Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

JDS ಮತ್ತು BJP ಮೈತ್ರಿ ಬೆನ್ನಲ್ಲೇ JDS ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಸೈಯದ್ ಶಫೀವುಲ್ಲಾ.!

Posted on September 27, 2023 By Admin No Comments on JDS ಮತ್ತು BJP ಮೈತ್ರಿ ಬೆನ್ನಲ್ಲೇ JDS ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಸೈಯದ್ ಶಫೀವುಲ್ಲಾ.!

 

ಕಳೆದ ಕೆಲವು ದಿನಗಳಿಂದ ರಾಷ್ಟ್ರ ರಾಜಕಾರಣದಲ್ಲಿ ಬಾರಿ ಗುಮಾನಿಯಾಗುತ್ತಿದ್ದ ವಿಷಯ ಮುಂದಿನ ಲೋಕಸಭೆ ಚುನಾವಣೆ (Parliment election 2024) ವೇಳೆಗೆ JDS, NDA ಒಕ್ಕೂಟ ಸೇರುತ್ತದೆ (Alliance) ಎನ್ನುವುದು. ಆದರೆ ಈಗ ಅದು ಗುಟ್ಟಾಗಿ ಉಳಿದಿಲ್ಲ . ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರವರು (HD Devegowda) ಕಳೆದ ಶುಕ್ರವಾರದಂದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ BJP ಯೊಂದಿಗೆ ಮೈತ್ರಿಯಾಗುವುದನ್ನು ಘೋಷಿಸಿದರು.

ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amith Sha) ಮತ್ತು BJP ಮುಖ್ಯಸ್ಥ ಜೆ.ಪಿ ನಡ್ಡಾ (J.P Nadda) ಅವರನ್ನು ಭೇಟಿ ಮಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (Kumaraswamy) ಇದನ್ನು ಸ್ಪಷ್ಟಪಡಿಸಿ ತಿಳಿಸಿದರು. ಈ ವಿಷಯ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುವ ಮೂಲಕ ಜಗಜ್ಜಾಹಿರಾಗಿದೆ. ಆದರೆ ಈ ಮೈತ್ರಿ ಬಗ್ಗೆ JDS ಪಕ್ಷದಲ್ಲಿಯೇ ಅಸಮಾಧಾನವಿದೆ ಎನ್ನುವುದು ತಿಳಿದು ಬರುತ್ತದೆ. ಜೆಡಿಎಸ್ ಪಕ್ಷದ ನಾಯಕರ ನಡವಳಿಕೆ ಇದನ್ನು ಪುಷ್ಟಿಕರಿಸುವಂತಿದೆ.

ಕಾವೇರಿ ನೀರಿಗಾಗಿ ರಾಜ್ಯ ಸರ್ಕಾರ ವಕೀಲರಿಗಾಗಿ ಖರ್ಚು ಮಾಡಿದ್ದು 122 ಕೋಟಿ.! ಕರ್ನಾಟಕೇತರ ವಕೀಲರಿಂದ ರಾಜ್ಯಕ್ಕಾದ ಪ್ರಯೋಜನವೇನು.?

JDS ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಸೈಯದ್ ಶಫಿವುಲ್ಲಾ (Syed shafiullah) ಅವರು ಪಕ್ಷದೊಂದಿಗಿನ ಸಂಬಂಧವನ್ನು ಮುರಿದುಕೊಳ್ಳಲು ತಯಾರಾಗಿ ಅದೇ ಕಾರಣದಿಂದ ಪಕ್ಷ ನೀಡಿದ್ದ ರಾಜ್ಯ ಘಟಕದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ (resignation letter) ನೀಡಿದ್ದಾರೆ. ಶಫೀವುಲ್ಲಾ ಅವರು JDS ಪಕ್ಷದ ಅಧ್ಯಕ್ಷರಾದ ಸಿ.ಎಂ.ಇಬ್ರಾಹಿಂ ಅವರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ತಮ್ಮ ನಿಲುವು ಏನೆಂದು ಸ್ಪಷ್ಟಪಡಿಸಿದ್ದಾರೆ.

JDS ಪಕ್ಷದ ಜಾತ್ಯತೀತ ನೆಲೆಗಟ್ಟಿನ ಮೇಲೆ ನಂಬಿಕೆ ಇಟ್ಟುಕೊಂಡಿದ್ದು, ಸಮಾಜ ಮತ್ತು ಸಮುದಾಯಕ್ಕೆ ಸೇವೆ ಸಲ್ಲಿಸಲು ನಾನು ಶ್ರಮಿಸಿದ್ದೆ ಮತ್ತು ಪಕ್ಷಕ್ಕಾಗಿ ಸೇವೆ ಸಲ್ಲಿಸಿದ್ದೆ. ಆದರೆ, ನಮ್ಮ ನಾಯಕರಾದ ಎಚ್‌.ಡಿ ಕುಮಾರಸ್ವಾಮಿ ಅವರು ಈ ಮೊದಲು ಸರ್ಕಾರ ರಚನೆಗೆ BJP ಯೊಂದಿಗೆ ಕೈಜೋಡಿಸಿದ್ದರು ಅದು ವಿಫಲವಾಗಿತ್ತು ಆದರೆ ಇದೀಗ ಎರಡನೇ ಬಾರಿಗೆ BJP ಜೊತೆ ಕೈಜೋಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಪಕ್ಷದಿಂದ ಹಾಗೂ ಪಕ್ಷದ ಚಟುವಟಿಕೆಯಿಂದ ಹೊರಗುಳಿಯಲು ನಿರ್ಧರ ಮಾಡಿದ್ದೇನೆ ಎಂದು ಹೇಳಿದ್ದಾರೆ.

BPL, APL ಕಾರ್ಡ್ ದಾರರಿಗೆ ಬಿಗ್ ಶಾ-ಕ್, ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದ 1 ಲಕ್ಷ ಅರ್ಜಿಗಳು ತಿರಸ್ಕೃತ.!

ನಾನು ಮೊದಲಿನಿಂದಲೂ JDS ಜೊತೆಗೆ ಕೆಲಸ ಮಾಡಿಕೊಂಡು ಬಂದಿದ್ದೇನೆ. ಆದರೆ ಲೋಕಸಭಾ ಚುನಾವಣೆಗೆ JDS ಕೋಮುವಾದಿ ಪಕ್ಷಕ್ಕೆ ಬೆಂಬಲ ನೀಡುತ್ತಿದೆ. ಕೋಮುವಾದಿ ಪಕ್ಷಕ್ಕೆ ಸೇರುವುದು ನನಗೆ ಇಷ್ಟ ಇಲ್ಲ. ಪಕ್ಷದ ಹಿರಿಯ ನಾಯಕರೇ ಈಗ BJP ಯೊಂದಿಗೆ ಮೈತ್ರಿಗೆ ನಿರ್ಧರಿಸಿರುವುದರಿಂದ ಪಕ್ಷದ ಉಪಾಧ್ಯಕ್ಷ ಹುದ್ದೆಗೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡುವುದನ್ನು ಬಿಟ್ಟು ನನಗೆ ಬೇರೆ ದಾರಿ ಕಾಣಿಸುತ್ತಿಲ್ಲ ಆದ್ದರಿಂದ ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಇವರಲ್ಲದೆ, ಶಿವಮೊಗ್ಗ ಜೆಡಿಎಸ್ ಘಟಕದ ಅಧ್ಯಕ್ಷ ಎಂ ಶ್ರೀಕಾಂತ್, ಯುಟಿ ಆಯೇಷಾ ಫರ್ಜಾನಾ ಸೇರಿದಂತೆ ಹಲವು ನಾಯಕರು ಕೂಡ JDS ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶ್ರೀಕಾಂತ್ ಜೊತೆಗೆ JDS ಕಾರ್ಪೊರೇಟರ್‌ಗಳು, ಮುಖಂಡರು, ನಾಯಕರು ಅಪಾರ ಸಂಖ್ಯೆಯ ಕಾರ್ಯಕರ್ತರು ಸಹ ಕಾಂಗ್ರೆಸ್‌ ಸೇರ್ಪಡೆ ಆಗುವುದು ಖಚಿತ ಎನ್ನುವ ಸುದ್ದಿ ಕೇಳಿ ಬರುತ್ತಿದೆ.

ಸುದೀಪ್, ದರ್ಶನ್, ಶಿವಣ್ಣ, ಯಶ್ ಮಾತ್ರ ನಿಮ್ಮ ಕಣ್ಣಿಗೆ ಕಾಣೋದಾ.? ಬೇರೆ ಯಾರು ಕಾಣ್ಸಲ್ವಾ.? ಕಾವೇರಿ ಹೋರಾಟದಲ್ಲಿ ರೊಚ್ಚಿಗೆದ್ದ ದರ್ಶನ್

ಆದರೆ ಶಫೀವುಲ್ಲಾರವರು ನಾನು ಹುಟ್ಟಿನಿಂದಲೂ ಕಾಂಗ್ರೆಸ್ ಪಕ್ಷದವನು ಆದರೆ ಮತ್ತೆ ಕಾಂಗ್ರೆಸ್ ಸೇರುವ ನಿರ್ಧಾರಕ್ಕೆ ಇನ್ನು ಬಂದಿಲ್ಲ, ಮುಂದಿನ ದಿನಗಳಲ್ಲಿ ಆ ಬಗ್ಗೆ ಯೋಚಿಸುತ್ತೇನೆ ಎಂದು ಹೇಳಿದ್ದಾರೆ. 2019ರ ಲೋಕಸಭೆ ಚುನಾವಣೆ ಸಮಯದಲ್ಲಿ ಕೂಡ JDS ಕಾಂಗ್ರೆಸ್‌ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಆದರೆ, ಕರ್ನಾಟಕದ 25 ಸ್ಥಾನಗಳನ್ನು BJP ಯೇ ಗೆದ್ದು ಬೀಗಿತ್ತು . ಈಗ ದಂಡೋಪದಂಡಾಗಿ ಪ್ರಬಲರೇ ಪಕ್ಷ ತೆರೆಯುತ್ತಿರುವುದರಿಂದ ಮುಂದಿನ ಬೆಳವಣಿಗೆ ಏನಾಗಲಿದೆ ಕಾದು ನೋಡೋಣ.

Viral News

Post navigation

Previous Post: ಕಾವೇರಿ ನೀರಿಗಾಗಿ ರಾಜ್ಯ ಸರ್ಕಾರ ವಕೀಲರಿಗಾಗಿ ಖರ್ಚು ಮಾಡಿದ್ದು 122 ಕೋಟಿ.! ಕರ್ನಾಟಕೇತರ ವಕೀಲರಿಂದ ರಾಜ್ಯಕ್ಕಾದ ಪ್ರಯೋಜನವೇನು.?
Next Post: ರೈತನಿಗೆ ಗುಡ್ ನ್ಯೂಸ್, ಜಮೀನಿನ ಪಹಣಿ ಪತ್ರ ತಂದೆ ಅಥವಾ ತಾತನ ಹೆಸರಿನಲ್ಲಿ ಇದ್ದರೆ ಯಾವುದೇ ದಾಖಲೆ ಹೆಸರು ಬದಲಾಯಿಸಿಕೊಳ್ಳಬಹುದು.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme