ಶಿವಣ್ಣ ಅವರು ಕನಕೋತ್ಸವ ಕಾರ್ಯಕ್ರಮದಲ್ಲಿ ಇನ್ನು ಮುಂದೆ ಕನಕಪುರದಲ್ಲಿ ಇರುತ್ತೇನೆ ಮುಂದಿನ ವೋಟಿಂಗ್ ಇಲ್ಲೇ ಇರಬಹುದು ಎಂದು ಹೇಳಿಕೆ ಕೊಟ್ಟಿದ್ದರು. ಅದಾದ ಬೆನ್ನಲ್ಲೇ ಶಿವಣ್ಣ ಅವರು ಬೆಂಗಳೂರಿಂದ ಹೋಗುತ್ತಿರುವುದರ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಗಳು ಪ್ರಸಾರ ಆಗುತ್ತಿವೆ. ಶಿವಣ್ಣ ಈಗಾಗಲೇ ಕನಕಪುರದಲ್ಲಿ ಐದು ಎಕರೆ ಜಮೀನು ಕೂಡ ಖರೀದಿಸಿ ಅಲ್ಲೇ ಮನೆ ಕೂಡ ಕಟ್ಟಿಸುತ್ತಿದ್ದಾರೆ.
ಇದರಿಂದ ಶೀಘ್ರದಲ್ಲೇ ಶಿವಣ್ಣ ಬೆಂಗಳೂರು ಬಿಡುವುದು ಖಚಿತ ಆಗಿದೆ ಎನ್ನಬಹುದು. ಶಿವಣ್ಣನಿಗೆ ಬೆಂಗಳೂರಿನ ಮಾನ್ಯತ ಟೆಕ್ ಪಾರ್ಕ್ ಬಳಿ ಸುಮಾರು ಒಂದು ಎಕರೆ ಅಲ್ಲಿ ಕೋಟಿ ಬೆಲೆಬಾಳುವ ಅರಮನೆ ಅಂತಹ ಮನೆ ಇದೆ. ಈ ಮನೆಯನ್ನು ಗೀತ ಶಿವರಾಜ್ ಕುಮಾರ್ ಅವರಿಗಾಗಿ ಅವರ ತಂದೆ ಬಂಗಾರಪ್ಪ ಅವರು ಗಿಫ್ಟ್ ನೀಡಿದ್ದರು ಅಪ್ಪಾಜಿ ಅವರ ನಿಧನದ ನಂತರ 2007 ರಲ್ಲಿ ಶಿವಣ್ಣ ಹಾಗೂ ಅವರ ಕುಟುಂಬದವರು ಈ ಶ್ರೀಮುತ್ತು ನಿವಾಸದಲ್ಲಿ ನೆಲೆಸಿದ್ದರು.
ಇದೀಗ ಶಿವಣ್ಣ ಈ ರೀತಿ ನಿರ್ಧಾರಕ್ಕೆ ಏನು ಕಾರಣ ಇರಬಹುದು ಎನ್ನುವ ಅನುಮಾನಗಳು ಎಲ್ಲರಲ್ಲೂ ಮನೆ ಮಾಡಿದೆ. ಕೆಲವರು ಶಿವಣ್ಣ ಕನಕಪುರದಲ್ಲಿ ಎಲೆಕ್ಷನ್ ಗೆ ನಿಲ್ಲುವ ಸಾಧ್ಯತೆಗಳು ಇದೆಯಾ ಎಂದು ಕೇಳುತ್ತಿದ್ದರೆ ಹಲವು ಜನ ಬೇರೆ ಏನೋ ಊಹಿಸಿದ್ದಾರೆ. ಇನ್ನು ಕೆಲವು ಮಂದಿ ಇದಕ್ಕೆ ನಿಜವಾದ ಕಾರಣವನ್ನು ಊಹಿಸಿದ್ದಾರೆ. ಅದೇನೆಂದರೆ ಶಿವಣ್ಣ ಅವರು ಅಪ್ಪು ಅವರನ್ನು ಬಹಳ ಹಚ್ಚಿಕೊಂಡಿದ್ದರು, ಸ್ವಂತ ಮಗನಂತೆ ಪ್ರೀತಿಸುತ್ತಿದ್ದರು.
ಈಗ ಅಪ್ಪು ಇಲ್ಲ ಎನ್ನುವ ವಿಷಯವನ್ನು ಕರ್ನಾಟಕದ ಜನತೆಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಇನ್ನು ಶಿವಣ್ಣನಿಗೆ ಅದು ಎಷ್ಟರಮಟ್ಟಿಗೆ ದುಃಖ ತಂದಿದೆ ಎನ್ನುವುದು ಅವರ ಮುಖದಲ್ಲಿ ಹಾಗೂ ಅವರ ಕಣ್ಣುಗಳಲ್ಲಿ ಕಾಣುತ್ತಿದೆ. ಹಾಗಾಗಿ ತಮ್ಮನ ಸಾವಿನ ದುಃಖವನ್ನು ಮರೆಯಲಾಗದೆ ಅವರ ನೆನಪುಗಳನ್ನು ಹೊರಬರಲಾರದೆ ಶಿವಣ್ಣ ಅವರು ಹಳೆಯ ಮನೆಯನ್ನು ತೊರೆಯುತ್ತಿರಬಹುದು.
ಶಿವಣ್ಣ ಅವರು ಈಗಲೂ ಸಹ ಬೇಡಿಕೆ ನಟ ಆಗಿದ್ದಾರೆ ಆದರೆ ಕೆಲವು ಬಲವಾದ ಮೂಲಗಳಿಂದ ಪ್ರಕಾರ ಇನ್ನು ಮುಂದೆ ಶಿವಣ್ಣ ಅವರು ಕಡಿಮೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ಸಿಟಿಯ ಯಾಂತ್ರಿಕ ಜೀವನದಿಂದ ಬೇಸತ್ತು ಹಳ್ಳಿಗೆ ಹೋಗಿ ನೆಮ್ಮದಿ ಜೀವನ ನಡೆಸಲು ಶಿವಣ್ಣ ನಿರ್ಧಾರ ಮಾಡಿದ್ದಾರೆ ಎನ್ನುವ ಅನುಮಾನಗಳು ಮೂಡುತ್ತಿದೆ. ಶಿವಣ್ಣ ಅವರು ಈಗ ಕನಕಪುರದಲ್ಲಿ ಕಟ್ಟಿಸುತ್ತಿರುವ ಈ ಮನೆಗೆ ಕಸ್ತೂರಿ ನಿವಾಸ ಎಂದು ಹೆಸರು ಇಡುತ್ತಾರೆ ಎನ್ನುವ ಮಾಹಿತಿಗಳು ಇದೆ.
ಆದರೆ ಶಿವಣ್ಣ ನಿರ್ಧಾರ ಹಲವರಿಗೆ ಬೇಸರ ತರಿಸಿದೆ ಯಾಕೆಂದರೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹಿರಿಯರು ಎನಿಸಿಕೊಂಡವರದಲ್ಲಿ ಶಿವಣ್ಣ ಕೂಡ ಒಬ್ಬರು. ಯಾವುದೇ ವಿವಾದ ಇದ್ದರೂ ಸಹಾಯ ಬೇಕಿದ್ದರೂ ಎಲ್ಲರೂ ದೊಡ್ಮನೆ ಈ ದೊಡ್ಡ ಯಜಮಾನ ಹುಡುಕಿ ಹೋಗುತ್ತಿದ್ದರು ಆದರೆ ಈಗ ಬೆಂಗಳೂರಿನಲ್ಲಿ ಅವರು ಇಲ್ಲ ಅಂದಮೇಲೆ ಮುಂದಿನ ಕಥೆ ಏನು ಎನ್ನುವುದು ಎಲ್ಲರಿಗೂ ಯೋಚನೆ ಆಗಿದೆ.
ಆದರೆ ಶಿವಣ್ಣ ಅವರು ಅಪ್ಪು ಅವರ ನೆನಪಿನ ಕಾರಣದಿಂದಲೇ ಈ ರೀತಿ ಮಾಡಿದರೆ ಅದನ್ನು ಎಲ್ಲರೂ ಒಪ್ಪಲೇಬೇಕು. ಅಪ್ಪು ಅವರ ಸಾವಿನ ಬಳಿಕ ಹೆಚ್ಚು ಶಿವಣ್ಣ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಇಲ್ಲ ಹಲವು ತಿಂಗಳವರೆಗೆ ಮೈಸೂರಿನ ಶಕ್ತಿಧಾಮದಲ್ಲಿ ಮಕ್ಕಳೊಂದಿಗೆ ಸಮಯ ಕಳೆದವರು ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದಿದ್ದರು. ಈಗ ಸಂಪೂರ್ಣವಾಗಿ ಬೆಂಗಳೂರಿನ ತೊರೆದು ಹೋಗಲು ನಿರ್ಧಾರ ಮಾಡದಂತೆ ಮುತ್ತಣ್ಣ.