದ ಕೆಲಸದ ಒತ್ತಡದಿಂದ ಅಥವಾ ತಮ್ಮ ಬದಲಾದ ಜೀವನ ಶೈಲಿಯಿಂದ ಉಂಟಾಗಿರಬಹುದು.
ಹುಣಸೆ ಹಣ್ಣಿನ ಬೀಜದಲ್ಲಿ ಆಂಟಿ ಇನ್ಫ್ಲಮೇಟರಿ ಗುಣಲಕ್ಷಣಗಳು ಹಾಗೆಯೇ ಸಾಕಷ್ಟು ಪೌಷ್ಟಿಕ ಅಂಶಗಳು ತುಂಬಿರುತ್ತವೆ. ನಮ್ಮ ಹಿಂದಿನ ಕಾಲದಲ್ಲಿ ಅಥವಾ ಚಿಕ್ಕ ವಯಸ್ಸಿನಲ್ಲಿ ಹುಣಸೆ ಹಣ್ಣಿನ ಬೀಜಗಳನ್ನ ಸುಟ್ಟು ತಿನ್ನುತ್ತಿದ್ದರು ಆದರೆ ಯಾಕೆ ಎಂದು ತುಂಬಾ ಜನರಿಗೆ ಗೊತ್ತಿಲ್ಲ ಇದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ಇದೆ ಹಾಗಾಗಿ ನೀವು ಹುಣಸೆಹಣ್ಣಿನ ಬೀಜಗಳನ್ನು ಸುಟ್ಟು ತಿನ್ನಬಹುದು.
ಅಥವಾ ಅವುಗಳನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಪೇಸ್ಟ್ ರೀತಿಯಾಗಿ ತಯಾರಿಸಿಕೊಂಡು ನೋವು ಇರುವ ಜಾಗಕ್ಕೆ ಹಚ್ಚಿದರೆ ಮಂಡಿ ನೋವು ಮತ್ತು ಕೀಲು ನೋವು ತುಂಬಾ ವೇಗವಾಗಿ ಕಡಿಮೆಯಾಗುತ್ತದೆ ಹುಣಸೆ ಹಣ್ಣಿನ ಬೀಜದ ಪುಡಿಯನ್ನು ಹೇಗೆ ತಯಾರಿಸಿಕೊಳ್ಳಬೇಕು ಎಂದರೆ 10 ರಿಂದ 15 ಹುಣಸೆಹಣ್ಣಿನ ಬೀಜಗಳನ್ನು ತೆಗೆದುಕೊಂಡು ಅದನ್ನು ಒಂದು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಹುರಿಯಿರಿ ಎರಡರಿಂದ ಮೂರು ನಿಮಿಷ ಹುರಿದ ನಂತರ ತಣ್ಣಗಾದ ನಂತರ ಮಿಕ್ಸಿಯಲ್ಲಿ ಹಾಕಿ ಪೌಡರ್ ಮಾಡಿಕೊಳ್ಳಿ ಒಂದು ಏರ್ ಟೈಟ್ ಕಂಟೇನರ್ ನಲ್ಲಿ ಹಾಕಿ ಇಟ್ಟುಕೊಳ್ಳಬಹುದು.
ಒಂದು ಲೋಟ ನೀರನ್ನು ತೆಗೆದುಕೊಂಡು ಅರ್ಧ ಟೇಬಲ್ ಸ್ಪೂನ್ ನಷ್ಟು ಹುಣಸೆ ಹಣ್ಣಿನ ಬೀಜವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬೆಳಿಗ್ಗೆ ಒಂದು ಸಲ ರಾತ್ರಿ ಒಂದು ಸಲ ಹೀಗೆ ದಿನದಲ್ಲಿ ಎರಡು ಬಾರಿ ಕುಡಿಯಬೇಕು ಅಷ್ಟೇ ಅಲ್ಲದೆ ಇದನ್ನು ಮೊಸರಿನ ಜೊತೆಯಲ್ಲೂ ಸಹ ಸೇವನೆ ಮಾಡಬಹುದು.
ಮೊಸರಿನಲ್ಲಿ ಸಹ ನೀವು ಅರ್ಧ ಟೇಬಲ್ ಸ್ಪೂನ್ ಹುಣಸೇ ಬೀಜ ಮಿಕ್ಸ್ ಮಾಡಿಕೊಂಡು ತಿನ್ನಬಹುದು ಅಷ್ಟೇ ಅಲ್ಲದೆ ಹುಣಸೆ ಹಣ್ಣಿನ ಬೀಜದ ಪುಡಿಯನ್ನು ನೀವು ಹಲ್ಲುಗಳಿಗೆ ಉಜ್ಜುವುದರಿಂದ ಇದು ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಲು ತುಂಬಾ ಚೆನ್ನಾಗಿ ಸಹಾಯ ಮಾಡುತ್ತದೆ ಹುಣಸೆ ಬೀಜದ ರಸವು ಅಜೀರ್ಣವನ್ನು ಕಡಿಮೆ ಮಾಡುತ್ತದೆ ಮತ್ತು ಪಿತ್ತರಸದ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ
ಹಾಗೆಯೇ ಇದರಲ್ಲಿ ಫೈಬರ್ ಕಂಟೆಂಟ್ ಜಾಸ್ತಿ ಆಗಿರುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹ ಇದು ಸಹಾಯ ಮಾಡುತ್ತದೆ ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಪ್ರಾಪರ್ಟೀಸ್ ಜಾಸ್ತಿ ಇರುವುದರಿಂದ ಇದು ನಿಮ್ಮ ಚರ್ಮದ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಕರುಳು ಮತ್ತು ಮೂತ್ರದ ಸೋಂಕಿನಿಂದ ರಕ್ಷಿಸಲು ಕೂಡ ತುಂಬಾ ಸಹಾಯಕಾರಿ.
ಹುಣಸೆ ಹಣ್ಣಿನ ಬೀಜದ ರಸವನ್ನು ತೆಗೆದುಕೊಳ್ಳುವುದರಿಂದ ಅಜೀರ್ಣವನ್ನು ನಿವಾರಣೆ ಮಾಡಿಕೊಳ್ಳಬಹುದು. ಉಗುರು ಬೆಚ್ಚಗಿನ ನೀರಿಗೆ ಅರ್ಧ ಟೇಬಲ್ ಸ್ಫೂನಷ್ಟು ಹುಣಸೆ ಹಣ್ಣಿನ ಬೀಜವನ್ನು ಸೇರಿಸಿ ಕುಡಿಯುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.