ಸೃಜನ್ ಕಂಡ್ರೆ ನನ್ಗೆ ಆಗ್ತ ಇರ್ಲಿಲ್ಲ ಅವನೊಬ್ಬ ದುರಂಕಾರಿ. ಇದ್ದಕ್ಕಿದ್ದ ಹಾಗೇ ಸೃಜನ್ ಮೇಲೆ ಗಂಭೀರ ಆರೋಪ ಮಾಡಿ ನಟಿ ಶ್ವೇತ ಚಂಗಪ್ಪ ಕಾರಣವೇನು ಗೊತ್ತ.?

 

ಶ್ವೇತ ಚಂಗಪ್ಪ (Shwetha changappa) ಉದಯ ಟಿವಿಯ ಸುಮತಿ (Debut Sumathi serial) ಎನ್ನುವ ಧಾರಾವಾಹಿ ಮೂಲಕ ಕನ್ನಡಿಗರಿಗೆ ಪರಿಚಯವಾದರು. ಬಳಿಕ ಸತತವಾಗಿ ಅನೇಕ ಧಾರಾವಾಹಿಗಳಲ್ಲಿ ಲೀಡ್ ರೋಲ್ ಅಲ್ಲಿ ಅಭಿನಯಿಸಿದ್ದಾರೆ. ಸುಮತಿ, ಸುಕನ್ಯಾ, ಅರುಂಧತಿ, ಕಾದಂಬರಿ ಹೀಗೆ ಆ ಸಾಲು ಬೆಳೆಯುತ್ತಾ ಹೋಗುತ್ತದೆ. ಅದರಲ್ಲೂ 2006ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ ಕಾದಂಬರಿ (Udaya tv Kadambari serial) ಎನ್ನುವ ಮೆಘಾ ಧಾರಾವಾಹಿಯು ಈಕೆಗೆ ಅತಿ ಹೆಚ್ಚಿನ ಫೇಮ್ ತಂದು ಕೊಟ್ಟಿತು.

43ರ ಹರೆಯದಲ್ಲೂ ಸದಾ ಚಟುವಟಿಕೆಯಾಗಿ, ಲವಲವಿಕೆಯಿಂದ ಯಾವುದೇ ಯುವ ನಟಿಗೂ ಕಡಿಮೆ ಇಲ್ಲದಂತಹ ಗ್ರೇಸ್ ಇಂದ ಕಂಗೊಳಿಸುತ್ತಾರೆ ಶ್ವೇತ ಚಂಗಪ್ಪ. ಇವರು ಬಹುಮತ ಪ್ರತಿಭೆ ಎಂದರೆ ಅದೂ ತಪ್ಪಾಗಲಾರದು, ಯಾಕೆಂದರೆ ಶ್ವೇತಾ ನಟನೆ ಜೊತೆ ನಿರೂಪಣೆ ಮತ್ತು ನೃತ್ಯ ಕೂಡ ಅಷ್ಟೇ ಚೆನ್ನಾಗಿ ಮಾಡುತ್ತಾರೆ. ಜೊತೆಗೆ ಉದ್ಯಮವನ್ನು ಸಹ ನಿಭಾಯಿಸುತ್ತಾರೆ.

ಇದರ ಜೊತೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ಬಹಳ ಆಕ್ಟಿವ್ ಆಗಿದ್ದಾರೆ. ಸದಾ ತಮ್ಮ ಹೊಸ ವಿಷಯಗಳ ಅಪ್ಡೇಟ್ ಕುರಿತು ತಮ್ಮ ಅಭಿಮಾನಿಗಳ ಜೊತೆ ವಿಷಯ ಹಂಚಿಕೊಳ್ಳುತ್ತಲೇ ಇರುತ್ತಾರೆ. ಶ್ವೇತ ಚಂಗಪ್ಪ ಅವರು ಸೀರಿಯಲ್ ನಟಿ ಆದರೂ ಕೂಡ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರು ನಟಿಯಾಗಿ ಅಲ್ಲದಿದ್ದರೂ ತಂಗಿ ಪಾತ್ರದಾರಿಯಾಗಿ ಸಿನಿಮಾಗಳಲ್ಲಿ ಹೆಸರು ಮಾಡಿದ್ದಾರೆ.

ತಂಗಿಗಾಗಿ ಸಿನಿಮಾದಲ್ಲಿ ದರ್ಶನ್ ಅವರೊಂದಿಗೆ, ವರ್ಷ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರೊಂದಿಗೆ ತಂಗಿಯಾಗಿ ಕಾಣಿಸಿಕೊಂಡಿದ್ದ ಅವರು ಇತ್ತೀಚಿಗೆ ಬಿಡುಗಡೆಯಾದ ಶಿವಣ್ಣ ಅವರ ವೇದ ಸಿನಿಮಾದಲ್ಲೂ ಕೂಡ ವಿಶೇಷ ಪಾತ್ರ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಕೊಡಗಿನ ಮೂಲದವರಾದ ಇವರು ಅಲ್ಲಿನ ನಿವಾಸಿಯಾದ ಕಿರಣ್ ಅಪ್ಪಚ್ಚು ಎನ್ನುವವರನ್ನು ಮದುವೆಯಾಗಿ ಗಂಡು ಮಗುವಿನ ತಾಯಿ ಕೂಡ ಆಗಿದ್ದಾರೆ.

ಮದುವೆಯಾದ ಬಳಿಕ ಅಭಿನಯದಿಂದ ದೊಡ್ಡ ಗ್ಯಾಪ್ ತೆಗೆದುಕೊಂಡಿದ್ದ ಇವರಿಗೆ ಬಿಗ್ ಬಾಸ್ ಸೀಸನ್ 2 ಅಲ್ಲಿ ಭಾಗವಹಿಸಿದ್ದು ಅವರ ಸೆಕೆಂಡ್ ಇನ್ನಿಂಗ್ಸ್ ಶುರು ಆಗಲು ದಾರಿ ಮಾಡಿ ಕೊಟ್ಟಿತ್ತು. ಸೀರಿಯಲ್ ಗಳ ಬದಲಾಗಿ ರಿಯಾಲಿಟಿ ಶೋಗಳ ಮೂಲಕ ಶ್ವೇತ ಚಂಗಪ್ಪ ಹೆಸರುವಾಸಿ ಆಗಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಈ ಮೊದಲು ಪ್ರಸಾರವಾಗಿದ್ದ ಯಾರಿಗುಂಟು ಯಾರಿಗಿಲ್ಲ ಕಾರ್ಯಕ್ರಮವನ್ನು ಇವರು ನಿರೂಪಣೆ ಮಾಡಿದ್ದರು, ಈಗ ಜೋಡಿ ನಂಬರ್ ಒನ್ ಮತ್ತು ಸೂಪರ್ ಕ್ವೀನ್ಸ್ ಈ ಎರಡು ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ.

ಬಿಗ್ ಬಾಸ್ ಇಂದ ಹೊರಬಂದ ಮೇಲೆ ಇವರನ್ನು ಜನ ಕಾದಂಬರಿ ಮತ್ತು ಶ್ವೇತ ಚೆಂಗಪ್ಪ ಎನ್ನುವ ಹೆಸರ ಬದಲಾಗಿ ರಾಣಿ ಎಂದು ಗುರುತಿಸುವ ರೀತಿ ಆಗಿದೆ. ಯಾಕೆಂದರೆ ಬಿಗ್ ಬಾಸ್ ಮುಗಿಯುತ್ತಿದ್ದಂತೆ ಸೃಜನ್ ಲೋಕೇಶ್ (Srujan Lokesh) ಅವರು ಮಜಾ ಟಾಕೀಸ್ (Maja takies) ಎನ್ನುವ ಕಾರ್ಯಕ್ರಮವನ್ನು ಆರಂಭಿಸಿದ್ದರು. ಮಜಾ ಟಾಕೀಸ್ ಒಂದು ಹಾಸ್ಯ ಕಾರ್ಯಕ್ರಮ ಆಗಿದ್ದು ಮನೋರಂಜನೆ ಉದ್ದೇಶದಿಂದ ಇದನ್ನು ನಡೆಸಲಾಗಿತ್ತು. ಇದರ ಡೈರೆಕ್ಟರ್ ಸೃಜನ್ ಲೋಕೇಶ್ ಅವರೇ ಆಗಿದ್ದು ಇದರಲ್ಲಿ ಶ್ವೇತ ಚಂಗಪ್ಪ ಅವರಿಗೂ ಕೂಡ ಒಂದು ಪಾತ್ರ ಕೊಟ್ಟಿದ್ದರು.

ತನ್ನ ಹೆಂಡತಿ ಪಾತ್ರವಾದ ರಾಣಿ (Rani role) ಎನ್ನುವ ಕ್ಯಾರೆಕ್ಟರ್ ಅನ್ನು ಶ್ವೇತ ಅವರಿಗೆ ಮಾಡಲು ಒಪ್ಪಿಸಿದ್ದರು. ಅದುವರೆಗೂ ಕಣ್ಣೀರಿನ ನಾಯಕಿ ಎಂದು ಗುರುತಿಸಿಕೊಂಡಿದ್ದ ಶ್ವೇತ ಚಂಗಪ್ಪ ಮೊಟ್ಟ ಮೊದಲಿಗೆ ಕಾಮಿಡಿ ಆಕ್ಟರ್ ಆಗಿ ವೇದಿಕೆ ಹತ್ತಿದ್ದರು. ಮೊದಮೊದಲಿಗೆ ಈ ಬಗ್ಗೆ ಅವರಿಗೆ ಪಾತ್ರ ಸೂಟ್ ಆಗುತ್ತಿಲ್ಲ ಎನ್ನುವ ಅಭಿಪ್ರಾಯಗಳು ಬಂದರೂ ಅದನ್ನು ಚಾಲೆಂಜ್ ಆಗಿ ಸ್ವೀಕರಿಸಿ ಜನ ಅವರಿಲ್ಲದ ಎಪಿಸೋಡನ್ನು ತುಂಬಾ ಮಿಸ್ ಮಾಡಿಕೊಳ್ಳುವಂತೆ ಹೆಸರು ಪಡೆದು ಬಿಟ್ಟರು.

ಈಗ ಇದ್ದಕ್ಕಿದ್ದಂತೆ ಸಂದರ್ಶನ ಒಂದರದಲ್ಲಿ ಸೃಜನ್ ಒಬ್ಬ ದುರಹಂಕಾರಿ ಎಂದುಕೊಂಡಿದ್ದೆ ಎನ್ನುವ ಹೇಳಿಕೆ ಕೊಟ್ಟು ಎಲ್ಲರಿಗೂ ಶಾ’ಕ್ ಮಾಡಿದ್ದಾರೆ. ಬಿಗ್ ಬಾಸ್ ಸೀಸನ್ ಎರಡರಲ್ಲಿ ಸೃಜನ್ ಕೂಡ ಭಾಗವಹಿಸಿದ್ದರು, ಕೊನೆ ದಿನದವರೆಗೂ ಕೂಡ ಇದ್ದ ಶ್ವೇತ ಚಂಗಪ್ಪ ಅವರಿಗೆ ಸೃಜನ್ ಲೋಕೇಶ್ ಒಬ್ಬ ಒಳ್ಳೆಯ ಸ್ನೇಹಿತ ಆಗಿದ್ದರು. ನಂತರ ಮಜಾ ಟಾಕೀಸ್ ಅಲ್ಲಿ ಇವರಿಬ್ಬರ ಕೆಮೆಸ್ಟ್ರಿ ಕೂಡ ಚೆನ್ನಾಗಿ ವರ್ಕ್ ಆಗಿತ್ತು.

ಆದರೆ ಇದೆಲ್ಲ ಆಗುವ ಮುಂಚೆ ಸೃಜನ್ ಒಬ್ಬ ದುರಹಂಕಾರ ವ್ಯಕ್ತಿ ಎನ್ನುವ ಅಭಿಪ್ರಾಯ ಇವರ ಮನಸ್ಸಿನಲ್ಲಿ ಇತ್ತಂತೆ. ಆದರೆ ಅವರ ಸ್ನೇಹಿತೆಯಾದ ಗ್ರೀಷ್ಮ ಸೃಜನ್ ಅವರನ್ನು ಮದುವೆ ಆಗಿದ್ದಾರೆ ಎನ್ನುವ ವಿಚಾರ ಗೊತ್ತಾದಾಗ ಸೃಜನ್ ಬಗ್ಗೆ ಒಳ್ಳೆ ಅಭಿಪ್ರಾಯ ಬಂತಂತೆ. ನಂತರದ ದಿನಗಳಲ್ಲಿ ಇಬ್ಬರ ನಡುವಿನ ಒಡನಾಟದಿಂದ ಸೃಜನ್ ಒಬ್ಬ ಸಜ್ಜನ ಮತ್ತು ಸಜನಶೀಲ ವ್ಯಕ್ತಿ ಎನ್ನುವುದನ್ನು ಅರ್ಥ ಮಾಡಿಕೊಂಡರಂತೆ.

Leave a Comment