ಸೆಪ್ಟೆಂಬರ್ ತಿಂಗಳಿನಲ್ಲಿ ರದ್ದಾದಂತಹ ಪಡಿತರ ಚೀಟಿ ಪಟ್ಟಿ ಬಿಡುಗಡೆಯಾಗಿದ್ದು ಯಾರೆಲ್ಲಾ ಪಡಿತರ ಚೀಟಿ ರದ್ದಾಗಿದೆ ಎಂದು ನೀವು ಮನೆಯಲ್ಲೇ ಕುಳಿತು ನೋಡಿಕೊಳ್ಳಬಹುದು ಹೌದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಜಿಲ್ಲಾವಾರು ಸೆಪ್ಟೆಂಬರ್ ತಿಂಗಳ ಅನರ್ಹ ಪಡಿತರ ಚೀಟಿ ಪಟ್ಟಿಯನ್ನು ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟ ಮಾಡಲಾಗಿದೆ ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಪ್ರತಿಯೊಬ್ಬರು ತಮ್ಮ ಮೊಬೈಲ್ ಫೋನಿನಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ರದ್ದಾದ ರೇಷನ್ ಕಾರ್ಡ್ ಪಟ್ಟಿಯನ್ನು ಹೇಗೆ ನೋಡುವುದು ಎನ್ನುವಂತಹ ಸಂಪೂರ್ಣ ಮಾಹಿತಿ ಇಲ್ಲಿದೆ. ಆಹಾರ ಇಲಾಖೆಯಿಂದ ಪ್ರತಿ ತಿಂಗಳು ಹೊಸ ಮಾರ್ಗಸೂಚಿ ಪ್ರಕಟವಾಗುತ್ತಲೇ ಇರುತ್ತದೆ ಇದೀಗ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಜಿಲ್ಲಾವಾರು ಸೆಪ್ಟೆಂಬರ್ ತಿಂಗಳ ಅನರ್ಹ ಪಡಿತರ ಚೀಟಿ ಪಟ್ಟಿಯನ್ನು ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡಲಾಗಿದೆ.
ಸೆಪ್ಟೆಂಬರ್ ತಿಂಗಳು ಮಾರ್ಗಸೂಚಿಯ ಅನ್ವಯ ನಿಯಮ ಮೀರಿದ ಮತ್ತು ಇತರೆ ಕಾರಣಗಳಿಂದ ಜಿಲ್ಲಾವಾರು ರೇಷನ್ ಕಾರ್ಡ್ ಪರಿಶೀಲನೆ ಮಾಡಿ ಅನರ್ಹ ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಹೆಸರು ಇರುವವರು ಇನ್ನು ಮುಂದೆ ಸರ್ಕಾರದ ವತಿಯಿಂದ ಬರುವಂತಹ ಪಡಿತರ ಚೀಟಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಸೆಪ್ಟೆಂಬರ್ ತಿಂಗಳಿನಲ್ಲಿ ಯಾವೆಲ್ಲಾ ಕಾರಣಗಳಿಗೆ ಪಡಿತರ ಚೀಟಿ ರದ್ದಾಗಿದೆ ಎಂದು ನೋಡುವುದಾದರೆ.
* ಸರ್ಕಾರವು ಜಾರಿಯಲ್ಲಿರುವ ಮಾರ್ಗಸೂಚಿಯನ್ನು ಪಾಲಿಸದೇ ಇರುವ ಫಲಾನುಭವಿಗಳ ರೇಷನ್ ಕಾರ್ಡ್ ಅನ್ನು ರದ್ದು ಮಾಡಲಾಗಿದೆ ಪಡಿತರ ಚೀಟಿ ಕುರಿತು ಪ್ರಸ್ತುತ ಜಾರಿಯಲ್ಲಿರುವ ಆಹಾರ ಇಲಾಖೆಯ ಮಾರ್ಗಸೂಚಿಯನ್ನು ತಿಳಿಯಲು ಆಹಾರ ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಿ.
* ಬಯೋಮೆಟ್ರಿಕ್ ಮಾಡಿಸದೆ ಇರುವಂತಹ ಅರ್ಜಿ ಸಲ್ಲಿಸಿದ ನಂತರ ದಾಖಲಾತಿಗಳು ತಾಳೆ ಆಗದಿರುವ ಹೆಸರನ್ನು ರದ್ದು ಮಾಡಲಾಗಿದೆ.
ರದ್ದಾಗಿರುವಂತಹ ರೇಷನ್ ಕಾರ್ಡ್ ಗಳ ಪಟ್ಟಿಯನ್ನು ಮೊಬೈಲ್ ನಲ್ಲಿ ನೋಡುವ ವಿಧಾನ.
ಪ್ರತಿಯೊಬ್ಬ ನಾಗರೀಕರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು ಇದನ್ನು ನೀವು ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನ ಬಳಕೆಯಿಂದ ಮಾಡಿಕೊಳ್ಳಬಹುದು.
ಆಯಾ ಜಿಲ್ಲಾವಾರು ಬಿಡುಗಡೆಯಾಗಿರುವ ಅನರ್ಹ ರೇಷನ್ ಕಾರ್ಡ್ ಪಟ್ಟಿಯನ್ನು ನೀವು ಮೊಬೈಲ್ ನಲ್ಲಿಯೇ ನೋಡಿಕೊಳ್ಳಬಹುದು ಮೊಬೈಲ್ ನಲ್ಲಿ ಪಡಿತರ ಚೀಟಿ ಕುರಿತಾದ ಸಂಪೂರ್ಣ ಮಾಹಿತಿಯನ್ನು ಲಭ್ಯವಿರುವ www.ahara.kar.in ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಸೆಪ್ಟೆಂಬರ್ ತಿಂಗಳಿನಲ್ಲಿ ರದ್ದಾದ ರೇಷನ್ ಕಾರ್ಡ್ ಪಟ್ಟಿಯನ್ನು ತಿಳಿದುಕೊಳ್ಳಬಹುದು.
ರದ್ದಾದ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಏನು ಮಾಡಬೇಕು ಎಂದು ನೋಡುವುದಾದರೆ ರದ್ದಾದ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದು ನೀವು ಆಹಾರ ಇಲಾಖೆಯ ಮಾರ್ಗಸೂಚಿಯನ್ನು ಪಾಲನೆ ಮಾಡಿದ್ದರು ಮತ್ತು ನೀವು ಪಡಿತರ ಚೀಟಿ ಪಡೆಯಲು ಅರ್ಹತೆ ಹೊಂದಿದ್ದರು ಸಹ ನಿಮ್ಮ ರೇಷನ್ ಕಾರ್ಡ್ ರದ್ದು ಮಾಡಿದ್ದರೆ
ನೀವು ನಿಮ್ಮ ತಾಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಆಹಾರ ಮತ್ತು ಇಲಾಖೆಯ ವಿಭಾಗದಲ್ಲಿ ಮರುಪರಿಶೀಲನೆ ಅರ್ಜಿಯನ್ನು ಸಲ್ಲಿಸಬಹುದು ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.